ಇಂದು ಈ ರಾಶಿಯವರಿಗೆ ಆರೋಗ್ಯದಲ್ಲಿ ಸಣ್ಣ ವ್ಯತ್ಯಯ ಉಂಟಾಗಲಿದೆ

By Suvarna NewsFirst Published Jan 9, 2020, 7:13 AM IST
Highlights

ಗುರುವಾರ ಜನವರಿ 09 ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ನಿಮ್ಮ ಭವಿಷ್ಯ

ಮೇಷ: ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಸಣ್ಣ ವಿಚಾರಕ್ಕೆ ಆಪ್ತರೊಂದಿಗೆ ಮನಸ್ತಾಪ ಉಂಟಾಗಲಿದೆ. ಕುಗ್ಗದೇ ಮುಂದೆ ಸಾಗಿ.

ವೃಷಭ: ಮನೆಯಲ್ಲಿ ಶುಭ ಸಮಾರಂಭಗಳ ಬಗ್ಗೆ ಚರ್ಚೆ ಏರ್ಪಡಲಿದೆ. ಎಲ್ಲರ ಪಾಲಿಗೂ ನೀವು ಒಳ್ಳೆಯವರಾಗಲು ಸಾಧ್ಯವಿಲ್ಲ. 

ಮಿಥುನ: ಪರಮಾಪ್ತರ ಸಂಕಷ್ಟಕ್ಕೆ ನೀವು ನೆರವಾಗಿ ನಿಲ್ಲಲಿದ್ದೀರಿ. ವ್ಯಾಪಾರದಲ್ಲಿ ಲಾಭ. ದೂರದ ಪ್ರವಾಸ ಮಾಡುವ ಅನಿವಾರ್ಯ ಬರಲಿದೆ.

ಕಟಕ: ಮೈ ತುಂಬಾ ಕೆಲಸವಿದೆ ಎಂದು ಚಿಂತೆ ಮಾಡದೇ, ಸ್ವಲ್ಪ ಸ್ವಲ್ಪವಾಗಿ ಮಾಡಿ ಮುಗಿಸಿ. ಎಲ್ಲವೂ ಒಳ್ಳೆಯದೇ ಆಗಲಿದೆ. ಶುಭ ಫಲ.

ಸಿಂಹ: ಬೇಡದ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುವುದು ಬೇಡ. ಮತ್ತೊಬ್ಬರನ್ನು ಮೆಚ್ಚಿಸಲು ಹೋಗಬೇಡಿ.

ಕನ್ಯಾ: ಅತಿಯಾದ ನಿದ್ದೆ, ಅತಿಯಾದ ಊಟ ನಿಮ್ಮ ಆರೋಗ್ಯಕ್ಕೆ ತೊಂದರೆ ಉಂಟುಮಾಡುತ್ತವೆ. ಆಸೆಗೆ ಬಿದ್ದು ಮೋಸ ಹೋಗದಿರಿ.

ಮಹಿಳೆಯರಿಗೆ ಅತ್ಯಂತ ಶುಭ ಕಾಲ : ಉಳಿದ ರಾಶಿಯ ವಾರ ಭವಿಷ್ಯವೇನು?

ತುಲಾ: ದೊಡ್ಡ ವ್ಯಕ್ತಿಗಳಿಂದ ನಿಮಗೆ ಒಳ್ಳೆಯ ಗೌರವ ದೊರೆಯಲಿದೆ. ಅನಗತ್ಯ ವಿಚಾರಗಳ ಬಗ್ಗೆ  ಹೆಚ್ಚು ಚಿಂತೆ ಮಾಡುವುದು ಬೇಡ.

ವೃಶ್ಚಿಕ: ನೀವು ಮತ್ತೊಬ್ಬರಿಗೆ ನೀತಿ ಹೇಳುವ ಬದಲಿಗೆ ನೀವು ನೀತಿ ಮಾರ್ಗದಲ್ಲಿ ಮುಂದೆ ಸಾಗಿ. ಮಾಡಿದ ತಪ್ಪನ್ನು ಒಪ್ಪಿಕೊಂಡು ಬಿಡಿ.

ಧನಸ್ಸು: ಆದಾಯದಲ್ಲಿ ಏರಿಕೆ. ಅದೇ ರೀತಿ ಖರ್ಚು ಹೆಚ್ಚಾಗಲಿದೆ. ಕೋರ್ಟ್ ವ್ಯಾಜ್ಯಗಳು ಮತ್ತಷ್ಟು ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ.

ಮಕರ: ಮತ್ತೊಬ್ಬರ ತಪ್ಪುಗಳನ್ನು ಹುಡುಕುವುದೇ ನಿಮ್ಮ ಕೆಲಸವಾಗಬಾರದು. ಕೋಪದಿಂದ ಮೊದಲು ಕೆಡುವುದು ನಿಮ್ಮ ಮನಸ್ಸೇ.

ಕುಂಭ: ಯಾರೋ ಹೇಳಿದ ಮಾತಿಗೆ ನೀವು ಸಾಕ್ಷಿಯಾಗಿ ನಿಲ್ಲಬೇಕಾದೀತು. ಆರೋಗ್ಯದಲ್ಲಿ ಸಣ್ಣ ವ್ಯತ್ಯಯ ಉಂಟಾಗಲಿದೆ. ಶುಭಫಲ.

ಮೀನ: ಗೊಂದಲಗಳ ನಡುವಲ್ಲಿ ಶುಭ ಕಾರ್ಯ ಮಾಡುವುದು ಬೇಡ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಕಾಡಲಿದೆ. ಗಣೇಶನ ಸ್ತುತಿ ಮಾಡಿ.
 

click me!