ನಿಮ್ಮ ಜನ್ಮರಾಶಿಗೆ ಹೊಂದುವ ಡ್ರೆಸ್ ಧರಿಸಿದ್ರೆ ಲಕಲಕ!

By Suvarna News  |  First Published Jan 20, 2020, 5:41 PM IST

ಪ್ರತಿಯೊಬ್ಬನಿಗೂ ಒಂದು ಜನನ ರಾಶಿ ಇರುತ್ತೆ. ಹಾಗೇ ಆ ರಾಶಿಗೆ ಹೊಂದುವ ಗುಣ ಕೂಡ. ಬೆಂಕಿ, ಗಾಳಿ, ನೀರು, ಭೂಮಿ, ಆಕಾಶ- ಈ ಐದು ಪ್ರಾಪಂಚಿಕ ಭೂತಗಳಲ್ಲಿ ಯಾವ್ದೋ ಒಂದು ಗುಣ ನಿಮ್ಮ ರಾಶಿಗೆ ಇರುತ್ತೆ. ಆ ಸ್ವಭಾವ ತಿಳಿದು ಡ್ರೆಸ್ ಮಾಡ್ಕೊಳಿ.


ಪ್ರತಿಯೊಬ್ಬನಿಗೂ ಒಂದು ಜನನ ರಾಶಿ ಇರುತ್ತೆ. ಹಾಗೇ ಆ ರಾಶಿಗೆ ಹೊಂದುವ ಗುಣ ಕೂಡ. ಬೆಂಕಿ, ಗಾಳಿ, ನೀರು, ಭೂಮಿ, ಆಕಾಶ- ಈ ಐದು ಪ್ರಾಪಂಚಿಕ ಭೂತಗಳಲ್ಲಿ ಯಾವುದೋ ಒಂದು ಗುಣ ನಿಮ್ಮ ರಾಶಿಗೆ ಇರುತ್ತೆ. ಆ ಸ್ವಭಾವ ತಿಳಿದು ಡ್ರೆಸ್ ಮಾಡ್ಕೊಳಿ.

 

Tap to resize

Latest Videos

undefined

ಮೇಷ ರಾಶಿ

ಗುಣ: ಬೆಂಕಿ

ಬಣ್ಣ: ಬಿಳಿ, ನೀಲಿ, ಹಸಿರು

ನೀವು ದಿಟ್ಟ ಸ್ವಭಾವದ ಮಹತ್ವಾಕಾಂಕ್ಷಿಗಳು. ಯಾವುದೇ ಕೆಲಸಕ್ಕೂ ಧೈರ್ಯದಿಂದ ಮುನ್ನಗ್ಗುವವರು. ಆತ್ಮವಿಶ್ವಾಸಿಗಳೂ, ಆತ್ಮಮೋಹಿಗಳೂ ಹೌದು. ನಾಯಕತ್ವಕ್ಕೆ ತಕ್ಕ ಆಕರ್ಷಕ ಡ್ರೆಸ್ ಧರಿಸಿ. ಮಾರ್ಕೆಟ್‌ನಲ್ಲಿ ಬರೋ ಹೊಸ ಔಟ್‌ಫಿಟ್‌ಗಳನ್ನು ಟ್ರೈ ಮಾಡಬಹುದು.

 

ವೃಷಭ ರಾಶಿ

ಗುಣ: ಭೂಮಿ

ಬಣ್ಣ: ಹಸಿರು, ಕೆಂಪು

ನೀವು ಭೂಮಿಯನ್ನ, ಹಸಿರನ್ನ ಪ್ರೀತಿಸುವವರು. ಗಿಡ ಬೆಳೆಸುವುದು, ಗಾರ್ಡನಿಂಗ್ ನಿಮಗಿಷ್ಟ. ಸೂಕ್ಷ್ಮತೆ ಹಾಗೂ ಧೈರ್ಯ ನಿಮ್ಮಗುಣಗಳು. ನಿಮ್ಮ ಬಟ್ಟೆಗಳು ಇತರರಿಗೆ ಇಷ್ಟವಾಗುವಂತಿರಲಿ ಎಂಬ ಸೂಕ್ಷ್ಮತೆ ನಿಮ್ಮದು. ಸಹಜ, ಡೀಸೆಂಟ್ ಬಟ್ಟೆಗಳಲ್ಲಿ ನೀವು ಮನ ಸೆಳೆಯುತ್ತೀರಿ.

