ಅಷ್ಟಕ್ಕೂ ಗಂಡ-ಹೆಂಡತಿ ವಿನಾಕಾರಣ ಜಗಳವಾಡುವುದೇಕೆ? ಅವರ ಜಾತಕ ಹೀಗಿರುತ್ತೆ ನೋಡಿ

First Published Jun 30, 2018, 5:56 PM IST
Highlights

ಗಂಡ ಏತಿ ಎಂದರೆ, ಹೆಂಡತಿ ಪ್ರೇತಿ ಎನ್ನುತ್ತಾಳೆ. ವಿನಾಕಾರಣ ಕಚ್ಚಾಡುತ್ತಿರುತ್ತಾರೆ. ಜಾತಕದಲ್ಲಿ ಗೃಹ ಮೈತ್ರಿತ್ವ ಹೆಚ್ಚು ಕಮ್ಮಿಯಾದರೆ ಈ ರೀತಿ ಆಗುತ್ತೆ ಎನ್ನುತ್ತಾರೆ. ಅದೂ ಅಲ್ಲದೇ ಕೆಲವು ಸ್ನೇಹಿತರೂ ಸದಾ ಕಚ್ಚಾಡುತ್ತಿರುತ್ತಾರೆ. ಅಷ್ಟಕ್ಕೂ ಇಂಥ ವೈರುಧ್ಯಗಳಿಗೆ ಕಾರಣಗಳೇನು? 

ನೀವು ಎಷ್ಟು ಪ್ರೀತಿಸಿದರೂ ಅವರು ನಿಮ್ಮನ್ನ ಕಡೆಗಣಿಸುತ್ತಾರೆ ಯಾಕೆ ಗೊತ್ತಾ..? 

ಯಾಕಂದ್ರೆ ಅವರಿಗೆ ನೀವು ಇಷ್ಟ ಆಗಲ್ಲ. ನಿಮ್ಮನ್ನ ಕಂಡ್ರೆ ಅವರಿಗೆ ಸುತರಾಂ ಇಷ್ಟ ಇಲ್ಲ. ನೀವು ಮಾಡಿದ ಯಾವುದೇ ಕೆಲಸ ಅವರಿಗೆ ಹಿಡ್ಸಲ್ಲ.  ನೀವೇನೋ ಅವ್ರಿಗೆ ಸಹಾಯವಾಗ್ಲಿ, ಅವ್ರಿಗೆ ಇಷ್ಟವಾಗ್ಲಿ ಅಂತಲೇ ಮಾಡಿರ್ತೀರ. ಆದ್ರೆ ಅದೇ ಅವ್ರಿಗೆ ಇಷ್ಟವಾಗಲ್ಲ. ಯಾಕೆ..? 

ಅದ್ಬಿಡಿ ಇತ್ತೀಚಿನ ದಿನಗಳಲ್ಲಿ ನೀವೇ ಗಮನಿಸಿರುವ ಹಾಗೆ ಗಂಡ - ಹೆಂಡತಿ ಮಧ್ಯೆ ಅಂತೂ ಸಾಮರಸ್ಯವೇ ಇಲ್ಲದ ಹಾಗಾಗಿದೆ.  ಅವ್ರಿಬ್ರ ಮಧ್ಯೆ ಅದೆಷ್ಟು ಎರಡು ಮನೆ ಕಟ್ಬುವಷ್ಟು ದೊಡ್ಡ ಗ್ಯಾಪ್ ಕ್ರಿಯೇಟ್ ಆಗಿರುತ್ತೆ. ಸದಾ ಕಲಹ, ಜಗಳ, ಈಗೋ ಪ್ರಾಬ್ಮಮ್ಸ್ , ಒಬ್ಬರ ಮಾತು ಇನ್ನೊಬ್ಬರಿಗೆ ಇಷ್ಟವಾಗಲ್ಲ. ಹಾವು ಮುಂಗ್ಸಿ ರೀತಿ ಆಡ್ತಿರ್ತಾರೆ. ಏತಿ ಅಂದ್ರೆ ಪ್ರೇತಿ ಅಂತಾರಲ್ಲ ಹಾಗಿರುತ್ತೆ ಕೆಲವರ ಸಂಸಾರ. 

