Asianet Suvarna News Asianet Suvarna News

ಲಂಡನ್‌ ಬೀದಿಯಲ್ಲಿ ಕೈಯಲ್ಲಿ ತಲ್ವಾರ್‌ ಹಿಡಿದು ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿದ ವ್ಯಕ್ತಿ!

ಸೋಶಿಯಲ್‌ ಮೀಡಿಯಾದಲ್ಲ ವಿಡಿಯೋ ಪೋಸ್ಟ್‌ ಮಾಡಲಾಗಿದ್ದು, ಮನೆಗಳ ಬಳಿ ವ್ಯಕ್ತಿಯೊಬ್ಬ ಕೈಯಲ್ಲಿ ತಲ್ವಾರ್‌ ಹಿಡಿದು ಅಲೆದಾಡುತ್ತಿರುವುದು ಕಂಡಿದೆ. ಕೆಲವರ ಮೇಲೆ ಈತ ದಾಳಿಯನ್ನೂ ಮಾಡಿದ್ದಾನೆ. 
 

Hainault London Man with sword attacks several people including 2 cops san
Author
First Published Apr 30, 2024, 5:06 PM IST

ಲಂಡನ್‌ (ಏ. 30): ಬ್ರಿಟನ್ ರಾಜಧಾನಿ ಲಂಡನ್‌ನ ಹೈನಾಲ್ಟ್ ಪ್ರದೇಶದ ಬಳಿ ಮಂಗಳವಾರ ವ್ಯಕ್ತಿಯೊಬ್ಬ ಸಾಮಾನ್ಯ ಜನರ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿ ಹುಚ್ಚಾಟ ಮೆರೆದಿದ್ದಾರೆ.  ಈ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ, ಪೊಲೀಸರು ಈ ಘಟನೆಯನ್ನು ಭಯೋತ್ಪಾದನೆ ಸಂಬಂಧಿತ ಘಟನೆಯ ಹಿಂಸಾಚಾರ ಎಂದು ಕರೆದಿಲ್ಲ. ಇಬ್ಬರು ಪೊಲೀಸರ ಮೇಲೂ ಈತ ಹಲ್ಲೆ ನಡೆಸಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಎಫ್‌ಪಿ ವರದಿಯ ಪ್ರಕಾರ, ಹಲವಾರು ಜನರ ಮೇಲೆ ಈ ದಾಳಿ ನಡೆಸಿದ್ದಯ, ಇಬ್ಬರು ಪೊಲೀಸ್‌ ಅಧಿಕಾರಿಗಳ ಮೇಲೂ ಕತ್ತಿ ಬೀಸಿದ್ದಾನೆ ಎಂದು ಮೆಟ್ರೋಪಾಲಿಟನ್‌ ಪೊಲೀಸರು ತಿಳಿಸಿದ್ದಾರೆ. ಗ್ರೇಟರ್ ಲಂಡನ್‌ನ 620 ಚದರ ಮೈಲುಗಳನ್ನು (1,605 ಚದರ ಕಿಲೋಮೀಟರ್) ಪೊಲೀಸಿಂಗ್‌ ಮಾಡುವ ದಿ ಮೆಟ್, 36 ವರ್ಷದ ವ್ಯಕ್ತಿಯನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ ಎಂದು ಹೇಳಿದೆ. ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತಿ ಕತ್ತಿ ಹಿಡಿದು ದಾಳಿ ಮಾಡುತ್ತಿರುವ ವಿಡಿಯೋ ಹಾಗೂ ದೃಶ್ಯಗಳು ವೈರಲ್‌ ಆಗಿದೆ.

ಮೆಟ್ರೋಪಾಲಿಟನ್ ಪೋಲಿಸ್‌ನ ಉಪ ಸಹಾಯಕ ಕಮಿಷನರ್ ಅಡೆ ಅಡೆಲಕನ್ ಮಾತನಾಡಿದ್ದು, ಹಲ್ಲೆಗೆ ಒಳಗಾದ ವ್ಯಕ್ತಿಗಳ ಪಾಲಿಗೆ ಇದು ಭಯಾನಕ ಘಟನೆ. ಬಹಳಷ್ಟು ಜನರು ಆತಂಕಕ್ಕೆ ಒಳಗಾಗಿದ್ದರು. ಆದರೆ, ಇದು ಭಯೋತ್ಪಾದಕ ಘಟನೆಯಲ್ಲ ಎಂದು ನಾವು ಭಾವಿಸುತ್ತೇವೆ' ಎಂದು ಹೇಳಿದ್ದಾರೆ. ತಲ್ವಾರ್‌ ಹಿಡಿದ ವ್ಯಕ್ತಿಯನ್ನು ಬಂಧಿಸಿರುವ ಗಂಭೀರ ಘಟನೆಯಲ್ಲಿ ಪೊಲೀಸರು ಮತ್ತು ತುರ್ತು ಸೇವೆಗಳು ಪ್ರಸ್ತುತ ಹೈನಾಲ್ಟ್‌ ಪ್ರದೇಶದಲ್ಲಿವೆ.

