ಒಂಬತ್ತು ದಿನಗಳ ನವರಾತ್ರಿ ಆಚರಣೆ, ಮನುಷ್ಯನ ಸೈಕೋಲಜಿ..

By Web Desk  |  First Published Sep 28, 2019, 4:54 PM IST

ಸ್ತ್ರೀ ಶಕ್ತಿಯ ಒಂಬತ್ತು ಅವತಾರಗಳನ್ನು ಆರಾಧಿಸುವ ನವರಾತ್ರಿಯನ್ನು ಎಲ್ಲೆಡೆ ಸಂಭ್ರಮದಿದ ಆಚರಿಸಲಾಗುತ್ತದೆ. ಅಷ್ಟಕ್ಕೂ ಈ ಹಬ್ಬವನ್ನು ಆಚರಿಸುವುದೇಕೆ? ಮನುಷ್ಯನ ಸೈಕೋಲಜಿಯೂ ಇಲ್ಲಿ ಹೇಗೆ ಬಿಂಬಿತವಾಗುತ್ತದೆ? ಓದಿ ಈ ಸುದ್ದಿ...


ದೇವೀ ಆರಾಧನೆಗೆ ರಾತ್ರಿ ಕಾಲ ಪ್ರಶಸ್ತವಾದ್ದು ಅಂತ ನಮ್ಮ ಶಾಸ್ತ್ರಗಳ ಅಧ್ಯಯನದಿಂದ ಗೊತ್ತಾಗತ್ತೆ. ರಾತ್ರಿ ಅಂತರ್ಮುಖದ ಸಂಕೇತ. ದುಷ್ಟರ ಹಾವಳಿ ಹೆಚ್ಚಾಗಿರೋದು ಕೂಡ ರಾತ್ರಿ ವೇಳೆಯಲ್ಲೇ. ಅಷ್ಟೇ ಅಲ್ಲ ಸಾಮಾನ್ಯವಾಗಿ ಮನುಷ್ಯ ಕೆಲವೊಮ್ಮೆ ಹೊರ ಪ್ರಪಂಚದಲ್ಲಿ ವರ್ತಿಸುವ ಹಾಗೆ ವೈಯುಕ್ತವಾಗಿ ಇರುವುದಿಲ್ಲ. ತೋರಿಕೆಗೆ ಆತ ಚೆನ್ನಾಗಿ ಕಂಡರೆ ಒಳಗಿನ ದುಷ್ಟತೆ ಆತನಿಗಷ್ಟೇ ಗೊತ್ತಿರತ್ತೆ. ಹೀಗೆ ಬಾಹ್ಯವಾಗಿ ಅಂತರವಾಗಿ ಯಾವ ದುಷ್ಟ ಶಕ್ತಿ ರಾರಾಜಿಸತ್ತೆ ಅದರ ಸಂಪೂರ್ಣ ನಿವಾರಣೆಗೆ ಒಂದು ಶಕ್ತಿಯ ಆಸರೆ ಬೇಕು. ಹಾಗೆ ಮಹಾ ಆಸರೆಯಾಗಿ ಬಂದದ್ದೇ ಈ ದುರ್ಗಾ ಆರಾಧನೆ.

ನವರಾತ್ರಿಯೋ ನವರಾತ್ರವೋ..?

