Garuda Purana: ಸ್ಮಶಾನದಿಂದ ಆತ್ಮಗಳು ನಿಮ್ಮನ್ನು ಹಿಂಬಾಲಿಸುವುದೇಕೆ?

Published : Jul 07, 2025, 04:47 PM ISTUpdated : Jul 07, 2025, 04:52 PM IST
garuda purana

ಸಾರಾಂಶ

ಗರುಡ ಪುರಾಣದ ಪ್ರಕಾರ, ಶವಸಂಸ್ಕಾರದ ವಿಧಿವಿಧಾನಗಳನ್ನು ಸರಿಯಾಗಿ ಪಾಲಿಸದಿದ್ದರೆ, ಸತ್ತವನ ಆತ್ಮವು ಭೂಮಿಯಲ್ಲೇ ಉಳಿದು ತೊಳಲಾಡಬಹುದು ಮತ್ತು ನಿಮ್ಮನ್ನು ಹಂಬಾಲಿಸಬಹುದು. ಅದು ಹೇಗೆ? 

ಮನುಷ್ಯ ಹೇಗೆ ಸಾಯುತ್ತಾನೆ, ಯಾಕೆ ಸಾಯುತ್ತಾನೆ, ಅವನ ಬದುಕಿನ ಯಾವ ಪುಣ್ಯ-ಪಾಪಗಳು ಅವನನ್ನು ಸ್ವರ್ಗಕ್ಕೋ ನರಕಕ್ಕೋ ಕೊಂಡೊಯ್ಯುತ್ತವೆ- ಇದೆಲ್ಲವನ್ನೂ ಗರುಡ ಪುರಾಣ ವರ್ಣಿಸುತ್ತದೆ. ಸನಾತನ ಹಿಂದೂ ಧರ್ಮದ ಪ್ರಕಾರ ಮರಣದ ನಂತರ ಏನಾಗುತ್ತದೆ ಎಂಬುದನ್ನು ಗರುಡ ಪುರಾಣದಲ್ಲಿ ಬರೆಯಲಾಗಿದೆ. ವಿಷ್ಣು ಹಾಗೂ ಗರುಡರಾಜನ ನಡುವೆ ನಡೆಯುವ ಸಂಭಾಷಣೆಯನ್ನು ಗ್ರಂಥದ ರೂಪದಲ್ಲಿ ಬರೆಯಲಾಗಿದೆ. ಇದೆಲ್ಲ ಕಟ್ಟು ಕತೆ ಅನ್ನುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಸಾವಿನ ಬಗ್ಗೆ ಮನುಷ್ಯನ ಮನಸ್ಸು ಹೇಗೆಲ್ಲಾ ಚಿಂತಿಸಿತ್ತು ಎಂಬುದನ್ನು ಈ ಗ್ರಂಥದ ಪಠಣದ ಮೂಲಕ ತಿಳಿಯಬಹುದಾಗಿದೆ.

ಅವುಗಳಲ್ಲಿ ಒಂದು ಸಂಗತಿ ಎಂದರೆ, ಸತ್ತವನ ದೇಹವನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬುದು. ಅವನ ಆತ್ಮ ಮರಳಿ ಭೂಮಿಯಲ್ಲೇ ಉಳಿದು ತೊಳಲಾಡುವಂತೆ ಆಗಬಾರದು. ಹಾಗಾಗಬೇಕಿದ್ದರೆ ನಿರ್ದಿಷ್ಟ ಶಾಸ್ತ್ರೋಕ್ತ ರೀತಿಯಲ್ಲಿ ಶವವನ್ನು ಸಂಸ್ಕಾರ ಮಾಡಿ ಬರಬೇಕು. ಇದರಲ್ಲಿ ಹೆಚ್ಚುಕಡಿಮೆ ಆದರೆ ಆ ಸತ್ತವನ ಆತ್ಮಕ್ಕೂ ಕುಟುಂಬಸ್ಥರಿಗೂ ಸಮಸ್ಯೆಗಳು ಶುರುವಾಗುತ್ತವೆ.

