ನೀವು ಒಂದು ಸಂಬಂಧ ಹಾಗೂ ಉದ್ಯೋಗವನ್ನು ಜೊತೆಯಾಗಿ ನಿಭಾಯಿಸುತ್ತಿದ್ದರೆ ಇವೆರಡರ ನಡುವೆ ಸಮಯವನ್ನು ನಿರ್ವಹಿಸುವುದು ನಿಮಗೆ ಕಷ್ಟಕರವಾಗಿರಬೇಕು. ಸಂಬಂಧಗಳು ಮತ್ತು ವೃತ್ತಿಜೀವನದ ವಿಷಯಕ್ಕೆ ಬಂದಾಗ, ಈ ರಾಶಿಚಕ್ರ ಚಿಹ್ನೆಗಳನ್ನು ಹೊಂದಿರುವವರು ವೃತ್ತಿ ಜೀವನದ ಆಯ್ಕೆಯ ಕಡೆಗೆ ಮುಖ ಮಾಡುತ್ತಾರೆ ಎಂದು ಜ್ಯೋತಿಷ್ಯ ಹೇಳುತ್ತದೆ.
ಪ್ರೀತಿ ಮತ್ತು ಕೆಲಸದ ನಡುವೆ ಸಿಲುಕಿಕೊಂಡಾಗ ಹೆಚ್ಚಿನ ಜನರು ಕೆಲಸವನ್ನು ಸಾಮಾನ್ಯವಾಗಿ ಆಯ್ಕೆ ಮಾಡುತ್ತಾರೆ. ಏನೇ ಇರಲಿ, ಈ ಜನರು ಯಾವಾಗಲೂ ಪ್ರಾಯೋಗಿಕ (Practicle) ಮನೋಭಾವದಿಂದ ಮುಂದುವರಿಯುತ್ತಾರೆ. ಜೀವನದಲ್ಲಿ ದೊಡ್ಡ ಆಸೆಗಳನ್ನು ಹೊಂದಿರುವುದರಿಂದ ಕೆಲಸ ಮತ್ತು ವೃತ್ತಿಗೆ ಆದ್ಯತೆ ನೀಡುತ್ತಾರೆ. ಅದು ಈ ರಾಶಿ ಚಕ್ರದವರ ಸ್ವಭಾವವಾಗಿರುತ್ತದೆ.
ಸಿಂಹ (Leo) ರಾಶಿ
ಈ ಜನಿಸಿದ ನಾಯಕರು ಯಾವಾಗಲೂ ಕಠಿಣ ಪರಿಶ್ರಮದ (hard work) ಮೂಲಕ ಅಭಿವೃದ್ಧಿ ಹೊಂದುತ್ತಾರೆ. ಯಾರು ಏನೇ ಮಾಡಿದರೂ, ಈ ರಾಶಿಚಕ್ರ ಚಿಹ್ನೆಯನ್ನು ಹೊಂದಿರುವ ಜನರು ತಮ್ಮನ್ನು ತಾವು ತೊಡಗಿಸಿಕೊಂಡಿರುವ ಎಲ್ಲದರಲ್ಲೂ ಏಳಿಗೆ ಹೊಂದುತ್ತಾರೆ. ತಾರ್ಕಿಕತೆಯ ಹಾದಿಯಲ್ಲಿ ನಡೆಯುತ್ತಾರೆ. ವೃತ್ತಿಜೀವನದ ವಿಷಯಕ್ಕೆ ಬಂದಾಗ ಈ ರಾಶಿಯವರು ಅತ್ಯಂತ ಪ್ರಬಲ ವ್ಯಕ್ತಿಗಳು ಮತ್ತು ಅವರು ಕೆಲಸದ ಸ್ಥಳದಲ್ಲಿ ಯಾರಿಂದಲೂ ಒತ್ತಡಕ್ಕೆ (Stress) ಒಳಗಾಗುವುದನ್ನು ಸಹಿಸುವುದಿಲ್ಲ. ಆದ್ದರಿಂದ, ಯಾರೂ ಅವರಿಗೆ ಆದೇಶಗಳನ್ನು (Order) ನೀಡಲಾಗದ ಅಧಿಕಾರದ ಸ್ಥಾನವನ್ನು ತಲುಪಲು ಅವರು ಯಾವಾಗಲೂ ದುಪ್ಪಟ್ಟು ಶ್ರಮಿಸುತ್ತಾರೆ. ಇದೇ ಕಾರಣಕ್ಕಾಗಿ ತಮ್ಮ ಸಂಬಂಧಗಳನ್ನು ಸುಲಭವಾಗಿ ತ್ಯಾಗ ಮಾಡುತ್ತಾರೆ.
