ವಂಶ ವೃದ್ಧಿಗೆ ಮನೆ ಮುಂದಿರಲಿ ಅಶೋಕ ಮರ!

By Web Desk  |  First Published Jul 13, 2019, 3:42 PM IST

ಮನೆಯಲ್ಲಿ ಹಲವಾರು ಕಾರಣಗಳಿಂದ ವಾಸ್ತು ದೋಷ ಕಾಣಿಸಿಕೊಳ್ಳುತ್ತದೆ. ನೀವು ಅವುಗಳನ್ನು ತಿಳಿದುಕೊಂಡು ಪರಿಹಾರ ಕಂಡುಕೊಂಡರೆ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ. 


ಮನೆಯಲ್ಲಿ ವಾಸ್ತು ದೋಷ ಇರುವುದರಿಂದ ಮನೆಯ ಸದಸ್ಯರಿಗೆ ಹಲವು ಸಮಸ್ಯೆಗಳು ಕಾಡುತ್ತವೆ. ಮನೆಯಲ್ಲಿ ಉಂಟಾಗುವ ಸಾಮಾನ್ಯ ವಾಸ್ತು ದೋಷಗಳು ಯಾವುವು ? ಅವುಗಳನ್ನು ಪರಿಹಾರ ಮಾಡುವುದು ಹೇಗೆ?
 
-ಹೊಸ ಮನೆ ಅಥವಾ ಫ್ಲ್ಯಾಟ್ ಖರೀದಿಸಿದರೆ, ಗೃಹ ಪ್ರವೇಶ ಮಾಡುವಾಗ ವಾಸ್ತು ಪೂಜೆ ಮಾಡಿಸಿ. 

- ವಾಸ್ತು ದೋಷ ದೂರ ಮಾಡಲು ಮನೆಯ ಮುಖ್ಯ ದ್ವಾರದ ಮೇಲೆ ಸ್ವಸ್ತಿಕ್ ಚಿಹ್ನೆ ಬರೆಯಿರಿ. ಇದು ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯುತ್ತದೆ. 

Latest Videos

undefined

ಹರಿಯೋ ಜಲಪಾತದ ಫೋಟೋ, ಶೋ ಪೀಸ್ ಮನೆಯಲ್ಲಿದ್ದರೆ.....

- ಮನೆಯ ಮುಖ್ಯ ದ್ವಾರದ ಎರಡು ಭಾಗಗಳಲ್ಲಿ ಅಶೋಕ ಮರ ಇದ್ದರೆ ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಜೊತೆಗೆ ವಂಶ ವೃದ್ಧಿಯಾಗುತ್ತದೆ. 

- ಮನೆಯ ಪ್ರವೇಶ ದ್ವಾರದ ಮೇಲೆ ಕುದುರೆ ಲಾಳ ಹಾಕುವುದರಿಂದಲೂ ವಾಸ್ತು ದೋಷ ನಿವಾರಣೆಯಾಗುತ್ತದೆ. 

- ತುಳಸಿ ಗಿಡ ಇರುವ ಮನೆಯಲ್ಲಿ ಸಾಮಾನ್ಯವಾಗಿ ವಾಸ್ತು ದೋಷ ಬಾಧಿಸುವುದಿಲ್ಲ. 

- ಪೂಜೆ ಸಮಯದಲ್ಲಿ ಶಂಖ ಊದುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. 

- ಈಶಾನ್ಯ ಭಾಗದಲ್ಲಿ ಯಾವತ್ತೂ ಭಾರವಾದ ವಸ್ತು ಅಥವಾ ಬೇಡದ ವಸ್ತುಗಳನ್ನಿಡಬೇಡಿ. ಇದರಿಂದ ಧನಹಾನಿಯಾಗುತ್ತದೆ. 

ಓದಲ್ಲಿ ಮುಂದಿರಬೇಕಾ? ಕರಿಯರ್ ಯಶಸ್ಸಿಗೆ ವಾಸ್ತು ಟಿಪ್ಸ್...

- ಉತ್ತರ ದಿಕ್ಕಿನಲ್ಲಿ ಯಾವತ್ತೂ ಸ್ಟೋರ್ ರೂಮ್ ಮಾಡಬೇಡಿ. 

- ಮನೆಯಲ್ಲಿ ಒಣಗಿದ ಹೂವನ್ನು ಇಡಲೇ ಬೇಡಿ. ಇದು ನಿಮ್ಮ ಭಾಗ್ಯ ಸಹ ಒಣಗಿ ಹೋಗುತ್ತದೆ ಎಂಬುದನ್ನು ಸೂಚಿಸುತ್ತದೆ. 

- ಪೂರ್ವಜರ ಫೋಟೋವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ತಪ್ಪಿಯೂ ಪೂರ್ವ ದಿಕ್ಕು ಅಥವಾ ದೇವರ ಕೋಣೆಯಲ್ಲಿ ಇಡಬಾರದು. 

- ಮನೆಯಲ್ಲಿ ನವಿಲು ಗರಿ ಅಥವಾ ಗಂಗಾಜಲ ಇದ್ದರೆ ಉತ್ತಮ. 

click me!