Tap to resize

Latest Videos


ಎರಡೂ ರೀತಿಯಲ್ಲಿ ಕರೆಯುವ ಪದ್ದತಿ ಇದೆ. ವ್ಯಾಕರಣ ರೀತ್ಯ ಸಂಖ್ಯಯ ಮುಂದೆ ರಾತ್ರಿ ಶಬ್ದ ಬಂದರೆ ಅದನ್ನ ರಾತ್ರ ಅಂತ ಪರಿಗಣನೆ ಮಾಡ್ತಾರೆ. ನವ ಅನ್ನೋದು ಸಂಖ್ಯೆ ಹಾಗಾಗಿ ನವರಾತ್ರ, ಸಪ್ತರಾತ್ರ, ಪಂಚರಾತ್ರ, ಅಹೋರಾತ್ರ ಹೀಗೆ. ಹೀಗಾಗಿ ಇದು ನವರಾತ್ರ.ಇಲ್ಲಿ ಪ್ರತಿಪತ್ ನಿಂದ ನವಮಿ ವರೆಗೆ ಆಚರಿಸುವ ಕ್ರಮಕ್ಕೆ ನವರಾತ್ರ ಅಂತಾರೆ. ತೃತೀಯದಿಂದ ನವಮಿವರೆಗೆ ಆಚರಿಸುವ ಕ್ರಮಕ್ಕೆ ಸಪ್ತರಾತ್ರ ಅಂತಾರೆ. ಪಂಚಮಿಯಿಂದ ನವಮಿವರೆಗೆ ಆಚರಿಸುವ ಕ್ರಮಕ್ಕೆ ಪಂಚರಾತ್ರ ಅಂತಾರೆ. ಸಪ್ತಮಿಯಿಂದ ನವಮಿವರೆಗೆ ಆಚರಿಸುವ ಕ್ರಮಕ್ಕೆ ತ್ರಿರಾತ್ರ ಅಂತಾರೆ.  ಅಷ್ಟಮಿಯಿಂದ ನವಮಿವರೆಗೆ ಆಚರಿಸುವ ಕ್ರಮಕ್ಕೆ ದ್ವಿರಾತ್ರ ಅಂತಾರೆ. ನವಮಿ ಒಂದೇ ದಿನ ಆಚರಿಸುವ ಕ್ರಮಕ್ಕೆ ಏಕರಾತ್ರ ಅಂತಾರೆ. ಹೀಗೆ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಆಚರಿಸಬಹುದು.

ಇದ್ದಾವೆ ಎರಡು ಬಗೆಯ ನವರಾತ್ರಿ..!

ಹೌದು. ನಮ್ಮಲ್ಲಿ ಎರಡು ಬಗೆಯ ನವರಾತ್ರಿಗಳಿವೆ. ಒಂದು ವಸಂತ ನವರಾತ್ರಿ ಮತ್ತೊಂದು ಶರನ್ನವರಾತ್ರಿ. ವಸಂತ ನವರಾತ್ರಿ ಯುಗಾದಿಯಲ್ಲಿ ಆಚರಿಸುವ ಹಬ್ಬ. ಆದರೆ ಈಗ ಅದು ಹೆಚ್ಚು ಆಚರಣೆಯಲ್ಲಿಲ್ಲ. ಆದರೆ ಈ ಶರನ್ನವರಾತ್ರಿ ಆಚರಣೆಯಲ್ಲಿದೆ. ಪಶ್ಚಿಮ ಬಂಗಾಳದ ಕಡೆಯಂತೂ ಈ ಆರಾಧನೆಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. 

ನವ ದುರ್ಗಿಯರ ವಿಶೇಷ ಪೂಜಾ ವಿಧಾನ
ಒಂಭತ್ತು ದಿನದ ಆರಾಧನೆ ಹೇಗೆ..?

ಮಹಾ ತಾಯಿ ಈ ಒಂಭತ್ತು ದಿನಗಳಲ್ಲಿ 9 ಬಗೆಯಲ್ಲಿ ಕಂಗೊಳಿಸುತ್ತಾಳೆ ಎಂಬ ನಂಬಿಕೆ ಇದೆ. 
ಪ್ರಥಮಂ ಶೈಲಪುತ್ರೀತಿ 
ದ್ವಿತೀಯಂ ಬ್ರಹ್ಮಚಾರಿಣೀ

ತೃತೀಯಂ ಚಂದ್ರಘಂಟೀತಿ 
ಕೂಷ್ಮಾಂಡೇತಿ ಚತುರ್ಥಕಮ್ 

ಪಂಚಮಂ ಸ್ಕಂದ ಮಾತೇತಿ 
ಷಷ್ಠಂ ಕಾತ್ಯಾಯನೀತಿ ಚ 

ಸಪ್ತಮಂ ಕಾಲರಾತ್ರಿಶ್ಚ 
ಮಹಾಗೌರೀತಿ ಚಾಷ್ಟಮಮ್
ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ
 

ಹೀಗೆ ಒಂದೊಂದು ದಿನ ಒಂದೊಂದು ರೂಪದಲ್ಲಿ ತಾಯಿಯ ಸ್ವರೂಪವಿದೆ. 

