ಮನೆಗೆ ಅಂದವೆಂದು ಚೆಂದದ ಫೋಟೋ ಹಾಕೋ ಮುನ್ನ...

Published : Jul 04, 2019, 02:22 PM IST
ಮನೆಗೆ ಅಂದವೆಂದು ಚೆಂದದ ಫೋಟೋ ಹಾಕೋ ಮುನ್ನ...

ಸಾರಾಂಶ

ಮನೆಯಲ್ಲಿ ನೇತು ಹಾಕುವಂಥ ಫೋಟೋ ಮನೆ ಮಂದಿ ಮೇಲೆ ನಕಾರಾತ್ಮಕ ಅಥವಾ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾದರೆ ಮನೆಯಲ್ಲಿ ಯಾವ ಫೋಟೋ ಇಡಬೇಕು? 

ವಾಸ್ತು ಪ್ರಕಾರ ಫೋಟೋಗಳಲ್ಲಿ ಇರುವಂತಹ ಜೀವಿ, ವಸ್ತು ಮತ್ತು ಅದರಲ್ಲಿರುವ ಭಾವನೆ ಮನೆಯಲ್ಲಿರುವವರ ಮೇಲೆ ಗಾಢ ಪ್ರಭಾವ ಬೀರುತ್ತದೆ. ಶೃಂಗಾರ, ಹಾಸ್ಯ ಮತ್ತು ಶಾಂತ ಭಾವವನ್ನು ಹೊರ ಸೂಸುವಂಥ ಫೋಟೋ ಹಾಕಿದರೆ ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಹಾಗಾದರೆ ಎಂಥ ಫೋಟೋವನ್ನು ಮನೆಯಲ್ಲಿ ಹಾಕಬೇಕು ನೋಡೋಣ.. 

- ಪೂರ್ವ ದಿಕ್ಕಿನಲ್ಲಿ ಸೂರ್ಯೋದಯ ಆಗುವುದರಿಂದ ಆ ದಿಕ್ಕಿನಲ್ಲಿ ಶ್ರೀರಾಮನ  ದರ್ಬಾರ್ ನಡೆಯೋ ಚಿತ್ರ ಪಟ ಹಾಕಿದರೆ ಸಕಾರಾತ್ಮಕ ಶಕ್ತಿ ಆವರಿಸುತ್ತದೆ.  ಇದು ಆರೋಗ್ಯವನ್ನು ವೃದ್ಧಿಸುತ್ತದೆ.

- ಹೂವು, ಹಣ್ಣು, ಹಸಿರು ಮರ ಗಿಡಗಳು ಜೀವನ ಶಕ್ತಿಗೆ ಪ್ರೇರಕ. ಈ ಫೋಟೋಗಳನ್ನು ಮನೆಯಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿನ ಗೋಡೆಯಲ್ಲಿ ನೇತು ಹಾಕುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ. 

ನಲ್ಲೀಲಿ ಹನಿ ನೀರು, ಪರಿಸರಕ್ಕೂ ಹಾನಿ, ಮನೆಗೂ ಅಶುಭ

- ಉತ್ತರ ದಿಕ್ಕನ್ನು ಕುಬೇರ ದಿಕ್ಕೆನ್ನುನ್ನುತ್ತಾರೆ. ಧನ ವೃದ್ಧಿಗಾಗಿ ಈ ದಿಕ್ಕಿನಲ್ಲಿ ಧನ ದೇವತೆ ಲಕ್ಷ್ಮಿ ಮತ್ತು ಬುದ್ಧಿ ದೇವರಾದ ಗಣೇಶನ ಫೋಟೋ ಹಾಕಿ. ಈ ಫೋಟೋದಲ್ಲಿ ಚಿನ್ನ, ಸಂಪತ್ತು ಹೆಚ್ಚಿರಲಿ. 

