ಈ ರಾಶಿಯವರಿಗಿಂದು ಖರ್ಚು ಹೆಚ್ಚು..! ಸ್ವಲ್ಪ ಎಚ್ಚರ

By Web DeskFirst Published Sep 19, 2018, 7:42 AM IST
Highlights

ಮೇಷ ರಾಶಿಯವರಿಗಿಂದು ಎಲ್ಲವೂ ಕನಸಲ್ಲಿ ಕಂಡಂತೆ ಒಳ್ಳೆಯದೇ ಆಗಲಿದೆ. ನಿಮ್ಮ ಮನಸ್ಸು ಉಲ್ಲಾಸದಿಂದ ಉಬ್ಬಿ ಹೋಗುವುದು. ಖುಷಿ ಏರ್ಪಡಲಿದೆ.

ಮೇಷ
ಸೋಮಾರಿತನ ಮೈಗೂಡಿಸಿಕೊಳ್ಳದೇ ಜಾಗೃತರಾಗಿರಿ. ನಿಮ್ಮಲ್ಲಿ ಈಗಿರುವ ಏಕಾಗ್ರತೆಯನ್ನು ಸರಿಯಾಗಿ ಬಳಸಿಕೊಳ್ಳದೇ ವ್ಯಥೆ ಪಡುವಿರಿ.
ವೃಷಭ
ಇಂದು ಎಲ್ಲವೂ ಕನಸಲ್ಲಿ ಕಂಡಂತೆ ಒಳ್ಳೆಯದೇ ಆಗಲಿದೆ. ನಿಮ್ಮ ಮನಸ್ಸು ಉಲ್ಲಾಸದಿಂದ ಉಬ್ಬಿ ಹೋಗುವುದು. ಖುಷಿ ಏರ್ಪಡಲಿದೆ.
ಮಿಥುನ
ಮಡದಿ ಕೋಪಗೊಂಡು ಕೂಗಾಡಬಹುದು. ಅದಕ್ಕೆ ನಿಮ್ಮ ಮೌನವೇ ಉತ್ತರವಾಗಿದ್ದರೆ ಕ್ಷೇಮ. ಹೆಚ್ಚು ಸಂಯಮದಿಂದ ವರ್ತಿಸಿರಿ.
ಕಟಕ
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ. ಹಣದ ಸಹಾಯವೇ ಆಗಬೇಕೆಂದೇನಿಲ್ಲ. ಇಂದು ನೊಂದವರಿಗೆ ಸಾಂತ್ವನ ನೀಡಲಿದ್ದೀರಿ.
ಸಿಂಹ
ಮರೆಗುಳಿತನ ಹೆಚ್ಚಾಗುತ್ತಿದೆ. ಹೆಚ್ಚು ಟೆನ್ಷನ್ಗೆ ಒಳಗಾಗದಿರಿ. ನೆಮ್ಮದಿಯಿಂದ ಇರಲು ಪ್ರಯತ್ನಿಸಿ. ವಿನಾಕಾರಣ ಜಗಳವಾಡದಿರಿ. 
ಕನ್ಯಾ
ಬಾಳಸಂಗಾತಿ ಹಾಗೂ ಮಕ್ಕಳೊಂದಿಗೆ ಇಂದು ಹೆಚ್ಚು ಖುಷಿಯಿಂದ ಇರಲು ಬಯಸುವಿರಿ. ನೆಂಟರ ಆಗಮನ ಆಗಲಿದೆ. ಖರ್ಚು ಹೆಚ್ಚು.
ತುಲಾ
ಬಂಧುಗಳು ನಿಮ್ಮ ಮೇಲೆ ಹರಿ ಹಾಯಲು ಕಾರಣ ನಿಮ್ಮ ನೇರ ನುಡಿ. ಇಂದು ಆದಷ್ಟು ತುಲಾ ಮುಂಗೋಪವನ್ನು ಕಡಿಮೆ ಮಾಡಿಕೊಳ್ಳಿರಿ.
ವೃಶ್ಚಿಕ
ನಿಮ್ಮ ವಕೀಲರು ಹೇಳಿದ ವಿಚಾರಗಳನ್ನು ತಪ್ಪದೆ ಪಾಲಿಸಿ. ಇಲ್ಲವಾದಲ್ಲಿ ಫಜೀತಿ ಮತ್ತೆ ಮರುಕಳಿಸಲಿದೆ. ಸಾಲವನ್ನು ತೀರಿಸಲಿದ್ದೀರಿ.
ಧನುಸ್ಸು
ಪ್ರೀತಿಪಾತ್ರರ ಜೊತೆ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುವಿರಿ. ಹಳೆಯ ನೆನಪುಗಳು ಈಗ ಸಾಕಷ್ಟು ಕಾಡಲಿದೆ. ಸ್ವಲ್ಪ ಧ್ಯಾನಾಸಕ್ತರಾಗಿರಿ. 
ಮಕರ
ಭಾರಿ ಕೆಲಸಗಳಿಗೆ ಇಂದು ಕೈ ಹಾಕಲಿದ್ದೀರಿ. ನೀವು ಬದಲಾವಣೆಯ ನಿರೀಕ್ಷೆಯಲ್ಲಿದ್ದೀರಿ. ಆತುರ ಪಡದೆ ತಾಳ್ಮೆ ವಹಿಸಿದರೆ ಒಳ್ಳೆಯದು.
ಕುಂಭ
ಖರ್ಚಿನ ಮೇಲೆ ಹಿಡಿತವಿರಲಿ. ಅಪರಿಚಿತ ವ್ಯಕ್ತಿಗಳ ಪರಿಚಯವಾಗಲಿದೆ. ಆರೋಗ್ಯ ಸಮಸ್ಯೆಗೆ ಪರಿಹಾರ ದೊರೆಯಲಿದೆ.
ಮೀನ
ಮನೆಯಲ್ಲಿ ಇಂದು ದಿಢೀರ್ ಎಂದು ಶುಭ ಕಾರ್ಯದ ಬಗ್ಗೆ ಮಾತುಕತೆ ನಡೆಯಲಿದೆ. ಗೆಳೆಯರ ಸಹಕಾರದಿಂದ ಲಾಭವಾಗಲಿದೆ.
 

click me!