ಯಾಕೆ  ಹೀಗೆ..? ಯಾಕೆ ಅಂದ್ರೆ ನಿಮ್ಮ ರಾಶಿಗೂ ಅವರ ರಾಶಿಗೂ ಆಗ್ಬರಲ್ಲ. ಅದಕ್ಕೂ ಇವ್ರು ನಮ್ಮನ್ನ ಇಷ್ಟಪಡೆದೇ ಇರೋದಕ್ಕೂ ಸಂಬಂಧ ಇದೆ. ಆ ನಂಟು ಏನು ಅನ್ನೋದು ಅರ್ಥವಾದ್ರೆ ಅದನ್ನ ನೀವೂ ಒಪ್ಕೊಳ್ತಿರ, ನಿಮ್ಮ ಸ್ನೇಹಿತರಿಗೂ ಹೇಳ್ತಿರಾ. ಅಂಥ ಒಂದು ಸ್ಪಷ್ಟ ಉತ್ತರ ಜ್ಯೋತಿಷದಲ್ಲಿ ಇದೆ.

ನೋಡಿ ನಿಮಗೆ ಗೊತ್ತಿರೋ ಹಾಗೆ ಜ್ಯೋತಿಷದಲ್ಲಿ 12 ರಾಶಿಗಳಿವೆ. ಆ ಹನ್ನೆರಡೂ ರಾಶಿಗೆ ಒಬ್ಬೊಬ್ಬ ಅಧಿಪತಿ ಇರುತ್ತಾನೆ. ಅಂದ್ರೆ 12 ರಾಶಿಗಳನ್ನೂ ಒಂದೊಂದು ಗ್ರಹ ಲೀಡ್ ಮಾಡತ್ತೆ. ಇನ್ನೂ ಸ್ಪಷ್ಟವಾಗಿ ಹೇಳ್ಬೇಕು ಅಂದ್ರೆ ಈಗ ನಿಮ್ಮ ಕೈಯಲ್ಲಿ ಮೊಬೈಲ್ ಇದೆ ಅಲ್ವಾ..? ಆ ಮೊಬೈಲ್ ಯಾರ್ದು? ಅದು ನಿಮ್ಮದು. ನಿಮ್ಮ ಮೊಬೈಲ್‌ಗೆ ನೀವೇ ಅಧಿಪತಿ ಅಥವಾ ನೀವೇ ಯಜಮಾನ. ಹಾಗೆಯೇ ಮೇಷ ರಾಶಿ ಯಾರದ್ದು ಅಂದ್ರೆ ಅದರ ಒಡೆಯ ಅಥವಾ ಯಜಮಾನ ಅಥವಾ ಅಧಿಪತಿ ಕುಜ.  ಹಾಗೆಯೇ  12 ರಾಶಿಗೂ ಯಜಮಾನರಿದ್ದಾರೆ. ಅಂದ್ರೆ ಅಧಿಪತಿಗಳಿದ್ದಾರೆ. 

ಯಾವ ರಾಶಿಗೆ ಯಾರು ಯಜಮಾನ?

ಮೇಷ ರಾಶಿಗೆ ಯಜಮಾನ - ಕುಜ ( ಮಂಗಳ)

ವೃಷಭ - ಶುಕ್ರ

ಮಿಥುನ-  ಬುಧ

ಕರ್ಕಟಕ - ಚಂದ್ರ

ಸಿಂಹ - ಸೂರ್ಯ

ಕನ್ಯಾ-ಬುಧ

ತುಲಾ - ಶುಕ್ರ

ವೃಶ್ಚಿಕ - ಕುಜ

ಧನಸ್ಸು - ಗುರು

ಮಕರ - ಶನಿ

ಕುಂಭ -  ಶನಿ


ಮೀನ- ಗುರು

ಹೀಗೆ ಪ್ರತಿ ರಾಶಿಗೂ ಒಬ್ಬೊಬ್ಬ ಅಧಿಪತಿಗಳಿದ್ದಾರೆ. ಇಲ್ಲಿ ಕೆಲವರು ಎರಡೆರಡು ಮನೆಗೆ ಅಧಿಪತಿಗಳಾಗಿದ್ದಾರಲ್ಲ ಅಂತ ಕನ್ಫ್ಯೂಸ್ ಆಗ್ಬೇಡಿ.  ನಾವೂ ಎರಡೆರಡು ಸೈಟು, ಮನೆ ಇಟ್ಕೊಂಡಿರಲ್ವಾ ಹಾಗೇ ಅವ್ರಿಗೂ ಎರಡೆರಡು ಮನೆ ಇದೆ.


