ಈ ವಾರದ ಭವಿಷ್ಯ| ಯಾರಿಗೆ ಶುಭ? ಯಾರಿಗೆ ಶುಭ ವಾರ? ಇಲ್ಲಿದೆ ಈ ವಾರದ ರಾಶಿ ಫಲ
ಮೇಷ: ಇಷ್ಟು ದಿನದ ಶ್ರಮಕ್ಕೆ ಈ ವಾರ ಫಲ ಸಿಗಲಿದೆ. ಇನ್ನು ಮುಂದೆ ನಿರಾಳವಾಗಿದ್ದು, ಸಂತೋಷದ ಜೀವನ ಸಾಗಿಸಲಿದ್ದೀರಿ. ಮೊದಲೇ ಯೋಚಿಸಿದ್ದ ಪ್ರವಾಸವು ಈ ವಾರ ಕೈಗೂಡಲಿದ್ದು, ಮನಸ್ಸಿಗೊಪ್ಪುವ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮನೆಯಲ್ಲಿ ಸಂತೋಷ ನೆಲಸಲಿದೆ.
ವೃಷಭ: ಬೆಳಕು ಮುಗಿದು ಇರುಳು ಆವರಿಸುವಷ್ಟರಲ್ಲಿ ಅಪಾರ ಬದಲಾವಣೆ ಕಾಣಲಿದ್ದೀರಿ. ಹೊಸ ಕೆಲಸದಲ್ಲಿ ಪ್ರಗತಿ ಕಾಣಲಿದ್ದೀರಿ. ಅಂದುಕೊಂಡ ಕೆಲಸ ಸಿಗುವುದರಿಂದ ಮನೆಯಲ್ಲಿ ಸಂತೋಷ, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ವ್ಯಾಪಾರಿಗಳಿಗೆ ಈ ವಾರ ಲಾಭ. ಶುಭ ಫಲ.
undefined
ಮಿಥುನ: ಮಕ್ಕಳಿಂದ ಮನೆಯಲ್ಲಿ ಈ ವಾರ ಅಪಾರ ತೋಷ ಮನೆಮಾಡಲಿದೆ. ಎಲ್ಲರ ಮೆಚ್ಚುಗೆಗೆ ತ್ರರಾಗಲಿದ್ದೀರಿ. ಒಳ್ಳೆಯ ಕೆಲಸಗಳಿಗೆ ತಡ ಬೇಡ. ಮೂರನೆಯವರ ಮಾತಿಗೆ ತಲೆಕೆಡಿಸಿಕೊಳ್ಳದೆ ನಿಮಗೆ ಸರಿ ಅನಿಸಿದ್ದು ಮಾಡುವುದು ಒಳಿತು. ಸೇವಾ ಕಾರ್ಯಗಳಲ್ಲಿ ಈ ವಾರ ಹೆಚ್ಚಾಗಿ ತೊಡಗಿಸಿಕೊಳ್ಳಲಿದ್ದೀರಿ.
ಕಟಕ:ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿ ಎನ್ನುವರು. ಅಂತಹ ಅವಕಾಶ ಈ ವಾರ ಎದುರಾಗಲಿದೆ. ಆದರೆ ಸರಿಯಾದ ತನೆಯೊಂದಿಗೆ ನಿರ್ಧಾರ ತೆಗೆದುಕೊಳ್ಳಿ. ಒಮ್ಮೊಮ್ಮೆ ತಿಯಾಸೆ ಗತಿಗೇಡು ನ್ನುವಂತಾಗುತ್ತೆ. ರದೂರಿನಿಂದ ಬಂಧುಗಳ ಆಗಮನ ಸಾಧ್ಯತೆ.
ಸಿಂಹ: ಮಾಡುವ ಕೆಲಸದಲ್ಲಿ ಶ್ರದ್ಧೆ, ಆಸಕ್ತಿ ನಿಮಗಿದ್ದರೆ ಅಷ್ಟೇ ಸಾಕು. ಮುಂದಿನ ದಾರಿ ಸುಗಮವಾಗಲಿದೆ. ಇನ್ನೊಬ್ಬರ ಮಾತಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕೆಸರಿದ್ದ ಮೇಲೆ ಅದು ಸಿಡಿಯುತ್ತೆ ಅಂತ ಗೊತ್ತಿರುವಾಗ ಅದರ ಹತ್ತಿರ ಹೋಗುವುದು ನಿಮ್ಮ ತಪ್ಪು. ವಾರಾಂತ್ಯದಲ್ಲಿ ದೂರ ಪ್ರಯಾಣ ಸಾಧ್ಯತೆ.
ದಿನ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ
ಕನ್ಯಾ:ಒಮ್ಮೆ ಕೆಲಸದಲ್ಲಿ ಯಶಸ್ಸು ಸಿಕ್ಕಿತೆಂದು ಹಿಗ್ಗಬೇಡಿ. ಮೇಲಧಿಕಾರಿಯಿಂದ ಪ್ರಶಂಸೆಗೆ ಒಳಗಾದರೂ ಮುಂದಿನ ಕೆಲಸ ಹಾದಿಯ ಇನ್ನಷ್ಟು ಕಷ್ಟವಾಗಿರುತ್ತೆ ಎನ್ನುವ ಬಗ್ಗೆ ಯೋಚಿಸಿ. ಅತಿಯಾದ ನಿರೀಕ್ಷೆಯೂ ಸರಿಯಲ್ಲ. ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ ಸಾಧ್ಯತೆ.
