ವಾಸ್ತು ಶಾಸ್ತ್ರದ ಅನುಸಾರ ಮನೆಯ ಒಳಗೆ ಸೂರ್ಯನ ಕಿರಣಗಳು ಬರಬೇಕು. ಮನೆಯೊಳಗಿನ ಎಲ್ಲಾ ಭಾಗಗಳಿಗೂ ಸೂರ್ಯನ ಬೆಳಕು ಬೀಳುತ್ತಿದ್ದರೆ ಅಲ್ಲಿನ ದೋಷಗಳು ನಿವಾರಣೆಯಾಗುತ್ತವೆ. ಇನ್ನೇನು ಸಮಸ್ಯೆ ನಿವಾರಣೆಯಾಗುತ್ತೆ ನೋಡೋಣ...
ಸಂಪೂರ್ಣ ಬ್ರಹ್ಮಾಂಡದ ಆಧಾರ ಎಂದರೆ ಸೂರ್ಯ. ಸೂರ್ಯ ಶಕ್ತಿ ಮತ್ತು ರಚನಾತ್ಮಕವಾದ ಗ್ರಹ. ಸೂರ್ಯನ ಶಕ್ತಿಯಿಂದಾಗಿಯೇ ಈ ಭೂಮಿಯ ಮೇಲೆ ಜೀವಗಳು ಇರಲು ಸಾಧ್ಯ. ಪಂಚತತ್ವಗಳಲ್ಲಿ ಒಂದಾಗಿರುವ ಸೂರ್ಯನಿಗೆ ವಾಸ್ತು ಶಾಸ್ತ್ರದಲ್ಲಿ ಹೆಚ್ಚಿನ ಮಹತ್ವವಿದೆ. ಸೂರ್ಯದೇವನನ್ನು ಅಗ್ನಿಯ ಸ್ವರೂಪ ಎಂದು ಹೇಳಲಾಗುತ್ತದೆ.
ವಾಸ್ತುವಿನ ಸೂರ್ಯ ಯಾಕೆ ಬಹಳ ಪ್ರಾಮುಖ್ಯತೆ ಪಡೆದಿದ್ದಾನೆ ಇಲ್ಲಿದೆ ಮಾಹಿತಿ...
undefined
- ಕತ್ತಲೆ ಕೋಣೆಯಲ್ಲಿ ಅಥವಾ ಸೂರ್ಯನ ಬೆಳಕು ಬಾರದಿರುವ ಕೋಣೆಯಲ್ಲಿ ಕೀಟಗಳು ಅಧಿಕವಾಗಿ ಮನೆ ಮಾಡಿರುತ್ತವೆ. ಇದರಿಂದ ಆ ಮನೆಯಲ್ಲಿ ವಾಸವಾಗಿರುವ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
- ಸೂರ್ಯನ ಬೆಳಕು ಮನೆಯೊಳಗೇ ಬಿದ್ದರೆ ಇದರಿಂದ ಮನೆಯ ಜನರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.
- ಮನೆಯ ಯಾವ ಕೋಣೆಯೊಳಗೆ ಬೆಳಕು ಹರಿಯುತ್ತದೆ. ಅಲ್ಲಿ ಶಕ್ತಿಯೂ ಹೆಚ್ಚುತ್ತದೆ. ಸೂರ್ಯನ ಬೆಳಕಿನಿಂದಾಗಿ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ.
- ಬೆಳಕಿರದೇ ಇದ್ದರೆ ಅಲ್ಲಿನ ಜನರ ಅರೋಗ್ಯ ಸರಿಯಾಗಿರುವುದಿಲ್ಲ.
ಮನೆಯಲ್ಲಿರುವ ಈ ವಸ್ತುಗಳನ್ನು ಕೂಡಲೇ ಸ್ವಚ್ಛಗೊಳಿಸಿ!
- ಬೆಳಕು ಮನೆಯೊಳಗೇ ಬರದೇ ಇದ್ದರೆ ಜನರ ಜೀವನ ಶಕ್ತಿ ಕಡಿಮೆಯಾಗುತ್ತದೆ.
- ಅಡುಗೆ ಮನೆ ಮತ್ತು ಸ್ನಾನದ ಮನೆಯಲ್ಲಿ ಸೂರ್ಯನ ಬೆಳಕು ಅತ್ಯಗತ್ಯ.
- ಮನೆಯೊಳಗೇ ಸೂರ್ಯನ ಕಿರಣ ಹೆಚ್ಚಾಗಿ ಬಾರದೆ ಇದ್ದರೆ ಆ ಜಾಗದಲ್ಲಿ ಕೃತಕ ಬೆಳಕು ಹರಿಸಬೇಕು.
- ಮಲಗುವ ಕೋಣೆಯಲ್ಲಿ ಡಿಮ್ ಲೈಟ್ ಯಾವಾಗಲೂ ಇರಲೇಬೇಕು. ಈ ಕೊನೆಯಲ್ಲಿ ಹೆಚ್ಚು ಪ್ರಕಾಶಮಾನವಾದ ಬೆಳಕು ಬಿದ್ದರೆ ಆರಾಮವಾಗಿರಲು ಸಾಧ್ಯವಿಲ್ಲ. ಅಲ್ಲದೆ ನಿದ್ರೆ ಮೇಲೆ ಪ್ರಭಾವ ಬೀರುತ್ತದೆ.
ಕಳ್ಳತನ ತಡೆಯಲು ಇಲ್ಲಿವೆ ವಾಸ್ತು ಟಿಪ್ಸ್....
- ಓದುವ ಮತ್ತು ಮಲಗುವ ಕೋಣೆಯಲ್ಲಿ ಸೂರ್ಯನ ಬೆಳಕು ನೇರವಾಗಿ ಮುಖದ ಮೇಲೆ ಬೀಳದಂತೆ ನೋಡಿಕೊಳ್ಳಿ. ಹೆಚ್ಚು ಬೆಳಕು ಮುಖದ ಮೈಮೇಲೆ ಬಿದ್ದರೆ ಸರಿಯಾಗಿ ಓದಲು ಸಾಧ್ಯವಾಗೋದಿಲ್ಲ.