
ಶನಿವಾರ ಶನಿದೇವನಿಗೆ ಪ್ರಿಯ. ಸಹಜವಾಗಿ ಕೋಪಿಷ್ಠನಾದ ಶನಿ ದಿವಸದಂದು ಕೆಲವೊಂದು ವಸ್ತುಗಳನ್ನು ಖರೀದಿಸಬಾರದು. ಇದರಿಂದ ಶನಿದೇವನಿಗೆ ಕೋಪ ಬರುತ್ತೆ, ಎಂಬ ನಂಬಿಕೆ ಇದೆ. ಮತ್ತೆ ಜೀವನದಲ್ಲಿ ಏರುಪೇರಾಗಬಹುದು.
ಲೋಹ ವಸ್ತುಗಳು: ಶನಿವಾರ ಲೋಹದ ಯಾವುದೇ ವಸ್ತುಗಳನ್ನೂ ಖರೀದಿಸಬಾರದು. ಇದರಿಂದ ಶನಿ ದೇವ ಕುಪಿತನಾಗುತ್ತಾನೆ. ಈ ದಿನ ಕತ್ತರಿ ಖರೀದಿಸುವುದೂ ಒಳಿತಲ್ಲ. ಇದರಿಂದ ಕೌಟುಂಬಿಕ ಸಂಬಂಧ ಹದಗೆಡುತ್ತದೆ. ಆದರೆ ಈ ವಸ್ತುಗಳನ್ನು ಶನಿವಾರ ದಾನವಾಗಿ ನೀಡುವುದರಿಂದ ಶನಿಯ ಕೋಪ ಕಡಿಮೆಯಾಗುತ್ತದೆ.
ಎಣ್ಣೆ ಖರೀದಿಸಬೇಡಿ: ಶನಿವಾರ ಶನಿ ದೇವನಿಗೆ ಎಣ್ಣೆ ಸಮರ್ಪಿಸುವುದು ಒಳ್ಳೆಯದು. ಆದರೆ ಅದನ್ನು ಖರೀದಿಸುವುದು ಒಳಿತಲ್ಲ. ಇದರಿಂದ ರೋಗ ಬರಬಹುದು.
ಉಪ್ಪು : ಉಪ್ಪು ಇಲ್ಲದೇ ಆಹಾರ ರುಚಿಸೋಲ್ಲ. ಆದರೆ ಶನಿವಾರ ಮಾತ್ರ ಇದನ್ನು ಖರೀದಿಸಬೇಡಿ. ಶನಿವಾರ ಉಪ್ಪು ಖರೀದಿಸಿದರೆ ರೋಗ ಮತ್ತು ಸಾಲ ಹೆಚ್ಚಾಗಬಹುದು.
ಕಪ್ಪು ವಸ್ತು: ಯಾವುದೇ ರೀತಿ ಕಪ್ಪು ವಸ್ತುಗಳನ್ನೂ ಖರೀದಿಸಬಾರದು. ಕಪ್ಪು ಬಣ್ಣದ ಶೂ ಕೂಡ ಖರೀದಿಸಬೇಡಿ. ಇದರಿಂದ ಅಂದುಕೊಂಡ ಕಾರ್ಯ ನೆರವೇರುವುದಿಲ್ಲ.