ಕಾರು ಸ್ಟಾರ್ ಆಗುತ್ತಿಲ್ಲ ಎಂದ ತಕ್ಷಣ ಗಾಬರಿಯಾಗಬೇಕಿಲ್ಲ, ಅಥವಾ ಮೆಕೆನಿಕ್ ಕರೆಯಿಸಬೇಕಿಲ್ಲ. ಸಮಸ್ಯೆ ಏನು ಅನ್ನೋದನ್ನ ನೋಡಿ ನೀವೆ ಸರಿಪಡಿಸಿಕೊಳ್ಳಬಹುದು. ಕಾರು ಸ್ಟಾರ್ಟ್ ಆಗದಿರಲು ಸಾಮಾನ್ಯ 7 ಕಾರಣಗಳಿವೆ. ಇಲ್ಲಿದೆ ಲಿಸ್ಟ್
ಬೆಂಗಳೂರು(ಡಿ.15): ಆಧುನಿಕ ಕಾರುಗಳ ಹೊಸ ತಂತ್ರಜ್ಞಾನಗಳಿಂದ ಕೂಡಿದೆ. ಸಮಸ್ಯೆ ಏನು, ಎಲ್ಲಿ ಅನ್ನೋದನ್ನ ಕಂಪ್ಯೂಟರ್ ಮೂಲಕ ತಿಳಿದುಕೊಳ್ಳಬಹುದು. ಆದರೆ ಹಳೇ ಕಾರುಗಳು ಹಾಗಲ್ಲ, ಪ್ರತಿ ದಿನ ಆಯಿಲ್ ಪರಿಶೀಲನೆ, ರೇಡಿಯೇಟರ್ ಪರಿಶೀಲನೆ, ಲೋಡ್, ಸೇರಿದಂತೆ ಎಲ್ಲವೂ ಡ್ರೈವರ್ ಅಥವಾ ಮಾಲೀಕರೆ ಖುದ್ದಾಗಿ ಚೆಕ್ ಮಾಡಬೇಕು.
ಇದನ್ನೂ ಓದಿ: ಯಮಹಾ ಸಲ್ಯೂಟೋ RX 110,125 ಬೈಕ್ ಬಿಡುಗಡೆ!
undefined
ಹಳೇ ಕಾರುಗಳು ವರ್ಷ ಕಳೆದಂತೆ ಸಮಸ್ಯೆಗಳನ್ನ ಎದುರಿಸುತ್ತದೆ. ಅದರಲ್ಲೂ ಪ್ರಮುಖವಾಗಿ ಸ್ಟಾರ್ ಸಮಸ್ಯೆ. ಸಾಮಾನ್ಯವಾಗಿ ನಿಲ್ಲಿಸಿದ ಕಾರು ಸ್ಟಾರ್ ಆಗದಿರಲು ಹಲವು ಕಾರಣಗಳಿವೆ. ಇಲ್ಲಿದೆ 10 ಕಾರಣ.
ಬ್ಯಾಟರಿ ಸಮಸ್ಯೆ
ಇದು ಸಾಮಾನ್ಯ ಕಾರಣ. ಬ್ಯಾಟರಿ ವೀಕ್ ಆಗಿದ್ದರೆ ಕಾರು ಸ್ಟಾರ್ಟ್ ಆಗಲು ಸಾಧ್ಯವಾಗಿಲ್ಲ. ಬ್ಯಾಟರಿ ಸಂಪೂರ್ಣ ಡೆಡ್ ಆಗಿದ್ದರೆ ಹೊಸ ಬ್ಯಾಟರಿ ಅಳವಡಿಸಿವುದು ಸೂಕ್ತ. ಆದರೆ ವೀಕ್ ಆಗಿದ್ದರೆ ಚಾರ್ಚ್ ಅಥವಾ ಬೂಸ್ಟ್ ಮಾಡಿಸಿಕೊಂಡರೆ ಕಾರು ಸ್ಟಾರ್ಟ್ ಆಗಲಿದೆ.
ಇದನ್ನೂ ಓದಿ: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳು ಬಳಸೋ ಕಾರು ಯಾವುದು?
ಆಲ್ಟರ್‌ನೇಟರ್ ಸಮಸ್ಯೆ
ಕಾರಿನ ಬ್ಯಾಟರಿ ಚಾರ್ಚಿಂಗ್ ಆಗುತ್ತಿಲ್ಲ ಎಂದರೆ ಅದು ಆಲ್ಟರ್‌ನೇಟ್ ಸಮಸ್ಯೆ. ಕಾರಿನ ಆಲ್ಟರ್‌ನೇಟರ್‌ಗೆ ಅಳವಡಿಸಿರುವ ಬೆಲ್ಟ್ ವೀಕ್ ಆಗಿರುತ್ತೆ, ಅಥವಾ ಹಾಳಾಗಿರುತ್ತೆ. ಇದರಿಂದ ಆಲ್ಟರ್‌ನೇಟ್ ಕಾರ್ಯನಿರ್ವಹಿಸುವುದಿಲ್ಲ. ಇದು ಕೂಡ ಕಾರು ಸ್ಟಾರ್ ಆಗದಿರಲು ಪ್ರಮುಖ ಕಾರಣ.
