ವೃತ್ತಿಯಲ್ಲಿ ಏಳು-ಬೀಳಿಗೆ ಜಾತಕದ ಈ ಗ್ರಹಗಳೇ ಕಾರಣ!

By Suvarna News  |  First Published Apr 3, 2020, 5:06 PM IST

ಎಷ್ಟೇ ಕಷ್ಟಪಟ್ಟರೂ ನೌಕರಿಯಲ್ಲಿ ಮುಂದೆಬರಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಸಕ್ಸಸ್ ಕಾಣಬೇಕೆಂದರೆ ವ್ಯಕ್ತಿಯಲ್ಲಿ ಅನೇಕ ಗುಣ ಇರಬೇಕಾಗುತ್ತದೆ. ಎಲ್ಲ ಸರಿಯಿದ್ದರೂ ಗ್ರಹಗತಿಗಳು ಸಾಥ್ ಕೊಡಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಗ್ರಹದಿಂದ ವ್ಯಕ್ತಿಯ ಯಾವ ಗುಣ ವಿಕಸನಗೊಳ್ಳುತ್ತದೆ? 


ನಾನು ಕೈಹಿಡಿಯೋ ಯಾವ ಕೆಲಸವೂ ಆಗುತ್ತಿಲ್ಲ. ಎಷ್ಟೇ ಕಷ್ಟಪಟ್ಟರೂ ನೌಕರಿಯಲ್ಲಿ ಮುಂದೆಬರಲು ಸಾಧ್ಯವಾಗುತ್ತಿಲ್ಲ. ಏನು ಗ್ರಹಚಾರವಪ್ಪಾ ಇದು ಎಂದು ಬಹಳಷ್ಟು ಬಾರಿ ಅಂದುಕೊಂಡಿರುವುದುಂಟು. ಇಲ್ಲಿ ಸಕ್ಸಸ್ ಕಾಣಬೇಕೆಂದರೆ ವ್ಯಕ್ತಿಯಲ್ಲಿ ಅನೇಕ ಗುಣ ಇರಬೇಕಾಗುತ್ತದೆ. ಕೆಲವರಲ್ಲಿ ಯೋಗ್ಯತೆ ಇದ್ದರೆ, ಇನ್ನು ಕೆಲವರಲ್ಲಿ ಯೋಗ್ಯತೆ ಜತೆ ಅನುಭವವೂ ಇರುತ್ತದೆ. ಎಲ್ಲ ಸರಿಯಿದ್ದರೂ ಗ್ರಹಗತಿಗಳು ಸಾಥ್ ಕೊಡಬೇಕಾಗುತ್ತದೆ. ಹಾಗಾದರೆ ಈ ಗ್ರಹಗತಿಗಳು ನಿಮಗೆ ಅನುಕೂಲ ಮಾಡಿಕೊಡುತ್ತಿದೆಯೇ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಗ್ರಹದಿಂದ ವ್ಯಕ್ತಿಯ ಯಾವ ಗುಣ ವಿಕಸನಗೊಳ್ಳುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. 

1. ಇಂಥ ಗ್ರಹಗತಿ ಇದ್ದವರಲ್ಲಿ ವೃತ್ತಿ ಜವಾಬ್ದಾರಿ ನೈಪುಣ್ಯತೆ
ಕೆಲಸ ದೊಡ್ಡದಿರಬಹುದು ಇಲ್ಲವೇ ಚಿಕ್ಕದೂ ಇರಬಹುದು. ಆದರೆ, ಅದನ್ನು ಹೇಗೆ ನಿಭಾಯಿಸಬೇಕು ಎನ್ನುವ ನೈಪುಣ್ಯತೆ ಇರಬೇಕು. ಅದು ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆ ರೀತಿಯಾಗಿರುತ್ತದೆ. ಯಾವುದಾದರೂ ವ್ಯಕ್ತಿಗೆ ತನ್ನ ಕೆಲಸದಲ್ಲಿ ಅಷ್ಟಾಗಿ ತಿಳಿವಳಿಕೆ ಇಲ್ಲದಿದ್ದರೆ ಸಂಕಷ್ಟ ಎದುರಾಗುತ್ತದೆ. ಇಂಥವರು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದಲ್ಲಿ ಅವರ ಕುಂಡಲಿಯಲ್ಲಿ (ಜಾತಕ) ಗುರುಗ್ರಹವನ್ನು ನೋಡಬೇಕು. ಜಾತಕದಲ್ಲಿ ಗುರುಗ್ರಹವು ಉಚ್ಛ ಸ್ಥಾನದಲ್ಲಿದ್ದು, ಜತೆಗೆ ಶುಭಗ್ರಹಗಳ ಪ್ರಭಾವಕ್ಕೆ ಒಳಗಾದಾಗ ಅಂಥವರು ತಮ್ಮ ಕ್ಷೇತ್ರಗಳ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರುತ್ತಾರೆ.

