ಕೃಷ್ಣಾವತಾರ ಹೇಗಾಯಿತು?; ವಿಷ್ಣುವಿನ ಕಪ್ಪು ಕೂದಲಿನಿಂದ ಹುಟ್ಟಿದವನೇ ಕೃಷ್ಣ.

By Sushma HegdeFirst Published Aug 24, 2023, 3:07 PM IST
Highlights

ಕೃಷ್ಣಾವತಾರ ಏಕಾಯಿತು ಮತ್ತು ಹೇಗಾಯಿತು ಎಂಬ ಬಗ್ಗೆ ಪುರಾಣಗಳಲ್ಲಿ ಸಾಕಷ್ಟು ಕತೆಗಳಿವೆ. ಕೃಷ್ಣನೇ ‘ಭಗವದ್ಗೀತೆಯಲ್ಲಿ ‘ಯಾವಾಗ ‘ಧರ್ಮಕ್ಕೆ ಅಪಾಯ ಬರುತ್ತದೆಯೋ ಆಗೆಲ್ಲ ನಾನು ಅವತಾರ ಎತ್ತುತ್ತೇನೆ’ ಎಂದು ಹೇಳಿದ್ದಾನೆ. ಅಂತೆಯೇ ಅವನು ಹತ್ತು ಅವತಾರಗಳನ್ನು ಎತ್ತಿ ಲೋಕೋದ್ಧಾರ ಮಾಡಿದ. ಇನ್ನೊಂದು ಮೂಲದ ಪ್ರಕಾರ ‘ಭಗವಾನ್ ವಿಷ್ಣು ಇಪ್ಪತ್ತನಾಲ್ಕು ಅವತಾರಗಳನ್ನು ಎತ್ತಿದ್ದನಂತೆ. ಅದು ಬೇರೆಯದೇ ಕತೆ. ‘ಭಾಗವತ ಪುರಾಣದಲ್ಲಿ ಬರುವ ಕತೆಯ ಪ್ರಕಾರ ಕೃಷ್ಣ ಹುಟ್ಟಿದ್ದು ವಿಷ್ಣು ಕಿತ್ತುಕೊಟ್ಟ ಒಂದು ಕಪ್ಪು ಕೂದಲಿನಿಂದ.

ಮಹಾಬಲ ಸೀತಾಳಭಾವಿ

ಕೃಷ್ಣಾವತಾರ ಏಕಾಯಿತು ಮತ್ತು ಹೇಗಾಯಿತು ಎಂಬ ಬಗ್ಗೆ ಪುರಾಣಗಳಲ್ಲಿ ಸಾಕಷ್ಟು ಕತೆಗಳಿವೆ. ಕೃಷ್ಣನೇ ‘ಭಗವದ್ಗೀತೆಯಲ್ಲಿ ‘ಯಾವಾಗ ‘ಧರ್ಮಕ್ಕೆ ಅಪಾಯ ಬರುತ್ತದೆಯೋ ಆಗೆಲ್ಲ ನಾನು ಅವತಾರ ಎತ್ತುತ್ತೇನೆ’ ಎಂದು ಹೇಳಿದ್ದಾನೆ. ಅಂತೆಯೇ ಅವನು ಹತ್ತು ಅವತಾರಗಳನ್ನು ಎತ್ತಿ ಲೋಕೋದ್ಧಾರ ಮಾಡಿದ. ಇನ್ನೊಂದು ಮೂಲದ ಪ್ರಕಾರ ‘ಭಗವಾನ್ ವಿಷ್ಣು ಇಪ್ಪತ್ತನಾಲ್ಕು ಅವತಾರಗಳನ್ನು ಎತ್ತಿದ್ದನಂತೆ. ಅದು ಬೇರೆಯದೇ ಕತೆ. ‘ಭಾಗವತ ಪುರಾಣದಲ್ಲಿ ಬರುವ ಕತೆಯ ಪ್ರಕಾರ ಕೃಷ್ಣ ಹುಟ್ಟಿದ್ದು ವಿಷ್ಣು ಕಿತ್ತುಕೊಟ್ಟ ಒಂದು ಕಪ್ಪು ಕೂದಲಿನಿಂದ. ಅದೇ ಸಮಯದಲ್ಲಿ ವಿಷ್ಣು ಇನ್ನೊಂದು ಕೂದಲನ್ನು ಕೂಡ ಕಿತ್ತುಕೊಟ್ಟಿದ್ದನಂತೆ. ಅದು ಬಿಳಿಯ ಕೂದಲಾಗಿತ್ತು. ಅದರಿಂದ ಹುಟ್ಟಿದವನು ಬಲರಾಮ. ಇದೊಂದು ಮಜವಾದ ಕತೆ.

