ವರ್ಷದ ಮೊದಲ ಬ್ಲಡ್ ಮೂನ್! ಹುಣ್ಣಿಮೆಯಂದೇ ಚಂದ್ರಗ್ರಹಣವಾಗುವುದೇಕೆ?

By Suvarna News  |  First Published May 6, 2022, 3:07 PM IST

ಈ ಬಾರಿ ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರನು ಕೆಂಪಾಗಿ ಕಾಣಿಸುತ್ತಾನೆ. ಈ ಗ್ರಹಣ ಯಾವಾಗ, ಭಾರತದಲ್ಲಿ ಕಾಣುತ್ತದೆಯೇ? ನೋಡುವುದು ಹೇಗೆ? 


ಯಾವುದೇ ಮೂರು ಆಕಾಶಕಾಯಗಳು ಸಮಾನ ರೇಖೆಯಲ್ಲಿ ಬಂದಾಗ ಗ್ರಹಣ ಸಂಭವಿಸುತ್ತದೆ. ಸೂರ್ಯ ಹಾಗೂ ಚಂದ್ರರ ನಡುವೆ ಭೂಮಿ ಬಂದಾಗ, ಸೂರ್ಯನ ಬೆಳಕು ಭೂಮಿಯ ಮೇಲೆ ಬಿದ್ದು, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಆಗ ಉಂಟಾಗುವುದೇ ಚಂದ್ರಗ್ರಹಣ(Lunar Eclipse). ಇಂಥದೊಂದು ಅಪರೂಪದ ವಿದ್ಯಮಾನ ಈ ವರ್ಷ ಎರಡು ಬಾರಿ ಸಂಭವಿಸಲಿದೆ. ಇದೇ ಮೇ 15 ಮತ್ತು 16ರಂದು ವರ್ಷದ ಮೊದಲ ಚಂದ್ರಗ್ರಹಣ ನಡೆಯುತ್ತಿದೆ. 

ಭಾರತದಲ್ಲಿ ಕಾಣಿಸುವುದೇ?
ಈ ಬಾರಿ ಸಂಭವಿಸುವುದು ಸಂಪೂರ್ಣ ಚಂದ್ರಗ್ರಹಣವಾಗಿದೆ. ಈ ಗ್ರಹಣವು ಮೇ 15 ರಂದು ರಾತ್ರಿ 10.28  ಪ್ರಾರಂಭವಾಗಿ, ಮೇ 16ರಂದು ಬೆಳಗ್ಗೆ 12.11ರ ಹೊತ್ತಿಗೆ ಗರಿಷ್ಠ ಮಟ್ಟ ತಲುಪುತ್ತದೆ. ಮತ್ತು ಅರ್ಧರಾತ್ರಿ 1.55ರ ಹೊತ್ತಿಗೆ ಮುಗಿಯುತ್ತದೆ. ಈ ಚಂದ್ರ ಗ್ರಹಣವು ಭಾರತ(India)ದಲ್ಲಿ ಗೋಚರಿಸುವುದಿಲ್ಲ. ಇದು ಇಡೀ ದಕ್ಷಿಣ ಅಮೆರಿಕಾ ಮತ್ತು ಉತ್ತರ ಅಮೆರಿಕಾದ ಪೂರ್ವ ಭಾಗಗಳಲ್ಲಿ ಗೋಚರಿಸುತ್ತದೆ. ಅಂಟಾರ್ಕ್ಟಿಕಾದ ಜೊತೆಗೆ ಯುರೋಪ್ ಮತ್ತು ಆಫ್ರಿಕಾದ ಪಶ್ಚಿಮ ಭಾಗಗಳು ಮತ್ತು ಪೆಸಿಫಿಕ್‌ನ ಪೂರ್ವ ಭಾಗದಿಂದ ಗೋಚರಿಸುತ್ತದೆ. ನ್ಯೂಜಿಲೆಂಡ್, ಮಧ್ಯಪ್ರಾಚ್ಯ ಮತ್ತು ಪೂರ್ವ ಯುರೋಪ್‌ನ ಆಕಾಶವೀಕ್ಷಕರು ಸಹ ಪೆನಂಬ್ರಾಲ್ ಗ್ರಹಣವನ್ನು ಅನುಭವಿಸುತ್ತಾರೆ, ಈ ಸಮಯದಲ್ಲಿ ಭೂಮಿಯ ನೆರಳಿನ ಅಂಚು ಮಾತ್ರ ಚಂದ್ರನ ಮೇಲೆ ಬೀಳುತ್ತದೆ. ಅಂದರೆ ಪೂರ್ಣ ಪ್ರಮಾಣದಲ್ಲಿ ಈ ಭಾಗಗಳಲ್ಲಿ ಗ್ರಹಣ ಗೋಚರವಾಗುವುದಿಲ್ಲ.

Tap to resize

Latest Videos

undefined

ಇದು ಸಂಪೂರ್ಣ ಚಂದ್ರಗ್ರಹಣವಾಗಿದ್ದರೂ ಭಾರತದಲ್ಲಿ ಗೋಚಾರವಾಗದೆ ಇರುವುದಕ್ಕೆ ಮುಖ್ಯ ಕಾರಣವೆಂದರೆ ಚಂದ್ರಗ್ರಹಣದ ಗೋಚರತೆಯು ಸಮಯದ ವಲಯವನ್ನು ಅವಲಂಬಿಸಿರುತ್ತದೆ. ಕೆಲವು ಸ್ಥಳಗಳು ಸೂರ್ಯನು ದಿಗಂತದ ಮೇಲಿರುವಾಗ ಗೋಚರತೆಯ ಹಂತಗಳನ್ನು ಕಳೆದುಕೊಳ್ಳುತ್ತವೆ.

