ಇಂದು ಈ ರಾಶಿಯವರು ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ಜಾಗೃತೆ ವಹಿಸಿ

Published : Nov 21, 2019, 07:14 AM ISTUpdated : Nov 21, 2019, 07:24 AM IST
ಇಂದು ಈ ರಾಶಿಯವರು ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ಜಾಗೃತೆ ವಹಿಸಿ

ಸಾರಾಂಶ

21 ನವೆಂಬರ್ 2019ರ ಭವಿಷ್ಯ, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಈ ದಿನ ? 

ಮೇಷ: ಕೊಟ್ಟ ಮಾತಿಗೆ ತಪ್ಪದಂತೆ ನಡೆದುಕೊಳ್ಳಿ. ಆಗುವುದೆಲ್ಲವೂ ಒಳ್ಳೆಯದಕ್ಕೆ. ಮಿಂಚಿ ಹೋದ ಕಾಲದ ಬಗ್ಗೆ ಚಿಂತಿಸಿ ಫಲವಿಲ್ಲ.

ವೃಷಭ: ನಿಗದಿ ಮಾಡಿಕೊಂಡ ಕಾರ್ಯಗಳನ್ನು ಸಂಪೂರ್ಣವಾಗಿ ಮಾಡಿ ಮುಗಿಸಲಿದ್ದೀರಿ. ದೊಡ್ಡ ಮಟ್ಟದ ವ್ಯವಹಾರಕ್ಕೆ ಇದು ಸಕಾಲ.

ಮಿಥುನ: ಸ್ನೇಹಿತರಿಂದ ಆರ್ಥಿಕ ಸಹಕಾರ ದೊರೆಯಲಿದೆ. ಕೆಲಸದಲ್ಲಿ ವೇಗ ಹೆಚ್ಚಾಗಲಿದೆ. ದೂರದ ಊರುಗಳಿಗೆ ಹೋಗುವ ಪ್ರಸಂಗ ಬರವುದು.

ಕಟಕ: ನಿಮ್ಮ ವಯಕ್ತಿಕ ಅಭಿಪ್ರಾಯಗಳಿಗೆ ಮಾನ್ಯತೆ ದೊರೆಯಲಿದೆ. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದು ಸರಿಯಾದ ನಡೆ.

ಯಾವ ರಾಶಿಗೆ ಈ ವಾರವು ಅನುಕೂಲಕರ : ನಿಮ್ಮ ವಾರ ಭವಿಷ್ಯ ಹೇಗಿದೆ?

ಸಿಂಹ: ಮೇಲಾಧಿಕಾರಿಯಿಂದ ಕಿರಿಕಿರಿ ಇರುತ್ತದೆ. ಆರೋಗ್ಯದಲ್ಲಿ ಕೊಂಚ ಏರುಪೇರು. ಹಿಂದೆ ಕಂಡ ಕನಸುಗಳು ಇಂದು ನನಗಸಾಗಲಿವೆ. 

ಕನ್ಯಾ: ಬೆಳಿಗ್ಗೆಯಿಂದಲೇ ಅವಿರತವಾಗಿ ದುಡಿಯುವಿರಿ. ಮಾಡಿದ ಕಾಯಕಕ್ಕೆ ಮುಂದೆ ಪ್ರತಿಫಲವಿದೆ. ಜ್ಞಾನಿಗಳ ಸಂಪರ್ಕ ಸಾಧಿಸಿಲಿದ್ದೀರಿ.

ತುಲಾ: ಮತ್ತೊಬ್ಬರ ಕಾರ್ಯಗಳು ನಿಮ್ಮ ಹೆಗಲಿಗೆ ಬೀಳುವ ಸಾಧ್ಯತೆ ಇದೆ. ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ಜಾಗೃತೆ ವಹಿಸಿ.

ವೃಶ್ಚಿಕ: ತಾಯಿಯ ಮಾತಿನಿಂದ ನಿಮ್ಮ ಮನದ ದುಃಖ ನಿವಾರಣೆಯಾಗಲಿದೆ. ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಲಿದ್ದೀರಿ. ಶ್ರೀ ಗುರುವಿನ ಕೃಪೆ ನಿಮಗಿದೆ.

ಧನಸ್ಸು: ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಸ್ಥಿರತೆ ಕಾಣಲಿದೆ. ಅತಿ ಆಸೆ ಒಳ್ಳೆಯದಲ್ಲ. ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿ ಇರಲಿ. ಶುಭಫಲ.

ಮಕರ: ಆತ್ಮೀಯರ ಮನೆಗೆ ಭೇಟಿ ನೀಡಲಿದ್ದೀರಿ. ನಿಮ್ಮ ಪ್ರತಿಭೆಯ ಬಗ್ಗೆ ನಾಲ್ಕಾರು ಮಂದಿಗೆ ತಿಳಿಯಲಿದೆ. ಆಭರಣ ಕೊಳ್ಳುವ ಸಾಧ್ಯತೆ ಇದೆ.

ಕುಂಭ: ಇಟ್ಟ ಹೆಜ್ಜೆಯನ್ನು ಹಿಂದೆ ಇಡುವುದು ಬೇಡ. ಅನ್ನಿಸಿದ್ದನ್ನು ಮಾಡಿ ಮುಗಿಸಿ. ಹಿಂದಿನ ಘಟನೆಗಳ ಬಗ್ಗೆ ಕೊರಗುತ್ತಾ ಕೂರದಿರಿ.

ಮೀನ: ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲಿದ್ದೀರಿ. ನಿಮ್ಮ ಬಗ್ಗೆ ನಿಮಗೇ ಅಭಿಮಾನ ಮೂಡಲಿದೆ. ಆಹಾರದ ಬಗ್ಗೆ ಜಾಗೃತೆ ಇರಲಿ.

 

PREV
click me!

Recommended Stories

ದೇವರ ಕೋಣೆಯಲ್ಲಿ ಲವಂಗ, ನಾಣ್ಯ, ಸಕ್ಕರೆಯನ್ನಿಟ್ಟು ನೋಡಿ.. 21 ದಿನದಲ್ಲಿ ಬದಲಾವಣೆ ನೀವೇ ಕಾಣುವಿರಿ
Tirumala Ticket Booking: ತಿರುಮಲ ದರ್ಶನ ಟಿಕೆಟ್ ಬಿಡುಗಡೆಯಲ್ಲಿ ಪ್ರಮುಖ ಬದಲಾವಣೆ; ಭಕ್ತರಿಗೆ ಬಿಗ್ ಅಲರ್ಟ್!