ಮನುಷ್ಯ ಸತ್ತ ಬಳಿಕ ಆತನ ಆತ್ಮಕ್ಕೆ ಅತಿಯಾಸೆ ಹೆಚ್ಚಾಗುತ್ತಂತೆ. ಆತ್ಮಕ್ಕೆ ನನಗೆ ದೇಹ ಇಲ್ಲ ಅಂತ ಸುಲಭವಾಗಿ ಮನದಟ್ಟು ಆಗೋದಿಲ್ವಂತೆ. ಹೀಗಾಗಿ ಮನುಷ್ಯ ಮೃತಪಟ್ಟ ಬಳಿಕ ಆತನನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಗುತ್ತಂತೆ. ಈ ಸಮಯದಲ್ಲಿ ಆತ್ಮಕ್ಕೆ ನನಗೆ ದೇಹ ಇಲ್ಲ ಎಂಬುದು ಮನದಟ್ಟಾಗುತ್ತಂತೆ. ಸಂಬಂಧಿಕರು, ಸ್ನೇಹಿತರು ನೋವಿನಲ್ಲಿ ದುಖಿಃಸುತ್ತಿರುವುದನ್ನು ನೋಡಿ ಆತ್ಮಕ್ಕೆ ನನ್ನ ದೇಹ ಇನ್ನು ಮುಂದೆ ಸ್ಮಂದಿಸುವುದಿಲ್ಲ ಅಂತ ತಿಳಿಯುತ್ತಂತೆ.

ಮತ್ತೊಂದು ವಿಚಾರ ಅಂದ್ರೆ ಚಿತೆಗೆ ಬೆಂಕಿಯಿಟ್ಟ ನಂತ್ರ ಹಿಂದೆ ತಿರುಗದೇ ಹೋಗಿ ಎಂದು ಸ್ಮಶಾನದಲ್ಲಿ ಹೇಳಿರುವುದನ್ನು ಎಲ್ಲರೂ ಕೇಳಿದ್ದೇವೆ. ಇದು ಯಾಕೆ ಅಂದರೆ ಹಿಂದೆ ತಿರುಗಿ ನೋಡಿದರೆ ಆತ್ಮಕ್ಕೆ ನನ್ನ ಮೇಲೆ ಇನ್ನೂ ಇವರಿಗೆಲ್ಲ ಆಸೆ ಇದೆ ಅಂತ ಅವರ ಹಿಂದೆಯೆ ಬರುತ್ತದೆ ಅಂತ ಹೇಳಲಾಗುತ್ತದೆ. ಇದರ ಜೊತೆಗೆ ಚಿತೆಗೆ ಬೆಂಕಿಯಿಟ್ಟ ಬಳಿಕ ಸ್ಮಶಾನದಲ್ಲಿ ಎಡವಬಾರದು ಅಂತಾರೆ. ಎಡವಿದಾಗ ರಕ್ತ ಬಂದರೆ ಮತ್ತೆ ಆತ್ಮಕ್ಕೆ ನಾನು ಬದುಕಬೇಕೆಂಬ ಆಸೆ ಬಂದು ಅವರನ್ನೇ ಹಿಂಬಾಲಿಸುತ್ತಂತೆ. ಹಾಗೇ ಚಿತೆಗೆ ಬೆಂಕಿಯಿಟ್ಟ ಕರ್ತೃ ಮೃತದೇಹದ ತಲೆ ಸಿಡಿಯುವವರೆಗೂ ಅಲ್ಲಿಂದ ಬರುವಂತಿಲ್ಲ.

ಆತ್ಮಕ್ಕೆ ನನ್ನ ದೇಹದಿಂದ ಮುಂಡ ಬೇರ್ಪಟ್ಟಿದೆ ಎಂದು ಇದರಿಂದ ಗೊತ್ತಾಗುತ್ತಂತೆ. ಇನ್ನೂ ಮಹಿಳೆಯರು ಯಾಕೆ ಸ್ಮಶಾನಕ್ಕೆ ಬರಬಾರದು ಅಂದ್ರೆ ಮಹಿಳೆಯರು ಮೊದಲೇ ಮೃದು ಸ್ವಭಾವದರು ಚಿತೆಗೆ ಬೆಂಕಿಯಿಟ್ಟ ಬಳಿಕ ನೋವಿನಲ್ಲಿ ಹಿಂದೆ ತಿರುಗಿ ನೋಡಿದರೆ, ಆತ್ಮಕ್ಕೂ ದುಃಖ ಹೆಚ್ಚಾಗಿ ಹಿಂದೆಯೆ ಬರುತ್ತೆ ಅಂತಾರೆ ಹಿರಿಯರು.