ಈ 5 ರಾಶಿಯವರ ಉದ್ಯೋಗ, ವ್ಯಾಪಾರಕ್ಕೆ ಈಗ ಶುಕ್ರದೆಸೆ!

ಬ್ಲಡ್ ಮೂನ್
ಈ ಬಾರಿ ಹುಣ್ಣಿಮೆಯ ದಿನ ಸಂಭವಿಸುತ್ತಿರುವ ಚಂದ್ರ ಗ್ರಹಣದ ಸಂದರ್ಭದಲ್ಲಿ ಚಂದ್ರನು ಕೆಂಪಾಗಿ ಗೋಚರಿಸುತ್ತಾನೆ. ಹಾಗಾಗಿ ಅದನ್ನು ಬ್ಲಡ್ ಮೂನ್(Blood Moon) ಎನ್ನಲಾಗುತ್ತದೆ. ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತದ ಪ್ರಕಾರ, ಗ್ರಹಣ ಸಂದರ್ಭದಲ್ಲಿ ಚಂದ್ರನ ಮೇಲ್ಮೈಯನ್ನು ತಲುಪುವ ಏಕೈಕ ಬೆಳಕು ಭೂಮಿಯ ವಾತಾವರಣದಿಂದ ಮಾತ್ರ. ಭೂಮಿಯ ವಾತಾವರಣದ ಗಾಳಿಯ ಅಣುಗಳು ಹೆಚ್ಚಿನ ನೀಲಿ ಬೆಳಕನ್ನು ಚದುರಿಸುತ್ತವೆ. ಉಳಿದ ಬೆಳಕು ಚಂದ್ರನ ಮೇಲ್ಮೈಯಲ್ಲಿ ಕೆಂಪು ಹೊಳಪಿನಿಂದ ಪ್ರತಿಫಲಿಸುತ್ತದೆ, ಅದು ರಾತ್ರಿಯ ಆಕಾಶದಲ್ಲಿ ಚಂದ್ರನನ್ನು ಕೆಂಪು ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ.

ಶುಕ್ರವಾರ ಈ ತಪ್ಪುಗಳನ್ನು ಮಾಡಿದರೆ, ದುರಾದೃಷ್ಟ ಹಿಂಬಾಲಿಸೋದು ಪಕ್ಕಾ!

ಹುಣ್ಣಿಮೆಯ ದಿನವೇ ಗ್ರಹಣ
ಪ್ರತಿ ಬಾರಿ ಚಂದ್ರ ಗ್ರಹಣ ಸಂಭವಿಸುವುದೇ ಹುಣ್ಣಿಮೆಯ ದಿನ. ಏಕೆಂದರೆ ಹುಣ್ಣಿಮೆ(Full moon) ಆಗುವುದೇ ಚಂದ್ರನು ಭೂಮಿಗೆ ವಿರುದ್ಧ ದಿಕ್ಕಿನಲ್ಲಿದ್ದಾಗ. ಆಗ ಸೂರ್ಯನು ಭೂಮಿಯ ದೃಷ್ಟಿಕೋನದಿಂದ ನೋಡಿದಂತೆ ಚಂದ್ರನ ಸಂಪೂರ್ಣ ಮುಖವನ್ನು ಬೆಳಗಿಸುತ್ತಾನೆ.  ಚಂದ್ರನ ಕಕ್ಷೆಯು ಭೂಮಿಯದಕ್ಕಿಂತ ಸುಮಾರು 5 ಡಿಗ್ರಿಯಷ್ಟು ವಾಲಿರುತ್ತದೆ. ಹಾಗಾಗಿಯೇ ಸಾಮಾನ್ಯವಾಗಿ ಚಂದ್ರನ ಮೇಲೆ ಭೂಮಿಯ ನೆರಳು ಬೀಳುವುದಿಲ್ಲ. ಅದು ಬಿದ್ದಾಗ ಚಂದ್ರ ಗ್ರಹಣವಾಗುತ್ತದೆ. 

ಈ ವರ್ಷದ  2ನೇ ಚಂದ್ರಗ್ರಹಣ ನವೆಂಬರ್ 8 ರಂದು ನಡೆಯಲಿದೆ. ಇದೂ ಕೂಡಾ ಖಗ್ರಾಸ ಚಂದ್ರ ಗ್ರಹಣವಾಗಿದ್ದು, ಭಾರತದ ಕೆಲ ಭಾಗಗಳು, ಆಸ್ಟ್ರೇಲಿಯಾ(Astralia), ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೂರ್ವ ಯೂರೋಪ್‌ನಲ್ಲಿ ಕಾಣಿಸುತ್ತದೆ. 

ಪ್ರತಿ ವರ್ಷ 2ರಿಂದ 7 ಚಂದ್ರ ಗ್ರಹಣಗಳು ಘಟಿಸಬಹುದು. ಈ ವರ್ಷ ಎರಡು ಬಾರಿ ಚಂದ್ರ ಗ್ರಹಣ ಸಂಭವಿಸಲಿದೆ. ಚಂದ್ರ ಗ್ರಹಣವನ್ನು ಭಾಗಶಃ ಗ್ರಹಣ, ಪೆನಂಬ್ರಲ್ ಗ್ರಹಣ ಮತ್ತು ಪೂರ್ಣ ಚಂದ್ರ ಗ್ರಹಣ ಎಂದು ವಿಂಗಡಿಸಲಾಗಿರುತ್ತದೆ. 

click me!