ನೆಗಟಿವ್ ಶಕ್ತಿ ಗುದ್ದೋಡಿಸುತ್ತೆ ಚಂದನ, ಲೋಬಾನ!

By Web Desk  |  First Published Jul 16, 2019, 3:03 PM IST

ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಲು ಮನೆಯಲ್ಲಿ ಕೆಲವೊಂದು ಅಂಶಗಳನ್ನು ನೀವು ಪಾಲಿಸಲೇಬೇಕು. ಇದು ನಿಮಗೆ ಸಾಂಪ್ರದಾಯಿಕವೆನಿಸಿದರೂ ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತದೆ. 


ಯಾವ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೋ, ಅಲ್ಲಿ ಜನರ ಯೋಚನೆ ಮೇಲೆ ಪರಿಣಾಮ ಬೀರುತ್ತದೆ.  ಇಂಥವರು ಯಾವ ಕೆಲಸ ಮಾಡಿದರೂ ಅದರಲ್ಲಿ ನಕಾರಾತ್ಮಕತೆಯನ್ನೇ ನೋಡುತ್ತಾರೆ. ಇದರಿಂದ ಕಾರ್ಯದಲ್ಲಿ ಸಫಲತೆ ಸಿಗೋದಿಲ್ಲ. ಅಲ್ಲದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಅದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಹೇಳುವಂತೆ ಈ ಟಿಪ್ಸ್ ಪಾಲಿಸಿ...

- ಮನೆಯ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ನೆಲ ಒರೆಸುವಾಗ ನೀರಿನಲ್ಲಿ ಸ್ವಲ್ಪ ಉಪ್ಪು ಬೆರೆಸಿ. ಉಪ್ಪಿನಲ್ಲಿ ನೆಗೆಟಿವ್ ಎನರ್ಜಿ ದೂರ ಮಾಡುವ ಶಕ್ತಿ ಇರುತ್ತದೆ. ಇದರಿಂದ ನೆಲದಲ್ಲಿರುವ ಸೂಕ್ಷ್ಮ ಹಾನಿಕಾರಕ ಜೀವಿಗಳೂ ನಾಶವಾಗುತ್ತವೆ. 

ಮತ್ತೊಬ್ಬರ ಪೆನ್, ಟವೆಲ್ ಬಳಕೆ ಹಿಂದಿದೆ ವಾಸ್ತು ಶಾಸ್ತ್ರ

Tap to resize

Latest Videos

undefined

- ಮುಂಜಾನೆ ಮನೆಗೆ ಗೋಮೂತ್ರ ಪ್ರೋಕ್ಷಿಸಿ. ಗೋಮೂತ್ರದ  ವಾಸನೆಯಿಂದ ಆರೋಗ್ಯಕರ ಲಾಭ ಇದೆ. ಅಲ್ಲದೆ ವಾತಾವರಣವೂ ಪವಿತ್ರವಾಗುತ್ತದೆ. 

- ಮುಂಜಾನೆ ಮನೆ ಹೊರಗೆ ರಂಗೋಲಿ ಹಾಕುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಮನೆಯೊಳಗೆ ಪಾಸಿಟಿವ್ ಶಕ್ತಿ ಪ್ರವೇಶವಾಗುತ್ತದೆ. ಅಲ್ಲದೆ ಮನೆಗೆ ಪ್ರವೇಶಿಸುವ ಸಮಯದಲ್ಲಿ ರಂಗೋಲಿ ನೋಡಿದರೆ ಮನಸ್ಸು ಶಾಂತವಾಗುತ್ತದೆ. 

- ಮನೆಯಲ್ಲಿ ಲೋಬಾನ, ಕರ್ಪೂರ ಹಾಕಿದರೆ ಉತ್ತಮ. ಇದರ ಹೊಗೆಯಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತದೆ. ಜೊತೆಗೆ ಹಾನಿಕಾರಕ ಕೀಟಾಣುಗಳೂ ನಾಶವಾಗುತ್ತವೆ. 

ಆರೋಗ್ಯ ಭಾಗ್ಯಕ್ಕಾಗಿ ಆಮೆ ವಾಸ್ತು!

-ಸುಖ, ಶಾಂತಿ, ಸಮೃದ್ಧಿಗಾಗಿ ಮನೆಯ ಬಾಗಿಲಿನ ಮೇಲೆ ಸ್ವಸ್ತಿಕ ಅಥವಾ ಗಣೇಶನ ಚಿತ್ರ ಬರೆಯಿರಿ. 

click me!