userpic
user icon
0 Min read

ದುಬೈನಲ್ಲಿ ನಡೀತು ಜೋಧಾ ಅಕ್ಬರ್ ಸ್ಟೈಲ್ ಮದ್ವೆ: ಚಿನ್ನದಿಂದ ವಧುವಿನ ತುಲಾಭಾರ..!

Lavish Pakistan Marriage in Dubai, bride weighed through gold but family said it was gold painted brick akb
lavish wedding

Synopsis

ದುಬೈ ಐಷಾರಾಮಿ ಮದ್ವೆಗಳಿಗೆ ಫೇಮಸ್‌, ಇಲ್ಲಿನ ಮದ್ವೆಯೊಂದರಲ್ಲಿ ವಧುವನ್ನು ತಕ್ಕಡಿ ಮೇಲಿರಿಸಿ ಆಕೆಯಷ್ಟೇ ತೂಕದ ಚಿನ್ನದ ಇಟ್ಟಿಗೆಗಳನ್ನು ಇರಿಸಿ ತೂಗುತ್ತಿರುವ ವೀಡಿಯೋವೊಂದು ಸಖತ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿತ್ತು.  

ದುಬೈ: ಸಾಮಾನ್ಯವಾಗಿ ನಾವು ನೀವೆಲ್ಲಾ ಪುಣ್ಯ ಕ್ಷೇತ್ರಗಳಲ್ಲಿ ಅಕ್ಕಿಯೋ , ತೆಂಗಿನಕಾಯಿಯೋ, ಸಕ್ಕರೆ, ಒಣದ್ರಾಕ್ಷಿಯೋ ನೀಡಿ ಅವುಗಳಿಂದ ತುಲಾಭಾರ ಮಾಡುವುದನ್ನು ನೋಡಿದ್ದೇವೆ. ಆದರೆ ದುಬೈನಲ್ಲಿ ಮದುಮಗಳೊಬ್ಬಳಿಗೆ ಚಿನ್ನದ ತುಲಾಭಾರ ಮಾಡಲಾಗಿದೆ. ಹೇಳಿ ಕೇಳಿ ದುಬೈ ಶ್ರೀಮಂತರೇ ವಾಸ ಮಾಡುವ ಐಷಾರಾಮಿ ನಗರಿ ಚಿನ್ನ ಬೆಳ್ಳಿ ಪೆಟ್ರೋಲ್ ಡೀಸೆಲ್‌ಗೂ ಇಲ್ಲಿ ಕಡಿಮೆ ಬೆಲೆ ಹೀಗಾಗಿ ಇಲ್ಲಿ ಇದೇನು ದೊಡ್ಡ ವಿಷಯವಾಗಲ್ಲ. ಆದರೆ ವಧುವನ್ನು ತಕ್ಕಡಿ ಮೇಲಿರಿಸಿ ಆಕೆಯಷ್ಟೇ ತೂಕದ ಚಿನ್ನದ ಇಟ್ಟಿಗೆಗಳನ್ನು ಇರಿಸಿ ತೂಗುತ್ತಿರುವ ವೀಡಿಯೋವೊಂದು ಸಖತ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿತ್ತು.  

ಇಂದು ಮದುವೆಗಳು ಕೇವಲ ಸಂಪ್ರದಾಯವಾಗಿ ಉಳಿದಿಲ್ಲ, ಅದು ಅದ್ಧೂರಿತನದ ಪ್ರದರ್ಶನವೂ ಆಗಿದೆ. ಅದೇ ರೀತಿ ಇಲ್ಲಿ ಮದುವೆಗೆ ಬಂದ ನೆಂಟರಿಷ್ಟರ ಮುಂದೆ ಸುಂದರವಾಗಿ ಅಲಂಕಾರಗೊಂಡಿರುವ ವಧುವಿಗೆ ಬಂಗಾರದ ತುಲಾಭಾರ ಮಾಡಲಾಯ್ತು.  ಅಂದಹಾಗೆ ಈ ಅದ್ಧೂರಿ ಮದ್ವೆಯಲ್ಲಿ ಚಿನ್ನದ ತುಲಾಭಾರ ಮಾಡಿಸಿಕೊಂಡ ಅದೃಷ್ಟವಂತೆ ಹೆಸರು ಆಯೇಷಾ ತಾಹೀರ್, ಪಾಕಿಸ್ತಾನ ಮೂಲದ ಈಕೆಯ ಕುಟುಂಬ ದುಬೈನಲ್ಲಿ ನೆಲೆಸಿದೆ.  ಕಳೆದ ಮಾರ್ಚ್‌ನಲ್ಲಿ ಈ ಮದ್ವೆ ಸಮಾರಮಭ ನಡೆದಿತ್ತು. ಬಾಲಿವುಡ್ ಸಿನಿಮಾವನ್ನು ಮೀರಿಸಿದ ಅದ್ದೂರಿತನ ಇಲ್ಲಿತ್ತು. 

