Last words before death : ಸಾಯೋ ಮುನ್ನ ರೋಗಿಗಳ ಬಾಯಿಂದ ಬರೋದು ಇದೊಂದೇ ಮಾತು, ನರ್ಸ್ ಅಚ್ಚರಿ ಅನುಭವ

Published : Feb 23, 2026, 09:47 PM IST
Last words before death

ಸಾರಾಂಶ

ಹುಟ್ಟಿದ ಮೇಲೆ ಸಾವು ಬರುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಈ ಸಾವು ಹೇಗೆ ಬರುತ್ತೆ, ಅಂತಿಮ ಕ್ಷಣ ಹೇಗಿರುತ್ತೆ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಇಲ್ಲ. ಈಗ ಐಸಿಯುವಿನಲ್ಲಿ ಕೆಲ್ಸ ಮಾಡ್ತಿರುವ ನರ್ಸ್ ಒಬ್ಬರು ರೋಗಿಗಳ ಅಂತಿಮ ಕ್ಷಣದ ಬಗ್ಗೆ ಮಾತನಾಡಿದ್ದಾರೆ. 

ಮನುಷ್ಯ ಹುಟ್ಟಿದ್ಮೇಲೆ ಸಾಯ್ಲೇಬೇಕು. ಸಾವಿನ ಬಗ್ಗೆ ಒಂದು ಭಯ ಇದ್ದೇ ಇದೆ. ಸಾವಿನ ಬಗ್ಗೆ ಮಾತನಾಡಲು ಜನ ಇಷ್ಟಪಡೋದಿಲ್ಲ. ಆದ್ರೆ ಐಸಿಯುವಿನಲ್ಲಿ ಕೆಲ್ಸ ಮಾಡುವ ಅದೆಷ್ಟೋ ನರ್ಸ್ ಗಳಿಗೆ ಈ ಸಾವು ಸಾಮಾನ್ಯ ಆಗ್ಬಿಟ್ಟಿರುತ್ತೆ. ಫ್ಲೋರಿಡಾದ 29 ವರ್ಷದ ನರ್ಸ್ (nurse) ಕರ್ಸ್ಟಿ ರಾಬರ್ಟ್ಸ್ ಕಣ್ಮುಂದೆ ಅದೆಷ್ಟೋ ರೋಗಿಗಳು ಕೊನೆಯುಸಿರೆಳೆದಿದ್ದಾರೆ. ಕಳೆದ ನಾಲ್ಕು ವರ್ಷಗಳ ಸರ್ವೀಸ್ ಹೊಂದಿರುವ ಕರ್ಸ್ಟಿ ರಾಬರ್ಟ್ಸ್ ರೋಗಿಗಳು ಅಂತಿಮ ಕ್ಷಣದಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದನ್ನು ತಿಳಿಸಿದ್ದಾರೆ.

ಸಾವಿಗೆ ಮುನ್ನ ಈ ಮಾತು ಹೇಳ್ತಾರೆ ರೋಗಿಗಳು

ಅನೇಕ ಜನರು ಸಾವಿಗೆ ಸ್ವಲ್ಪ ಮೊದಲು ಆಧ್ಯಾತ್ಮಿಕ ಬದಲಾವಣೆಯನ್ನು ಅನುಭವಿಸುತ್ತಾರೆ ಅಂತ ಕರ್ಸ್ಟಿ ಹೇಳುತ್ತಾರೆ. ಅವರ ಈ ಬದಲಾವಣೆಯನ್ನು ವೈದ್ಯಕೀಯ ವಿಜ್ಞಾನ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಕಷ್ಟವಂತೆ. ಇದೊಂದು ವಿರಾಮ. ಸಾಯ್ತಿರುವ ರೋಗಿಗಳಿಗೆ ವಿಚಿತ್ರ ನೆಮ್ಮದಿ ನೀಡುತ್ತದೆ ಎಂದು ಕರ್ಸ್ಟಿ ಹೇಳ್ತಾರೆ.