Latest Videos

ದ್ವಾಪರಯುಗ ಪ್ರಾರಂಭವಾಗುವುದಕ್ಕೂ ಮುನ್ನ, ಅಂದರೆ ಕೃಷ್ಣ ಅವತಾರ ಎತ್ತುವುದಕ್ಕೂ ಮುನ್ನ, ತ್ರೇತಾಯುಗದ ಕೊನೆಯಲ್ಲಿ ‘ಭೂಮಿಯ ಮೇಲೆ ಅನ್ಯಾಯ, ಅಧರ್ಮಗಳು ತಾಂಡವವಾಡುತ್ತಿದ್ದವು. ರಾಕ್ಷಸರ ಹಾವಳಿ ಮಿತಿಮೀರಿತ್ತು. ಹೋದಲ್ಲಿ ಬಂದಲ್ಲಿ ಅಸಂಖ್ಯ ರಾಕ್ಷಸರು ಜನರನ್ನು ಪೀಡಿಸುತ್ತಿದ್ದರು. ಇಡೀ ಮರ್ತ್ಯಲೋಕವನ್ನು ‘ಭಯಾನಕ ರಾಕ್ಷಸ ಕಾಲನೇಮಿ ಆಳುತ್ತಿದ್ದ. ಜನರ ಕಷ್ಟ ನೋಡಲಾಗದೆ ಕಾಲನೇಮಿಯನ್ನು ಮಹಾವಿಷ್ಣು ಕೊಂದು ಹಾಕಿದರೂ ಉಗ್ರಸೇನ ರಾಜನ ಮಗನಾಗಿ ಕಂಸನ ರೂಪದಲ್ಲಿ ಕಾಲನೇಮಿ ಮತ್ತೆ ಹುಟ್ಟಿ ಬಂದಿದ್ದ. ಅವನ ಜೊತೆಗೆ ಅರಿಷ್ಟ, ಕೇಶಿ, ಪ್ರಾಲಂಬ, ನರಕಾಸುರ, ಸುಂಡ, ಬಾಣಾಸುರ ಹೀಗೆ ಇನ್ನೂ ಅಸಂಖ್ಯ ರಾಕ್ಷಸರಿದ್ದರು. ಇವರೆಲ್ಲ ಬೇರೆ ಬೇರೆ ರಾಜ್ಯವನ್ನು ವಶಪಡಿಸಿಕೊಂಡು ತಾವೇ ರಾಜರಾಗಿ ಆಳ್ವಿಕೆ ನಡೆಸುತ್ತಿದ್ದರು. ಅಲ್ಲಿನ ಪ್ರಜೆಗಳಿಗೆ ಬದುಕು ಸಾಕ್ಷಾತ್ ನರಕವಾಗಿತ್ತು. ‘ಭೂಮಿದೇವಿಗೂ ಕೂಡ ಈ ದುರುಳರ ಭಾರ ಹೊತ್ತು ಹೊತ್ತು ಸುಸ್ತಾಗಿತ್ತು. 

ಇನ್ನು ತನ್ನಿಂದ ತಾಳಿಕೊಳ್ಳಲು ಸಾಧ್ಯವಿಲ್ಲ ಎಂಬ ಹಂತ ಬಂದಾಗ ಭೂದೇವಿಯು ಎಲ್ಲಾ ದೇವಗಣದ ಮೊರೆ ಹೋದಳು. ಏನಾದರೂ ಮಾಡಿ ರಾಕ್ಷಸರನ್ನು ಕೊಂದುಹಾಕಿ. ಇಲ್ಲದಿದ್ದರೆ ಇನ್ನಷ್ಟು ಕಾಲ ಅವರೆನ್ನಲ್ಲ ಹೊತ್ತುಕೊಂಡು ಇರಲು ನನಗೆ ಶಕ್ತಿಯಿಲ್ಲ. ನೀವು ಹೀಗೇ ಬಿಟ್ಟರೆ ಭೂಮಂಡಲವೇ ನಾಶವಾಗಿ ಹೋಗುತ್ತದೆ ನೋಡಿ ಎಂದು ಗೋಳು ತೋಡಿಕೊಂಡಳು. ಆಗ ದೇವರೆಲ್ಲ ಸೇರಿ ಬ್ರಹ್ಮನ ಬಳಿಗೆ ಹೋಗಿ ಅಹವಾಲು ಸಲ್ಲಿಸಿದರು. ಬ್ರಹ್ಮನು ಆ ದೇವರನ್ನೆಲ್ಲ ಕರೆದುಕೊಂಡು ‘ಗವಾನ್ ವಿಷ್ಣುವಿನ ಬಳಿಗೆ ಹೋಗಿ ಭೂಮಿಯನ್ನು ಕ್ರೂರ ರಾಕ್ಷಸರಿಂದ ಕಾಪಾಡುವಂತೆ ಬೇಡಿಕೊಂಡ. ಕೊನೆಗೆ ಎಂದಿನಂತೆ ಎಲ್ಲಾ ದೇವರೂ ಸೇರಿ ಬೇರೆ ದಾರಿ ಕಾಣದೆ ವಿಷ್ಣುವಿನ ಭಜನೆ ಮಾಡತೊಡಗಿದರು.

