ಈ ವಾರ ಒಂದು ರಾಶಿಗೆ ಸಿಹಿ ಸುದ್ಧಿ, ಭಾರೀ ಯಶಸ್ಸು: ಉಳಿದ ರಾಶಿ?

By Web Desk  |  First Published Sep 29, 2019, 7:18 AM IST

ಯಾವ ರಾಶಿಗೆ ಅನುಕೂಲ : ಯಾವ ರಾಶಿಗೆ ಅನಾನೂಕೂಲ : ವಾರ ಭವಿಷ್ಯ


ಮೇಷ: ದೈನಂದಿನ ಕೆಲಸಗಳು ಯಶಸ್ವಿಯಾಗಿ ಸಾಗಲಿದೆ. ಸ್ನೇಹಿತರನ್ನು ಅತಿಯಾಗಿ ನಂಬುವುದು ಒಳ್ಳೆಯದಲ್ಲ. ಯಾವುದೇ ಹಣಕಾಸಿನ ವಿಚಾರಗಳ ಬಗ್ಗೆ ಹೆಚ್ಚಾಗಿ ಸ್ನೇಹಿತರ ಬಳಿ ಹೇಳಿಕೊಳ್ಳದಿರುವುದು ಒಳಿತು. ವ್ಯಾಪಾರ ವಹಿವಾಟಿನಲ್ಲಿ ಸುಧಾರಣೆ ಕಾಣಲಿದ್ದೀರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ವೃಷಭ : ಕಟುವಾದ ಮಾತುಗಳಿಂದ ನಿಮ್ಮ ಸುತ್ತಲಿನವರನ್ನು ದೂರ ಮಾಡಿಕೊಳ್ಳುವ ಸಾಧ್ಯತೆ. ಅತಿಯಾದ ಪ್ರಯಾಣದಿಂದ ಆಯಾಸ ಹೆಚ್ಚಾಗಲಿದ್ದು, ಆರೋಗ್ಯ ಹದಗೆಡಲಿದೆ. ಧಾರ್ಮಿಕ ವಿಷಯದಲ್ಲಿ ಮೊಂಡತನ ಬೇಡ. ಅಂದುಕೊಂಡ ಕೆಲಸ ಇಂದೇ ಮಾಡಿ ಮುಗಿಸಿದಲ್ಲಿ ಮುಂದೆ ಒಳ್ಳೆಯ ಅವಕಾಶ ಸಿಗಲಿದೆ. 

Tap to resize

Latest Videos

undefined

ಮಿಥುನ: ಬಂಧುಗಳ ಕೆಲ ಮಾತು ಮನಸ್ಸಿಗೆ ನೋವುಂಟು ಮಾಡಬಹುದು. ಆದರೆ ಯಾವುದಕ್ಕೂ ಎದೆಗುಂದದೆ ಧೈರ್ಯವಾಗಿ ಎಲ್ಲವನ್ನೂ ಎದುರಿಸಿ. ಇದರಿಂದ ಇನ್ನಷ್ಟು ಬಲಶಾಲಿಯಾಗಲಿದ್ದೀರಿ. ಇಷ್ಟು ದಿನ ಕಾಯುತ್ತಿದ್ದ ಒಳ್ಳೆಯ ಸಮಯಕ್ಕೆ ಕಾಲ ಕೂಡಿ ಬರಲಿದೆ. ಪುಸ್ತಕ ಓದುವ ಕಡೆ ಆಸಕ್ತಿ ಮೂಡಲಿದೆ.