ಇದನ್ನೂ ಓದಿ: Vat Savitri Vrat: ವ್ರತದ ದಿನ ಈ ರೀತಿ ಮಾಡಿದರೆ ಶುಭಫಲ ಗ್ಯಾರಂಟಿ
ಮೇಷ (Aries) ರಾಶಿ
ಮಹತ್ವಾಕಾಂಕ್ಷೆಗಳು ಮತ್ತು ಪ್ರೇರಣೆಗಳಿಗೆ ಬಂದಾಗ ಮೇಷವು ಯಾವಾಗಲೂ ಮೊದಲ ಸ್ಥಾನದಲ್ಲಿದೆ. ಇವರು ತಮ್ಮ ವೇಗವಾಗಿ ಚಲಿಸುವ ಜೀವನಕ್ಕೆ ಪ್ರಮುಖರಾಗಿದ್ದಾರೆ ಮತ್ತು ತಮ್ಮ ಕೆಲಸ ಕಾರ್ಯಗಳನ್ನು ಇತರರು ಗುರುತಿಸಿದಾಗ ಅದರಿಂದಾಗಿ ಹೆಚ್ಚು ಉತ್ತೇಜನಗೊಳ್ಳುತ್ತಾರೆ (Motivation). ಈ ಕಾರಣಕ್ಕಾಗಿ, ವೃತ್ತಿಯನ್ನು ಆಯ್ಕೆಮಾಡುವ ಅವರ ಹಸಿವು ಯಾವಾಗಲೂ ದೊಡ್ಡದಾಗಿದೆ ಮತ್ತು ಅವರು ತಮ್ಮ ಆಲೋಚನೆಗಳು, ಯೋಜನೆಗಳು ಮತ್ತು ದೃಷ್ಟಿಕೋನಗಳನ್ನು (Visions) ಸಾಧಿಸಲು ಯಾವುದೇ ಹಂತಕ್ಕೆ ಹೋಗಬಹುದು. ಮೇಷ ರಾಶಿಯವರು ಕೆಲಸ ಅಥವಾ ವೃತ್ತಿಗಾಗಿ ತಮ್ಮ ಸಂಬಂಧಗಳನ್ನು ತ್ಯಜಿಸಲು ಎರಡು ಬಾರಿ ಯೋಚಿಸುವುದಿಲ್ಲ.
