ದುಬಾರಿ ಲ್ಯಾಂಬೋರ್ಗಿನಿ ಖರೀದಿಸುವವರಲ್ಲಿ ಬೆಂಗ್ಳೂರಿಗರು ವಿಶ್ವದಲ್ಲೇ ಮೊದಲು!

Suvarna News   | Asianet News
Published : Jan 13, 2020, 07:33 PM IST
ದುಬಾರಿ ಲ್ಯಾಂಬೋರ್ಗಿನಿ ಖರೀದಿಸುವವರಲ್ಲಿ ಬೆಂಗ್ಳೂರಿಗರು ವಿಶ್ವದಲ್ಲೇ ಮೊದಲು!

ಸಾರಾಂಶ

ಇಟೆಲಿ ಮೂಲದ ಐಷಾರಾಮಿ, ದುಬಾರಿ ಲ್ಯಾಂಬೋರ್ಗಿನಿ ಕಾರು ವಿಶ್ವೆದೆಲ್ಲೆಡೆ ಶೋ ರೂಂ ಹಾಗೂ ಮಾರಾಟ ಜಾಲ ಹೊಂದಿದೆ. ಹಲವು ದೇಶಗಳಲ್ಲಿ ವರ್ಷಕ್ಕೆ ಒಂದು ಕಾರು ಮಾರಾಟಾವಾಗುದೇ ಹೆಚ್ಚು. ಆದರೆ ನಮ್ಮ ಬೆಂಗಳೂರಿನಲ್ಲಿ ಗರಿಷ್ಠ ಕಾರು ಮಾರಾಟವಾಗುತ್ತಿದೆ. ದುಬಾರಿ ಕಾರು ಖರೀದಿಸುವವರ ಪೈಕಿ ಬೆಂಗಳೂರಿಗರು ಇತರ ದೇಶಗಳಿಂದ ಮುಂದಿದ್ದಾರೆ.

ಬೆಂಗಳೂರು(ಜ.13): ಲ್ಯಾಂಬೋರ್ಗಿನಿ ಕಾರು ಮೊದಲ ನೋಟಕ್ಕೆ ಎಲ್ಲರ ಕಣ್ಣು ಕುಕ್ಕುತ್ತೆ. ಕಾರಣ ಈ ಕಾರಿನ ಅಂದ, ಪವರ್ ಸೇರಿದಂತೆ ಪ್ರತಿಯೊಂದು ವಿಚಾರವೂ ಅತ್ಯುತ್ತಮ. ಇಟಲಿ ಮೂಲದ ಲ್ಯಾಂಬೋರ್ಗಿನಿ ಕಾರು ಫೋಕ್ಸ್‌ವ್ಯಾಗನ್ ಗ್ರೂಪ್ ಸದಸ್ಯ. ಲ್ಯಾಂಬೋರ್ಗಿನಿ ಕಾರಿನ ಬೆಲೆ ಆರಂಭವಾಗುವುದೇ ಕೋಟಿ ರೂಪಾಯಿಂದ. ಹೀಗಾಗಿ ಇದು ಅತ್ಯಂತ ಶ್ರೀಮಂತರ ಕಾರು ಎಂದೇ ಗುರುತಿಸಿಕೊಂಡಿದೆ. ಇದೀಗ ಈ ದುಬಾರಾ ಕಾರು ಖರೀದಿಸುವುದರಲ್ಲಿ ಬೆಂಗಳೂರಿಗರು ವಿಶ್ವದಲ್ಲೇ ಮಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ದುಬಾರಿ ಲ್ಯಾಂಬೋರ್ಗಿನಿ ಕಾರು ಶೋರೂಂ; ದಕ್ಷಿಣ ಭಾರತದಲ್ಲೇ ಮೊದಲು!