ನವರಾತ್ರಿ ಹಾಗೂ ವ್ಯಕ್ತಿತ್ವ ವಿಕಸನ

ಮೊದಲನೇ ಸ್ವರೂಪ 
ಶೈಲ ಪುತ್ರೀ 
ಸ್ವರೂಪ - ಪರ್ವತ ರಾಜನ ಮಗಳು 
ಪೂಜೆಯ ಫಲ: ಮಾತೃತ್ವ ಸಿದ್ಧಿಯಾಗುತ್ತದೆ.

ಎರಡನೇ ಸ್ವರೂಪ 
ಬ್ರಹ್ಮಚಾರಿಣಿ 
ಸ್ವರೂಪ - ತಪಸ್ವಿನಿಯಾದ ಗಿರಿಜೆ
ಪೂಜೆಯ ಫಲ : ಕಂಕಣ ಬಲ ಕೂಡಿಬರುತ್ತದೆ.


ಮೂರನೇ ಸ್ವರೂಪ ಚಂದ್ರಘಂಟಾ 
ಸ್ವರೂಪ - ಘಂಟಾ ಚಂದ್ರ ಧರಿಸಿದ ಗಿರಿಜೆ
ಪೂಜೆಯ ಫಲ : ಶತ್ರು ಮರ್ದನವಾಗುತ್ತದೆ.

ನಾಲ್ಕನೇ ಸ್ವರೂಪ ಕೂಷ್ಮಾಂಡ 
ಸ್ವರೂಪ - ಯಕ್ಷಿಯಂತಿರುವ ದುರ್ಗೆ
ಪೂಜೆಯ ಫಲ : ರೋಗ ನಾಶ, ಆರೋಗ್ಯ ವರ್ಧನೆ.

ಐದನೇ ಸ್ವರೂಪ ಸ್ಕಂದಮಾತಾ 
ಸ್ವರೂಪ - ಪುತ್ರ ವಾತ್ಸಲ್ಯಯುತ ಪಾರ್ವತಿ
ಪೂಜೆಯ ಫಲ : ಸಂತಾನ ಪ್ರಾಪ್ತಿ, ಮಕ್ಕಳ ಶ್ರೇಯೋಭಿವೃದ್ಧಿ

ಆರನೇ ಸ್ವರೂಪ ಕಾತ್ಯಾಯಿನಿ - 
ಸ್ವರೂಪ: ಕತ್ಯ ಗೋತ್ರ ಸಂಪನ್ನೆ ಗೌರಿ
ಪೂಜೆಯ ಫಲ: ವಂಶಾಭಿವೃದ್ಧಿ ಹಾಗೂ ವಿವಾಹ ಪ್ರಾಪ್ತಿ

ಏಳನೇ  ಸ್ವರೂಪ ಕಾಳರಾತ್ರಿ 
ಸ್ವರೂಪ -  ಭಯಂಕರ ರೂಪಳಾದ ಪಾರ್ವತಿ
ಪೂಜೆಯ ಫಲ : ಶತ್ರು ಮರ್ದನ, ಕಾರ್ಯ ಸಾಧನೆ
.

ಎಂಟನೇ ಸ್ವರೂಪ ಮಹಾಗೌರಿ- ನಿರ್ಮಲ
ಸ್ವರೂಪಿ ಗೌರಿ 
ಪೂಜೆಯ ಫಲ:  ಜ್ಞಾನ ಪ್ರದವಾಗುತ್ತದೆ.

ಒಂಭತ್ತನೇ ಸ್ವರೂಪ ಸಿದ್ಧಿಧಾತ್ರಿ - ಸಿದ್ಧಿ ಕೊಡುವ ಸ್ವರೂಪಿ
ಪೂಜೆಯ ಫಲ: ಇಷ್ಟಾರ್ಥ ಸಿದ್ಧಿ, ಸಕಲ ಜಯ

ನವರಾತ್ರಿಗೆ ಮಾರುತಿ ಕಾರಿಗೆ ಡಿಸ್ಕೌಂಟ್

ಶ್ರೀಚಕ್ರಪೂಜೆಯೂ ಮಹತ್ವದ್ದೇ..!

