ಗೃಹ ಸೌಖ್ಯಕ್ಕೆ ಇಲ್ಲಿವೆ ವಾಸ್ತು ಟಿಪ್ಸ್....

By Web DeskFirst Published Dec 5, 2018, 1:25 PM IST
Highlights

ಮನಸ್ಸಿಗೆ ನೆಮ್ಮದಿ ನೀಡೋ ಮನೆ ಸಂಜೀವಿನಿಯಂತೆ ಬದುಕನ್ನು ಬಲಗೊಳಿಸುತ್ತಿದೆ. ಮುದುಡಿದ ಮನಸ್ಸಿಗೆ, ದೇಹಕ್ಕೆ ವಿಶ್ರಾಂತಿ ಸಿಗುವಂತೆ ಮಾಡಿ, ಉಲ್ಲಾಸ ಹೆಚ್ಚಿಸುತ್ತದೆ. ಇಂಥ ಮನೆಯಲ್ಲಿರುವವರ ನೆಮ್ಮದಿಗೆ ಇಲ್ಲಿವೆ ವಾಸ್ತು ಟಿಪ್ಸ್....

ಎಲ್ಲವೂ ಸರಿ ಇದೆ ಎನಿಸುತ್ತದೆ. ಆದರೂ ಏನೋ ಕಿರಿಕಿರಿ. ಸುಖಾ ಸುಮ್ಮನೆ ಹೆಚ್ಚೋ ಒತ್ತಡ. ಹೀಗೆ ಮನೆಯಲ್ಲಿಡುವ ಕೆಲವು ವಸ್ತುಗಳಿಂದಲೂ ಏನೇನೋ ಸಮಸ್ಯೆಗಳು ಸೃಷ್ಟಿಯಾಗುತ್ತೆ. ಅದಕ್ಕೆ ಕೆಲವು ವಸ್ತುಗಳನ್ನು ಇಡೋ ಸ್ಥಳದಲ್ಲಿಯೇ ಇಡಬೇಕು. ವಾಸ್ತುವೆಂದರೆ ಸ್ವಚ್ಛತೆಯೂ ಹೌದು. ಒಂದಕ್ಕೊಂದು ಸಂಬಂಧವಿರೋ ಈ ಅಂಶಗಳನ್ನು ತಪ್ಪದೇ ಪಾಲಿಸಬೇಕು. ಮನೆಯ ನೆಮ್ಮದಿಯಾಗಿ ಇಲ್ಲಿವೆ ಸಿಂಪಲ್ ವಾಸ್ತು ಟಿಪ್ಸ್..

ಇಲ್ಲಿವೆ ವಾಸ್ತು ಟಿಪ್ಸ್

- ಮನೆ ಮಧ್ಯ ಭಾಗದಲ್ಲಿ ಹಳದಿ ಬಣ್ಣದ ಹಾಸು ಹಾಸಿರಬೇಕು. ಹೊರ ಭಾಗದ ಮೇಲೆ ಆಗಸದ ನೀಲಿ ಬಳಸುವುದರಿಂದ ಗುರು ಮತ್ತು ಶನಿ ಗ್ರಹಗಳ ದೃಷ್ಟಿ ಮನೆ ಮೇಲೆ ಬೀಳುವಂತಾಗುತ್ತದೆ. 
- ಮನೆ ಮಧ್ಯ ಭಾಗ ಸದಾ ಖಾಲಿಯಾಗಿರಬೇಕು. ಅಲ್ಲಿ ಗೋಡೆ, ಕಪಾಟು, ಮಂಚ ಏನೂ ಇರಬಾರದು.
-  ಬ್ರಹ್ಮ ಸ್ಥಾನವಾಗಿರುವ ಮನೆ ಮಧ್ಯ ಭಾಗಕ್ಕೆ ಚಂದ್ರನ ಬೆಂಬಲ ದೊರೆತರೆ ಗೃಹ ಸೌಖ್ಯಕ್ಕೆ ಕಾರಣವಾಗುತ್ತದೆ. 
- ಚಂದ್ರನೇ ಮನೆಯ ಮಧ್ಯ ಭಾಗಕ್ಕೆ ಅಧಿಪತಿ. ಅದಕ್ಕೆ ಪೂರ್ವಾದಿ ಅಷ್ಟ ದಿಕ್ಕುಗಳ ಬಗ್ಗೆ ಹೇಗೆ ಜಾಗ್ರತೆ ವಹಿಸುತ್ತಿರುತ್ತೇವೆಯೋ ಹಾಗೆ ನಡು ಮನೆಯೆಡೆಗೂ ಗಮನಿಸಬೇಕು. 
- ಮನೆಯ ಬಾಗಿಲ ಮುಂದೆ ಹಿಡಿ ಹಾಗ ಚಪ್ಪಲಿಯಂಥ ದುಷ್ಟ ಶಕ್ತಿಗಳನ್ನು ತರಿಸುವ ವಸ್ತುಗಳನ್ನು ಇಡಬಾರದು. 
- ಅಡುಗೆ ಮನೆ, ಜಗುಲಿಯಲ್ಲಿ ಪೊರಕೆ ಕಾಣುವಂತೆ ಇಟ್ಟರೆ ತಿನ್ನೋ ಆಹಾರಕ್ಕೆ ಅಭಾವ ಸೃಷ್ಟಿಯಾಗುತ್ತದೆ. 
- ಮನೆ ಹೊರಗೆ ಪೊರಕೆ ಕಾಣುವಂತಿದ್ದರೆ ನೆಗಟಿವ್ ಎನರ್ಜಿ ಹೆಚ್ಚುತ್ತದೆ. 
- ಸೂಕ್ತ ಜಾಗದಲ್ಲಿ ನೀಟಾಗಿಯೇ ಪೊರಕೆಯನ್ನು ಇಡಬೇಕು. ಅದು ಅಸ್ತವ್ಯಸ್ತವಾಗಿರಬಾರದು. ಯಾರಿಗೂ ಕಾಣದಂತಿಡಬೇಕು. 

ವಾಸ್ತು ದೋಷಕ್ಕೆ ನವಿಲು ಗರಿ ಪರಿಹಾರ

click me!