‘ನನ್ನ ಮಗಳ ಮದುವೆಯಂತೆ 50 ಸಾವಿರ ಮದುವೆ ಮಾಡಿಸಿದ್ದೇನೆ’

ಚಿನ್ನದ ಗಟ್ಟಿ ಅಲ್ಲ ಪೇಂಟಿಂಗ್
ಆದರೆ ಈಗ ವಧುವನ್ನು ತೂಗಿದ್ದು ಚಿನ್ನದಿಂದ ಅಲ್ಲ ಇದು ಚಿನ್ನದ ಪೇಂಟ್‌ ಮಾಡಲಾದ ಇಟ್ಟಿಗೆ ಎಂಬುದನ್ನು ಕುಟುಂಬ ಸ್ಫಷ್ಟಪಡಿಸಿದೆ.  ಆದರೂ ಈ ವಿಚಾರ ಅಮದು ಬಹಳಷ್ಟು ಸದ್ದು ಮಾಡಿತ್ತು.  ಒಂದೇ ವಿಶ್ವವಿದ್ಯಾಲಯದಲ್ಲಿ (university) ವಿದ್ಯಾಭ್ಯಾಸ ಮಾಡಿದ ಆಯೇಷಾ ಹಾಗೂ ಆದಿಲ್‌ ದುಬೈನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಮಭದಲ್ಲಿ ಹಸೆಮಣೆ ಏರಿದ್ದರು. ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ನೆರೆಹೊರೆಯವರಾಗಿದ್ದ ಈ ಜೋಡಿ ತಮ್ಮ ಸ್ನೇಹಕ್ಕೆ ನಂತರ ಮದುವೆಯ ಮುದ್ರೆ ಒತ್ತಿದ್ದರು. ತಮ್ಮ ಮದುವೆಗೆ ಆರು ತಿಂಗಳ ಮೊದಲು, ಆದಿಲ್ ಮತ್ತು ಆಯೇಶಾ ವಿಶ್ವದ ಅತಿ ಎತ್ತರದ ಗೋಪುರವೆನಿಸಿದ ದುಬೈನ ಬುರ್ಜ್ ಖಲೀಫಾದಲ್ಲಿ (Burj Khalifa) ನಡೆದ ಭವ್ಯವಾದ ಸಮಾರಂಭದಲ್ಲಿ ನಿಶ್ಚಿತಾರ್ಥದ ಉಂಗುರಗಳನ್ನು ಬದಲಾಯಿಸಿಕೊಂಡಿದ್ದರು. 

ಈ ಮದುವೆಯೂ ಬಹಳ ಅದ್ಧೂರಿತನಕ್ಕೆ ಸಾಕ್ಷಿಯಾಗಿತ್ತು. ಬಾಲಿವುಡ್‌ನ ಹಾಡುಗಳ ಮ್ಯೂಸಿಕ್ ನೈಟ್ ಅಲ್ಲದೇ ಅದ್ಧೂರಿ ಭಕ್ಷ್ಯ ಭೋಜನಗಳು ಗಮನ ಸೆಳೆದಿದ್ದವು. ನಂತರ
ಸಾಂಪ್ರದಾಯಿಕ ಮುಸ್ಲಿಂ ವಿವಾಹ ಸಮಾರಂಭ ನಿಕ್ಕಾ ನಡೆದಿತ್ತು.  ಹತ್ತು ದಿನಗಳ ಕಾಲ ನಡೆದ ಈ ಮದುವೆ ವಧುವನ್ನು ಚಿನ್ನದಿಂದ ತೂಗಿದ ಕಾರಣಕ್ಕೆ ಸುದ್ದಿಯಾಗಿತ್ತು. 
ಆದಿಲ್ ಅವರ ತಂದೆ ಮಿಯಾನ್ ಉಮರ್ ಇಬ್ರಾಹಿಂ (Mian Umar Ibrahim), ದುಬೈನಲ್ಲಿ ಅವರ ಕುಟುಂಬದಲ್ಲಿ ನಡೆಯುವ ವಿವಾಹಗಳು (family weddings) ತಮ್ಮ ವೈಭವ ಮತ್ತು ಅದ್ಧೂರಿತನಕ್ಕೆ ಹೆಸರುವಾಸಿಯಾಗಿದೆ ಎಂದು ಹೇಳಿದರು. ಈ ಅದ್ಧೂರಿ ವಿವಾಹ ಕಾರ್ಯಕ್ರಮದಲ್ಲಿ ರಾಜಮನೆತನದವರು, ನಿಕಟ ಸ್ನೇಹಿತರು ಮತ್ತು ಉದ್ಯಮಿಗಳು ಸೇರಿದಂತೆ 1,000 ಅತಿಥಿಗಳು ಭಾಗವಹಿಸಿದ್ದರು. ಆದರೆ ಮದುವೆಯ ಈ ವೀಡಿಯೋ ಅನಿರೀಕ್ಷಿತವಾಗಿ ವೈರಲ್ ಆಗಿದ್ದು, ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತ್ತು.  ಅಲ್ಲದೇ ಇದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೂ ಕಾರಣವಾಗಿತ್ತು. 