Vastu Tips: ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಿದ್ರೆ ಅದೃಷ್ಟ ಕೆಟ್ಟಂತೆ

ಸಾಮಾಜಿಕ ಜಾಲತಾಣದಲ್ಲಿ ಕರ್ಸ್ಟಿ ವಿಡಿಯೋ ವೈರಲ್ ಆಗಿದೆ. ಅದ್ರ ಪ್ರಕಾರ ಅವರು 6 ಲಕ್ಷಕ್ಕೂ ಹೆಚ್ಚು ಮಂದಿ ಸತ್ತಿರೋದನ್ನು ನೋಡಿದ್ದಾರೆ. ರೋಗಿಗಳು ಹೊರಗೆ ಆರೋಗ್ಯವಾಗಿ ಕಂಡ್ರೂ ಒಳಗೆ ಸಾವನ್ನು ಅನುಭವಿಸ್ತಿರುತ್ತಾರೆ. ಅವರ ಬಾಯಿಂದ ಬಹುತೇಕ ಒಂದೇ ಮಾತು ಹೊರಗೆ ಬರುತ್ತದೆ ಎನ್ನುತ್ತಾರೆ ಕರ್ಸ್ಟಿ.

ನಾನು ಪ್ರೀತಿ ಮಾಡ್ತೇನೆ ಅಂತ ಫ್ಯಾಮಿಲಿಗೆ ಹೇಳಿ ಅಂತ ಕೆಲವರು ಹೇಳ್ತಾರಂತೆ. ನನಗೆ ಏನೂ ಸರಿ ಬರ್ತಿಲ್ಲ ಅಂತ ಮತ್ತೊಂದಿಷ್ಟು ಮಂದಿ ಹೇಳಿದ್ರೆ ಇನ್ನು ಕೆಲವರು, ನನಗೆ ಗೊತ್ತು ನಾನು ಸಾಯ್ತೇನೆ ಅನ್ನೋದು ಎನ್ನುತ್ತಾರಂತೆ. ಯಾರೋ ನನ್ನನ್ನು ಕರೆಯುತ್ತಿದ್ದಾರೆ ಎನ್ನುವ ಕೆಲ ರೋಗಿಗಳು ಈ ಮಾತು ಹೇಳಿದ ಕೆಲವೇ ಸಮಯದಲ್ಲಿ ಸಾಯ್ತಾರೆ ಎಂದು ಕರ್ಸ್ಟಿ ಹೇಳಿದ್ದಾರೆ.

ಕೆಲವೊಮ್ಮೆ ರೋಗಿಗಳು ಚೇತರಿಸಿಕೊಂಡಿರ್ತಾರೆ. ಅವರ ಎಲ್ಲ ಪರೀಕ್ಷೆ ವರದಿ ಸರಿಯಾಗಿರುತ್ತದೆ. ಆದ್ರೆ ಅಚಾನಕ್ ಎಲ್ಲ ಬದಲಾಗುತ್ತದೆ. ಮಷಿನ್ ಕೂಡ ಅದನ್ನು ಪತ್ತೆ ಮಾಡೋದಿಲ್ಲ. ಔಷಧಿ ಕೆಲ್ಸ ನಿಲ್ಲಿಸಿರುತ್ತೆ. ಏನಾಗ್ತಿದೆ ಅನ್ನೋದು ತಿಳಿಯೋದಿಲ್ಲ. ಆಗ ಆತ್ಮ ನಿರ್ಗಮನಕ್ಕೆ ತಯಾರಿ ನಡೆಸ್ತಿರುತ್ತದೆ ಎಂದು ಕರ್ಸ್ಟಿ ಹೇಳ್ತಾರೆ.

