ವಾಸ್ತು ಪ್ರಕಾರ ಬಾತ್‌ರೂಮ್ ಹೀಗಿದ್ದರೆ ಚೆನ್ನ!

Published : May 26, 2022, 05:59 PM IST
ವಾಸ್ತು ಪ್ರಕಾರ ಬಾತ್‌ರೂಮ್ ಹೀಗಿದ್ದರೆ ಚೆನ್ನ!

ಸಾರಾಂಶ

ಮನೆ ಕಟ್ಟಿಸುತ್ತಿದ್ದೀರಾ? ಓಕೆ. ಯಾವ ಇಂಜಿನಿಯರ್(Engineer) ಮೂಲಕ ಕಟ್ಟಿದರೂ ಅವರು ಸಹ ವಾಸ್ತು ನೋಡಿಯೇ ಪ್ಲಾನ್(plan) ಹಾಕ್ತಾರೆ. ಯಾವ ಭಾಗದಲ್ಲಿ ಏನೇನಿರಬೇಕು, ಅಡುಗೆ ಕೋಣೆ, ದೇವರ ಮನೆ, ಮಾಸ್ಟರ್ ಬೆಡ್‌ರೂಮ್(Master bedroom) ಹೀಗೆ ಎಲ್ಲವನ್ನೂ ವಾಸ್ತು ನೋಡಿಯೇ ಕಟ್ಟುತ್ತೇವೆ. ಮನೆಯ ಎಲ್ಲಾ ಭಾಗವೂ ಹೀಗೀಗಿರಬೇಕು ಎಂದು ವಾಸ್ತು ಶಾಸ್ತç ತಿಳಿಸಿದೆ. ಹಾಗಾದರೆ ವಾಸ್ತುವಿನ ಪ್ರಕಾರ ನಮ್ಮನೆ ಬಾತ್‌ರೂಮ್(Bathroom) ಹೇಗಿರಬೇಕು ಇಲ್ಲಿದೆ ಮಾಹಿತಿ.

ಮನೆ ಕಟ್ಟುವ ಮುನ್ನ ಗುದ್ದಲಿ ಪೂಜೆಯಿಂದ ಹಿಡಿದು ಕನ್ಸಟ್ರಕ್ಷನ್(construction) ಮುಗಿಯುವವರೆಗೂ ಇಂಚಿAಚಿಗೂ ಶಾಸ್ತçಗಳ ಮೊರೆ ಹೋಗ್ತೀವಿ. ಸೈಟ್(site) ಕೊಳ್ಳುವಾಗಲೂ ಈ ನಂಬರ್ ಸೈಟ್ ನನಗೆ ಆಗಿಬರುತ್ತಾ? ಈ ದಿಕ್ಕಿನಲ್ಲಿದೆ ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿ ಮುಂದೆ ಸಾಗುತ್ತೇವೆ. ಜಾಗಕ್ಕೆ ಅನುಗುಣವಾಗಿ ಹೊಂದಿರುವ, ವಾಸಿಸುವ ಸ್ಥಳಕ್ಕೆ ವಾಸ್ತು(Vaastu) ಎಂದು ಹೇಳಲಾಗುತ್ತೆ. ಒಂದು ಜಾಗದಲ್ಲಿ ಇಂತದ್ದು ಇಂತಲ್ಲಿಯೇ ಇರಬೇಕು ಎಂದು ಶಾಸ್ತçದಲ್ಲಿ ಹೇಳಲಾಗಿದೆ. ದೇವರ ಮನೆ ಪೂರ್ವದ(east) ಕಡೆ ಮುಖ ಮಾಡಿದರೆ ಒಳ್ಳೆಯದು, ಅಡುಗೆ ಮನೆ ಅಗ್ನಿ ಮೂಲೆಯಲ್ಲಿರಬೇಕು ಹೀಗೆ ಪ್ರತಿಯೊಂದು ವಾಸ್ತುವಿನಲ್ಲಿ ತಿಳಿಸಲಾಗಿದೆ. ಹಾಗಾಗಿ ನಿಮ್ಮ ಮನೆಯ ಬಾತ್‌ರೂಮ್(Bathroom) ವಿಷಯದ ಬಗ್ಗೆ ಇಲ್ಲಿ ತಿಳಿಸಿದ್ದೇವೆ.

