ಆಫೀಸ್‌ನಲ್ಲಿ ವಾಸ್ತು ಹೀಗಿದ್ದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ!

By Web DeskFirst Published Jun 11, 2019, 11:34 AM IST
Highlights

ವಾಸ್ತು ಶಾಸ್ತ್ರದ ಅನುಸಾರ ಆಫೀಸಿನಲ್ಲಿ ದೋಷವಿದ್ದರೆ ಅದರ ನೇರ ಪರಿಣಾಮ ಕೆಲಸಗಾರರ ಮೇಲೆಯೇ ಬೀರುತ್ತದೆ. ಅವರ ಮಾನಸಿಕ ಸ್ಥಿತಿ ಹಾಗೂ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. 

ಆಫೀಸ್‌ಗೂ ವಾಸ್ತು ತುಂಬಾ ಮುಖ್ಯ. ಆಫೀಸಿನಲ್ಲಿ ವಾಸ್ತು ದೋಷವಿದ್ದರೆ ಅದರಿಂದ ಉದ್ಯೋಗಿಗಳ ಮೇಲೆ, ಕಚೇರಿಗೆ ಆರ್ಥಿಕ ಹೊಡೆತ ಗ್ಯಾರಂಟಿ. ಕಚೇರಿ ವಾಸ್ತು ದೋಷ ನಿವಾರಿಸಲು ಇಲ್ಲಿವೆ ಸಿಂಪಲ್ ಟಿಪ್ಸ್...

- ಕಚೇರಿಯಲ್ಲಿ ಬಾಸ್ ಕ್ಯಾಬಿನ್ ಎದುರಲ್ಲಿ ಇರಬಾರದು. ಆಫೀಸಿನ ಪ್ರವೇಶ ದ್ವಾರದ ಬಳಿ ಯಾವುದಾದರೂ ಸಹಾಯಕರ ಕೊಠಡಿ ಇರಲಿ. 

- ಆಫೀಸಿನಲ್ಲಿ ಹಸಿರು ಅಥವಾ ಡಾರ್ಕ್ ಬಣ್ಣದ ಪೇಂಟ್ ಬಳಿಯಬೇಡಿ. ಬಿಳಿ, ಕ್ರೀಮ್, ಹಳದಿ ಬಣ್ಣವಿದ್ದರೆ ಓಕೆ. 

ಪಾಸಿಟವ್ ಶಕ್ತಿ ಹೆಚ್ಚಿಸೋ ಉಡುಗೊರೆಗಳಿವು...

- ಆಫೀಸಿನಲ್ಲಿ ನೀರಿನ ವ್ಯವಸ್ಥೆ ಈಶಾನ್ಯ ದಿಕ್ಕಿನಲ್ಲಿ ಇರಬೇಕು. ಈಶಾನ್ಯ ದಿಕ್ಕಿನಲ್ಲಿ ನೀರು ನೆಲಕ್ಕೆ ತಾಗಿಕೊಂಡಿದ್ದರೆ ಶುಭ. ಕಚೇರಿ ಮೇಲೆ ನೀರಿನ ವ್ಯವಸ್ಥೆ ಮಾಡಿದರೆ ಅದನ್ನು ಯಾವ ದಿಕ್ಕಿನಲ್ಲೂ ಬೇಕಾದರೂಇಡಬಹುದು. 

- ಕುಬೇರನ ವಾಸ ಉತ್ತರ ದಿಕ್ಕು. ಆದುದರಿಂದ ಸಾಧ್ಯವಾದಷ್ಟು ಕ್ಯಾಶಿಯರ್ ಉತ್ತರ ದಿಕ್ಕಿನಲ್ಲಿಯೇ ಇದ್ದರೆ ಒಳಿತು.

ಬೇಗ ಉದ್ಯೋಗ ದಕ್ಕಿಸಿಕೊಳ್ಳಲು ವಾಸ್ತು ಟಿಪ್ಸ್... 

- ಕಂಪ್ಯೂಟರ್, ಕಂಟ್ರೋಲ್ ಪ್ಯಾನೆಲ್, ವಿದ್ಯುತ್ ಉಪಕರಣವನ್ನು ಕಾರ್ಯಾಲಯದ ಆಗ್ನೇಯ ದಿಕ್ಕಿನಲ್ಲಿಡಿ. 

- ಆಫೀಸಿನಲ್ಲಿ ವೇಟಿಂಗ್ ರೂಮಿದ್ದರೆ ವಾಯುವ್ಯ ದಿಕ್ಕಿನಲ್ಲಿ ಇರಲಿ. ಕಾನ್ಫರೆನ್ಸ್ ಮತ್ತು ಮೀಟಿಂಗ್ ಹಾಲ್ ವಾಯುವ್ಯ ದಿಕ್ಕಿನಲ್ಲಿದ್ದರೆ ಶುಭ. 

- ಒಂದು ಟೇಬಲಿನಲ್ಲಿ ಒಬ್ಬರಿಗಿಂತ ಹೆಚ್ಚು ಕೆಲಸಗಾರರನ್ನು ಕೂರಿಸಬೇಡಿ. ಇದರಿಂದ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. 

- ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಗೆ ದಕ್ಷಿಣ ದಿಕ್ಕಿನಲ್ಲಿ ಹಾಗೂ ಕಿರಿಯ ಅಧಿಕಾರಿಗಳಿಗೆ ಪಶ್ಚಿಮ ದಿಕ್ಕಿನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿ. 

click me!