Tap to resize

Latest Videos

"
ಒಂದು ವೇಳೆ ಗುರು ನೀಚ ಸ್ಥಾನದಲ್ಲಿದ್ದರೆ ಅಥವಾ ಅಶುಭ ಗ್ರಹಗಳ ಪ್ರಭಾವಕ್ಕೊಳಗಾಗಿದ್ದರೆ ಅಂತಹ ವ್ಯಕ್ತಿಯು ತನ್ನ ಕಾರ್ಯಕ್ಷೇತ್ರದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಎಲ್ಲ ಗ್ರಹಗಳಿಗೆ ಹೋಲಿಸಿದಲ್ಲಿ ಗುರುಗ್ರಹವನ್ನು ಜ್ಞಾನಕಾರಕ ಎಂದು ಕರೆಯಲಾಗುತ್ತದೆ. ಜತೆಗೆ ನೆನಪಿನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ.

ಕೂತಲ್ಲೇ ಸಂಗಾತಿ ಬಗ್ಗೆ ಚಿಂತಿಸುವ ಈ ರಾಶಿಯವರು Life partner ಆದ್ರೆ ಲೈಫ್‌ ಸೂಪರ್!

undefined

2. ಕಾರ್ಯಕ್ಷಮತೆ ಮತ್ತು ದಕ್ಷತೆಗೆ ಶನಿಮಹಾತ್ಮೆ
ಜಾತಕದಲ್ಲಿ ಶನಿಯ ವಾಸ್ತವ್ಯ ಹೇಗಿರುತ್ತದೆ ಎಂಬುದರ ಮೇಲೆ ನಿಮ್ಮ ವೃತ್ತಿ ಭವಿಷ್ಯ ನಿಂತಿರುತ್ತದೆ. ಒಂದು ವೇಳೆ ನಿಮ್ಮ ಗ್ರಹಚಾರ ಕೆಟ್ಟು ಶನಿಯು 10ನೇ ಮನೆಯಲ್ಲಿ ಕುಳಿತಿದ್ದಾನೆಂದಾದರೆ ನಿಮ್ಮ ವೃತ್ತಿಯಲ್ಲಿ ವಿಪರೀತ ಒತ್ತಡ ಹಾಗೂ ಹೆಚ್ಚುವರಿ ಕೆಲಸಗಳು ಬರುವ ಸಾಧ್ಯತೆ ಇರುತ್ತದೆ. ಉತ್ತಮ ಯೋಗ್ಯತೆ ಇದ್ದರೂ ಕೆಲಸ ಮಾಡಲು ಮನಸ್ಸು ಒಪ್ಪದಿರುವ ಪರಿಸ್ಥಿತಿ ನಿಮ್ಮದಾಗಿರುತ್ತದೆ. ಜತೆಗೆ ಸೋಮಾರಿತನವೂ ಸಾಥ್ ಕೊಟ್ಟು ಜವಾಬ್ದಾರಿಯಿಂದ ನುಣುಚಿಕೊಳ್ಳಲೇ ಪ್ರಯತ್ನವನ್ನು ಮಾಡುವ ಹಾಗೆ ಮಾಡಿಸುತ್ತದೆ. ಇದನ್ನು ಹೊರತುಪಡಿಸಿ ಶನಿ ಬಲವಾಗಿದ್ದರೆ ದಕ್ಷತೆ ಹೆಚ್ಚುತ್ತದೆ.
 
3. ಕಾರ್ಯನಿಷ್ಠೆಗೆ ಸೂರ್ಯ-ಶನಿ ಜುಗಲ್ಬಂದಿ
ಜಾತಕದ ಪ್ರಕಾರ ವ್ಯಕ್ತಿಯ ಕಾರ್ಯನಿಷ್ಠೆಯನ್ನು ಗಮನಿಸಬೇಕೆಂದರೆ 10ನೇ ಮನೆಯ ಜೊತೆ ಶನಿ ಸಂಬಂಧ ಹೇಗಿದೆ ಎಂಬುದು ಬಹಳ ಮುಖ್ಯವಾಗಿ ಪರಿಗಣಿಸುತ್ತದೆ. ಕೆಲಸದಲ್ಲಿ ಶಿಸ್ತು ಅಳವಡಿಕೆ ಬಗ್ಗೆ ತಿಳಿದುಕೊಳ್ಳಬೇಕಾದರೆ ಇಲ್ಲಿ ಸೂರ್ಯನ ಪಾತ್ರ ಏನು ಎಂಬುದು ಗಣನೆಗೆ ಬರುತ್ತದೆ. ಸೂರ್ಯ ಮತ್ತು ಶನಿಯ ಸ್ಥಿತಿ ಉತ್ತಮವಾಗಿದ್ದರೆ ಅಂಥವರು ಶಿಸ್ತಿನ ಸಿಪಾಯಿಗಳಾಗಿರುತ್ತಾರೆ. ಇನ್ನೊಂದು ಮುಖ್ಯ ವಿಷಯವೆಂದರೆ ಇಲ್ಲಿ ಶನಿ ಪ್ರಬಲವಾಗಿದ್ದರೆ ಸಮಯಕ್ಕೆ ಸರಿಯಾಗಿ ಕೆಲಸ ಮುಗಿದುಹೋಗುತ್ತದೆ.

