Asianet Suvarna News Asianet Suvarna News

ಐದನೇ ಬಾರಿಗೆ ರಷ್ಯಾ ಅಧ್ಯಕ್ಷರಾಗಿ ಪುಟಿನ್‌ ಪದಗ್ರಹಣ, ಕೇವಲ 33 ಶಬ್ದದಲ್ಲಿ ಪ್ರಮಾಣವಚನ ಸ್ವೀಕಾರ!

ವ್ಲಾಡಿಮಿರ್‌ ಪುಟಿನ್‌ ಐದನೇ ಬಾರಿಗೆ ರಷ್ಯಾದ ಅಧ್ಯಕ್ಷರಾಗಿ ಮಂಗಳವಾರ ಪದಗ್ರಹಣ ಮಾಡಿದ್ದಾರೆ. ಕೇವಲ 33 ಶಬ್ದಗಳಲ್ಲಿ ಅವರ ಪ್ರಮಾಣವಚನ ಸ್ವೀಕಾರ ನೆರವೇರಿದೆ. ಈ ಹಂತದಲ್ಲಿ ಮಾತನಾಡಿದ ಅವರು ವಿರೋಧಿಗಳ ಜೊತೆಗೂ ಉತ್ತಮ ಸಂಬಂಧ ಕಾಪಾಡಿಕೊಳ್ಳುವ ಭರವಸೆ ನೀಡಿದ್ದಾರೆ.

Vladimir Putin Oath Ceremony becomes President of Russia for the 5th time san
Author
First Published May 7, 2024, 10:10 PM IST

ನವದೆಹಲಿ (ಮೇ.7): ವ್ಲಾಡಿಮಿರ್ ಪುಟಿನ್ ಅವರು 5 ನೇ ಬಾರಿಗೆ ರಷ್ಯಾದ ಅಧ್ಯಕ್ಷರಾಗಿದ್ದಾರೆ. ಮಾಸ್ಕೋದ ಗ್ರ್ಯಾಂಡ್ ಕ್ರೆಮ್ಲಿನ್ ಅರಮನೆಯಲ್ಲಿ ಪುಟಿನ್ ಕೇವಲ 33 ಪದಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಷ್ಯಾದ ತ್ಸಾರ್ ಕುಟುಂಬದ ಮೂವರು ರಾಜರು (ಅಲೆಕ್ಸಾಂಡರ್ II, ಅಲೆಕ್ಸಾಂಡರ್ III ಮತ್ತು ನಿಕೋಲಸ್ II) ಪಟ್ಟಾಭಿಷೇಕ ಮಾಡಿದ ಸ್ಥಳದಲ್ಲಿಯೇ ಈ ಕಾರ್ಯಕ್ರಮ ನಡೆದಿದೆ. ಪ್ರಮಾಣ ವಚನದ ನಂತರ ಮಾತನಾಡಿದ ಪುಟಿನ್‌, "ನಾವು ಬಲಿಷ್ಠರಾಗುತ್ತೇವೆ. ನಮ್ಮನ್ನು ಶತ್ರುಗಳೆಂದು ಪರಿಗಣಿಸುವ ದೇಶಗಳೊಂದಿಗೆ ನಾವು ನಮ್ಮ ಸಂಬಂಧವನ್ನು ಬಲಪಡಿಸುತ್ತೇವೆ. ಸಾರ್ವಜನಿಕ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ಎಲ್ಲವನ್ನೂ ಮಾಡುತ್ತೇನೆ." ಮಾರ್ಚ್ 15-17 ರಂದು ರಷ್ಯಾದಲ್ಲಿ ನಡೆದ ಚುನಾವಣೆಯಲ್ಲಿ ಪುಟಿನ್ ಶೇ. 88ರಷ್ಟು ಮತಗಳನ್ನು ಪಡೆದರೆ, ಅವರ ಎದುರಾಳಿ ನಿಕೊಲಾಯ್ ಖರಿಟೋನೊವ್ ಕೇವಲ ಶೇ.4 ಮತಗಳನ್ನು ಪಡೆದರು.