 

ಮಿಥುನ ರಾಶಿ

ಗುಣ: ಗಾಳಿ

ಬಣ್ಣ: ಬಿಳಿ, ಹಳದಿ

ದಿಟ್ಟ ಚಿಂತನೆ, ಹೊಸತನ್ನು ಪ್ರಯತ್ನಿಸಿ ನೋಡುವುದು ಇವೆಲ್ಲ ನಿಮ್ಮ ಗುಣಗಳು. ಸಾಮಾಜಿಕವಾಗಿ ಬೆರೆಯುತ್ತೀರಿ. ಬಟ್ಟೆಗಳಲ್ಲಿ ಯುತ್‌ಫುಲ್ ಮತ್ತು ಟ್ರೆಂಡಿಯಾಗಿ ಇರುತ್ತೀರಿ. ಡ್ರೆಸ್ಸಿಂಗ್‌ನಲ್ಲಿ ಹೊಸ ಸ್ಟೈಲ್‌ಗಳು, ಮಿಕ್ಸ್ ಆಂಡ್ ಮ್ಯಾಚ್‌ಗಳನ್ನೆಲ್ಲ ಟ್ರೈ ಮಾಡ್ತೀರಿ. ಡ್ರೆಸ್ಸಿಂಗ್‌ನ ಪ್ರತಿ ಕ್ಷಣ ಎಂಜಾಯ್ ಮಾಡ್ತೀರಿ.

 

ಯಾವ ಜನ್ಮರಾಶಿಯವರಿಗೆ ಎಷ್ಟು ಲೈಂಗಿಕಾಸಕ್ತಿ ಇರುತ್ತೆ?
 

ಕಟಕ ರಾಶಿ

ಗುಣ: ನೀರು

ಬಣ್ಣ: ದಟ್ಟ ನೀಲಿ, ಬಿಳಿ

ನೀವು ಸುತ್ತಮುತ್ತ ಸಂಗಾತಿಗಳಿರುವುದನ್ನು ಇಷ್ಟಪಡುತ್ತೀರಿ. ಆದರೂ ನಿಮ್ಮ ಗುಣದಲ್ಲಿ ನಿಗೂಢತೆ, ಸಂಕೋಚದ ಅಂಶಗಳು ಬಹಳ. ಕೆಲವು ವಿಷಯಗಳಲ್ಲಿ ಸೆನ್ಸಿಟಿವ್. ವಿಂಟೇಜ್ ಸ್ಟೈಲ್‌ಗಳು ನಿಮಗಿಷ್ಟ. ಹೊಸ ಟ್ರೆಂಡ್‌ಗಳನ್ನು ಅನುಸರಿಸುವುದು ತುಸು ಕಷ್ಟ. ಯಾವತ್ತೂ ಹಳತಾಗದ ಕ್ಲಾಸಿಕ್ ಡ್ರೆಸ್ಸಿಂಗ್ ಶೈಲಿಗಳನ್ನು ಅನುಸರಿಸುತ್ತೀರಿ. ಯಾವ ಬಟ್ಟೆಯಲ್ಲಿ ನೀವು ಅದ್ಭುತವಾಗಿ ಕಾಣುತ್ತೀರಿ ಅನ್ನೋದು ನಿಮಗೆ ಚೆನ್ನಾಗಿ ಗೊತ್ತು.

 

ಸಿಂಹ ರಾಶಿ

ಗುಣ: ಬೆಂಕಿ

ಬಣ್ಣ: ಚಿನ್ನ, ಹಳದಿ, ಕಿತ್ತಳೆ

ನೀವು ಧೈರ್ಯವಂತರು, ವೈವಿಧ್ಯಮಯ ಸ್ವಭಾವದವರು, ಸಾಕಷ್ಟು ಅಹಂ ಹಾಗೂ ಪೊಸೆಸಿವ್‌ನೆಸ್ ಹೊಂದಿದವರು. ನೀವು ಕಾಡಿನ ರಾಜ ಅಥವಾ ರಾಣಿಯ ಗುಣದವರು. ಮೃಗಗಳ ಗಮನವೆಲ್ಲ ನಿಮ್ಮ ಕಡೆ ಸೆಳೆಯೋ ಸ್ಟೈಲ್. ದಿಟ್ಟ ಬಣ್ಣಗಳು ಜನರ ಮೇಲೆ ಮಾಡೋ ಪರಿಣಾಮ ನಿಮಗೆ ಗೊತ್ತಿರೋದ್ರಿಂದ ಆ ದಿಕ್ಕಿನಲ್ಲಿ ನಿಮ್ಮ ಡ್ರೆಸ್ಸಿಂಗ್ ರೂಢಿ ಇರುತ್ತೆ.