ಕೈ ತುಂಬಾ ದುಡ್ಡು ಇರಬೇಕೆಂದರೆ ಹೀಗ್ ಮಾಡಿ ನೋಡಿ

ಕಟಕ : ಯಾವುದೇ ಕೆಲಸ ಕೇವಲವಾಗಿ ಕಾಣದಿರಿ. ಸಿಕ್ಕ ಕೆಲಸದಲ್ಲಿ ತೃಪ್ತ ಹಾಗೂ ಶ್ರದ್ಧೆಯಿಂದ ಮಾಡಿದ್ದಲ್ಲಿ ಅದು ನಮ್ಮ ಕೈ ಹಿಡಿಯುತ್ತೆ. ಅಷ್ಟೇ ಅಲ್ಲದೆ ಕೆಲಸ ಕಲಿಸುವುದರಿಂದ ಜ್ಞಾನವೂ ಹೆಚ್ಚಿಸುತ್ತಿದೆ. ಕೇವಲವಾಗಿ ಕಾಣುವುದರಿಂದ ಅಜ್ಞಾನಿಗಳಾಗುತ್ತೇವೆಯೇ ಹೊರತು ಜ್ಞಾನ ಹೊಂದಲು ಸಾಧ್ಯವಿಲ್ಲ.   

ಸಿಂಹ: ವೈಯಕ್ತಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಆಸ್ತಿ ವಿಚಾರದಲ್ಲಿ ಹಿರಿಯರ ಸಲಹೆ ಕೇಳಿ ನಿರ್ಧಾರ ತೆಗೆದುಕೊಳ್ಳಿ. ಕುಟುಂಬದಲ್ಲಿ ಈ ವಾರ ಸಿಹಿ ಸುದ್ದಿ ಕೇಳಲಿದ್ದು, ಮನೆಯಲ್ಲಿ ಶುಭ ಕಾರ್ಯ ನಡೆಯುವ ಸಾಧ್ಯತೆ. ಮನಸ್ಸಿನ ಗೊಂದಲಗಳಿಂದ ಮುಕ್ತಿ ಕಂಡುಕೊಳ್ಳಲು ಆದಷ್ಟು ಧ್ಯಾನ ಮಾಡಿ.

ಕನ್ಯಾ : ನಮ್ಮ ಆಲೋಚನೆ ಸರಿಯಾಗಿದ್ದರೆ ಎಲ್ಲವೂ ಸರಿಯಾಗಿ ಕಾಣುತ್ತದೆ. ಹಾಗೆ ಸರಿಯಾದ ನಿರ್ಧಾರವೂ ತೆಗೆದುಕೊಳ್ಳಲು ಸಾಧ್ಯ. ಆದರೆ ಗೊಂದಲದ ಪರಿಸ್ಥಿತಿಯಲ್ಲಿ ನಿರ್ಧರಿಸಿದರೆ ಅಲ್ಲಿ ಎಡವಟ್ಟುಗಳು ಹೆಚ್ಚಾಗಿರುತ್ತೆ. ಸಂಬಂಧಿಸಿದ ವಿಷಯಗಳ ಬಗ್ಗೆ ತಿಳಿದವರ ಬಳಿ ಚರ್ಚಿಸುವುದು ಸೂಕ್ತ.

ದೇವರನ್ನು ಒಲಿಸಿಕೊಳ್ಳುವ ಮಾರ್ಗ ಇಲ್ಲಿದೆ

ತುಲಾ: ಆತ್ಮೀಯರ ಭೇಟಿ ಮಾಡಲಿದ್ದೀರಿ. ಇದರಿಂದ ಮನಸ್ಸಿಗೆ ಸಂತೋಷ ಸಿಗುವುದರ ಜೊತೆಗೆ ಹೊಸದೊಂದು ವಿಚಾರವನ್ನು ತಿಳಿದುಕೊಳ್ಳುವಿರಿ. ವ್ಯಾಪಾರದಲ್ಲಿ ಲಾಭ ಕಾಣಲಿದ್ದೀರಿ. ದೈನಂದಿನ ಕೆಲಸ ಕಾರ್ಯಗಳಲ್ಲಿ ಆಸಕ್ತಿಯಿಂದ ತೊಡಗಿಕೊಂಡು ಯಶಸ್ಸು ಕಾಣಲಿದ್ದೀರಿ. 

