ಶನಿ ವಕ್ರಿ 2022: ಶನಿಯ ಹಿಮ್ಮುಖ ಚಲನೆಯಿಂದ ಈ ರಾಶಿಗಳಿಗೆ ಕಷ್ಟನಷ್ಟ

By Suvarna News  |  First Published May 23, 2022, 2:54 PM IST

ಶನಿ ರಾಶಿಯ ಬದಲಾವಣೆಯು ಎಲ್ಲ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಜೂನ್‌ನಲ್ಲಿ ಶನಿಯು ಹಿಮ್ಮುಖವಾಗಿ ಚಲಿಸುತ್ತಾನೆ. ಇದರಿಂದ ಈ ಕೆಲ ರಾಶಿಗಳು ದಿನವನ್ನೆದುರಿಸುವುದೇ ಸವಾಲೆನ್ನುವ ಸ್ಥಿತಿ ತಲುಪಲಿವೆ. 


ಶನಿ(Saturn)ಯು ಅತ್ಯಂತ ನಿಧಾನಗತಿಯಲ್ಲಿ ಚಲಿಸುವ ಗ್ರಹ. ಆತ ರಾಶಿ ಬದಲಾಯಿಸುವುದು ಎರಡೂವರೆ ವರ್ಷಕ್ಕೊಮ್ಮೆ. ಈ ಬಾರಿ ಏಪ್ರಿಲ್ 29ರಂದು ಶನಿಯು ರಾಶಿ ಬದಲಾಯಿಸಿ ಮಕರದಿಂದ ಕುಂಭ(Aquarius)ಕ್ಕೆ ಬಂದಿದ್ದನು. ಶನಿ ದೆಸೆ, ಶನಿ ಸಾಡೇಸಾತಿಯಿಂದ ಮುಕ್ತರಾದವರೆಲ್ಲ ಅಯ್ಯಬ್ಬಾ, ಉಸ್ಸಪ್ಪಾ ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೀಗ ಶನಿ ಮತ್ತೆ ಹಿಮ್ಮುಖವಾಗಿ ಚಲಿಸಿ, ಅಷ್ಟೆಲ್ಲ ಸಂತೋಷ ಪಡುವ ಅಗತ್ಯವಿಲ್ಲ ಎನ್ನುತ್ತಿದ್ದಾನೆ!

ಹೌದು, ಪ್ರಸ್ತುತ ಕುಂಭ ರಾಶಿಯಲ್ಲಿರುವ ಶನಿಯು ಜೂನ್ ಐದರಂದು ಹಿಮ್ಮುಖ(retrograde) ಚಲನೆ ಆರಂಭಿಸಲಿದ್ದಾನೆ. ಸುಮಾರು 141 ದಿನಗಳವರೆಗೆ ಹಿಮ್ಮುಖವಾಗಿ ಚಲಿಸಿ, ಅಕ್ಟೋಬರ್ 23ರವರೆಗೆ ಈ ಸ್ಥಿತಿಯ ಚಲನೆಯಲ್ಲಿರುತ್ತಾನೆ.  ಹಿಮ್ಮುಖ ಸ್ಥಿತಿಯಲ್ಲಿ ಶನಿಯು ಕೆಲ ರಾಶಿಗಳಿಗೆ ಹೆಚ್ಚು ತೊಂದರೆ ಉಂಟುಮಾಡುತ್ತಾನೆ. ಶನಿ ದಶಾದಿಂದ ಬಳಲುತ್ತಿರುವ ಜನರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಶನಿಯ ಈ ಹಿಮ್ಮುಖ ಚಲನೆಯಿಂದ ಸಮಸ್ಯೆ ಎದುರಿಸುವ ರಾಶಿಚಕ್ರಗಳು(zodiac signs) ಯಾವೆಲ್ಲ ನೋಡೋಣ.

Tap to resize

Latest Videos

ಮೇಷ(Aries)
ಶನಿಗ್ರಹವು ನಿಮ್ಮ ಅದೃಷ್ಟ(luck)ವನ್ನು ಮಗುಚಿ ಹಾಕಲಿದೆ. ಪ್ರಸ್ತುತ, ರಾಹು ನಿಮ್ಮ ರಾಶಿಯಲ್ಲಿ ಕುಳಿತಿದ್ದಾನೆ. ಜೊತೆಗೆ ಶನಿಗ್ರಹವೂ ಸೇರಿಕೊಂಡು ಅಶುಭವನ್ನು ಹೆಚ್ಚಿಸುತ್ತದೆ. ಹಣ ನಷ್ಟವಾಗುವ ಸಂಭವವೂ ಇರುತ್ತದೆ. ಹಣಕಾಸಿನ ವಿಷಯಗಳಲ್ಲಿ ನೀವು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಹೆಚ್ಚಬಹುದು. 