 

ಕನ್ಯಾ ರಾಶಿ

ಗುಣ: ಭೂಮಿ

ಬಣ್ಣ: ನೀಲಿ, ತಿಳಿಹಸಿರು, ಆರೆಂಜ್‌

ನೀವು ಪ್ರಾಕ್ಟಿಕಲ್‌, ತರ್ಕ ಬುದ್ಧಯವರು. ಬದುಕಿನ ಬಗ್ಗೆ ವ್ಯವಸ್ಥಿತವಾದ ಪ್ಲಾನ್‌ ಹೊಂದಿರುತ್ತೀರಿ. ಹಾಗಿದ್ದರೂ ನಿಮ್ಮ ಡ್ರೆಸ್ಸಿಂಗ್‌ ಸೆನ್ಸ್‌ ತುಂಬಾ ಸರಳ ಮತ್ತು ಪ್ರಾಯೋಗಿಕವಾಗಿರುತ್ತೆ. ಕ್ಲಾಸಿಕ್‌ ಲುಕ್‌ ಇದ್ದರೂ ಆಕರ್ಷಕವಾಗಿರುತ್ತೆ. ಸಾಮಾನ್ಯ ಶರ್ಟಿಂಗ್‌ನಲ್ಲಿ ನೀವು ಚೆನ್ನಾಗಿಯೇ ಕಾಣಿಸುತ್ತೀರಿ. ಆದರೆ ಭುಜಗಳು ಕಾಣುವ ಡ್ರೆಸ್‌ ಧರಿಸಿದರೂ ನೀವು ಎಲಿಗೆಂಟ್‌ ಆಗಿಯೇ ಕಾಣಿಸಬಹುದು.

 

2020ರಲ್ಲಿ ಕೊನೆಯ ಆರು ರಾಶಿಗಳ ಲವ್‌ ಭವಿಷ್ಯ ಹೇಗಿದೆ ನೋಡಿ?

 

ತುಲಾ ರಾಶಿ

ಗುಣ: ಗಾಳಿ

ಬಣ್ಣ: ಬಿಳಿ, ನೀಲಿ, ಆರೆಂಜ್‌

ನೂವು ಸಾಮಾಜಿಕವಾಗಿಯೂ ತುಂಬಾ ಬೆರೆಯುತ್ತೀರಿ. ಸೋಶಿಯಲ್‌ ಹಾಗೂ ಕೋ ಆಪರೇಟಿವ್‌ ಗುಣ ನಿಮ್ಮದು. ಕೆಲವೊಮ್ಮ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂಜರಿದರೂ ನಿಮ್ಮ ನಿರ್ಧಾರ ಆಕರ್ಷಕವಾಗಿಯೇ ಇರುತ್ತೆ. ಎಲ್ಲ ರಾಶಿಗಳಲ್ಲೂ ನೀವು ಅತ್ಯಂತ ಆಕರ್ಷಕವಾದ ಡ್ರೆಸ್‌ ಸೆನ್ಸ್‌ ಹೊದಿರುವಿರಿ. ಇತರರೆಲ್ಲ ನಿಮ್ಮ ಬಳಿಯೇ ಡ್ರೆಸ್ಸಿಂಗ್‌ ಟಿಪ್ಸ್‌ ಕೇಳಿಕೊಳ್ಳುತ್ತಾರೆ. ಹೆಚ್ಚು ಟ್ರೆಂಡಿಯಾದ ಬಟ್ಟೆ ಟ್ರೈ ಮಾಡಿ.

