ಪ್ರತಿದಿನ ದೇವರ ಧ್ಯಾನ, ಪೂಜೆ ಮಾಡಲು ಪ್ರತಿಯೊಬ್ಬರ ಮನೆಯಲ್ಲೂ ಒಂದು ಪೂಜಾ ಮಂದಿರ ಅಥವಾ ದೇವರ ಕೋಣೆ ಇರುತ್ತದೆ. ಆದರೆ ಇದು ವಾಸ್ತು ಪ್ರಕಾರ ಹೇಗಿರಬೇಕು?
ಮನೆಯಲ್ಲಿ ದೇವರ ಪೂಜೆ, ಧ್ಯಾನಕ್ಕೆ ವಿಶೇಷ ಸ್ಥಾನವಿದೆ. ಮನೆಯಲ್ಲಿ ದೇವರ ಕೋಣೆ ನಿರ್ಮಿಸಬೇಕು ಎನ್ನುವಾಗ ಎಲ್ಲರ ದೃಷ್ಟಿ ಈಶಾನ್ಯ ದಿಕ್ಕಿದತ್ತ ಸಾಗುತ್ತದೆ. ಹಾಗಾದರೆ ಬನ್ನಿ ನೋಡೋಣ ಮನೆಯಲ್ಲಿ ದೇವರ ಕೋಣೆ ಯಾಕೆ ಈಶಾನ್ಯ ದಿಕ್ಕಿನಲ್ಲಿರಬೇಕು. ಮಂದಿರ ನಿರ್ಮಾಣ ಮಾಡುವ ಮುನ್ನ ಯಾವ ವಿಷಯದ ಬಗ್ಗೆ ಗಮನ ಹರಿಸಬೇಕು ನೋಡೋಣ...
ಈಶಾನ್ಯ ಕೋಣೆಯಲ್ಲಿ ಪೂಜೆ
ದೇವರ ಕೋಣೆ ಈಶಾನ್ಯ ದಿಕ್ಕಿನಲ್ಲಿದ್ದರೆ ಶುಭ. ಯಾಕೆಂದರೆ ಈ ದಿಕ್ಕಿನ ಅಧಿಪತಿ ಬೃಹಸ್ಪತಿ. ಈ ಜಾಗದಲ್ಲಿ ಆಧ್ಯಾತ್ಮಿಕ ಶಕ್ತಿ ಸಂಚರಿಸುತ್ತಿರುತ್ತದೆ. ಈ ದಿಕ್ಕಿನಲ್ಲಿ ಕುಳಿತು ಪೂಜಿಸಿದರೆ ಶ್ರದ್ಧೆ ಭಕ್ತಿಯಿಂದ ದೇವರ ಪೂಜೆ ಮಾಡಬಹುದು. ಇದರಿಂದ ದೇವರು ಪ್ರಸನ್ನರಾಗುತ್ತಾರೆ.
undefined
ವಂಶ ವೃದ್ಧಿಗೆ ಮನೆ ಮುಂದಿರಲಿ ಅಶೋಕ ಮರ!
ಪೂಜಾ ಕೋಣೆಯ ಬಳಿ ಕಿಟಕಿ
ಈಶಾನ್ಯ ದಿಕ್ಕಿನಲ್ಲಿ ದೇವರ ಕೋಣೆ ಮಾಡುವುದರ ಜೊತೆಗೆ ಅದೇ ದಿಕ್ಕಿನಲ್ಲಿ ಮಂದಿರದ ಬಳಿ ಕಿಟಕಿ ಮಾಡಿದರೆ ಹೆಚ್ಚು ಶುಭ. ಇದನ್ನು ದೇವರ ಪ್ರವೇಶ ಸ್ಥಾನ ಎನ್ನುತ್ತಾರೆ.
ಮೂರ್ತಿ
ದೇವರ ಕೋಣೆಯಲ್ಲಿ ಭಗವಂತನ ಮೂರ್ತಿ ಸ್ಥಾಪಿಸುವಾಗ ದೇವರ ಪೀಠ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡಬೇಕು. ಪೂಜಿಸುವಾಗ ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿರುವುದು ಉತ್ತಮ.
ಆರೋಗ್ಯ ಭಾಗ್ಯಕ್ಕಾಗಿ ಆಮೆ ವಾಸ್ತು!
ಮೆಟ್ಟಿಲ ಕೆಳಗೆ ಮಂದಿರ ಬೇಡ
ದೇವರ ಕೋಣೆ ಮೆಟ್ಟಿಲ ಕೆಳಗೆ ಇರದಂತೆ ನೋಡಿಕೊಳ್ಳಿ. ಜೊತೆಗೆ ಇದು ಶೌಚಾಲಯದ ಹತ್ತಿರವೂ ಇರಬಾರದು.