2019ರಲ್ಲಿ ಭಾರತ ಸೇರಿದಂತೆ ವಿಶ್ವದಲ್ಲೇ ಕಾರು ಮಾರಾಟ ಕುಸಿತಗೊಂಡಿತ್ತು. ಇದಕ್ಕೆ ಲ್ಯಾಂಬೊರ್ಗಿನಿ ಹೊರತಾಗಿರಲಿಲ್ಲ. ಆದರೆ ಲ್ಯಾಂಬೋರ್ಗಿನಿ ಕಂಪನಿ ಉಸಿರಾಡಿದ್ದು ಬೆಂಗಳೂರಿನಿಂದ. ಕಾರಣ ವಿಶ್ವದಲ್ಲೇ ಕಾರು ಮಾರಾಟ ಕುಸಿತವಾಗಿದ್ದರೂ ದುಬಾರಿ ಲ್ಯಾಂಬೋರ್ಗಿನಿ ಕಾರು ಬೆಂಗಳೂರಲ್ಲಿ ಗರಿಷ್ಠ ಮಾರಾಟವಾಗಿದೆ. ವಿಶ್ವದ ಆದಾಯದಲ್ಲಿ ಶೇಕಡಾ 50 ರಷ್ಟು ಕೇವಲ ಬೆಂಗಳೂರಿನಿಂದಲೇ ಬರುತ್ತಿದೆ.

ಇದನ್ನೂ ಓದಿ: ಬಿಡುಗಡೆಯಾಯ್ತು ಲ್ಯಾಂಬೋರ್ಗಿನಿ ಕಾರು: ಬೆಲೆ 4 ಕೋಟಿಗೂ ಮೇಲು!.

ಹೀಗಾಗಿ ಲ್ಯಾಂಬೋರ್ಗಿನಿ ಬೆಂಗಳೂರಲ್ಲಿ ಇತ್ತೀಚೆಗೆ ಮೊದಲ ಶೋ ರೂಂ ತೆರೆದಿದೆ. ಇದು ದಕ್ಷಿಣ ಭಾರತದ ಮೊದಲ ಲ್ಯಾಂಬೋರ್ಗಿನಿ ಶೋ ರೂಂ. ಇಷ್ಟೇ ಅಲ್ಲ ಭಾರತದ 3ನೇ ಲ್ಯಾಂಬೋರ್ಗಿನಿ ಶೋ ರೂಂ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮೊದಲು ದೆಹಲಿ ಹಾಗೂ ಮುಂಬೈನಲ್ಲಿ ಲ್ಯಾಂಬೋರ್ಗಿನಿ ಕಾರು ಶೋ ರೂಂ ತೆರೆಯಲಾಗಿತ್ತು.

ಇದನ್ನೂ ಓದಿ: ಟಿ ಸಪ್ಲೈ ಮಾಡುತ್ತಿದ್ದ ಬೆಂಗಳೂರಿಗ ಈಗ ನೂರಾರು ಕೋಟಿಯ ಲ್ಯಾಂಬೋರ್ಗಿನಿ ಡೀಲರ್!

ದಕ್ಷಿಣ ಭಾರತದಿಂದ ನಮಗೆ ಹೆಚ್ಚಿನ ಸ್ಪಂದನೆ ಸಿಗುತ್ತಿದೆ. ಪ್ರಮುಖವಾಗಿ ಬೆಂಗಳೂರು. ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಹೆಚ್ಚು ಕಾರುಗಳು ಮಾರಾಟವಾಗುತ್ತಿದೆ. 2019ರಲ್ಲಿ ಲ್ಯಾಂಬೋರ್ಗಿನಿಯ ಅತ್ಯಂತ ದುಬಾರಿ ಕಾರು ಅವೆಂಟಡೊರ್  svj ಕಾರು ಭಾರತದಲ್ಲಿ ಕೇವಲ 1 ಕಾರು ಮಾರಾಟವಾಗಿದೆ. ಅದು ಬೆಂಗಳೂರಲ್ಲಿ ಅನ್ನೋದು ವಿಶೇಷ ಎಂದು ಲ್ಯಾಂಬೊರ್ಗಿನಿ ಇಂಡಿಯಾ ಮುಖ್ಯಸ್ಥ ಶರದ್ ಅಗರ್ವಾಲ್ ಹೇಳಿದರು. 

PREV
click me!

Recommended Stories

ಮೊದಲ ಕಾರಿನ ಮೇಲೆ ವಿಶೇಷ ಮೋಹ, ರೋಲ್ಸ್ ರಾಯ್ಸ್ ಕಾರಿದ್ರೂ ಹಳೆ ಮಾರುತಿ 800 ಮರುಖರೀದಿಸಿದ ಉದ್ಯಮಿ
ಟ್ರಾಫಿಕ್ ದಂಡ ಇನ್ನೂ ಕಟ್ವಿಲ್ವಾ? ಹೀಗೆ ಭಾರತದಲ್ಲಿ ಬಾಕಿ ಉಳಿದಿರುವ ಮೊತ್ತ 39000 ಕೋಟಿ ರೂ