
ಚತುರ ರಾಜನೀತಿಜ್ಞ ಆಚಾರ್ಯ ಚಾಣಕ್ಯ ಅವರು ರಚಿಸಿದ ಚಾಣಕ್ಯ ನೀತಿ ಬರೀ (Chanakya Niti) ರಾಜನೀತಿಯ ಬಗ್ಗೆ ಇರೋದಲ್ಲ. ಅದು ಗಂಡು- ಹೆಣ್ಣಿನ ಸಂಬಂಧ, ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಅಧಿಕಾರದ ಬಳಕೆ, ಬದುಕುಳಿಯುವಿಕೆ ಮತ್ತು ಮಾನವ ದೌರ್ಬಲ್ಯದ ಬಗ್ಗೆಯೂ ತಿಳಿವು ನೀಡುತ್ತೆ. ಮಹಿಳೆಯರ ಕುರಿತು ಅವರ ಕೆಲವು ಮಾತುಗಳು ಶತಮಾನಗಳ ಕಾಲದಿಂದ ಚರ್ಚೆಗೆ ಕಾರಣವಾಗಿವೆ. ಕೆಲವರಿಗೆ ಅವು ಕಠಿಣವಾಗಿ ಕೇಳಿಸುತ್ತವೆ. ಆದರೆ ಅವರ ಉದ್ದೇಶ ಮಹಿಳೆಯರ ಮೇಲೆ ದೋಷಾರೋಪಣೆ ಮಾಡುವುದು ಅಲ್ಲ, ಪುರುಷರಿಗೆ ಎಚ್ಚರಿಕೆ ನೀಡುವುದೇ ಆಗಿತ್ತು. ಚಾಣಕ್ಯ ಹೇಳುವಂತೆ, ಕೆಲವೊಂದು ವಿಚಾರಗಳನ್ನು ಪುರುಷರು ಮಹಳೆಯರಿಂದ ಮೋಸ ಹೋದ ನಂತ್ರಾನೇ ಕಲೀತಾರಂತೆ. ಹಾಗಿದ್ರೆ ಯಾವುವು ಆ ಸಂಗತಿಗಳು?
ಚಾಣಕ್ಯರ ಮಾತಿನ ಪ್ರಕಾರ, ನಿಯಂತ್ರಣವಿಲ್ಲದ ಕಾಮದಾಸೆ ಪುರುಷನನ್ನು ಶೀಘ್ರವೇ ಹಾಳು ಮಾಡುತ್ತದೆ. ರಾಜರು ಸೇನೆಗಳನ್ನು, ಮತ್ತೊಬ್ಬ ರಾಜನನ್ನು ಸೋಲಿಸಬಹುದು. ಆದರೆ ಅಂತಃಪುರದಲ್ಲಿರುವ ಸ್ತ್ರೀಯರನ್ನು ಅಷ್ಟು ಸಲಭವಾಗಿ ಗೆಲ್ಲಲಾಗದು. ಸ್ವಭಾವದಲ್ಲಿ ದುರ್ಬಲತೆ ಎದುರಿಸಿದರೆ ಎಲ್ಲವನ್ನೂ ಕಳೆದುಕೊಳ್ಳಬಹುದು. ಇತಿಹಾಸದಲ್ಲೂ ಇಂದಿನ ಬದುಕಲ್ಲೂ ಇದು ಸತ್ಯವೇ.
2. ಸೌಂದರ್ಯ ಮುಖವಾಡ ಮಾತ್ರ
ಮುಖದ ಸೌಂದರ್ಯ ಹೊಂದಿದವರೆಲ್ಲ ಒಳ್ಳೆಯ ಗುಣ ಹೊಂದಿರುತ್ತಾರೆ ಎಂದು ನಂಬುವುದು ಅಪಾಯಕರ. ವ್ಯಕ್ತಿಯನ್ನು ಅವನ/ಅವಳ ಗುಣದಿಂದ ಅಳೆಯಬೇಕು, ರೂಪದಿಂದ ಅಲ್ಲ. ರೂಪ ಆಕರ್ಷಿಸಬಹುದು, ಆದರೆ ನಂಬಿಕೆ ಮತ್ತು ಗೌರವವನ್ನು ಕಾಪಾಡಲಾರದು ಎಂಬುದು ಚಾಣಕ್ಯರ ಸಂದೇಶ.
ಪ್ರೀತಿ ನಿಮ್ಮ ಬಾಂಧವ್ಯವನ್ನು ಉತ್ತೇಜಿಸುತ್ತದೆ. ಆದರೆ ಅತಿಯಾದ ಅಟ್ಯಾಚ್‌ಮೆಂಟ್ ನಿಮ್ಮ ವಿವೇಕ ನಾಶಮಾಡಬಹುದು. ಇದಕ್ಕೆ ಸ್ವಮೋಹ, ಸ್ವಾರ್ಥ ಕಾರಣ. ಇದರಿಂದ ಮೌಲ್ಯಗಳನ್ನು ಮರೆತು ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಬರಬಹುದು. ಅದಕ್ಕಾಗಿ ಸಮತೋಲನ ಮುಖ್ಯ ಎಂದು ಅವರು ಹೇಳಿದ್ದಾರೆ.