ಮಲೈಕಾ ಅರೋರಾ ಕಂಡು ಹುಚ್ಚೆದ್ದ ದುಬೈ ಫ್ಯಾನ್ಸ್​: ಬಾಡಿಗಾರ್ಡ್​ಗಳೂ ಸುಸ್ತು!

ಬಾಲಿವುಡ್‌ನ ಖ್ಯಾತ ಚಲನಚಿತ್ರವಾದ ಜೋಧಾ ಅಕ್ಬರ್‌ನ ಥೀಮ್ ಅನ್ನು ಈ ದಂಪತಿ ತಮ್ಮ ಮದುವೆಯಲ್ಲಿ ಅಳವಡಿಸಿಕೊಳ್ಳಲು ಬಯಸಿದ್ದರು. ಅದರಂತೆ ಚಿನ್ನದ ತುಲಾಭಾರ ಆಚರಣೆ ಮಾಡಲಾಗಿತ್ತು. ಜೋಡಿಯ ಆಸೆಯನ್ನು ಈಡೇರಿಸುವ ಸಲುವಾಗಿ ಅವರ ಕುಟುಂಬದ ಪ್ರತಿ ಸದಸ್ಯರು ಚಲನಚಿತ್ರದ ಪಾತ್ರಕ್ಕೆ ತಕ್ಕಂತೆ ಬಟ್ಟೆ ಧರಿಸಿದ್ದರು. ಅಲ್ಲದೇ ಚಿತ್ರದ ಹಾಡುಗಳಿಗೆ ನೃತ್ಯ ಮಾಡಿದ್ದರು.  'ನೀವು ಜೋಧಾ ಅಕ್ಬರ್‌ ಚಲನಚಿತ್ರವನ್ನು ವೀಕ್ಷಿಸಿದ್ದರೆ, ವಧುವನ್ನು ಚಿನ್ನದೊಂದಿಗೆ ತೂಗುವ ದೃಶ್ಯವಿದೆ. ನಾವು ಆಯ್ಕೆಮಾಡಿದ ಥೀಮ್‌ಗೆ ನಿಜವಾಗಿಯೂ ಆ ದೃಶ್ಯವನ್ನು  ಮರುಸೃಷ್ಟಿಸಿದ್ದೆವು. ಚಿನ್ನದ ತೂಕ ನಮ್ಮ ಮದುವೆಯ ಅವಿಭಾಜ್ಯ ಅಂಗವಾಗಿತ್ತು. ವಿಡಿಯೋ ವೈರಲ್ ಆಗುತ್ತೆ ಎಂದು ನಾವು ಊಹಿಸಿರಲಿಲ್ಲ. ಮರುದಿನವೇ ಅದರ ವೈರಲ್ ಸ್ಟೇಟಸ್ ಬಗ್ಗೆ ನಮ್ಮ ಛಾಯಾಗ್ರಾಹಕನ ಮೂಲಕ ತಿಳಿದುಕೊಂಡೆವು, ಅದು ನಮಗೆ ಆಶ್ಚರ್ಯ ತಂದಿದೆ ಎಂದು ಆಯೇಷಾ ಹೇಳಿದ್ದಾರೆ.

ಈ ಚಿನ್ನದ ಸುದ್ದಿಯಿಂದಾಗಿ ತಮ್ಮ ವೀಡಿಯೋ ಮಿಲಿಯನ್‌ಗಟ್ಟಲೇ ವೀವ್ಸ್ ಗಳಿಸಿದೆ ಎಂದು ಆಯೇಷಾ ಹೇಳಿಕೊಂಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Dulha.net (@dulhadotnet)

 

Latest Videos