4. ಸ್ನೇಹ-ಸಹಯೋಗಪೂರ್ಣಕ್ಕೆ ಚಂದ್ರ-ಶುಕ್ರನಾಟ
ಹಲವಾರು ಬಾರಿ ಯೋಗ್ಯತೆ ಮತ್ತು ದಕ್ಷತೆ ಉತ್ತಮವಾಗಿದ್ದರೂ ಜನರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ, ಜಾತಕದಲ್ಲಿ ಚಂದ್ರ ಮತ್ತು ಶುಕ್ರವು ಶುಭ ಸ್ಥಾನದಲ್ಲಿದ್ದರೆ ವೃತ್ತಿಯಲ್ಲಿ ಎಲ್ಲವೂ ಶುಭವಾಗುತ್ತಾ ಹೋಗುವುದಲ್ಲದೆ, ಕಡಿಮೆ ಯೋಗ್ಯತೆ ಇದ್ದರೂ ಮಾಡಿದ ಕೆಲಸಗಳಲ್ಲೆಲ್ಲವೂ ಯಶಸ್ಸನ್ನು ಕಾಣಬಹುದಾಗಿದೆ. ಜತೆಗೆ ಸ್ನೇಹ ಮನೋಭಾವನೆಯಿಂದ ಎಲ್ಲರ ಮನಸ್ಸನ್ನೂ ಗೆಲ್ಲಬಹುದಾಗಿದೆ. ಚಂದ್ರನ ಮೇಲೆ ಯಾವುದಾದರೂ ರಾಶಿಯ ಅಶುಭ ಪ್ರಭಾವವಾದರೆ ವ್ಯಕ್ತಿಯಲ್ಲಿ ಈ ಎಲ್ಲ ಉತ್ತಮ ಗುಣಗಳು ಕ್ಷೀಣಿಸುವ ಸಂಭವ ಇರುತ್ತದೆ. 

9 ನಿಮಿಷ ದೀಪ ಬೆಳಗಿಸುವ ಮಹತ್ವ ತಿಳಿಸಿದ ಸೋಮಾಯಾಜಿ

5. ಯಾಂತ್ರಿಕ ಕೌಶಲ್ಯಕ್ಕೆ ಮಂಗಳ-ಶನಿ ಪ್ರಭಾವ
ಈಗಿನ ಮುಂದುವರಿದ ಜಗತ್ತಿನಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆದಿದೆ. ಆದರೆ, ಇದು ಎಲ್ಲರಿಗೂ ಒಮ್ಮೆಗೆ ತಲೆಗೆ ಹೋಗುವುದಿಲ್ಲ. ಇದು ಯಾಕೆ ಎಂದು ಗಮನಿಸಲು ಮುಂದಾದರೆ ಜಾತಕದಲ್ಲಿ ಮಂಗಳ ಹಾಗೂ ಶನಿಯ ಪರಸ್ಪರ ಸ್ಥಾನವನ್ನು ನೋಡಬೇಕಾಗುತ್ತದೆ. ಕೇತುವನ್ನು ಮಂಗಳಕ್ಕೆ ಸಮನೆಂದು ಹೇಳಲಾಗುತ್ತದೆ. ಹೀಗಾಗಿ ಮಂಗಳ-ಕೇತು-ಶನಿ  ಗ್ರಹಗಳಲ್ಲಿ ಯಾವುದಾದರೂ ಎರಡು ಗ್ರಹಗಳ ಸಂಬಂಧ ಉತ್ತಮವಾಗಿದ್ದರೆ ತಂತ್ರಜ್ಞಾನದ ಜ್ಞಾನ ಚೆನ್ನಾಗಿರುವ ಸಾಧ್ಯತೆ ದಟ್ಟವಾಗಿರುತ್ತದೆ. 

6. ಸಂವಹನ ಕೌಶಲ್ಯಕ್ಕೆ ಬುಧ
ಜನ್ಮಕುಂಡಲಿಯಲ್ಲಿ ಬುಧ ಸುಸ್ಥಿರವಾಗಿದ್ದರೆ, ಅಂಥ ವ್ಯಕ್ತಿಯು ವ್ಯವಹಾರ/ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು ಕಾಣಬಹುದಾಗಿದೆ. ಇದಲ್ಲದೆ ಬೇರೆ ಮನೆಯ ಜತೆ ಬುಧನ ಸಂಬಂಧ ಉತ್ತಮವಾಗಿದ್ದರೆ ಅಂಥವರ ವಾಕ್ಚಾತುರ್ಯವೂ ಚೆನ್ನಾಗಿರುತ್ತದೆ. ಇದಕ್ಕೆ ಸಂಬಂಧಪಟ್ಟ ಎಲ್ಲ ಕ್ಷೇತ್ರಗಳಲ್ಲು ಯಶಸ್ಸು ಕಟ್ಟಿಟ್ಟಬುತ್ತಿ. 

ನೋಡ್ರಪ್ಪಾ, ಯಾವ ರಾಶಿಯವರು ಹೇಗೆ ಹಣ ಕೂಡಿಡುತ್ತಾರೆಂದು?...

click me!