ಓರ್ವ ವ್ಯಕ್ತಿಯು ಸತ್ತಾಗ, ಅವನ ಆತ್ಮವು ದೇಹವನ್ನು ತೊರೆದು ಸ್ವಲ್ಪ ಸಮಯದವರೆಗೆ ಪ್ರಜ್ಞಾಹೀನ ಸ್ಥಿತಿಗೆ ಹೋಗುತ್ತದೆ. ಆ ನಂತರ ಆತ್ಮ ದೇಹಕ್ಕೆ ಹಿಂತಿರುಗಲು ಪ್ರಯತ್ನಿಸುತ್ತದೆ. ಅದಕ್ಕೇ ದೇಹವನ್ನು ನಾಶ ಮಾಡಬೇಕು. ಅಲ್ಲದೇ ತನ್ನ ಕುಟುಂಬ ಸದಸ್ಯರು ಹಾಗೂ ಆಪ್ತರೊಂದಿಗೆ ಮಾತನಾಡಲು ಯತ್ನಿಸುತ್ತದೆಯಂತೆ, ಆದರೂ ಸಾಧ್ಯವಾಗೋದಿಲ್ಲ.

ಕನಸಿನಲ್ಲಿ ಮದುವೆ ಕಂಡರೇನು? ಅದೃಷ್ಟ, ಪ್ರೀತಿ ಅಥವಾ ಸಮಸ್ಯೆ?

ಗರುಡ ಪುರಾಣದ ಪ್ರಕಾರ, ರಾತ್ರಿಯಲ್ಲಿ ಅಂದರೆ ಸೂರ್ಯಾಸ್ತದ ನಂತರ ಸ್ವರ್ಗದ ದ್ವಾರಗಳನ್ನು ಮುಚ್ಚಲಾಗುತ್ತದೆ . ಈ ವೇಳೆ ನರಕದ ಬಾಗಿಲುಗಳು ತೆರೆದಿರುತ್ತವೆ ಎಂದು ಹೇಳಲಾಗಿದೆ. ಒಂದು ವೇಳೆ ಸೂರ್ಯಾಸ್ತದ ನಂತರ ಅಂತ್ಯಸಂಸ್ಕಾರ ಮಾಡಿದರೆ ಜೀವಿಯ ಆತ್ಮವು ನರಕದ ನೋವನ್ನು ಅನುಭವಿಸಬೇಕಾಗುತ್ತದೆ. ಆತನಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ. ಸ್ವರ್ಗ ಪ್ರಾಪ್ತಿಯಾಗಬೇಕು, ನರಕದ ಕಷ್ಟವನ್ನು ಆಪ್ತರು ನೋಡಬಾರದು ಎನ್ನುವ ಕಾರಣಕ್ಕೆ ರಾತ್ರಿ ಬದಲು ಹಗಲಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ.

ಶ್ರಾವಣದಲ್ಲಿ ಶಿವಭಕ್ತರಿಗೆ ಸಿಹಿ ಸುದ್ದಿ! ಈ 3 ರಾಶಿಯವರಿಗೆ ಸಂಪತ್ತಿನ ವರದಾನ

 

 

 

PREV
Read more Articles on
click me!

Recommended Stories

ಇಂದು ಮಧ್ಯಾಹ್ನ 3:38 ನಂತರ 4 ರಾಶಿಗೆ ಜಾಕ್‌ಪಾಟ್, ಗುರು ವಕ್ರಿಯಿಂದ ಸಂಪತ್ತು, ಅದೃಷ್ಟ
ಹೊಸ ವರ್ಷದಲ್ಲಿ ಕೇತು 3 ರಾಶಿಗೆ ದಯೆ, ಗೌರವ ಮತ್ತು ಪ್ರತಿಷ್ಠೆ 3 ಪಟ್ಟು ಜಾಸ್ತಿ