ಸಂತೋಷ ಸಮೃದ್ಧಿಗೆ ಪೂಜಾ ಗೃಹಕ್ಕೆ ವಾಸ್ತು ಟಿಪ್ಸ್...

By Web Desk  |  First Published Feb 5, 2019, 4:19 PM IST

ವಾಸ್ತುವನ್ನು ಭಾರತದ ಪುರಾತನ ಶಾಸ್ತ್ರವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿರುವ ಕೆಲವು ಸಣ್ಣ ಪುಟ್ಟ ವಸ್ತುಗಳು ಹಾಗೂ ಕೆಲವೊಂದು ಬದಲಾವಣೆಗಳಾದರೆ ಸುಖ, ಸಮೃದ್ಧಿ ನಮ್ಮದಾಗುತ್ತದೆ. ದೇವರ ಕೋಣೆ ಹೇಗಿರಬೇಕು. ಇಲ್ಲಿವೆ ಟಿಪ್ಸ್....


ಮನೆಯಲ್ಲಿ ಪೂಜಾ ಕೋಣೆ ಮುಖ್ಯವಾದದ್ದು. ಇಲ್ಲಿ ಬೇರೆ ಬೇರೆ ದೇವರ ಮೂರ್ತಿಯನ್ನಿಟ್ಟು ಪೂಜಿಸುತ್ತಾರೆ. ದೇವರ ಪೂಜೆ ಮಾಡಿದರೆ ಅರೋಗ್ಯ, ಐಶ್ವರ್ಯ ಮತ್ತು ಅಭಿವೃದ್ಧಿ ಉಂಟಾಗುತ್ತದೆ. ಆದರೆ ಇವೆಲ್ಲವೂ ಸರಿಯಾಗಿರಬೇಕು ಎಂದರೆ ಮನೆಯಲ್ಲಿನ ದೇವರ ಕೋಣೆ ಸರಿಯಾದ ಸ್ಥಾನದಲ್ಲಿ ಇರಬೇಕು. 

  • ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಪೂಜಾ ಗೃಹ ಇರಬೇಕು. ಬಹು ಮಹಡಿ ಮನೆ ನಿಮ್ಮದಾಗಿದ್ದರೆ ಪೂಜಾ ಗೃಹ ಕೆಳಗಿನ ಮಹಡಿಯಲ್ಲೇ ಇರಬೇಕು. 
  • ಯಾವತ್ತೂ ಕಿಚನ್ ಅಥವಾ ಬಾತ್ ರೂಮನ್ನು ಪೂಜಾ ಗೃಹಕ್ಕೆ ಅಂಟಿಕೊಂಡಂತೆ ನಿರ್ಮಿಸಬೇಡಿ. 
  • ಮನೆಯಲ್ಲಿ ಬೇರೆ ಜಾಗವಿಲ್ಲದಿದ್ದರೆ ಬೆಡ್ ರೂಮಿನಲ್ಲಿ ಪೂಜಾ ಗೃಹ ನಿರ್ಮಿಸಬಹುದು. ಆದರೆ ನಿಮ್ಮ ಕಾಲು ಆ ಜಾಗಕ್ಕೆ ಮುಖ ಮಾಡಿ ಇರದಂತೆ ನೋಡಿಕೊಳ್ಳಿ. 
  • ದೇವರ ಕೋಣೆಯಲ್ಲಿ ದೇವರ ಮೂರ್ತಿಯನ್ನಿಡುವಾಗ ಎರಡು ಫೋಟೋಗಳ ನಡುವೆ ಅಂತರ ಇರುವಂತೆ ನೋಡಿಕೊಳ್ಳಿ. ಜೊತೆಗೆ ರೂಮ್ ಸ್ವಚ್ಛವಾಗಿರಲಿ. 
  • ಪೂಜಾ ಗೃಹದಲ್ಲಿ ಯಾವತ್ತೂ ಕಪ್ಪು ಅಥವಾ ಹಸಿರು ಬಣ್ಣದ ಪೈಂಟ್ ಹಾಕಬೇಡಿ. ಬದಲಾಗಿ ಕಲರ್ ಮಾರ್ಬಲ್ ಬಳಸಿ. 

ಈ ದೇವಿ ವಿಗ್ರಹವಿದ್ದರೆ ಮನೆಯಲ್ಲಿದೆ ಸಮೃದ್ಧಿ....

Latest Videos

click me!