ತುಲಾ: ಗುರು ಹಿರಿಯರ ಆಶೀರ್ವಾದ ಪಡೆದು ಹೊಸ ಕೆಲಸಗಳಿಗೆ ಕೈ ಹಾಕಿದಲ್ಲಿ ಎಲ್ಲವೂ ಸಫಲತೆ ಕಾಣಲಿದ್ದೀರಿ. ಮಕ್ಕಳ ಯವ್ವನದಲ್ಲಾಗುವ ತಪ್ಪುಗಳಿಂದ ಮನೆಯವರಿಗೆ ಕಂಟಕ ಎದುರಾಗುವ ಸಾಧ್ಯತೆ. ಅದಕ್ಕೆ ಮಕ್ಕಳಲ್ಲಿ ಮನಸ್ಸಿನ ಹಿಡಿತ ಬಹಳ ಮುಖ್ಯ.ವಾರಾಂತ್ಯದಲ್ಲಿ ಲಾಭ ಸಾಧ್ಯತೆ.
ವೃಶ್ಚಿಕ:ಒಳ್ಳೆಯ ಕೆಲಸಗಳಿಗೆ ಅಡೆತಡೆಗಳು ಬರುವುದು ಸಹಜ. ಅದನ್ನು ಸೂಕ್ತವಾಗಿ ಬುದ್ಧಿ ಉಪಯೋಗಿಸಿ ಸರಿಪಡಿಸಿಕೊಳ್ಳಿ. ಕಲ್ಲಿನ ಹಾದಿ ಇದ್ದಾಗ ಮುಳ್ಳುಗಳೂ ಇರುತ್ತವೆ ಎನ್ನುವುದು ನೆನಪಿರಲಿ. ಏಕೆಂದರೆ ನೀವು ಆಯ್ಕೆ ಮಾಡಿಕೊಳ್ಳುವ ಕೆಲಸವೇ ಹಾಗಿದ್ದಾಗ ಎಲ್ಲವನ್ನೂ ಎದುರಿಸಲೇಬೇಕಾಗುತ್ತದೆ.
ಧನಸ್ಸು: ಕೆಲ ವಿಚಾರಗಳಿಗೆ ಈಗಾಗಲೇ ಮುಂದಡಿಯಿಟ್ಟಾಗಿದೆ. ಮತ್ತೆ ಹಿಂದೆ ನೋಡುವ ಪ್ರಶ್ನೆ ನಿಮ್ಮ ಮುಂದಿಲ್ಲ. ಅಲ್ಪ ಕಾಲದಲ್ಲಿ ಮಾಡಬಹುದಾದ ಕೆಲಸಗಳನ್ನು ಮಾಡಿ ಮುಗಿಸಿಬಿಡಿ. ವಾರಾಂತ್ಯದಲ್ಲಿ ದೂರ ಪ್ರಯಾಣ ಸಾಧ್ಯತೆ. ಸಹಜ ಆಯಾಸ ಇರಲಿದೆ.
ಮಕರ: ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಗಳಿವೆ. ಕೆಲಸದಲ್ಲಿ ಒತ್ತಡ ಹೆಚ್ಚಿರಲಿದ್ದು, ವಾರಾಂತ್ಯದಲ್ಲಿ ನಿಮಗೆ ಹಾಯ್ ಎನಿಸುವ ಕಡೆ ದೂರ ಪ್ರಯಾಣ ಬೆಳೆಸಿ. ಧ್ಯಾನ, ಯೋಗದಿಂದಲೂ ಇದು ಸಾಧ್ಯ.
ಕುಂಭ: ನಿಮ್ಮ ಸನ್ನಡತೆ ಹಾಗೂ ಒಳ್ಳೆಯ ಮಾತುಗಳು ಇನ್ನೊಬ್ಬರಿಗೆ ಪ್ರೇರಣೆಯಾಗಲಿದೆ. ಅನಿರೀಕ್ಷಿತ ಘಟನೆಗಳು ನಡೆಯಲಿದ್ದು, ಚಾಣಾಕ್ಷತನದಿಂದ ಎದುರಿಸಿ ಹೊರಬರಲಿದ್ದೀರಿ. ಹೊಸ ಸ್ನೇಹಿತರ ಪ್ರರಿಚಯ ಸಾಧ್ಯತೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯ ನಡೆ ಈ ಸಮಯದಲ್ಲಿ ಬಹಳ ಮುಖ್ಯ.
ಮೀನ:ಸಣ್ಣ ವಿಚಾರಗಳಲ್ಲಿ ಹೇರಳವಾದ ಖುಷಿ ಇರುವಾಗ ಯಾವುದೋ ಮನಸ್ಥಾಪ ಇಟ್ಟು ಕೊಂಡು ದೊಡ್ಡ ವಿಷಯ ಮಾಡಿ ಹಟ ಸಾಧಿಸುವುದು ಸರಿಯಲ್ಲ. ಈಗಿನ ಕಾಲದಲ್ಲಿ ಸಂತೋಷ ಸಿಗುವುದೇ ವಿರಳ. ಅದನ್ನು ಉಳಿಸಿಕೊಳ್ಳಬೇಕು ಅಷ್ಟೆ.