ರಷ್ಯಾದಲ್ಲಿ ನಡೆದ ಪುಟಿನ್ ಅವರ ಪ್ರಮಾಣ ವಚನ ಸಮಾರಂಭವನ್ನು ಅಮೆರಿಕ, ಬ್ರಿಟನ್ ಮತ್ತು ಹಲವು ಯುರೋಪಿಯನ್ ರಾಷ್ಟ್ರಗಳು ಬಹಿಷ್ಕರಿಸಿವೆ. ಆದರೆ, ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರಿ ವಿನಯ್ ಕುಮಾರ್ ಉಪಸ್ಥಿತರಿದ್ದರು. ಪುಟಿನ್ ಅವರು 2000 ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದಿನಿಂದ ಅವರು 2004, 2012 ಮತ್ತು 2018 ರಲ್ಲೂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಪುಟಿನ್‌ ಅವರ ಭಾಷಣದ ಪ್ರಮುಖ ಅಂಶಗಳು: ಪ್ರಮಾಣವಚನದ ನಂತರ ಮಾಡಿದ ಭಾಷಣದಲ್ಲಿ ಪುಟಿನ್ ಅವರು ಪಾಶ್ಚಿಮಾತ್ಯ ದೇಶಗಳೊಂದಿಗೆ ಮಾತುಕತೆಗೆ ನಾವು ಸಿದ್ಧರಿದ್ದೇವೆ ಎಂದು ಹೇಳಿದರು. ಅವರು ನಮ್ಮೊಂದಿಗೆ ಸಂವಹನ ನಡೆಸಲು ಬಯಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ಅವರ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ. ಪಾಶ್ಚಿಮಾತ್ಯ ದೇಶಗಳು ರಷ್ಯಾದಲ್ಲಿ ಅಭಿವೃದ್ಧಿಯನ್ನು ನಿಲ್ಲಿಸಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಅವರು ವರ್ಷಗಳಿಂದ ನಮ್ಮ ವಿರುದ್ಧ ಆಕ್ರಮಣಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಯುರೋಪ್ ಮತ್ತು ಏಷ್ಯಾದಲ್ಲಿ ನಮ್ಮ ಮಿತ್ರರಾಷ್ಟ್ರಗಳೊಂದಿಗೆ ನಾವು ವಿಶ್ವ ಕ್ರಮಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಎಲ್ಲಾ ದೇಶಗಳು ಒಂದೇ ರೀತಿಯ ಭದ್ರತಾ ವ್ಯವಸ್ಥೆಯನ್ನು ಹೊಂದಬೇಕೆಂದು ನಾವು ಬಯಸುತ್ತೇವೆ. ಸ್ವಾತಂತ್ರ್ಯ ಮತ್ತು ಏಕತೆಯನ್ನು ಕಾಪಾಡಿಕೊಳ್ಳಲು, ರಷ್ಯಾದ ಸಾಮಾಜಿಕ-ರಾಜಕೀಯ ವ್ಯವಸ್ಥೆಯು ಹೊಂದಿಕೊಳ್ಳುವಂತಿರಬೇಕು. ನಾವು ಎಲ್ಲಾ ಸಮಯದಲ್ಲೂ ಯಾವುದೇ ಸವಾಲು ಅಥವಾ ಅಪಾಯಕ್ಕೆ ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ.

ಪ್ರಮಾಣ ವಚನ ಸಮಾರಂಭದಲ್ಲಿ ಯಾರೆಲ್ಲಾ ಭಾಗವಹಿಸಿದ್ದರು: ಫೆಡರಲ್ ಕೌನ್ಸಿಲ್ ಆಫ್ ರಷ್ಯಾ (ಸೆನೆಟ್ ಸಂಸದರು), ರಾಜ್ಯ ಡುಮಾ ಸದಸ್ಯರು (ಕೆಳಮನೆಯ ಸಂಸದರು), ಹೈಕೋರ್ಟ್ ನ್ಯಾಯಾಧೀಶರು, ರಾಯಭಾರಿಗಳು ಮತ್ತು ವಿವಿಧ ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.  2018 ರಲ್ಲಿ, ಮಾಜಿ ಜರ್ಮನ್ ಚಾನ್ಸೆಲರ್ ಗೆರ್ಹಾರ್ಡ್ ಶ್ರೋಡರ್ ಸೇರಿದಂತೆ ಸುಮಾರು 6 ಸಾವಿರ ಜನರು ಪುಟಿನ್ ಅವರ ನಾಲ್ಕನೇ ಪ್ರಮಾಣವಚನದಲ್ಲಿ ಉಪಸ್ಥಿತರಿದ್ದರು. ಇದರ ನೇರಪ್ರಸಾರವೂ ಆಗಿತ್ತು.

ಪ್ರಧಾನಿ ಮೋದಿ, ಪುಟಿನ್ ಸೇರಿ ವಿಶ್ವ ನಾಯಕರ AI ಅಭಿವೃದ್ಧಿಪಡಿಸಿದ ಬಾಲ್ಯದ ಫೋಟೋ ವೈರಲ್!

ಸಮಾರಂಭದ ನಂತರ, ರಷ್ಯಾದ ಆರ್ಥೊಡಾಕ್ಸ್ ಚರ್ಚ್‌ನ ಮುಖ್ಯಸ್ಥರು ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಅಧ್ಯಕ್ಷರೊಂದಿಗೆ ಪ್ರಾರ್ಥಿಸಿದರು. ಈ ಅಭ್ಯಾಸವು 1498 ರ ಹಿಂದಿನದು, ಮಾಸ್ಕೋದ ರಾಜಕುಮಾರ ಡಿಮಿಟ್ರಿ ಇವನೊವಿಚ್ ವಿವಾಹವಾದಾಗ ಇದನ್ನು ನಡೆಸಲಾಗಿತ್ತು. ಸಮಾರಂಭದ ಆರಂಭದಲ್ಲಿ, ರಷ್ಯಾದ ಅಧ್ಯಕ್ಷೀಯ ಬ್ಯಾಂಡ್ 1883 ರಲ್ಲಿ ಅಲೆಕ್ಸಾಂಡರ್ III ರ ಪಟ್ಟಾಭಿಷೇಕದ ಸಮಯದಲ್ಲಿ ನುಡಿಸಲ್ಪಟ್ಟ ಅದೇ ರಾಗವನ್ನು ನುಡಿಸುತ್ತದೆ.

ರಷ್ಯಾ ರಾಜಧಾನಿಯಲ್ಲಿ ನಡೆಯಿತು ರಕ್ಕಸರ ಅಟ್ಟಹಾಸ: ಉಗ್ರರ ಕ್ರೂರ ಕೃತ್ಯಕ್ಕೆ ಹೇಗಿರಲಿದೆ ಪುಟಿನ್ ಪಡೆಯ ಪ್ರತೀಕಾರ?

Follow Us:
Download App:
  • android
  • ios