ಕರ್ಸ್ಟಿ ವಿಡಿಯೋ ನಂತ್ರ ಅನೇಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನಿವೃತ್ತ ನರ್ಸ್ ಒಬ್ಬರು ಇದನ್ನು ಒಪ್ಪಿಕೊಂಡಿದ್ದಾರೆ. ರೋಗಿಗಳಿಗೆ ಅವರ ಸಾವು ಗೊತ್ತಾಗಿರುತ್ತೆ ಎಂದು ಅವರು ಬರೆದಿದ್ದಾರೆ. ಇದು ಮೆಡಿಕಲ್ ಡೇಟಾಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ ಎಂದು ಕೆಲವರು ಹೇಳಿದ್ದಾರೆ. ಸಾವಿಗೆ ಮೊದಲು, ಮೆದುಳು ದೇಹಕ್ಕೆ ಕೆಲವು ಸಂಕೇತಗಳನ್ನು ಕಳುಹಿಸುತ್ತದೆ, ಅದು ಆತಂಕ ಅಥವಾ ಅಸ್ವಸ್ಥತೆಯ ಭಾವನೆಗಳನ್ನು ಉಂಟುಮಾಡಬಹುದು ಎಂದು ವಿಜ್ಞಾನಿಗಳು ನಂಬುತ್ತಾರೆ. ಅನೇಕ ಅನುಭವಿ ದಾದಿಯರು, ಸಾವು ಕೇವಲ ದೈಹಿಕ ಘಟನೆಯಲ್ಲ, ಆದರೆ ಆಳವಾದ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಪ್ರಯಾಣವಾಗಿದೆ ಎಂದು ನಂಬುತ್ತಾರೆ.

ನಿಮ್ಮ ಮನೆಯಲ್ಲಿರುವ ಮನಿ ಪ್ಲಾಂಟ್‌ನಲ್ಲಿ ಈ ಒಂದು ವಸ್ತುವಿಡಿ ಹಣದ ಕೊರತೆ ಇರಲ್ಲ

ರೋಗಿಗಳ ಜೊತೆ ಭಾವನಾತ್ಮಕ ಸಂಬಂಧ

ಕರ್ಸ್ಟಿ ರೋಗಿಗಳ ಜೊತೆ ಬೆಳೆಯುವ ಭಾವನಾತ್ಮಕ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ. ರೋಗಿಗಳ ಜೊತೆ ಸಂಬಂಧ ಬೆಸೆಯುವುದು ಹಾಗೂ ಕೊನೆಯಲ್ಲಿ ವಿದಾಯ ಹೇಳುವುದು ಅತ್ಯಂತ ಕಷ್ಟದ ಕೆಲ್ಸ. ರೋಗಿಗಳು ಮತ್ತು ಅವರ ಕುಟುಂಬದ ಜೊತೆ ಆಳವಾದ ಬಾಂಧವ್ಯ ಬೆಳೆಯುತ್ತದೆ. ರೋಗಿ ಹೊರಟುಹೋದಾಗ ನೋವಾಗುತ್ತದೆ. ಆದ್ರೆ ಕಾಲಾನಂತರದಲ್ಲಿ ಅದನ್ನು ಸ್ವೀಕರಿಸಬೇಕು. ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ನಾವು ಎಲ್ಲವನ್ನೂ ಬಿಡುತ್ತೇವೆ ಎಂದು ಕರ್ಸ್ಟಿ ನಂಬುತ್ತಾರೆ. ದೇವರನ್ನು ಪ್ರೀತಿಸಿ, ಇತರರಿಗೆ ಸಹಾಯ ಮಾಡಿ ಎನ್ನುತ್ತಾರೆ ಕರ್ಸ್ಟಿ.

PREV
Read more Articles on
click me!

Recommended Stories

Holastak 2026: ಮಾರ್ಚ್​ 3ರ ಹೋಳಿಯವರೆಗೆ ಈ ಆರು ರಾಶಿಗಳು ಮೈಯೆಲ್ಲಾ ಕಣ್ಣಾಗಿರಿ; ಎಡವಿದರೆ ಅಪಾಯ
ನಾಳೆಯಿಂದ 8 ದಿನ ಹೋಲಾಷ್ಟಕ: ಈ ಅವಧಿ ಅತ್ಯಂತ ಅಶುಭ ಏಕೆ? ಮಕ್ಕಳಿದ್ದರೆ ಭಾರಿ ಜಾಗ್ರತೆ!