ದುರ್ಗಾ ಸಪ್ತಶತಿ ಪಾರಾಯಣ ಕ್ರಮವೂ ಇದೆ. ಮಧು-ಕೈಟಭರ ಆದಿಯಾಗಿ ಶುಂಭನಿಶುಂಭರತನಕ ಸರ್ವ ರಾಕ್ಷಸರನ್ನೂ ಮಣಿಸಿ ದೇವತೆಗಳಿಗೆ ಸಮಾಧಾನ ಕೊಟ್ಟ ತ್ರಯಿಶಕ್ತಿಯ ಸ್ಮರಣೆ ಮಾಡುವುದು. 
ಮತ್ತೊಂದು ಕ್ರಮ ಅದು ಶ್ರೀಚಕ್ರಪೂಜೆ. ಬಿಂದುವಿನಿಂದ ಭೂಪುರದವರೆಗೆ ಆಚರಿಸುವ ಆವರಣ ಪೂಜೆ. ಅಥವಾ ಭೂಪುರದಿಂದ ಬಿಂದುವಿನೆಡೆಗೆ ಆಚರಿಸುವ ಆವರಣ ಪೂಜೆ. ಬಿಂದುವಿನಿಂದ ಭೂಪುರಕ್ಕೆ ಸಾಗಿದರೆ ಅದು ಲೌಕಿಕ ಸುಖ ಸಮೃದ್ಧವಾಗತ್ತೆ. 

ಭೂಪುರದಿಂದ ಬಿಂದುವಿಗೆ ಬಂದರೆ ಅದು ಅಲೌಕಿಕ ಸಾಧನೆಗೆ ಸಾಧನವಾಗತ್ತೆ ಹೀಗೆ ಎರಡೂ ಕ್ರಮಗಳಿದ್ದಾವೆ. ಇದರ ಹೊರತಾಗಿ ರಾಮಾಯಣ ಪಾರಾಯಣ, ಸುಂದರಕಾಂಡ ಪಾರಾಯಣ, ಭಾಗವತ ದಶಮಸ್ಕಂದ ಪಾರಾಯಣವನ್ನೂ ಮಾಡಬಹುದು ಎಂದು ಹೇಳಿದೆ.

ವೈರಲ್ ಆಯ್ತು ಕ್ಯಾಥೋಲಿಕ್ ಫಾದರ್ ವೈರಲ್ ಡ್ಯಾನ್ಸ್

ಪತ್ರೆಯ ಮಹತ್ವ:

ಈ ನವರಾತ್ರ ರಾಜರು ಆಚರಿಸುವ ಹಬ್ಬ. ಒಂದು ರಾಜ್ಯದ ಬಲ ಎಷ್ಟರ ಮಟ್ಟಿಗೆ ಇದೆ ಎಂಬುದರ  ಪ್ರದರ್ಶನ ಮಾಡಲಿಕ್ಕೆ ಈ ಹಬ್ಬ ಆಚರಿಸುತ್ತಿದ್ದರು. ರಾಜರು ಬನ್ನಿ ಮಂಟಪಕ್ಕೆ ತೆರಳಿ ಆ ಮರದಲ್ಲಿ ಅವರವರ ಶತ್ರುಗಳ ಹೆಸರನ್ನ ಬರೆದು ಕಟ್ಟಿ ತೂಗುಬಿಡುತ್ತಿದ್ದರು. ನಂತರ ಬಂಗಾರ ಲೇಪನ ಮಾಡಿದ ಬಾಣಗಳಿಂದ  ಆ ತೂಗಿಬಿಟ್ಟ ಹೆಸರುಗಳಿಗೆ ಗುರಿ ಇಟ್ಟು ಹೊಡೆಯಲಾಗುತ್ತಿತ್ತು. ಯಾರು ಯಾವ ಶತ್ರುವಿನ ಹೆಸರಿಗೆ ಬಾಣ ಹೊಡೆಯುತ್ತರೋ ಆ ವ್ಯಕ್ತಿಯನ್ನ ಅಥವಾ ಆ ರಾಜ್ಯವನ್ನು ಮುಂದಿನ ನವರಾತ್ರದ ವೇಳೆಗೆ ಗೆಲ್ಲಬೇಕು ಎಂಬ ಶಪಥ ಮಾಡುತ್ತಿದ್ದರು. ಇದು  ರಾಜರ ವಿಜಯ ದಶಮಿ  ಆಚರಣೆ ಹಿನ್ನೆಲೆ.

"

click me!