ಬಾತ್‌ರೂಮ್‌ನಲ್ಲಿ ಸ್ನಾನ ಹೇಗೆ ಮಾಡಬೇಕು ಎನ್ನುವುದರಿಂದ ಹಿಡಿದು ಏನಿರಬೇಕು, ಏನಿರಬಾರದು, ಯಾವೆಲ್ಲ ತಪ್ಪನ್ನು ಮಾಡಬಾರದು ಎಂದು ವಾಸ್ತು ಶಾಸ್ತçದಲ್ಲಿ ಹೇಳಲಾಗಿದೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
1. ಬಾತ್‌ರೂಮ್ ಕ್ಲೀನ್‌ಆಗಿ (clean) ಇರುವಂತೆ ನೋಡಿಕೊಳ್ಳಿ. ಸ್ನಾನದ ನಂತರ ಹಾಗೆಯೇ ಹೊರ ನಡೆಯಬೇಡಿ. ಅಲ್ಲಿ ಯಾವುದೇ ತ್ಯಜ್ಯ (wastage) ಇರದಂತೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಕಸವಿದ್ದರೆ ನಕಾರಾತ್ಮಕ (negetive) ಪರಿಣಾಮ ಹೆಚ್ಚಿರುತ್ತೆ ಅಲ್ಲದೆ ರಾಹು-ಕೇತುಗಳಿಗೆ ಕೋಪ ಬರುತ್ತೆ ಎಂದು ವಾಸ್ತುವಿನಲ್ಲಿ ತಿಳಿಸಿದೆ.
2. ಸ್ನಾನದ ನಂತರ ಅಪ್ಪಿತಪ್ಪಿಯೂ ಒದ್ದೆ ಬಟ್ಟೆ (wet cloth) ಯನ್ನು ಅಲ್ಲಿಯೇ ಬಿಟ್ಟುಬರಬೇಡಿ. ಅದನ್ನು ದೊಡ್ಡ ದೋಷವೆಂದು ಹೇಳಲಾಗಿದೆ. 
3. ಕೊಳೆಯಾದ (dirty) ಬಟ್ಟೆಯನ್ನು ಸ್ನಾನದ ಮೊದಲೇ ತೊಳೆಯಬೇಕು. ಸ್ನಾನದ ನಂತರ ತೊಳೆದರೆ (clean) ನೀವು ಅಶುದ್ಧಕ್ಕೆ ಸಮ. ಅಲ್ಲದೆ ತುಳೆದ ಒದ್ದೆ  ಬಟ್ಟೆಯನ್ನು ಬಾತ್‌ರೂಮ್‌ನಲ್ಲಿ ಹಾಗೆಯೇ ಇಡಬಾರದು ಅದನ್ನು ತಕ್ಷಣ ಒಣಗಲು ಹಾಕಬೇಕು ಎಂದು ಹೇಳಲಾಗಿದೆ. 
4. ಕೊಳೆಯ ನೀರನ್ನು ಬಕೆಟ್‌ನಲ್ಲಿ (bucket) ಇರದಂತೆ ನೋಡಿಕೊಳ್ಳಿ. ಬಕೆಟ್‌ನಲ್ಲಿ ಶುದ್ಧ ನೀರನ್ನು (pure water) ತುಂಬಿಡಿ. ಕೊಳೆ ನೀರಿದ್ದರೆ ಅದನ್ನು ತಕ್ಷಣ ಬಿಸಾಡುವುದು ಒಳ್ಳೆಯದು. ಬಾತ್‌ರೂಮ್‌ನಲ್ಲಿ ಕೊಳಚೆ (dirty water) ನೀರು ಸಂಗ್ರವಾಗಿರಬಾರದು.
5. ತಲೆ ಸ್ನಾನ ಮಾಡಿದಾಗ ಕೂದಲು (hair) ಉದುರುವುದು ಸಾಮಾನ್ಯ. ಹಾಗಂತ ಅದನ್ನು ಅಲ್ಲಿಯೇ ಬಿಟ್ಟುಬಿಡಬೇಡಿ. ಹಾಗೆ ಮಾಡಿದರೆ ಶನಿ ಹಾಗೂ ಮಂಗಳ ದೇವರ ಕೋಪಕ್ಕೆ (angry) ಕಾರಣವಾಗುತ್ತದೆ. ಇದರಿಂದ ದುಷ್ಪರಿಣಾಮ ಹೆಚ್ಚುತ್ತದೆ. ನಂತರದಲ್ಲಿ ಪರಿಹಾರ ಮಾಡಲು ಹರಸಾಹಸ ಪಡಬೇಕಾಗುತ್ತದೆ ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಕೂದಲು ಹಾಗೆಯೇ ಬಿಡುವುದು ನೋಡಲು ಸಹ ಅಸಹ್ಯವಾಗಿ ಕಾಣುತ್ತದೆ.  