ಗಂಡ- ಹೆಂಡತಿ ಜಗಳಕ್ಕೇನು ಸಂಬಂಧ?
ಸರಿ ಈಗ ವಿಷ್ಯಕ್ಕೆ ಬನ್ನಿ. ಇದಕ್ಕೂ ಗಂಡ-ಹೆಂಡ್ತಿ ಜಗಳ ಆಡೋದಕ್ಕೂ ಏನ್ ಸಂಬಂಧ?  ಮೇಲೆ ಗಮನಿಸಿದ್ರಲ್ಲ ಗ್ರಹಗಳು ಆ ಗ್ರಹಗಳಲ್ಲಿ ಮಿತ್ರ ಗ್ರಹಗಳು ಶತ್ರು ಗ್ರಹಗಳು ಅಂತ ಕೆಲವಿದಾವೆ. ಆ ಶತ್ರು ಮಿತ್ರ ಗ್ರಹಗಳ ಆಧಾರದ ಮೇಲೆ ದಾಂಪತ್ಯ ಹೇಗಿದೆ ಅಥವಾ ನಮ್ಮ ಸ್ನೇಹ ಬಾಂಧವ್ಯ ಹೇಗಿದೆ ಅಂತ ನಿರ್ಧಾರ ಮಾಡ್ಬಹುದು. 

ಶತ್ರು-ಮಿತ್ರ ಗ್ರಹಗಳು ಯಾರು?
ಸೂರ್ಯನಿಗೆ - ಶುಕ್ರ, ಶನಿ ಶತ್ರುಗಳು. 

ಚಂದ್ರನಿಗೆ - ಯಾರೂ ಶತ್ರುಗಳಿಲ್ಲ.
 
ಕುಜನಿಗೆ - ಬುಧ ಶತ್ರು. 

ಬುಧನಿಗೆ - ಚಂದ್ರ

ಗುರುವಿಗೆ - ಬುಧ, ಶುಕ್ರರು ಶತ್ರುಗಳು

ಶುಕ್ರನಿಗೆ - ಸೂರ್ಯ, ಚಂದ್ರರು ಶತ್ರುಗಳು


ಶನಿಗೆ - ಸೂರ್ಯ, ಚಂದ್ರ, ಕುಜರು ಶತ್ರುಗಳು.


ಈಗ ಗಮನ ಇಟ್ಟು ಮೇಲಿನ ರಾಶಿ ಹಾಗೂ ರಾಶಿಗಳ ಅಧಿಪತಿಗಳನ್ನ ಗಮನಿಸಿ. ನಿಮ್ಮದೇನಾದ್ರೂ ಸಿಂಹ ರಾಶಿ ಆಗಿದ್ದು, ನಿಮ್ಮ ಸಂಗಾತಿಯ ರಾಶಿ ಕುಂಭ ಅಥವಾ ಮಕರ, ಇಲ್ಲವೇ ವೃಷಭ ಅಥವಾ ತುಲಾ ರಾಶಿ ಆಗಿದ್ರೆ ನಿಮ್ಮ ಸಂಗಾತಿಯಲ್ಲಿ ಅಷ್ಟು ಹೊಂದಾಣಿಕೆ ಇರೋದಿಲ್ಲ. ಅಷ್ಟೇ ಅಲ್ಲ ನಿಮ್ಮ ಸ್ನೇಹಿತರಾಗಿದ್ರೂ ಅಷ್ಟೇ. ಸಣ್ಣ ಪುಟ್ಟದ್ದಕ್ಕೂ ಜಗಳ, ನೀವು ಒಂದು ಯೋಚನೆ ಮಾಡಿದ್ರೆ, ಅವ್ರ ಯೋಚನೆ ಇನ್ನೊಂದಾಗಿರತ್ತೆ. ಹೀಗೆ ವಿರುದ್ಧ ಯೋಚನೆಗಳನ್ನ ಮಾಡ್ತಿರ್ತೀರ. 