ಇದು ಮನೆಗೆ ಶ್ರೀಮಂತಿಕೆ ಬರುವ ಸಂಕೇತ; ಲಕ್ಷ್ಮಿಯ ಆಗಮನದ ಸೂಚನೆ ಹೇಗಿರುತ್ತೆ?

 

ವಿಷ್ಣು ಪ್ರಸನ್ನನಾಗಿ ತನ್ನ ಎರಡು ಕೂದಲನ್ನು ಕಿತ್ತು ಕೊಟ್ಟ. ಅವನಿಗೂ ವಯಸ್ಸಾಗುತ್ತಿತ್ತಲ್ಲ, ಹಾಗಾಗಿ ಒಂದು ಬಿಳಿ ಕೂದಲು, ಇನ್ನೊಂದು ಕಪ್ಪು ಕೂದಲು ಬಂತು. ಈ ಕೂದಲುಗಳೇ ನನ್ನ ಅಂಶವಾಗಿ ಭೂಮಿಯಲ್ಲಿ ಹುಟ್ಟಿ ರಾಕ್ಷಸರನ್ನು ಸಂಹಾರ ಮಾಡುತ್ತವೆ ಎಂದು ವಿಷ್ಣು ಹೇಳಿದ. ಜೊತೆಗೆ ಎಲ್ಲಾ ದೇವರೂ ಒಂದೊಂದು ಮಾನವ ರೂಪ ತಾಳಿ ಭೂಲೋಕಕ್ಕೆ ಹೋಗಿ ಅವರ ಕೈಲಾದಷ್ಟು ರಾಕ್ಷಸರನ್ನು ಕೊಂದುಹಾಕಬೇಕೆಂದು ಅಪ್ಪಣೆ ಹೊರಡಿಸಿದ. ದೇವರೆಲ್ಲ ಒಪ್ಪಿದರು.

varalakshmi vratham 2023 : ನಾಳೆ ವರಮಹಾಲಕ್ಷ್ಮಿ ಹಬ್ಬ; ವ್ರತದ ಪೂಜೆಯನ್ನು ಹೇಗೆ ಮಾಡಬೇಕು?

 

ಈ ನಡುವೆ, ವಿಷ್ಣು ಕಿತ್ತುಕೊಟ್ಟ ಬಿಳಿ ಕೂದಲು ಯದುವಂಶದ ಒಬ್ಬಳು ಸೊಸೆಯಾದ ರೋಹಿಣಿಯ ಗರ್ಭ ಸೇರಿತು. ಅಲ್ಲಿಂದ ಬಲರಾಮ ಹುಟ್ಟಿದ. ಅವನು ಬೆಳ್ಳಗಿದ್ದ. ಇನ್ನೊಂದು ಕಪ್ಪು ಕೂದಲು ಅದೇ ಯದುವಂಶದ ದೇವಕಿಯ ಗರ್ಭ ಸೇರಿತು. ಅದರಿಂದ ಕೃಷ್ಣ ಹುಟ್ಟಿದ. ಅವನು ಕಪ್ಪಗಿದ್ದ. ಮೊದಲು ಹುಟ್ಟಿದ ಬಲರಾಮ ಅಣ್ಣನೂ, ನಂತರ ಹುಟ್ಟಿದ ಕೃಷ್ಣನು ತಮ್ಮನೂ ಆದರು. ನಂತರ ಅವರಿಬ್ಬರೂ ಸೇರಿ ಒಬ್ಬೊಬ್ಬರೇ ರಾಕ್ಷಸರನ್ನು ಕೊಲ್ಲುತ್ತಾ ಹೋದರು. ಕೃಷ್ಣನು ತನ್ನ ಸೋದರ ಮಾವ ಕಂಸನೂ ಸೇರಿದಂತೆ ಅತಿಹೆಚ್ಚು ರಾಕ್ಷಸರನ್ನು ಕೊಂದುಹಾಕಿದ. ಎಂಬಲ್ಲಿಗೆ ಅದು ಕೃಷ್ಣಾವತಾರವಾಗಿ ಪ್ರಸಿದ್ಧವಾಯಿತು.ಹೀಗೆ ವಿಷ್ಣುವಿನ ಕಪ್ಪು ಕೂದಲಿನಿಂದ ಹುಟ್ಟಿದ ಕೃಷ್ಣ ದೊಡ್ಡ ಮಹಾಭಾರತಕ್ಕೆ ಕಾರಣನಾಗಿ ಭೂಲೋಕದಲ್ಲಿ ಧರ್ಮ ಸಂಸ್ಥಾಪನೆ ಮಾಡುವ ಪ್ರಕ್ರಿಯೆಯಲ್ಲಿ ಇನ್ನೂ ಅಸಂಖ್ಯ ಪೌರಾಣಿಕ ಕತೆಗಳಿವೆ.

click me!