6. ಸ್ನಾನದ ನಂತರ ನೀರು (water) ತೊಟ್ಟಿಕ್ಕದಂತೆ ಟ್ಯಾಪ್ (tap) ಅನ್ನು ಸರಿಯಾಗಿ ನಿಲ್ಲಿಸಿ ಬನ್ನಿ. ನೀರು ಸೋರುವುದು, ತೊಟ್ಟಿಕ್ಕುವುದು ಕೆಟ್ಟ ಸಂಕೇತ. ಅದು ತೊಂದರೆಯುAಟು ಮಾಡುತ್ತದೆ, ಇದರಿಂದ ಹಣ ಹಾಗೂ ಗೌರವವನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನಲಾಗಿದೆ. ಅಲ್ಲದೆ ನೀರು ಸಹ ವ್ಯರ್ಥವಾಗುತ್ತದೆ.
7. ಸ್ನಾನದ ನಂತರ ಬಕೆಟ್‌ನಲ್ಲಿ ಸ್ವಲ್ಪವೂ ನೀರು ಉಳಿಯಬಾರದು. ಅದು ಒಳ್ಳೆಯದಲ್ಲ. ಬಕೆಟ್ ಖಾಲಿ ಇದ್ದಲ್ಲಿ ಅದನ್ನು ಬಾತ್‌ರೂಮ್‌ನಿಂದ ಹೊರಗಡರ ಇಡಬೇಕು. ಇಲ್ಲವೇ ಶುದ್ಧ ನೀರು ತುಂಬಿರಬೇಕು ಎನ್ನಲಾಗಿದೆ.
8. ಕೆಲವರು ಬಾತ್‌ರೂಮ್‌ನಲ್ಲಿ ಹೇರ್ ಕಟ್ (hair cut) ಮಾಡುವುದು, ಶೇವ್ (shave) ಮಾಡುವುದು, ಟ್ರಿಮ್ (trim) ಮಾಡುತ್ತಾರೆ. ಅದು ತಪ್ಪು. ಕೂದಲು ಅಲ್ಲಿ ಬಿಟ್ಟು ಬರುವುದು ಶುಭದ ಸಂಕೇತವಲ್ಲ. 
9. ಖಾಲಿ ಇರುವ ಬಕೆಟ್ ಬಾತ್‌ರೂಮ್‌ನಲ್ಲಿ ಇಡುವುದು ಒಳ್ಳೆಯದಲ್ಲ. ವಾಸ್ತುವಿನ ಪ್ರಕಾರ ಹೀಗೆ ಇಡುವುದರಿಂದ ಹಣಕಾಸಿವ ವ್ಯವಹಾರದಲ್ಲಿ ತೊಂದರೆಯಾಗುತ್ತೆ ಎಂದು ಹೇಳಲಾಗಿದೆ.
10. ಬಾತ್‌ರೂಮ್‌ನಲ್ಲಿ ಸಾಮಾನ್ಯವಾಗಿ ಇರಿಸುವ ಸೋಪ್ (soap), ಶಾಂಪೂ (shampoo), ಬ್ರಶ್ (brush), ಪೇಸ್ಟ್ (paste) ಮುಂತಾದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಇಡಬಾರದು. ಒಂದು ಆರ್ಡ್ನಲ್ಲಿ(order) ಜೋಡಿಸಿ ನೀಟಾಗಿಡಬೇಕು ಎಂದು ವಾಸ್ತುವಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ವಾಸ್ತು ಪ್ರಕಾರ Attached Bathroom ಒಳ್ಳೇದೋ ಅಲ್ವೋ?