ಸ್ಟಾರ್ಟರ್ ಸಮಸ್ಸೆ
ಹಳೇ ಕಾರುಗಳಲ್ಲಿ ಸ್ಟಾರ್ಟರ್ ಸಮಸ್ಯೆ ಎದುರಾಗೋದು ಸಹಜ. ಸ್ಟಾರ್ಟರ್‌ನಲ್ಲಿರುವ ಗ್ರಿಪ್(ಟೀತ್) ಹಾಳಾಗಿ ಕಾರ್ಯನಿರ್ವಹಿಸದೇ ಇರುವ ಸಾಧ್ಯತೆ ಹೆಚ್ಚು. ಇದು ಹೊಸ ತಂತ್ರಜ್ಞಾನದ ಕಾರುಗಳಿಗೆ ಅನ್ವಯವಾಗೋದಿಲ್ಲ.
ಇದನ್ನೂ ಓದಿ: ಈ 5 ಕಡೆ ಮಾಡಬೇಡಿ ಕಾರು ಡ್ರೈವ್ -ಅಪಾಯ ಕಟ್ಟಿಟ್ಟ ಬುತ್ತಿ!
ಸ್ಪಾರ್ಕ್ ಪ್ಲಗ್ ಸಮಸ್ಯೆ
ಪ್ರತಿ ಸರ್ವೀಸ್‌ನಲ್ಲಿ ಸ್ಪಾರ್ಕ್ ಪ್ಲಗ್ ಕ್ಲೀನ್ ಮಾಡಿಸಿಕೊಳ್ಳಬೇಕು ಅಥವಾ ಬದಲಾಯಿಸಬೇಕು. ಕೆಲವೊಮ್ಮೆ ಕಾರು ಹೆಚ್ಚು ಕೀಲೋಮೀಟರ್ ಓಡಿದಾಗ ಸ್ಪಾರ್ಕ್ ಪ್ಲಗ್ ಸಮಸ್ಯೆ ಎದುರಾಗುತ್ತೆ.
ಏರ್ ಫಿಲ್ಟರ್ ಸಮಸ್ಯೆ
ಏರ್ ಫಿಲ್ಟರ್ ಕ್ಲೀನ್ ಮಾಡಿಸಿಕೊಂಡಿರಬೇಕು ಅಥವಾ ಸರ್ವೀಸ್ ವೇಳೆ ಬದಲಾಯಿಸಬೇಕು. ಹೊರಗಿನ ಧೂಳು ಸೇರಿದಂತೆ ಇತರ ಕಲ್ಮಶಗಳಿಂದ ಏರ್ ಫಿಲ್ಟರ್ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಹೀಗಾದಲ್ಲಿ ಕಾರು ಸ್ಟಾರ್ಟ್ ಆಗುವುದಿಲ್ಲ.
ಇದನ್ನೂ ಓದಿ: ಸಣ್-ಸಣ್ಣ 5 ತಪ್ಪಿನಿಂದ ಕಡಿಮೆಯಾಗುತ್ತೆ ನಿಮ್ಮ ಕಾರಿನ ಆಯಸ್ಸು!
ಫ್ಯೂಯೆಲ್ ಫಿಲ್ಟರ್ ಸಮಸ್ಯೆ
ಕಾರಿನ ಚಲಿಸಲು ಇಂಧನ ಮುಖ್ಯ. ಈ ಇಂಧನವನ್ನ ಫಿಲ್ಟರ್ ಮಾಡೋ ಫ್ಯೂಯೆಲ್ ಫಿಲ್ಟರ್ ಕ್ಲೀನ್ ಮಾಡದಿದ್ದರೆ, ಕಾರು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಇದರಿಂದ ಕಾರು ಸ್ಟಾರ್ ಆಗದೇ ಇರುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ಫೇಸ್‌ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್ ಬಳಿ ಯಾವ ಕಾರಿದೆ?
ಫ್ಯುಯೆಲ್ ಪಂಪ್ ಸಮಸ್ಯೆ
ಕಾರಿಗೆ ಇಂಧನ ಪಂಪ್ ಮಾಡೋ ಫ್ಯುಯೆಲ್ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಇದರಿಂದ ಕಾರಿನ ಎಂಜಿನ್‌ಗೆ ಇಂಧನ್ ಸರಾಗವಾಗಿ ಹೋಗುವುದಿಲ್ಲ. ಇದರಿಂದ ಎಂಜಿನ್ ಇಂಧನವಿಲ್ಲದೇ ಕಾರು ಸ್ಟಾರ್ ಆಗುವುದಿಲ್ಲ.