- ಸುಂದರ ಪ್ರಕೃತಿ ಲ್ಯಾಂಡ್ ಸ್ಕೇಪ್ ಫೋಟೋವನ್ನು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಗೋಡೆಗೆ ನೇತು ಹಾಕಿ. ಇದರಿಂದ ಮನೋಶಕ್ತಿ ಹೆಚ್ಚುತ್ತದೆ. ಈ ಪೇಂಟಿಂಗನ್ನು ಪೂರ್ವ ದಿಕ್ಕಿನಲ್ಲಿ ಹಾಕಿದರೆ  ಸಂಪತ್ತು ವೃದ್ಧಿಸುತ್ತದೆ. 

- ಸಂಪತ್ತು ಸಮೃದ್ಧಿಯಾಗಲು ಸಮುದ್ರ, ನದಿ, ಸರೋವರ ಮುಂತಾದ ದೃಶ್ಯಗಳನ್ನು ಉತ್ತರ ಅಥವಾ ಪಶ್ಚಿಮ ಗೋಡೆ ಮೇಲೆ ಹಾಕಿ. 

- ಮನಸ್ಸಿನ ಶಾಂತಿ ಬೇಕಾದರೆ ಭಗವಾನ್ ಬುದ್ಧ ಮತ್ತು ಮಹಾವೀರರ ಫೋಟೋವನ್ನು ದಕ್ಷಿಣದಲ್ಲಿ ನೇತು ಹಾಕಿ. ಆ ಫೋಟೋ ಪದೆ ಪದೇ ಕಣ್ಣಿಗೆ ಬಿದ್ದರೊಳಿತು. 

- ಪರಿವಾರದ ಸದಸ್ಯ ಫೋಟೋ ಮನೆಯ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಹಾಕಿದರೆ ಮನೆಯ ಸದಸ್ಯರ ನಡುವಿನ ಮನಸ್ತಾಪ ದೂರವಾಗುತ್ತದೆ. 

- ಮಕ್ಕಳ ಅಧ್ಯಯನ ಕೋಣೆಯಲ್ಲಿ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ವಿದ್ಯಾ ದೇವಿ ಸರಸ್ವತಿ ಚಿತ್ರವಿದ್ದರೆ ಮಕ್ಕಳಲ್ಲಿ ಓದುವ ಏಕಾಗ್ರತೆ ಹೆಚ್ಚುತ್ತದೆ. ಅಲ್ಲದೇ ನವಿಲು, ವೀಣೆ, ಪೆನ್, ಪುಸ್ತಕ, ಹಂಸದ ಚಿತ್ರವನ್ನೂ  ಹಾಕಬಹುದು. 

ಧನ ಲಾಭ ತರೋ ಫೆಂಗ್ ಶ್ಯೂ ಗಿಡಗಳಿವು...

- ಉತ್ತರದಲ್ಲಿ ಜಂಪಿಂಗ್ ಡಾಲ್ಫಿನ್ ಅಥವಾ ಮೀನಿಗೆ ಸಂಬಂಧಿಸಿದ ಫೋಟೋ ಹಾಕಿದರೆ ಕರಿಯರ್‌ನಲ್ಲಿ ಸಫಲತೆ ಪ್ರಾಪ್ತಿಯಾಗುತ್ತದೆ. 

- ವೈವಾಹಿಕ ಸಂಬಂಧ ಮಧುರವಾಗಿರಲು ಉತ್ತರದಲ್ಲಿ ನವಿಲು ಅಥವಾ ರಾಧಾ -ಕೃಷ್ಣಾ ಜೋಡಿಯಾಗಿರುವುದು ಅಥವಾ ಆಲಿಂಗನ ಮಾಡಿರುವ ಫೋಟೋ ಹಾಕಬೇಕು. 

PREV
click me!

Recommended Stories

ಆಫೀಸ್ ಹೋಗುವ ಟೈಮಲ್ಲಿ, ರಸ್ತೆಯಲ್ಲಿ ಇದನ್ನ ನೋಡಿದ್ರೆ ಪ್ರಮೋಷನ್ ಗ್ಯಾರಂಟಿ
ವೈಭವದ ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ದಿನಗಣನೆ, ಈ ಬಾರಿ ವಿಶೇಷ ಆಕರ್ಷಣೆಯಾಗಿ ಗದ್ದುಗೆ ಮಂಟಪ