 

ವೃಶ್ಚಿಕ ರಾಶಿ

ಗುಣ: ನೀರು

ಬಣ್ಣ: ತಿಳಿಹಳದಿ, ಕೆಂಪು, ನೀಲಿ, ಮರೂನ್‌

ನೀವು ಧೈರ್ಯವಂತರು, ಎಲ್ಲ ವಿಷಯಗಳಲ್ಲೂ ಪ್ಯಾಷನೇಟ್‌ ಹಾಗೂ ನಿರ್ಧಾರ ತೆಗೆದುಕೊಳ್ಳೋಕೆ ಹಿಂಜರಿಯದವರು. ಆದರೆ ಸ್ವಲ್ಪ ನಿಗೂಢ ಗುಣವೂ ನಿಮ್ಮಲ್ಲಿ ಇದೆ. ನೀವು ಇಂದು ಹೇಗೆ ಡ್ರೆಸ್‌ ಮಾಡುತ್ತೀರಿ ಎಂಬುದನ್ನು ಯಾರೂ ಊಹಿಸಲಾರರು. ಸಾಕಷ್ಟು ಹೊಸ ಬಗೆಯ ಟ್ರೆಂಡಿ ಬಟ್ಟೆಗಳನ್ನು ಧರಿಸುವ ಧೈರ್ಯ ಮಾಡುತ್ತೀರಿ. ಡ್ರೆಸ್ಸಿಂಗ್‌ ವಿಚಾರದಲ್ಲಿ ನೀವು ಬೋಲ್ಡ್‌. ಕೆಲವೊಮ್ಮೆ ಕಪ್ಪು ಬಟ್ಟೆ ನಿಮ್ಮ ನಿಗೂಢ ಗುಣಕ್ಕೆ ಚೆನ್ನಾಗಿ ಒಪ್ಪುತ್ತದೆ.

 

ಧನು ರಾಶಿ

ಗುಣ: ಬೆಂಕಿ

ಬಣ್ಣ: ಆರೆಂಜ್‌, ನೇರಳೆ, ಬಿಳಿ

ನೀವು ಪ್ರವಾಸವನ್ನು ಹೆಚ್ಚಾಗಿ ಇಷ್ಟ ಪಡುತ್ತೀರಿ. ನಿಮ್ಮ ವಾರ್ಡ್‌ರೋಬ್‌ನಲ್ಲಿ ಅದಕ್ಕೆ ತಕ್ಕಂತೆ ಬಟ್ಟೆಗಳಿರುವುದನ್ನು ಕಾಣಬಹುದು. ಸಾಕಷ್ಟು ಹಾಸ್ಯಪ್ರಜ್ಞೆ ಇದ್ದರೂ ತಾಳ್ಮೆ ಕೊಂಚ ಕಡಿಮೆ. ನಿಮಗೆ ಹೊಸ ಡ್ರೆಸ್‌ಗಳನ್ನು ಪರಿಚಯಿಸಿಕೊಳ್ಳೋಕೆ ತುಂಬ ಆಸಕ್ತಿ. ಟ್ರಾವೆಲ್‌ ಫ್ರೆಂಡ್ಲಿ ಬಟ್ಟೆಗಳು ಹೆಚ್ಚು ಇಷ್ಟ. ಲೋಕಲ್‌ ಸ್ಟೈಲ್‌, ಮಾದರಿಗಳನ್ನು ಅನುಸರಿಸಲು ಆಗಾಗ ಇಷ್ಟಪಡುತ್ತೀರಿ. ಸ್ವಲ್ಪಮಟ್ಟಿಗೆ ಹಿಪ್ಪಿ ಕಲ್ಚರ್‌ ಅನ್ನು ನೀವು ಹೋಲುತ್ತೀರಿ.

 

ಮಕರ ರಾಶಿ

ಗುಣ: ಭೂಮಿ

ಬಣ್ಣ: ಹಸಿರು ಮತ್ತು ನೀಲಿಯ ಶೇಡ್‌ಗಳು

ನಿಮ್ಮ ವಾರ್ಡ್‌ರೋಬ್‌ಗಳು ಯಾವಾಗಲೂ ಕ್ಲಾಸಿಕ್‌ ಡ್ರೆಸ್‌ಗಳಿಂದ ತುಂಬಿರುತ್ತವೆ. ಎಲ್ಲೇ ಹೋಗುವುದಾದರೂ ಸಾವಧಾನದಿಂದ ಬಟ್ಟೆ ಧರಿಸಿ, ಅಲ್ಲಿರೋ ಎಲ್ಲರೂ ಒಮ್ಮೆ ಹುಬ್ಬೇರಿಸಿ ನಿಮ್ಮನ್ನು ತಿರುಗಿ ನೋಡುವಂತೆ ಮಾಡುವುದು ನಿಮ್ಮ ಸ್ವಭಾವ. ನಿಮ್ಮ ಬಣ್ಣಗಳ ಆಯ್ಕೆಯ ಬಲು ಸೊಗಸಾಗಿದ್ದು, ನೋಡುಗರನ್ನು ನಿಮ್ಮ ಕಡೆಗೆ ಆಕರ್ಷಿಸುವಂತೆ ಇರುತ್ತವೆ. ನಿಮ್ಮ ಡ್ರೆಸ್‌ ಮೋಹ ಎಷ್ಟು ಎಂದರೆ, ಅದಕ್ಕಾಗಿಯೇ ಹಣ ಕೂಡಿಟ್ಟು ಖರ್ಚು ಮಾಡುತ್ತೀರಿ.