ಕನ್ಯಾರಾಶಿ (Virgo)
ಕನ್ಯಾ ರಾಶಿಯವರು ಯಾವುದೇ ಕೆಲಸವನ್ನು ತಾವು ಅಂದುಕೊಂಡಿರುವ (Expectded) ರೀತಿಯಲ್ಲಿಯೇ ಮುಗಿಸಬೇಕು ಎಂಬ ಛಲವನ್ನು ಹೊಂದಿರುತ್ತಾರೆ ಮತ್ತು ತಮ್ಮ ಯಶಸ್ಸಿನ ಕುರಿತು ಇತರರು ಹೊಗಳುವ ವಿಷಯಕ್ಕೆ ಆಕರ್ಷಿತರಾಗುತ್ತಾರೆ. ಕನ್ಯಾರಾಶಿಯ ಜೀವನದಲ್ಲಿ ಏಕೈಕ ಗುರಿ ಎಂದರೆ ಜನರು ತಮ್ಮ ಕೆಲಸವನ್ನು ಗುರುತಿಸಿ, ಗೌರವಿಸುವ ಹಾಗೆ ಹೆಸರು ಖ್ಯಾತಿ (Fame) ಗಳಿಸಬೇಕು ಎಂಬುದು. ಇಷ್ಟೇ ಅಲ್ಲ, ಅವರು ಕೆಲಸಕ್ಕೆ ಬಂದಾಗ ಯಾವುದೇ ರೀತಿಯ ಗಂಭೀರ (Serious) ಮನೋಭಾವವನ್ನು ಹೊಂದಿರದೆ ಶಾಂತಿಯನ್ನು ಕಾಪಾಡಲು ಬಯಸುತ್ತಾರೆ. ಹೀಗಾಗಿ ಅವರು ತಮ್ಮ ಕೆಲಸದ ಜೀವನದ ಮೇಲೆ ಯಾವುದೇ ನಕಾರಾತ್ಮಕ ವೈಬ್ (Negative vibe)ಇಲ್ಲದೆ ಇರುವಂತೆ ನೋಡಿಕೊಳ್ಳುತ್ತಾರೆ. ದೀರ್ಘಕಾಲದ ಪ್ರೇಮ ಸಂಬಂಧವನ್ನು ನಿರ್ವಹಿಸುವುದು ವೃತ್ತಿ ಜೀವನದ ಗುರಿಗಳಿಗೆ ತೊಡಕು ಉಂಟಾಗಬಹುದು ಎಂಬುದು ಇವರ ಭಾವನೆ.
ಇದನ್ನೂ ಓದಿ: ಮೀನದಲ್ಲಿ ಗುರು; ಮೂರು ರಾಶಿಗಳಿಗೆ ರಾಜಹಂಸ ಯೋಗ!
ಧನು ರಾಶಿ (Sagittarius)
ಧನು ರಾಶಿಯವರು ಸ್ವಾತಂತ್ರ್ಯವನ್ನು (Freedom) ಪ್ರೀತಿಸುತ್ತಾರೆ. ಸದಾಕಾಲ ಉತ್ಸಾಹಭರಿತರಾಗಿ ಕಾಣಿಸಿಕೊಳ್ಳುತ್ತಾರೆ. ನೀವು ಧನು ರಾಶಿಯನ್ನು ಪ್ರೀತಿಯಲ್ಲಿ ಬಂಧಿಸಲು ಸಾಧ್ಯವಿಲ್ಲ. ಈ ಚಿಹ್ನೆಯನ್ನು ಹೊಂದಿರುವ ಜನರು ಯಾವುದೇ ವೃತ್ತಿಯನ್ನು ಆರಿಸಿಕೊಂಡರೂ ಅದರಲ್ಲಿ ಹೇಗೆ ಬೆಳವಣಿಗೆ (Development) ಹೊಂದಬೇಕು ಎಂಬುದರ ಕುರಿತಾಗಿಯೇ ಚಿಂತಿಸುತ್ತಾರೆ. ಅವರು ತಮ್ಮನ್ನು ತಾವು ಉತ್ತಮವೆಂದು ಸಾಬೀತುಪಡಿಸಲು ಅತ್ಯಂತ ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತಾರೆ. ಈ ಜನರು ತಮ್ಮನ್ನು ಎಂದಿಗೂ ಪ್ರೀತಿಗೆ (Love) ಸೀಮಿತಗೊಳಿಸಿಕೊಳ್ಳುವುದಿಲ್ಲ ಬದಲಿಗೆ ಸಂತೃಪ್ತ ಭವಿಷ್ಯಕ್ಕೆ ದಾರಿ ಮಾಡಿಕೊಡಲು ತಮ್ಮ ಜೀವನದಲ್ಲಿ ಆರಂಭದಲ್ಲಿ ತಮ್ಮ ಗುರಿಯ ಸಾಧನೆಯ ಕಡೆಗೆ ಹೆಚ್ಚಿನ ಗಮನ ನೀಡುತ್ತಾರೆ.