ವೃಶ್ಚಿಕ: ಅಪರಿಚಿತ ವ್ಯಕ್ತಿಗಳು ಈ ವಾರ ಭೇಟಿ ಮಾಡಲಿದ್ದೀರಿ. ಇವರಿಂದ ಆಧ್ಯಾತ್ಮದ ವಿಚಾರಗಳಲ್ಲಿ ಸಲಹೆ ಪಡೆದು ಅದರಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿದ್ದೀರಿ. ಮಕ್ಕಳ ವಿಷಯದಲ್ಲಿ ಎಚ್ಚರಿಕೆ ಇರಲಿ. ಕೆಲಸದಲ್ಲಿನ ಕಠಿಣ ಪರಿಶ್ರಮ ಈ ವಾರ ನಿಮ್ಮ ಕೈಹಿಡಿಯಲಿದೆ. ವಾರಾಂತ್ಯದಲ್ಲಿ ಬಂಧುಗಳ ಆಗಮನ.

ಧನಸ್ಸು: ಮನಸ್ಸಿಗೆ ಒಂದಿಷ್ಟು ಆರಾಮ, ಕಳೆದ ವಾರ ಪೂರ್ತಿ ಬಿಡುವಿಲ್ಲದೆ ಮಾಡಿದ ಕೆಲಸದಿಂದಾಗಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಾಣಿಸಿಕೊಳ್ಳಲಿದೆ. ನೆಗ್ಲೆಕ್ಟ್ ಮಾಡದೆ ಸೂಕ್ತ ಪರಿಹಾರ ಕಂಡುಕೊಂಡು ವಿಶ್ರಾಂತಿ ತೆಗೆದುಕೊಳ್ಳುವುದು ಒಳಿತು.

ದಿನ ಭವಿಷ್ಯ ನೋಡಲು ಇಲ್ಲಿ ಕ್ಲಿಕ್ ಮಾಡಿ

ಮಕರ : ಹಬ್ಬದ ಸಮಯವಾದ್ದರಿಂದ ಮನೆಯಲ್ಲಿ ನೆಂಟರಿಷ್ಟರು ಹೆಚ್ಚಾಗಲಿದ್ದಾರೆ. ಇದರಿಂದ ಈ ವಾರ ಖರ್ಚು ವ್ಯಚ್ಚಗಳು ಭರ್ಜರಿಯಾಗಿದ್ದು, ಜೇಬಿಗೆ ಕತ್ತರಿ ಬೀಳುವುದು ಪಕ್ಕಾ. ಅದಕ್ಕಾಗಿ ಮೊದಲೇ ತಯಾರಿ ಮಾಡಿಕೊಳ್ಳುವುದು ಸೂಕ್ತ. 

ಕುಂಭ : ಕೆಲಸದಲ್ಲಿ ಪ್ರಗತಿ ಕಾಣಲಿದ್ದೀರಿ. ಕಾರ್ಯ ವೈಖರಿ ವಿಷಯದಲ್ಲಿ ನಿಮ್ಮ ಮೇಲಧಿಕಾರಿಗಳಿಂದ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಹೊಸ ಬಟ್ಟೆಗಳ ಖರೀದಿ ಸಾಧ್ಯತೆ. ಕೂಡಿಟ್ಟ ಹಣ ನೀರಿನಂತೆ
ಖರ್ಚಾಗುವ ಸಂಭವವಿದ್ದು, ಎಚ್ಚರಿಗೆ ಅಗತ್ಯ. ನಿಮಗೆ ಸಂಬಂಧಿಸದ ವಿಷಯಕ್ಕೆ ಕಿವಿಗೊಡುವುದು ಬೇಡ.

ಮೀನ: ಅಂದುಕೊಂಡ ಎಲ್ಲಾ ಕೆಲಸಗಳು ಈಡೇರುವುದಿಲ್ಲ. ಸಮಯ ತೆಗೆದುಕೊಳ್ಳುತ್ತೆ. ಅಷ್ಟೇ ಅಲ್ಲ ಕೆಲ ಕೆಲಸ ಮುಂದಕ್ಕೆ ಹೋಗುವ ಸಾಧ್ಯತೆಯೂ ಇದೆ. ಬಿಡುವು ಮಾಡಿಕೊಂಡು ಮನೆಯವರೆಲ್ಲರ ಜೊತೆ ಹೊರಗೆ ಹೋಗಿ ಬನ್ನಿ.

ವಾಸ್ತು ಸುದ್ದಿಗಳು ಇಲ್ಲಿವೆ ನೋಡಿ

click me!