ನಿಮ್ಮ ರಾಶಿಯ ಅಧಿಪತಿ ಸೂರ್ಯ ನಿಮ್ಮ ಸಂಗಾತಿಯ ರಾಶಿಯ ಅಧಿಪತಿ ಕ್ರಮವಾಗಿ ಶನಿ ಹಾಗೂ ಶುಕ್ರವಾಗಿದ್ದರೆ, ಆ ಗ್ರಹಗಳಲ್ಲಿ ಶತ್ರುತ್ವ ಇರುವುದರಿಂದ ನಿಮ್ಮಲ್ಲೂ ಅಂಥ ಸ್ವಭಾವ ಬೇರೂರಿರತ್ತೆ. ಇದೇ ಥರ ಬೇರೆ ಬೇರೆ ರಾಶಿ ಹಾಗೂ ಗ್ರಹಗಳ ಶತ್ರುತ್ವಗಳನ್ನ ಮೇಲೆ ತಿಳಿಸಿರುವ ಹಾಗೆ ನೀವೇ ತಾಳೆ ಮಾಡ್ಕೋಬಹುದು. ಇದನ್ನ ಪರೀಕ್ಷೆ ಮಾಡಿದಾಗ ಶೇಕಡಾ 75 ಜನ ಒಪ್ಪಿಕೊಂಡಿದ್ದಾರೆ. ಹಾಗಾಗಿ ನೀವಿನ್ಮೇಲೆ ಇಂಥವರ ಜೊತೆ ಮಾತಡುವಾಗ ಅಥವಾ ಸ್ನೇಹ ಬೆಳೆಸುವಾಗ ಇದನ್ನ ಗಮನಿಸಬಹುದು. 

ಎಲ್ಲವೂ ಹೀಗೇನಾ ಅಂದ್ರೆ ಇಲ್ಲ ಕೆಲವು ಇದನ್ನೂ ಮೀರಿದ ಗುಣ ನಡವಳಿಕೆ ಇರತ್ತೆ. ಅದಕ್ಕೆ ಏನು ಕಾರಣ ಅಂದ್ರೆ ನಿಮ್ಮ ಲಗ್ನಾಧಿಪತಿ ಹಾಗೂ ನಿಮ್ಮ ಸಂಗಾತಿಯ ಲಗ್ನಾಧಿಪತಿ ಮಿತ್ರರಿರಬಹುದು. ಅದನ್ನೂ ನೋಡ್ಕೋಬೇಕು. ಸಾಮಾನ್ಯವಾಗಿ ಈ ಮೇಲೆ ಹೇಳಿದ್ದು ಅಪ್ಲೈ ಆಗತ್ತೆ. ಇದೇ ಕಾರಣಕ್ಕೆ ಹಿಂದಿನವರು ಜಾತಕಾದಿಗಳನ್ನ ತೋರಿಸಿರಿ ತಾಳೆ ಮಾಡಿಸಿ ಮದ್ವೆ ಮಾಡ್ತಿದ್ರು. 

ಅಂದಹಾಗೆ ಮದ್ವೆಗೆ ಇದೊಂದನ್ನೇ ನೋಡೋದಿಲ್ಲ. ಇನ್ನೂ ಮುಖ್ಯವಾದ ಅಂಶಗಳನ್ನ ನೋಡ್ತಾರೆ. ಅದ್ರಲ್ಲ ಇದೂ ಒಂದು ಮುಖ್ಯವಾದ ಅಂಶವಾಗಿದೆ. 

- ಗೀತಾಸುತ

ಈ ರಾಶಿಯವರನ್ನು ನಿಮ್ಮ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳಬೇಡಿ!
ಈ ರಾಶಿಯವರಿಂದು ಜಾಗ್ರತೆಯಿಂದ ವಾಹನ ಚಲಾಯಿಸಿದರೊಳಿತು, ಯಾರಿಗೇನು ಫಲ? ಓದಿ ಇಂದಿನ ರಾಶಿ ಫಲ
ಇಂದು ನೀವು ಶುಭ ಕಾರ್ಯ ಮಾಡುತ್ತಿದ್ದೀರಾ..?

click me!