 

ಕುಂಭ ರಾಶಿ

ಗುಣ; ಗಾಳಿ

ಬಣ್ಣ: ಕೆಂಪು, ಹಳದಿ, ನೀಲಿ

ಆಳವಾಗಿ ಯೋಚಿಸಬಲ್ಲವರು, ಸೃಜನಶೀಲವಾಗಿ ಕಲ್ಪಿಸಬಲ್ಲವರು ನೀವು. ಹಾಗಾಗಿ ಇರೋ ಡ್ರೆಸ್‌ನಲ್ಲೂ ನಾನಾ ವಿನ್ಯಾಸ ಮಾಡಿಕೊಳ್ಳಬಲ್ಲಿರಿ. ಸಾಂಪ್ರದಾಯಿಕ ಚಿಂತನೆ ನಿಮಗೆ ಒಪ್ಪುವುದಿಲ್ಲ. ಯಾವಾಗಲೂ ಭಿನ್ನತೆಯೇ ನಿಮ್ಮ ಬಂಡವಾಳ. ಅದು ಡ್ರೆಸ್ಸಿಂಗ್‌ನಲ್ಲೂ ಕಾಣುತ್ತದೆ. ಯಾರೂ ನಿಮಗೆ ಹೇಗೆ ಡ್ರೆಸ್‌ ಮಾಡಬೇಕು ಎಂದು ಹೇಳುವ ಧೈರ್ಯ ಮಾಡಲಾರರು. ಯಾಕೆಂದರೆ ಅದು ನಿಮಗೇ ಚೆನ್ನಾಗಿ ಗೊತ್ತು. ನೀವು ಹೋದಲ್ಲಿ ರಾಕ್‌ ಮತ್ತು ಶಾಕ್ ಗ್ಯಾರಂಟಿ!

 

ಮೀನ ರಾಶಿ

ಗುಣ: ನೀರು

ಬಣ್ಣ: ಬಿಳಿ, ಹಸಿರು, ಆಕಾಶನೀಲಿ

ನೀವು ತುಂಬ ಬುದ್ಧಿವಂತರೂ ಹೌದು, ರೊಮ್ಯಾಂಟಿಕ್‌ ಕೂಡ ಹೌದು. ಕಲಾತ್ಮಕವಾಗಿ ಯೋಚಿಸಿ ಡ್ರೆಸ್‌ ಮಾಡಿಕೊಳ್ಳುತ್ತೀರಿ. ನೀವು ಡ್ಯಾನ್ಸ್‌ ಮಾಡ್ತಾ ಇದ್ರೂ ಅದರೊಳಗೊಂದು ಧ್ಯಾನ ಮಾಡ್ತಾ ಇರುತ್ತೀರಿ. ಹಾಗಾಗಿ, ನೀವು ಇರುವ ಪರಿಸರಕ್ಕೆ ತಕ್ಕಂತೆ ಡ್ರೆಸ್‌ ಮಾಡಿಕೊಳ್ಳುವುದು ನಿಮಗೆ ಸಾಧ್ಯ. ಸಾಮಾನ್ಯ ಬಟ್ಟೆಗಳನ್ನೇ ಧರಿಸುತ್ತೀರಿ; ಆದರೂ ನೋಡುಗರ ಗಮನ ಸೆಳೆಯುವಂತೆ ಡ್ರೆಸ್‌ ಮಾಡಿಕೊಂಡು ಆಕರ್ಷಿಸುತ್ತೀರಿ ಎಂಬುದರಲ್ಲಿ ಸಂಶಯವಿಲ್ಲ.

click me!