ಈ ರಾಶಿಯವರಿಗೆ ಶ್ರಮದ ಪ್ರತಿಫಲವಾಗಿ ಲಾಭ ಖಚಿತ

Published : Sep 18, 2018, 07:10 AM ISTUpdated : Sep 19, 2018, 09:28 AM IST
ಈ ರಾಶಿಯವರಿಗೆ ಶ್ರಮದ ಪ್ರತಿಫಲವಾಗಿ ಲಾಭ ಖಚಿತ

ಸಾರಾಂಶ

ಈ ರಾಶಿಯವರಿಗೆ ಶ್ರಮದ ಪ್ರತಿಫಲವಾಗಿ ಲಾಭ ಖಚಿತ

ಮೇಷ
ಮೊದಲ ಪ್ರಯತ್ನವಾಗಿ ನಿಮ್ಮದೇ ಆದ ಸ್ವಂತ
ಉದ್ಯೋಗವನ್ನು ಶುರು ಮಾಡಿದ್ದೀರಿ. ಶ್ರಮ
ಪಟ್ಟರೆ ಈ ಹೆಜ್ಜೆ ಹೆಚ್ಚು ಲಾಭವನ್ನೇ ತರಲಿದೆ.

ವೃಷಭ
ನಿಮ್ಮ ದೃಷ್ಟಿ ಗುರಿಯ ಕಡೆಗಿರಲಿ. ಮನಸ್ಸನ್ನು
ಕೇಂದ್ರೀಕರಿಸಿರಿ. ಈಗ ನೀವು ಮಾಡಬೇಕಾದ
 ಕೆಲಸಗಳತ್ತ ಗಮನಹರಿಸಿ. ಪ್ರಗತಿಯಾಗಲಿದೆ.

ಮಿಥುನ
ಪ್ರವಾಸ ಹೊರಡುವ ಸಂದರ್ಭ ಒದಗಲಿದೆ.
ನಿಮ್ಮ ಬದುಕಲ್ಲಿ ಹೊಸಬರ ಪ್ರವೇಶ ಆಗಲಿದೆ.
ನಿಮ್ಮ ಒಳ್ಳೆಯತನಗಳೇ ನಿಮ್ಮನ್ನು ಕಾಯಲಿದೆ.

ಕಟಕ
ಬಂಧು-ಬಳಗದವರಲ್ಲಿ ಪ್ರೀತಿ ಹೆಚ್ಚುತ್ತದೆ.
ಮನೆಯಲ್ಲಿ ಮಂಗಳ ಕಾರ್ಯ ನಡೆಯುವ
ಸಾಧ್ಯತೆಗಳಿವೆ. ಸ್ನೇಹಿತರ ಭೇಟಿಯಾಗಲಿದೆ.

ಸಿಂಹ
ಕಾರಣವಿಲ್ಲದೆಯೇ ಮನಸ್ಸು ಚಂಚಲವಾಗಿದೆ.
ಅದೇಕೆ ಹೀಗೆಂದು ತಿಳಿಯದೇ ಚಡಪಡಿಸ
ಲಿದ್ದೀರಿ. ಧ್ಯಾನ-ಪ್ರಾಣಾಯಮ ಒಳಿತು.

ಕನ್ಯಾ
ಕಚೇರಿಯಲ್ಲಿ ಕೆಲಸದ ಒತ್ತಡವು ಸಾಮಾನ್ಯ
ಗತಿಯಲ್ಲೇ ಇರಲಿದೆ. ಸ್ವಯಂ ಉದ್ಯೋಗ
ದವರಿಗೆ ಆದಾಯವು ಈಗ ಹೆಚ್ಚಾಗಲಿದೆ.

ತುಲಾ 
ವೈದ್ಯರು ಸಂಪರ್ಕದಲ್ಲಿಯೇ ಇರಲಿ.
‘ಆರೋಗ್ಯವೇ ಭಾಗ್ಯ’ ಎನ್ನುವ ಮಾತನ್ನು
ನೆನಪಿಡಿ. ದುಡ್ಡಿನ ಹಿಂದೆ ಎಂದೂ ಬೀಳದಿರಿ.


ವೃಶ್ಚಿಕ
ಓದುವ ವಿದ್ಯಾರ್ಥಿಗಳಿಗೆ ಬಿಡುವೇ ಸಿಗದು.
ಸ್ವಲ್ಪ ದಿನಗಳು ಕಷ್ಟ ಪಟ್ಟರೆ ಒಳ್ಳೆಯ ದಿನಗಳು
ಬರಲಿವೆ. ಏಕಾಗ್ರತೆಗೆ ತಕ್ಕ ಫಲವೂ ಸಿಗಲಿದೆ. 

ಧನುಸ್ಸು
ಅನುಚಿತ ಮಾತುಗಳಿಂದ ವಿವಾದಗಳಿಗೆ ಗುರಿ
ಯಾಗುವ ಸಂಭವವೂ ಇದೆ. ಬಂಧುಗಳಿಂದ
ಶುಭ ಸಮಾಚಾರವಿದೆ. ದಿಕ್ಕು ಬದಲಾಗಲಿದೆ.

ಮಕರ
ಇಂದು ನಿಮ್ಮ ದಿನಚರಿಯಲ್ಲಿ ಸ್ವಲ್ಪ ವ್ಯತ್ಯಯ
ಗಳು ಎದುರಾಗುವ ಸಂಭವವಿದೆ. ಹಾಗಂತ
ಆರೋಗ್ಯದ ಕಡೆ ಗಮನ ಕೊಡದೆ ಇರಬೇಡಿ.

ಕುಂಭ
ಏಕಪಕ್ಷೀಯ ಸ್ವಭಾವವು ನಿಮ್ಮನ್ನು ಪರೀಕ್ಷೆಗೆ
ಒಡ್ಡುತ್ತದೆ. ಪ್ರಮುಖ ನಿರ್ಧಾರಗಳನ್ನು
ತೆಗೆದುಕೊಳ್ಳುವಾಗ ಒತ್ತಡಕ್ಕೆ ಮಣಿಯದಿರಿ.

ಮೀನ 
ಗ್ರಹಗತಿಗಳೆಲ್ಲವೂ ನಿಮ್ಮ ಪರವಾಗಿಯೇ ಇವೆ.
ನಿಮ್ಮಲ್ಲಿರುವ ದೋರಣೆಯನ್ನು ಈಗ ಸ್ವಲ್ಪ
ಬದಲಿಸಿಕೊಳ್ಳಬೇಕು. ಈ ಕಾಲವು ನಿಮ್ಮ

PREV
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಗುರುವಾರ ಈ ರಾಶಿಗೆ ಶುಭ, ಅದೃಷ್ಟ