ಮತ್ತೊಬ್ಬರ ಪೆನ್, ಟವೆಲ್ ಬಳಕೆ ಹಿಂದಿದೆ ವಾಸ್ತು ಶಾಸ್ತ್ರ

By Web DeskFirst Published Jul 15, 2019, 2:08 PM IST
Highlights

ನಾವು ಯಾವುದೇ ಕಾರಣಕ್ಕೂ ಇನ್ನೊಬ್ಬರ ಪೆನ್, ಟವೆಲ್ , ವಾಚ್ ಬಳಸಬಾರದು. ಯಾಕೆ? ಅದರ ಹಿಂದಿರುವ ಕಾರಣವೇನು? ಕೇವಲ ಇನ್ಫೆಕ್ಷನ್ ಆಗುತ್ತೆ ಎನ್ನುವ ದೃಷ್ಟಿಯಿಂದ ಮಾತ್ರವಲ್ಲ, ಇದರೆ ಹಿಂದೆ ವಾಸ್ತು ಕಾರಣವೂ ಇದೆ...
 

ಇನ್ನೊಬ್ಬರ ವಸ್ತು ಬಳಕೆಗೆ ಸದಾ ವಿರೋಧವಿದ್ದೇ ಇದೆ. ಅದರಲ್ಲಿಯೂ ಪೆನ್, ಟವೆಲ್ , ವಾಚ್ , ಬ್ಲಾಂಕೆಟ್ ಬಳಸಲೇ ಬಾರದು. ಈ ಬಗ್ಗೆ ವಾಸ್ತು ಶಾಸ್ತ್ರದಲ್ಲೂ ಹಲವು ವಿಚಾರಗಳನ್ನು ಹೇಳಲಾಗಿದೆ. ಇನ್ನೊಬ್ಬರು ಬಳಸಿದ ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ವಾಸ್ತವದಲ್ಲಿ ಅಂಧವಿಶ್ವಾಸ ಎಂದು ಹೇಳಿದರೆ, ಇದರ ಹಿಂದೆ ವೈಜ್ಞಾನಿಕ ಕಾರಣದೊಂದಿಗೆ, ವಾಸ್ತು ಕಾರಣವೂ ಇದೆ. 

ವಾಸ್ತು ಶಾಸ್ತ್ರದಲ್ಲಿ ಹೇಳಿದಂತೆ ಬೇರೆಯವರು ಉಪಯೋಗಿಸಿದ ವಸ್ತುಗಳನ್ನು ನಾವು ಪಡೆದುಕೊಂಡರೆ ಇದರಿಂದ ಸಕಾರಾತ್ಮಕ ಅಥವಾ ನಕಾರಾತ್ಮಕ ಶಕ್ತಿ ಆ ವಸ್ತುವಿನ ಮೂಲಕ ನಮ್ಮೊಳಗೇ ಪ್ರವೇಶಿಸುತ್ತದೆ. ಇದು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇನ್ನು ಟವೆಲ್ ಮತ್ತು ಬೆಡ್ ಬಳಸಬಾರದು ಎನ್ನೋದಕ್ಕೆ ಕಾರಣ ಹೈಜಿನ್. ಇದರಿಂದ ಅರೋಗ್ಯ ಸಮಸ್ಯೆ ಬರುವ ಸಾಧ್ಯತೆಯೂ ಇದೆ. ಕೆಲವೊಂದು ವಸ್ತುಗಳನ್ನು ಬೇರೆಯವರಿಂದ ಯಾವ ತೆಗೆದುಕೊಳ್ಳಬಾರದೇಕೆ ನೋಡೋಣ... 

ದುಡ್ಡು ಬೇಕಂದ್ರೆ ಜೇಬಲ್ಲಿ ಇವನ್ನ ಇಡ್ಬೇಡಿ...

ಪೆನ್ 

ನಾವು ಹಲವು ಬಾರಿ ಯಾವುದೋ ಕಾರಣಕ್ಕೆ ಇತರರಿಂದ ಪೆನ್ ತೆಗೆದುಕೊಳ್ಳುತ್ತೇವೆ. ಆದರೆ ಕೆಲಸ ಮುಗಿದ ನಂತರ ಅದನ್ನು ಹಿಂದಿರುಗಿಸಲು ಮರೆಯುತ್ತೇವೆ. ಇದರಿಂದ ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. 

ಬೆಡ್ 

ವಾಸ್ತು ಪ್ರಕಾರ ಇನ್ನೊಬ್ಬ ವ್ಯಕ್ತಿ ಉಪಯೋಗಿಸಿದ ಬೆಡ್ ಅಥವಾ ದಿಂಬು, ಬ್ಲಾಂಕೆಟ್ ಬಳಸಿದರೆ ವಾಸ್ತು ದೋಷ ಬಾಧಿಸುತ್ತದೆ. ಅಲ್ಲದೇ ತಲೆ ಹೊಟ್ಟಿನಂಥ ಸಮಸ್ಯೆ, ಬಿಳಿ ಚಿಬ್ಬಿನಂಥ ಚರ್ಮ ರೋಗಗಳು ಹರಡಬಹುದು.

ಟವೆಲ್ 

ಇನ್ನೊಬ್ಬರ ಟವೆಲ್ ತೆಗೆದುಕೊಂಡು ಬಳಸುವುದೂ ಶುಭವಲ್ಲ. ಹೀಗೆ ಮಾಡಿದರೆ ಅವರಿಬ್ಬರ ನಡುವಿನ ಸಂಬಂಧ ಹಾಳಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಆದರೆ, ಇದರ ಹಿಂದೆಯೂ ವೈಜ್ಞಾನಿಕ ಕಾರಣವಿದ್ದು, ಇದರ ಹಿಂದೆ ಕೆಲವು ರೋಗಗಳು ಹರಡೋ ಹೆಚ್ಚು.

ಆಫೀಸ್‌ನಲ್ಲಿ ವಾಸ್ತು ಹೀಗಿದ್ದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ!
 
ಬಟ್ಟೆ 

ಇನ್ನೊಬ್ಬರ ಬಟ್ಟೆ, ಡ್ರೆಸ್ ತೆಗೆದುಕೊಂಡು ಧರಿಸುವುದೂ ಶೋಭೆಯಲ್ಲ. ಇದರಿಂದ ಸೋಂಕು ಹರಡುವ ಜತೆಗೆ ನೋವು ಉಂಟಾಗುವ ಸಾಧ್ಯತೆ ಇದೆ. 
 
ವಾಚ್ 

ಕೈಗೆ ಕಟ್ಟುವ ವಾಚ್ ಮನುಷ್ಯನ ಮೇಲೆ ಕೆಟ್ಟ ಅಥವಾ ಒಳ್ಳೆಯ ಪರಿಣಾಮ ಬೀರುತ್ತದೆ. ಆದುದರಿಂದ ಇನ್ನೊಬ್ಬರ ವಾಚ್ ಪಡೆದುಕೊಂಡು ಕಟ್ಟಿದರೆ, ಇನ್ನೊಬ್ಬರ ಕೆಟ್ಟ ಟೈಂ ನಮಗೂ ಒಕ್ಕರಿಸೋ ಸಾಧ್ಯತೆ ಇರುತ್ತದೆ. 

click me!