ಈ ಗಿಡವಿದ್ದರೆ ವಾಸ್ತು ದೋಷ ದೂರ....

By Web Desk  |  First Published Jan 14, 2019, 4:32 PM IST

ಮನೆ ಮುಂದೊಂದು ತುಳಸಿ ಗಿಡವಿದ್ದರೆ, ಹಲವು ನಕರಾತ್ಮಕ ಶಕ್ತಿಗಳು ದೂರವಾಗುತ್ತವೆ. ಇಲ್ಲದೇ ಇನ್ನು ಕೆಲವು ಗಿಡಗಳು ಮನೆಯಲ್ಲಿನ ವಾಸ್ತು ದೋಷ ನಿವಾರಿಸಲು ಸಹಕರಿಸುತ್ತವೆ.


ವಾಸ್ತು ದೋಷ ನಿವಾರಣೆಗೆ ಮನೆಯಲ್ಲಿ ಕೆಲವೊಂದು ಗಿಡಗಳನ್ನು ನೆಟ್ಟರೆ ಸುಖ, ಸಂತೋಷ, ಸಮೃದ್ಧಿ, ಇರುತ್ತೆ. ಇದರಿಂದ ಮನೆ ಜನರ ಮೇಲೂ ಸಕಾರಾತ್ಮಕ ಶಕ್ತಿ ಬೀರುತ್ತದೆ. ಅಂತಹ ಗಿಡಗಳು ಯಾವುವು ನೋಡಿ..

  • ಪಾರಿಜಾತ ಗಿಡ ಮನೆಯಲ್ಲಿ ಆಸ್ತಿ ಹಾಗೂ ಪ್ರೀತಿಯನ್ನು ವೃದ್ಧಿಸುತ್ತದೆ.
  • ಗೋಲ್ಡನ್ ಪಾಥೋಸ್ ಗಿಡ ಮನೆಯಲ್ಲಿದ್ದರೆ, ದುಷ್ಟಶಕ್ತಿ ವಿರುದ್ಧ ಹೋರಾಡಲು ಸಹಕರಿಸುತ್ತದೆ.
  • ಮನೆಯಲ್ಲಿ ದಾಳಿಂಬೆ ಗಿಡ ನೆಡುವುದರಿಂದ ರಾಹು, ಕೇತುವಿನ ನಕಾರಾತ್ಮಕ ಶಕ್ತಿ ಹಾಗೂ ಮಾಟ ಮಂತ್ರದ ಪ್ರಭಾವ ಕಡಿಮೆಯಾಗುತ್ತದೆ.
  • ಅಲೋವೆರಾ ಅಥವಾ ಲೋಳೆಸರ ಗಿಡವನ್ನು ಅದೃಷ್ಟದ ಗಿಡವೆಂದು ಭಾವಿಸಲಾಗುತ್ತದೆ. ಇದನ್ನು ಮನೆಯ ಮುಂದಿಟ್ಟಿರೆ ಯಾವುದೇ ದುಷ್ಟ ಶಕ್ತಿಗಳು ಒಳಗೆ ಬರುವುದಿಲ್ಲವೆನ್ನುತ್ತಾರೆ.
  • ಮನೆ ಮುಂದೆ ತುಳಸಿ ಸಸಿ ನೆಡುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.
  • ಮನೆಯ ಹಿಂದೆ ಬಾಳೆ ಸಸಿಯನ್ನು ನೆಟ್ಟರೆ ಮದುವೆ ಕಾರ್ಯಗಳು ಬೇಗ ನಡೆಯುತ್ತದೆ.
  • ವಾಸ್ತು ಸಸ್ಯ ಡ್ರಕೇನಾ ಸ್ಯಾಂಡೆರಿನಾವನ್ನು ಗುಡ್ ಲಕ್ ಪ್ಲಾಂಟ್ ಎಂದು ಕರೆಯಲಾಗುತ್ತದೆ. ಇದನ್ನು ಮನೆ ಅಥವಾ ಆಫೀಸಿನಲ್ಲಿ ಬೆಳೆಸಿದರೆ ಅಲ್ಲಿ ಶಾಂತಿ ನೆಮ್ಮದಿ ಜೊತೆಗೆ ಗುಡ್ ಲಕ್ ಕೂಡ ನಿಮ್ಮದಾಗುತ್ತದೆ.
click me!