Asianet Suvarna News Asianet Suvarna News

ತಿಂಗಳಿಗೆ 8 ಲಕ್ಷ ರೂ. ವೇತನ ನಿರಾಕರಿಸಿದ ಪಾಕ್ ಹೊಸ ಅಧ್ಯಕ್ಷ; ಕಾರಣವೇನು?

ಪಾಕಿಸ್ತಾನದ ನೂತನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ತಿಂಗಳಿಗೆ 8 ಲಕ್ಷ ರೂಪಾಯಿ ವೇತನ ಪಡೆಯಲು ನಿರಾಕರಿಸಿದ್ದಾರೆ. ಮಾರ್ಚ್ 12ರಂದು ಅವರು ತಮ್ಮ ವೇತನವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ.
 

Pakistans new President Asif Ali Zardari will not take a salary of Rs 8 lakh know why skr
Author
First Published Mar 13, 2024, 11:41 AM IST

ಪಾಕಿಸ್ತಾನದ ನೂತನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ತಿಂಗಳಿಗೆ 8 ಲಕ್ಷ ರೂಪಾಯಿ ವೇತನ ಪಡೆಯಲು ನಿರಾಕರಿಸಿದ್ದಾರೆ. ಮಾರ್ಚ್ 12ರಂದು ಅವರು ತಮ್ಮ ವೇತನವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ.

ಪಾಕಿಸ್ತಾನ ಕಳೆದ ಹಲವು ವರ್ಷಗಳಿಂದ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ. ಅದರ ಪರಿಣಾಮ ಅಲ್ಲಿನ ಜನರ ಮೇಲೆ ಮಾತ್ರ ಕಾಣುತ್ತಿಲ್ಲ, ಈಗ ರಾಜಕಾರಣಿಗಳ ಮೇಲೂ ಇದು ಅಪಾರ ಪರಿಣಾಮ ತೋರಿಸುತ್ತಿದೆ. ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿಯು ಪಾಕಿಸ್ತಾನದ ನೂತನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ತಿಂಗಳಿಗೆ 8 ಲಕ್ಷ ರೂಪಾಯಿ ವೇತನವನ್ನು ಪಡೆಯಲು ನಿರಾಕರಿಸಿದ್ದಾರೆ ಎಂದು ಹೇಳಿಕೊಂಡಿದೆ. ಮಂಗಳವಾರ (ಮಾರ್ಚ್ 12) ಅವರು ಅಧ್ಯಕ್ಷ ಹುದ್ದೆಯಲ್ಲಿರುವಾಗಲೇ ತಮ್ಮ ವೇತನವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ. 

ಮೊಘಲ್ ದೊರೆಯ ತೋಳ್ಬಂದಿ ಧರಿಸಿದ ನೀತಾ ಅಂಬಾನಿ; ಬೆಲೆಯಂತೂ ಅಬ್ಬಬ್ಬಾ.. !
 

ಪ್ರಸ್ತುತ ಆರ್ಥಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಅಧ್ಯಕ್ಷೀಯ ವೇತನವನ್ನು ತೆಗೆದುಕೊಳ್ಳುವುದಿಲ್ಲ ಎಂದು ಅಧ್ಯಕ್ಷ ಜರ್ದಾರಿ ನಿರ್ಧರಿಸಿದ್ದಾರೆ ಎಂದು ಪಾಕಿಸ್ತಾನದ ಅಧ್ಯಕ್ಷೀಯ ಸಚಿವಾಲಯದ ಹೇಳಿಕೆ ತಿಳಿಸಿದೆ. ದೇಶದಲ್ಲಿ ವಿವೇಕಯುತ ಹಣಕಾಸು ನಿರ್ವಹಣೆಯನ್ನು ಉತ್ತೇಜಿಸಲು ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಅಧ್ಯಕ್ಷರು ರಾಷ್ಟ್ರೀಯ ಖಜಾನೆ ಮೇಲೆ ಹೊರೆ ಹಾಕಬಾರದು ಎಂದು ಪರಿಗಣಿಸಿದ್ದಾರೆ ಮತ್ತು ತಮ್ಮ ವೇತನವನ್ನು ತ್ಯಜಿಸಲು ಆದ್ಯತೆ ನೀಡಿದ್ದಾರೆ ಎಂದು ಅಧ್ಯಕ್ಷರ ಸಚಿವಾಲಯದ ಹೇಳಿಕೆ ತಿಳಿಸಿದೆ. ಮಾರ್ಚ್ 10 ರಂದು, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸಹ-ಅಧ್ಯಕ್ಷ ಆಸಿಫ್ ಜರ್ದಾರಿ ಅವರು ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಐತಿಹಾಸಿಕ ಎರಡನೇ ಬಾರಿಗೆ ಅಧಿಕೃತವಾಗಿ ರಾಷ್ಟ್ರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. 

ನಮೋ ಭಾರತ್ ರೈಲಿನ ವಿಡಿಯೋ ರಿಟ್ವೀಟ್ ಮಾಡಿದ ಮೋದಿ; ಯೂಟ್ಯೂಬರ್ ಮೋಹಿತ್‌ಗೆ ಶ್ಲಾಘನೆ
 

ಎರಡನೇ ಬಾರಿಗೆ ರಾಷ್ಟ್ರದ ಮುಖ್ಯಸ್ಥರಾಗಿ ಆಯ್ಕೆಯಾದ ಏಕೈಕ ನಾಗರಿಕ ಅಭ್ಯರ್ಥಿ ಜರ್ದಾರಿ. ಈ ಹಿಂದೆ ಅವರು 2008ರಿಂದ 2013ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರ ಸೇವಾ ಅವಧಿಯಲ್ಲಿ ಸಂಬಳ ತೆಗೆದುಕೊಳ್ಳದಿರುವ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. 
 

Follow Us:
Download App:
  • android
  • ios