4. ಎಲ್ಲಾ ರಹಸ್ಯ ಬಿಟ್ಟುಕೊಡಬೇಡ
ಚಾಣಕ್ಯರ ಎಚ್ಚರಿಕೆ ಸ್ಪಷ್ಟ – ಅತ್ಯಂತ ಆತ್ಮೀಯರಲ್ಲಿಯೂ ಸಂಪೂರ್ಣ ರಹಸ್ಯ ಬಹಿರಂಗಪಡಿಸಬೇಡಿ. ಪರಿಸ್ಥಿತಿ ನಾಳೆ ಬದಲಾಗಬಹುದು. ಇಂದು ಸ್ನೇಹಿತನಾದವನು ನಾಳೆ ವಿರೋಧಿಯಾಗಬಹುದು. ಆದ್ದರಿಂದ ಗುಟ್ಟನ್ನು, ಸ್ವಾಭಿಮಾನವನ್ನು ಕಾಪಾಡಿಕೊಳ್ಳಬೇಕು. ಇಂದಿನ ಮಿತ್ರನನ್ನು ನಾಳೆಯ ಶತ್ರುವಿನಂತೆಯೇ ಕಾಣಬೇಕು. ಪತ್ನಿಯಲ್ಲಿಯೂ ಕೆಲವು ರಹಸ್ಯ ಬಿಟ್ಟುಕೊಡಬಾರದು.
ಲೋಭ ಮಾನವನನ್ನು ದುಡಿಯಲು ಪ್ರೇರೇಪಿಸಬಹುದು. ಆದರೆ ಕಾಮ ಅವನನ್ನು ಅಜಾಗರೂಕನನ್ನಾಗಿ ಮಾಡುತ್ತದೆ. ಕ್ಷಣಿಕ ಸುಖದ ಹಿಂದೆ ಓಡಿದರೆ ದೀರ್ಘಕಾಲದ ಹಾನಿ ಸಂಭವಿಸುತ್ತದೆ ಎಂಬುದು ಚಾಣಕ್ಯನ ಅಭಿಪ್ರಾಯ. ಇದನ್ನು ನಾವು ಇಂದಿನ ಅನೇಕ ಹನಿಟ್ರ್ಯಾಪ್ ಪ್ರಕರಣಗಳಲ್ಲಿ ನೋಡಬಹುದು. ಕ್ಷಣಿಕ ಸುಖದ ಹಿಂದೆ ಓಡಿದವನ ಗೌರವನಾಶ, ಅರ್ಥನಾಶ, ಕುಟುಂಬನಾಶ.
6. ಮಹಿಳೆ ಕನ್ನಡಿಯಂತೆ
ಚಾಣಕ್ಯರ ದೃಷ್ಟಿಯಲ್ಲಿ ಮಹಿಳೆಯರು ಪುರುಷರನ್ನು ದುರ್ಬಲಗೊಳಿಸುವವರಲ್ಲ. ಅವರಲ್ಲಿರುವ ದುರ್ಬಲತೆಯನ್ನು ಬಯಲಿಗೆಳೆಯುವವರು. ಶಿಸ್ತಿನ ವ್ಯಕ್ತಿ ಮಹಿಳೆಯನ್ನು ಗೌರವದಿಂದ ನೋಡುವನು. ದುರ್ಬಲ ವ್ಯಕ್ತಿ ತನ್ನ ದೌರ್ಬಲ್ಯ ಹಾಗೂ ನಾಶಕ್ಕೆ ತಾನೇ ಕಾರಣನಾಗುವನು.
ಸ್ತ್ರೀಯನ್ನು ಗೌರವದಿಂದ, ಪ್ರೀತಿಯಿಂದ ಕಾಣುವ ಪುರುಷ ಉನ್ನತಿ ಹೊಂದುತ್ತಾನೆ. ಆದರೆ ಮಹಿಳೆಯನ್ನು ಸ್ವತ್ತಿನಂತೆ ಕಾಣುವ ಮನೋಭಾವವೇ ಅನೇಕ ಸಂಬಂಧಗಳ ಪತನಕ್ಕೆ ಕಾರಣ. ಗೌರವ ಮತ್ತು ಸಮಾನತೆ ಇದ್ದಲ್ಲಿ ಸಂಬಂಧ ಬಲವಾಗುತ್ತದೆ. ಒಟ್ಟಿನಲ್ಲಿ, ಆಚಾರ್ಯ ಚಾಣಕ್ಯರ ಸಂದೇಶ ಕಾಲಾತೀತ. ಮಹಿಳೆಯರೇ ಪತನಕ್ಕೆ ಕಾರಣ ಎಂಬುದು ಅವರ ಮಾತಿನ ಸಾರವಲ್ಲ. ಪುರುಷನು ತನ್ನ ಮನಸ್ಸನ್ನು ನಿಯಂತ್ರಿಸದಿದ್ದರೆ, ಯಾವ ಶಕ್ತಿಯ ಎದುರು ಬಂದರೂ ಕುಸಿಯುವನು ಎಂಬುದೇ ಅವರ ಎಚ್ಚರಿಕೆ.