ಹಣಕಾಸು ವ್ಯವಹಾರದಲ್ಲಿ ಮೇಷ ರಾಶಿಗೆ ಪ್ರಗತಿ : ಉಳಿದ ರಾಶಿ ಹೇಗಿದೆ..?

Published : Sep 20, 2018, 07:04 AM IST
ಹಣಕಾಸು ವ್ಯವಹಾರದಲ್ಲಿ ಮೇಷ ರಾಶಿಗೆ ಪ್ರಗತಿ : ಉಳಿದ ರಾಶಿ ಹೇಗಿದೆ..?

ಸಾರಾಂಶ

ಹಣಕಾಸು ವ್ಯವಹಾರದಲ್ಲಿ ಮೇಷ ರಾಶಿಗೆ ಪ್ರಗತಿ : ಉಳಿದ ರಾಶಿ ಹೇಗಿದೆ..?

ಮೇಷ
ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ ಸಿಗಲಿದೆ.
ಮಾನಸಿಕ ತುಮುಲವು ಹತೋಟಿಗೆ ಬರಲಿದೆ.
ಹಿರಿಯರತ್ತ ಹೆಚ್ಚು ಗಮನ ಹರಿಸುವಿರಿ.

ವೃಷಭ
ರಂಗಭೂಮಿ ಕಲಾವಿದರಿಗೆ ಒಳ್ಳೆ ಅವಕಾಶಗಳು
ಹುಡುಕಿ ಬರಲಿವೆ. ಆದಾಯದ ಮೂಲವೂ
ಬದಲಾಗುವುದು. ಪ್ರಶಂಸೆಗಳು ಹೆಚ್ಚಲಿವೆ.

ಮಿಥುನ
ದೂರ ಸಂಬಂಧಿಯ ಒಂದು ಸಣ್ಣ ಮಾತು
ನಿಮ್ಮ ಜೀವನದಲ್ಲಿ ಹುರುಪನ್ನು ತರಲಿದೆ.
ಆ ನಿಟ್ಟಿನಲ್ಲಿ ನೀವು ಯೋಜನೆ ರೂಪಿಸಿಕೊಳ್ಳಿ.

ಕಟಕ
ಆಹಾರದ ಬಗ್ಗೆ ಸ್ವಲ್ಪ ನಿಗಾ ಇರಲಿ. ಆರೋಗ್ಯ
ಸರಿಯಿದ್ದಲ್ಲಿ ಏನೆಲ್ಲಾ ಸಾಧಿಸಬಹುದು. ನಿಮ್ಮ
ಗ್ರಹಗತಿಗಳ ಬಗ್ಗೆ ಯೋಚಿಸದಿದ್ದರೆ ಕ್ಷೇಮ.

ಸಿಂಹ
ಹೊಸ ಕೆಲಸವನ್ನು ಪ್ರಾರಂಭಿಸಲು ಹಾಗೂ
ಹೊಸ ಹೂಡಿಕೆಗಳಿಗೆ ಇದು ಸಕಾಲವಾಗಿದೆ.
ಸಫಲತೆಯು ನಿಮ್ಮ ಕಡೆಗಿದೆ ಮುನ್ನಡೆಯಿರಿ.

ಕನ್ಯಾ
ನಿಮ್ಮ ಗುರಿ ಸಾಧನೆಯತ್ತ ಮಾತ್ರ ನಿಮ್ಮ ಆಸಕ್ತಿ
ಇದೆ. ವ್ಯವಹಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ.
ಆಶಾವಾದದ ಮಾತುಕತೆಗಳು ನಡೆಯಲಿವೆ.

ತುಲಾ 
ಮನೆಯ ಹಿರಿಯರು ಹೇಳುವ ಮಾತಿಗೆ
ಎದುರಾಡದಿದ್ದರೆ ಈಗ ಒಳಿತು. ಆದಷ್ಟೂ
ಜಾಗ್ರತೆಯಾಗಿದ್ದರಷ್ಟೇ ಕಾಲ ನಿಮ್ಮದು.


ವೃಶ್ಚಿಕ
ನಿಮ್ಮ ಅಂದಾಜಿಗಿಂತ ಹೆಚ್ಚಿನ ಹಣವು ಇಂದು
ಖರ್ಚಾಗಲಿದೆ. ನೀವು ಪ್ರೀತಿಸಿದವರನ್ನು
ಇಂದು ಭೇಟಿಯಾಗುವ ಸಂಭವವೂ ಇದೆ. 

ಧನುಸ್ಸು
ಆಭರಣ, ಆಸ್ತಿಗಳ ಖರೀದಿಗಳಿಂದ ಲಾಭ
ಗ್ಯಾರಂಟಿ. ಹಾಗಂತ ಇರುವ ಅಲ್ಪ ಸ್ವಲ್ಪ
ಕೂಡಿಟ್ಟ ಹಣ ಖಾಲಿ ಮಾಡಿಕೊಳ್ಳಬೇಡಿ.

ಮಕರ
ಹಿರಿಯರು ನಿಮ್ಮ ಮಾತಿಗೆ ಪುಷ್ಟಿ ಕೊಡುವರು.
ಅವರ ಅನುಭವವನ್ನು ನಿರ್ಲಕ್ಷಿಸದಿರಿ. ಅವರ
ಮುಂದೆ ತಾಳ್ಮೆಯಿಂದ ವರ್ತಿಸುವುದು ಸೂಕ್ತ.

ಕುಂಭ
ಆಸ್ತಿಯನ್ನು ಕೊಳ್ಳುವ ಉದ್ದೇಶವಿದ್ದರೆ ಇಂದೇ
ಕೂತು ಮಾತಾಡಿ ಕೊಳ್ಳಲು ಪ್ರಯತ್ನಿಸಿರಿ.
ಮಾರುವುದಿದ್ದರೆ ಸ್ವಲ್ಪ ಸಮಯ ತೆಗೆದುಕೊಳ್ಳಿ.

ಮೀನ 
ಎಂದೋ ಮಾಡಿದ ಉಪಕಾರವು ಇಂದು
ನಿಮ್ಮನ್ನು ಕಾಯಲಿದೆ. ಅದನ್ನೆಲ್ಲಾ ನೆನೆದು
ನಿಮ್ಮ ಮನವು ಆ ಕಾಲಕ್ಕೆ ಹೋಗಿ ಬಿಡಲಿದೆ.

PREV
click me!

Recommended Stories

ಇಂದು ಗುರುವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