
ಹಿಂದೂ ಸಂಪ್ರದಾಯ (Hindu tradition)ವನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬರ್ತಿರುವ ಸೆಲೆಬ್ರಿಟಿ ಕುಟುಂಬದಲ್ಲಿ ಮುಖೇಶ್ ಅಂಬಾನಿ (Mukesh Ambani) ಫ್ಯಾಮಿಲಿ ಸೇರಿದೆ. ಹಬ್ಬಗಳನ್ನು ಸಂಪ್ರದಾಯಬದ್ಧವಾಗಿ ಮಾಡುವ ಮುಖೇಶ್ ಅಂಬಾನಿ ಕುಟುಂಬ ಪಿತೃ ಪಕ್ಷದಲ್ಲಿಯೂ ತನ್ನ ಕರ್ತವ್ಯವನ್ನು ಪಾಲಿಸಿಕೊಂಡು ಬರ್ತಿದೆ. ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ ವಿಶೇಷ ಮಹತ್ವ ಇದೆ. ಪೂರ್ವಜರನ್ನು ನೆನಪಿಸಿಕೊಂಡು, ಅವರನ್ನು ಸಂತೋಷಗೊಳಿಸಲು, ಅವರ ಆತ್ಮಕ್ಕೆ ಶಾಂತಿ ನೀಡಲು ಪಿತೃ (Pitru) ಪಕ್ಷದಲ್ಲಿ ಶ್ರಾದ್ಧ, ಪಿಂಡ ದಾನ, ತರ್ಪಣ ಬಿಡುವ ಕೆಲಸ ಮಾಡಲಾಗುತ್ತದೆ. ಮುಖೇಶ್ ಅಂಬಾನಿ ಕುಟುಂಬ ಕೂಡ ಇದನ್ನು ಮಾಡುತ್ತ ಬಂದಿದೆ. ದೇಶದ ಪ್ರಮುಖ ಕೈಗಾರಿಕೋದ್ಯಮಿ ಮತ್ತು ರಿಲಯನ್ಸ್ ಗ್ರೂಪ್ನ ಅಧ್ಯಕ್ಷ ಮುಖೇಶ್ ಅಂಬಾನಿ ತಮ್ಮ ತಂದೆ ಧೀರೂಭಾಯಿ ಅಂಬಾನಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಪಿಂಡದಾನ ಮಾಡಿದ ಮುಖೇಶ್ ಅಂಬಾನಿ : ತಂದೆ ಧೀರೂಭಾಯಿ ಅಂಬಾನಿ (Dhirubhai Ambani )ಆತ್ಮಕ್ಕೆ ಶಾಂತಿ ಕೋರಲು ಮುಖೇಶ್ ಅಂಬಾನಿ ಪಿಂಡದಾನ ಹಾಗೂ ತರ್ಪಣ ಬಿಟ್ಟಿದ್ದಾರೆ. ಬಿಹಾರದ ಗಯಾದಲ್ಲಿರುವ ಪ್ರಸಿದ್ಧ ವಿಷ್ಣುಪಾದ ದೇವಸ್ಥಾನಕ್ಕೆ ಬಂದ ಮುಖೇಶ್ ಅಂಬಾನಿ ಹಾಗೂ ಅನಂತ್ ಅಂಬಾನಿ, ಸಾಂಪ್ರದಾಯಿಕವಬಾಗಿ ಪಿಂಡದಾನ ಮಾಡಿದ್ದಾರೆ. ತಮ್ಮ ಪೂರ್ವಜರ ಶಾಂತಿ ಮತ್ತು ಮೋಕ್ಷಕ್ಕಾಗಿ ಪ್ರಾರ್ಥಿಸಿದ್ದಾರೆ. ವಿಷ್ಣುಪಾದ ದೇವಸ್ಥಾನದಲ್ಲಿ ಪಿಂಡ ದಾನ ಮಾಡುವುದು ಬಹಳ ಅಪರೂಪದ ಮತ್ತು ಪುಣ್ಯ ಕಾರ್ಯವೆಂದು ಪರಿಗಣಿಸಲಾಗಿದೆ. ಮುಖೇಶ್ ಅಂಬಾನಿ ಈ ವಿಧಿವಿಧಾನಗಳನ್ನು ಸೂಕ್ತ ವಿಧಿವಿಧಾನಗಳೊಂದಿಗೆ ಮಾಡಿದರು. ಅವರು ಫಾಲ್ಗು, ವಿಷ್ಣುಪಾದ ಮತ್ತು ಅಕ್ಷಯವತ್ನಲ್ಲಿ ವಿಧಿವಿಧಾನಗಳನ್ನು ನೆರವೇರಿಸಿದರು.
ಮಹಾಲಯ ಅಮಾವಾಸ್ಯೆ ದಿನವೇ ಸೂರ್ಯಗ್ರಹಣ, ಶ್ರಾದ್ಧದ ದಿನ ಏನೆಲ್ಲ ಮಾಡ್ಬೇಕು?