ಸ್ನಾನ ಮಾಡುವ ಮುನ್ನ ಎಚ್ಚರ ಇರಲಿ
1. ಸಾಮಾನ್ಯವಾಗಿ ಕಾಮನ್ ಬಾತ್‌ರೂಮ್ (common bathroom) ಎಲ್ಲರ ಮನೆಯಲ್ಲೂ ಇರುತ್ತೆ. ಹೆಸರೇ ಹೇಳುವಂತೆ ಎಲ್ಲರೂ ಉಪಯೋಗಿಸಬಹುದಾದ ಬಾತ್‌ರೂಮ್. ಕಾಮನ್ ಬಾತ್‌ರೂಮ್ ಉಪಯೋಗಿಸುವ ಮುನ್ನ ನೆಲವನ್ನು ಒಮ್ಮೆ ಸ್ವಚ್ಛಗೊಳಿಸುವುದು. ಇದರಿಂದ ಬ್ಯಾಕ್ಟೀರಿಯಾ (bacteria), ಕ್ರಿಮಿ ಕೀಟಗಳಿದ್ದರೆ ಕ್ಲೀನ್ ಆಗುತ್ತೆ.
2. ಅಟ್ಯಾಚ್ (attach) ಆಗಿರುವ ಟಾಯ್ಲೆಟ್ (toilet) ಇದ್ದರೆ ಅದನ್ನು ಆಗಾಗ್ಗೆ ತೊಳೆಯುವುದರ ಜೊತೆಗೆ ಮುಚ್ಚಿಡುವುದು ಒಳ್ಳೆಯದು. ಕಣ್ಣಿಗೆ ಕಾಣದ ಕ್ರಿಮಿಗಳು ಎಲ್ಲೆಡೆ ಹರಡುವುದು ತಪ್ಪುತ್ತದೆ. ದುರ್ವಾಸನೆ ಬರುವುದನ್ನು ತಡೆಯುತ್ತದೆ.
3. ಪದೇ ಪದೇ ಸ್ನಾನ ಮಾಡುವುದು ಒಳ್ಳೆಯದಲ್ಲ ಎಂದು ವಾಸ್ತುವಿನಲ್ಲಿ ತಿಳಿಸಲಾಗಿದೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಸ್ನಾನ ಮಾಡುವುದು ಉತ್ತಮ.
4. ಬೇರೆಯವರು ಬಳಸಿದ ಸೋಪ್, ಟವೆಲ್ ಮುಂತಾದ ವಸ್ತುಗಳನ್ನು ಬಳಸುವುದು ಒಳ್ಳೆಯದಲ್ಲ. ಇದರಿಂದ ಅಲರ್ಜಿಯಾಗುವ (allergi) ಸಾಧ್ಯತೆ ಇವೆ. 
5. ಎರಡು ದಿನಕ್ಕೊಮ್ಮೆ ತಲೆ ಸ್ನಾನ ಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದೆಂದು ಶಾಸ್ತç ತಿಳಿಸಿದೆ. ತಲೆಯಲ್ಲಿ ಉತ್ಪಾದನೆಯಾಗುವ ಆಯ್ಲಿಲ್ (oil), ಕೊಳೆ ಹಾಗೂ ಕೂದಲಿಗೂ ಒಳ್ಳೆಯದು ಎನ್ನಲಾಗಿದೆ.
6. ಟವೆಲ್ (towel) ಯೂಸ್ ಮಾಡಿ ಅದನ್ನು ಹಾಗೇ ಒಣಗಲು ಹಾಕಬೇಡಿ. ಇದರಿಂದ ಒದ್ದೆ ಇರುವ ಟವೆಲ್‌ನಲ್ಲಿ ಬ್ಯಾಕ್ಟೀರಿಯಾ, ಧೂಳು, ಫಂಗಸ್ (fungus) ಬೆಳೆಯುವುದು ಹೆಚ್ಚು. ಪ್ರತೀ ದಿನ ಉಪಯೋಗಿಸಿದ ಟವೆಲ್ ಅನ್ನು ತಕ್ಷಣ ತೊಳೆಯುವುದು ಒಳ್ಳೆಯದು.

PREV
Read more Articles on
click me!

Recommended Stories

Vish Yoga: ಶನಿಯಿಂದ ನಿರ್ಮಾಣವಾಗಲಿದೆ ವಿಷ ಯೋಗ; ಈ 5 ರಾಶಿಯವರಿಗೆ ಸಂಕಷ್ಟ ತಪ್ಪಿದ್ದಲ್ಲ!
ಹೆಂಡ್ತೀನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಗಂಡಂದಿರ ರಾಶಿಗಳಿವು