ಜನವರಿಯಲ್ಲಿ ಹುಟ್ಟಿದವರ ವ್ಯಕ್ತಿತ್ವ ಹೀಗಿರುತ್ತೆ...

By Web DeskFirst Published 16, Jan 2019, 4:30 PM IST
Highlights

ನಾವು ಯಾವ ತಿಂಗಳಲ್ಲಿ, ಯಾವ ದಿನದಲ್ಲಿ ಹುಟ್ಟಿರುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ, ಲಕ್ ಹಾಗೂ ಬ್ಯಾಡ್‌ಲಕ್‌ಗಳು ಡಿಪೆಂಡ್ ಆಗಿರುತ್ತದೆ ಎಂಬ ನಂಬಿಕೆ ನಮ್ಮದು. ಜನವರಿಯಲ್ಲಿ ಹುಟ್ಟಿದವರ ವ್ಯಕ್ತಿತ್ವ ಹೇಗಿರುತ್ತೆ?

 

ಹುಟ್ಟಿದ ದಿನ, ರಾಶಿ, ನಕ್ಷತ್ರ...ಹೀಗೆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆಯೋ ಅದೇ ರೀತಿ ಹುಟ್ಟಿದ ತಿಂಗಳೂ ವ್ಯಕ್ತಿಯ ಬಗ್ಗೆ ಹೇಳುತ್ತದೆ. ಜನವರಿಯಲ್ಲಿ ಹುಟ್ಟಿದವರಾಗಿದ್ದರೆ ವ್ಯಕ್ತಿತ್ವ ಹೇಗಿರುತ್ತೆ ಅನ್ನೋದರ ವಿವರ ಇಲ್ಲಿದೆ...

  • ಈ ತಿಂಗಳಲ್ಲಿ ಹುಟ್ಟಿದವರು ತಮಾಷೆ ಸ್ವಭಾವದವರಾಗಿರುತ್ತಾರೆ. ತುಂಬಾ ಸ್ನೇಹಿತರ ನಡುವಿದ್ದರೆ ಇವರೇ ಮನರಂಜನೆಯ ಕೇಂದ್ರ ಬಿಂದುವಾಗಿರುತ್ತಾರೆ.
  • ಇವರ ಸ್ವಭಾವ ವ್ಯಕ್ತಿತ್ವಕ್ಕೆ ಪ್ರತಿಯೊಬ್ಬರೂ ಮಾರು ಹೋಗುತ್ತಾರೆ. ಜೊತೆಗೆ ತಾವು ಅವರಂತೆ ಆಗಬೇಕೆಂದು ಕೊಳ್ಳುತ್ತಾರೆ.
  • ತುಂಬಾ ಬೋಲ್ಡ್ ಆಗಿರುವ ಇವರು, ಯಾವುದೇ ಕೆಲಸವಿರಲಿ ಅಥವಾ ಸಮಸ್ಯೆಯೇ ಇರಲಿ ಅದನ್ನು ಒಬ್ಬಂಟಿಯಾಗಿ ಎದುರಿಸಲು ಸದಾ ಸಿದ್ಧ. ಯಾವುದಕ್ಕೂ ಭಯ ಪಡೋದಿಲ್ಲ.
  • ಬಾಲ್ಯದಿಂದಲೇ ಇವರು ತುಂಬಾ ಪ್ರೌಢರಾಗಿರುತ್ತಾರೆ, ಪ್ರತಿಯೊಂದೂ ನಿರ್ಧಾರವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಬೆಳೆಯುತ್ತಿದ್ದಂತೆ ಇವರು ಯುವಕರಾಗುತ್ತಾರೆ.
  • ಜನವರಿಯಲ್ಲಿ ಹುಟ್ಟಿದವರು ಬೆಸ್ಟ್ ಕಿಸ್ಸರ್ ಸಹ ಹೌದು. ಜೊತೆಗೆ ರಸಿಕತೆ ತುಂಬಿದ ಮನುಷ್ಯ, ಅದರ ಎಲ್ಲವನ್ನೂ ಎಕ್ಸ್‌ಪ್ರೆಸ್ ಮಾಡೋದು ಮಾತ್ರ ಕಡಿಮೆ.
  • ಯಾವಾಗ ಅವರಿಗೆ ಬೋರ್ ಎನಿಸುವುದೋ ಏನೋ ವಿಚಿತ್ರವಾಗಿ ವರ್ತಿಸಲು ಆರಂಭಿಸುತ್ತಾರೆ.
  • ಪಾರ್ಟಿ ಮಾಡೋದು ಎಂದರೆ ಇವರಿಗೆ ತುಂಬಾ ಇಷ್ಟ. ಫ್ರೆಂಡ್ಸ್ ಜೊತೆ ಎಂಜಾಯ್ ಮಾಡುವುದೂ ಅಚ್ಚುಮೆಚ್ಚು. ಅದಕ್ಕಾಗಿ ಪಾರ್ಟಿ ಮಾಡುತ್ತಿರುತ್ತಾರೆ.
  • ಸಂದರ್ಭ ಯಾವುದೇ ಇರಲಿ ಯಾರಿಗೂ ಹೆದರದೇ ಮುಂದಾಳತ್ವ ವಹಿಸಲು ಇವರು ಇಚ್ಛಿಸುತ್ತಾರೆ. ಆದರೆ ಏನೇ ಮಾಡಿದರೂ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.
Last Updated 16, Jan 2019, 4:30 PM IST