ಆಚಾರ್ಯ ಶ್ಯಾಮ್ ಬಿಹಾರಿ ಪಾಂಡೆ ಅವರ ಮಾರ್ಗದರ್ಶನದಲ್ಲಿ ಆಚರಣೆಗಳನ್ನು ನೆರವೇರಿಸಲಾಯಿತು. ತಂದೆ ಮತ್ತು ಮಗ ಸುಮಾರು ಒಂದು ಗಂಟೆಗಳ ಕಾಲ ನಡೆದ ವೈದಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ, ಭಗವಂತ ಹರಿಯ ಪಾದಕ್ಕೆ ಪಿಂಡ ಅರ್ಪಿಸಿದರು. ಗರ್ಭಗುಡಿಯಲ್ಲಿರುವ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದರು.
ಪುರೋಹಿತರಿಗೆ ವಿಶೇಷ ದಾನ : ಪಿಂಡ ದಾನ ಸಮಾರಂಭದ ನಂತ್ರ ಪುರೋಹಿತರು ಮತ್ತು ಬ್ರಾಹ್ಮಣರಿಗೆ ದೇಣಿಗೆ ನೀಡುವುದನ್ನು ಕಡ್ಡಾಯ. ಮುಖೇಶ್ ಅಂಬಾನಿ ಅತ್ಯಂತ ಗೌರವದಿಂದ ಪುರೋಹಿತರಿಗೆ ದೇಣಿಗೆ ನೀಡಿದ್ದಾರೆ. ಹಾಜರಿದ್ದ ಹೆಚ್ಚಿನ ಸಂಖ್ಯೆಯ ಪುರೋಹಿತರಿಗೆ ಗೌರವಯುತವಾಗಿ ಲಕೋಟೆಗಳಲ್ಲಿ ನಗದು ನೀಡಿದ್ದಾರೆ. ಮುಖೇಶ್ ಅಂಬಾನಿ ಮೂರು ಚಿನ್ನದ ಉಂಗುರ ಮತ್ತು ಕೆಲವು ಪಾತ್ರೆಗಳನ್ನು ಸಹ ದಾನ ಮಾಡಿದ್ದಾರೆ. ಶ್ರೀ ವಿಷ್ಣುಪಾದ ವ್ಯವಸ್ಥಾಪಕ ಸಮಿತಿಯು ಮುಖೇಶ್ ಅಂಬಾನಿಗೆ ವಿಷ್ಣುವಿನ ಪಾದದ ಗುರುತುಗಳು ಮತ್ತು ಉಡುಪನ್ನು ನೀಡಿ ಆಶೀರ್ವಾದ ಮಾಡಿದೆ.
ಪಿಂಡದಾನದಲ್ಲಿ ಬಳಸಿದ ವಸ್ತು : ಪ್ರಾಥಮಿಕವಾಗಿ ಬಾರ್ಲಿ ಹಿಟ್ಟು ಅಥವಾ ಅಕ್ಕಿ ಹಿಟ್ಟಿನಿಂದ ಮಾಡಿದ ಪಿಂಡವನ್ನು ದಾನ ಮಾಡಲಾಗುತ್ತದೆ. ಈ ಉಂಡೆಗಳನ್ನು ದೇವರುಗಳು ಮತ್ತು ಪೂರ್ವಜರಿಗೆ ಅರ್ಪಿಸಲಾಗುತ್ತದೆ. ಪೂಜೆಗೆ ಎಳ್ಳು, ಬಾರ್ಲಿ, ಕುಶಾ ಹುಲ್ಲು, ಹೂವುಗಳು, ಹಣ್ಣುಗಳು, ಸಿಹಿತಿಂಡಿಗಳು ಮತ್ತು ಗಂಗಾ ನೀರು ಇತರ ವಸ್ತುಗಳನ್ನು ಬಳಸಲಾಗಿದೆ.
ಸೂರ್ಯ-ಮಂಗಳ ಒಟ್ಟಾಗಿ ದ್ವಿದ್ವಾದಶ ದೃಷ್ಟಿ ಯೋಗ, ಈ ರಾಶಿಗೆ ಅಪಾರ ಸಂಪತ್ತು, ಬೆಸ್ಟ್ ಟೈಮ್ ಶುರು
ಪಿಂಡ ದಾನಕ್ಕೆ ಪ್ರಸಿದ್ಧಿ ಪಡೆದಿರುವ ಗಯಾ : ಸನಾತನ ಧರ್ಮದ ನಂಬಿಕೆಗಳ ಪ್ರಕಾರ, ಪೂರ್ವಜರ ಮೋಕ್ಷಕ್ಕಾಗಿ ಗಯಾವನ್ನು ಸರ್ವೋಚ್ಚ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಫಾಲ್ಗು ನದಿಯ ದಡದಲ್ಲಿ ಪಿಂಡ ದಾನ ಮಾಡುವುದರಿಂದ ಪೂರ್ವಜರಿಗೆ ಮೋಕ್ಷ ದೊರೆಯುತ್ತದೆ. ಭಗವಂತ ರಾಮನು ಸ್ವತಃ ಇಲ್ಲಿ ತನ್ನ ತಂದೆ ದಶರಥನಿಗಾಗಿ ಪಿಂಡ ದಾನ ಮಾಡಿದ್ದನು.