ಅಂದುಕೊಂಡ ಕಾರ್ಯ ಸಿದ್ಧಿ : ಶುಭ ಫಲ

Published : Jul 04, 2019, 07:19 AM IST
ಅಂದುಕೊಂಡ ಕಾರ್ಯ ಸಿದ್ಧಿ : ಶುಭ ಫಲ

ಸಾರಾಂಶ

ಇಂದು ಯಾವ ರಾಶಿಗೆ ಯಾವ ಹೇಗಿದೆ ಇಂದಿನ ಭವಿಷ್ಯ 

ಅಂದುಕೊಂಡ ಕಾರ್ಯ ಸಿದ್ಧಿ : ಶುಭ ಫಲ

ಮೇಷ
ನಡೆಯಬೇಕಾದ ದಾರಿ ಕಠಿಣ ಎಂದು ಸುಮ್ಮನೆ
ಕೂರುವುದು ಬೇಡ. ತಾರತಮ್ಯ ಎಣಿಸು
ವುದು ಬೇಡ. ಕಾರ್ಯ ಸಿದ್ಧಿಯಾಗಲಿದೆ.

ವೃಷಭ
ವಿದ್ಯಾರ್ಥಿಗಳ ಪಾಲಿಗೆ ಇದು ಶುಭ ದಿನ.
ನಿನ್ನೆಯ ಆತಂಕಗಳೆಲ್ಲಾ ದೂರಾಗಲಿವೆ.
ಆತುರಕ್ಕೆ ಬಿದ್ದು ನಿರ್ಧಾರ ಮಾಡದಿರಿ.

ಮಿಥುನ
ಇಡೀ ದಿನ ಆತ್ಮೀಯರೊಂದಿಗೆ ಕಳೆಯ
ಲಿದ್ದೀರಿ. ನಿಮ್ಮ ಸ್ವಭಾವಕ್ಕೆ ಹೊಂದುವ ಹೊಸ
ಸ್ನೇಹಿತರು ದೊರೆಯಲಿದ್ದಾರೆ. ಶುಭಫಲ.

ಕಟಕ
ಹೊಸ ವಿಚಾರಗಳ ಬಗ್ಗೆ ಚಿಂತನೆ ಮಾಡಲಿ
ದ್ದೀರಿ. ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ
ದೊರೆಯಲಿದೆ. ಆರೋಗ್ಯದಲ್ಲಿ ವೃದ್ಧಿ.

ಸಿಂಹ
ದೂರದ ಪ್ರಯಾಣ ಸದ್ಯಕ್ಕೆ ಬೇಡ. ಮಿತ
ವ್ಯಯಕ್ಕೆ ಆದ್ಯತೆ ನೀಡುವಿರಿ. ನಿಮ್ಮ ಶಕ್ತಿಗೆ
ತಕ್ಕಂತಹ ಅವಕಾಶಗಳು ಬರಲಿವೆ.

ಕನ್ಯಾ
ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದೀತು.
ತಂದೆಯ ಪ್ರೋತ್ಸಾಹದ ಫಲವಾಗಿ ಹೊಸ
ಕಾರ್ಯ ಕೈಗೂಡುತ್ತದೆ. ಲಾಭದಲ್ಲಿ ಹೆಚ್ಚಳ.

ತುಲಾ 
ಕಂಡದ್ದನ್ನು ಕಂಡ ಹಾಗೆ ಹೇಳುವಿರಿ. ಹೊಸ
ಕೆಲಸ ಕಾರ್ಯಗಳಲ್ಲಿ ದಿನವಿಡೀ ತೊಡಗಿಸಿ
ಕೊಳ್ಳಲಿದ್ದೀರಿ. ಅಧಿಕಾರದ ಆಸೆ ಬೇಡ

ವೃಶ್ಚಿಕ
ಗೆಲ್ಲುತ್ತೇನೆ ಎಂದು ಹೊರಟಾಗ ಸೋಲು
ವುದಕ್ಕೂ ಸಿದ್ಧವಿರಬೇಕು. ಅನಗತ್ಯವಾದ
ವಿಚಾರಗಳ ಬಗ್ಗೆ ಹೆಚ್ಚು ಚಿಂತೆ ಮಾಡದಿರಿ. 

ಧನುಸ್ಸು
ದಿನದ ಆರಂಭದಲ್ಲಿಯೇ ಶುಭ ಸುದ್ದಿ
ಕೇಳಲಿದ್ದೀರಿ. ಸಾಧ್ಯವಾದರೆ ಸಂತೋಷ ಹಂಚಿ.
ದುಃಖವನ್ನಲ್ಲ. ಗೆಲುವಿಗೆ ಶ್ರಮ ಬೇಕು.

ಮಕರ
ತಂದೆಯ ನಿರೀಕ್ಷೆಯಂತೆ ಕೆಲಸ ಮಾಡಲಿದ್ದೀರಿ.
ಬಂಧುಗಳೊಂದಿಗೆ ಸಣ್ಣ ಮನಸ್ತಾಪ ಉಂಟಾ
ಗಲಿದೆ. ವಾಹನ ಚಾಲನೆ ವೇಳೆ ಎಚ್ಚರವಿರಲಿ.

ಕುಂಭ
ನೀವು ಮಾಡಿದ ಯಡವಟ್ಟಿನಿಂದ ಮನೆ
ಯವರು ಇಡೀ ದಿನ ಪರಿತಪಿಸಬೇಕಾದೀತು.
ನಿಮ್ಮ ಮಾತುಗಳೇ ನಿಮಗೆ ವರವಾಗಲಿವೆ.

ಮೀನ 
ನೀವು ವಾಸ ಮಾಡುವ ಸ್ಥಳವನ್ನು ಸ್ವಚ್ಛವಾಗಿ
ಇಟ್ಟುಕೊಳ್ಳಿ. ಸಣ್ಣ ವ್ಯಾಪಾರಿಗಳಿಗೆ ಇದು ಶುಭ
ದಿನ. ಅಂದುಕೊಂಡ ಕಾರ್ಯ ಆಗಲಿದೆ.

PREV
click me!

Recommended Stories

ಆಫೀಸ್ ಹೋಗುವ ಟೈಮಲ್ಲಿ, ರಸ್ತೆಯಲ್ಲಿ ಇದನ್ನ ನೋಡಿದ್ರೆ ಪ್ರಮೋಷನ್ ಗ್ಯಾರಂಟಿ
ವೈಭವದ ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ದಿನಗಣನೆ, ಈ ಬಾರಿ ವಿಶೇಷ ಆಕರ್ಷಣೆಯಾಗಿ ಗದ್ದುಗೆ ಮಂಟಪ