ಶನಿ ಜಯಂತಿಯಂದು ಸರ್ವಾರ್ಥ ಸಿದ್ಧಿ ಯೋಗ

ಕರ್ಕಾಟಕ(Cancer)
ಕರ್ಕಾಟಕ ರಾಶಿಯವರಿಗೆ ಶನಿ ದೈಯ್ಯ ನಡೆಯುತ್ತಿದೆ. ಕರ್ಕ ರಾಶಿಯವರು ಈ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ನಿಮ್ಮ ಕೆಲಸವು ಹಾಳಾಗಬಹುದು. ಹಣಕಾಸಿನ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡು ಬರಬಹುದು ಮತ್ತು ಅದು ನಿಮ್ಮ ತಲೆಬಿಸಿ ಹೆಚ್ಚಿಸಬಹುದು. ವಾಹನ ಬಳಕೆಯಲ್ಲಿ ವಿಶೇಷ ಕಾಳಜಿ ಅಗತ್ಯ.

ಮಕರ(Capricorn)
ಶನಿಯ ಹಾಫ್ ಎಂಡ್ ಹಾಫ್ ಮಕರ ರಾಶಿಯಲ್ಲಿ ನಡೆಯುತ್ತಿದೆ. ಈ ಸಮಯದಲ್ಲಿ, ಮಾತು ಮತ್ತು ಹಣಕ್ಕೆ ವಿಶೇಷ ಗಮನ ನೀಡಬೇಕು. ಶನಿ ಹಿಮ್ಮೆಟ್ಟುವಿಕೆ ನಿಮ್ಮ ವೃತ್ತಿಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಕಠಿಣ ಪರಿಶ್ರಮ ಕಡಿಮೆಯಾಗಬಹುದು. ಉನ್ನತ ಅಧಿಕಾರಿಗಳೊಂದಿಗಿನ ಸಂಬಂಧಗಳು ಹದಗೆಡಬಹುದು. ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.

ಕುಂಭ(Aquarius)
ಶನಿಯು ನಿಮ್ಮ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. 29ನೇ ಏಪ್ರಿಲ್ 2022ರಂದು, ಶನಿಯು ನಿಮ್ಮ ರಾಶಿಗೆ ಆಗಮಿಸಿದ್ದಾನೆ. ಶನಿಯು ಕುಂಭ ರಾಶಿಯಲ್ಲಿಯೇ ಹಿಮ್ಮೆಟ್ಟುವನು. ಈ ಸಮಯದಲ್ಲಿ ನೀವು ಯಾವುದೇ ಚರ್ಚೆಯಲ್ಲಿ ತೊಡಗಬಾರದು. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಮದುವೆ ಇತ್ಯಾದಿಗಳಲ್ಲಿ ಅಡೆತಡೆಗಳು ಎದುರಾಗಬಹುದು.

Vat Savitri Vrat: ವ್ರತದ ದಿನ ಈ ರೀತಿ ಮಾಡಿದರೆ ಶುಭಫಲ ಗ್ಯಾರಂಟಿ

ಶನಿಯ ಕಾಟದಿಂದ ಪಾರಾಗಲು ಹೀಗೆ ಮಾಡಿ;

  • ಪ್ರತಿದಿನ ಹನುಮಾನ್ ಚಾಲೀಸಾ ಪಠಿಸಿ. 
  • ಪ್ರತಿ ಶನಿವಾರ ಅಶ್ವತ್ಥ ಕಟ್ಟೆಗೆ ದೀಪ ಹಚ್ಚಿ. ಅಲ್ಲಿ ಸಾಸಿವೆ ಎಣ್ಣೆಯ ದೀಪ ಹಚ್ಚಿ 'ಓಂ ಶನೈಶ್ಚರಾಯ ನಮಃ' ಎಂದು 108 ಬಾರಿ ಜಪ ಮಾಡಿ.
  • ಶನಿವಾರ ಶನಿ ದೇವರ ವ್ರತಕತೆಗಳನ್ನು ಕೇಳಿ
  • ಪ್ರತಿ ಶನಿವಾರ ಶನಿ ಚಾಲೀಸಾ ಹೇಳಿಕೊಳ್ಳಿ.
  • ಶನೇಶ್ವರ ವಿರಚಿತ ಶ್ರೀ ಲಕ್ಷ್ಮಿ ನರಸಿಂಹ ದೇವರ ಸ್ತೋತ್ರಗಳು ಹಾಗೂ ಹನುಮಾನ್ ಸ್ತೋತ್ರ  ಪಾರಾಯಣ ಮಾಡಿ.
  • ಪ್ರತಿ ನಿತ್ಯ ಭಕ್ತಿಯಿಂದ ಶಿವನನ್ನು ಪೂಜಿಸಿ. 
  • ನಿತ್ಯ ದಾನ ಮಾಡಿ. ಶನಿವಾರದಂದು ಕಪ್ಪು ವಸ್ತುಗಳನ್ನು ಅಗತ್ಯವಿರುವವರಿಗೆ ದಾನ ಮಾಡಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!