ಬ್ರಿಟನ್‌ನ ಗೃಹ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು "ಮಂಗಳವಾರ ಬೆಳಿಗ್ಗೆ ಹೈನಾಲ್ಟ್ ನಿಲ್ದಾಣದಲ್ಲಿ ನಡೆದ ಘಟನೆಯ ಬಗ್ಗೆ ನನಗೆ ನಿಯಮಿತವಾಗಿ ಅಪ್‌ಡೇಟ್ ಮಾಡಲಾಗುತ್ತಿದೆ. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ' ಎಂದು ಟ್ವೀಟ್‌ ಮಾಡಿದ್ದಾರೆ. ಲಂಡನ್ ಆಂಬ್ಯುಲೆನ್ಸ್ ಸೇವೆಯ ಟೀಮ್‌ ಐದು ಜನರಿಗೆ ಚಿಕಿತ್ಸೆ ನೀಡಿದೆ ಎಂದು ಹೇಳಿದೆ. ಅವರನ್ನೆಲ್ಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಸ್ಥಿತಿಯ ಬಗ್ಗೆ ತಕ್ಷಣ ಏನನ್ನೂ ಹೇಳಲು ಸಾಧ್ಯವಿಲ್ಲ ಎನ್ನಲಾಗಿದೆ.

ರೈಲಿನಲ್ಲೇ ಚಾಕು ಇರಿತ, ಲಂಡನ್‌ ಮೇಯರ್‌ ಸಾದಿಕ್‌ ಖಾನ್‌ ವಿರುದ್ಧ ಕೆವಿನ್‌ ಪೀಟರ್ಸೆನ್‌ ಕಿಡಿ!

ಲಂಡನ್ ಮೇಯರ್ ಸಾದಿಕ್ ಖಾನ್ ಅವರು ಘಟನೆಯ ಬಗ್ಗೆ ಕೇಳಿ ಆಘಾತಕ್ಕೊಳಗಾಗಿದ್ದಾರೆ ಮತ್ತು ಪೊಲೀಸ್ ಆಯುಕ್ತರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು. "ಪೊಲೀಸ್ ಠಾಣೆಗಳು ಮತ್ತು ತುರ್ತು ಸೇವೆಗಳು ಉತ್ತಮ ಕೆಲಸ ಮಾಡಿದೆ. ಅವರು ಸಕಾಲದಲ್ಲಿ ಜನರ ಜೀವವನ್ನು ಉಳಿಸಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಮೇಯರ್‌ ಸಾದಿಕ್‌ ಖಾನ್‌ ಹೇಳಿದ್ದಾರೆ. ಕಳೆದ ವಾರ, ಪ್ರಧಾನಿ ರಿಷಿ ಸುನಕ್ ಬ್ರಿಟಿಷ್ ರಾಜಧಾನಿಯಲ್ಲಿ ಚೂರಿ ಇರಿತದ ಘಟನೆಯ ಬಗ್ಗೆ ಮೇಯರ್ ಸಾದಿಕ್ ಖಾನ್ ಅವರನ್ನು ಟೀಕಿಸಿದರು. ಮೇ 2 ರಂದು ಲಂಡನ್‌ನಲ್ಲಿ ಮೇಯರ್ ಚುನಾವಣೆ ನಡೆಯಲಿದೆ.

ಹೆಚ್ತಿದೆ ಡೇಂಜರಸ್‌ ದಡಾರ ಕಾಯಿಲೆ, MMR ಲಸಿಕೆ ಹಾಕಿಸಿಕೊಳ್ಳಲು ಸೂಚನೆ ನೀಡಿದ WHO

ಅಧಿಕೃತ ಅಂಕಿಅಂಶಗಳ ಪ್ರಕಾರ, 2023 ರಲ್ಲಿ ಲಂಡನ್‌ನಲ್ಲಿ ಚೂರಿ ಇರಿತ ಘಟನೆಗಳು 20 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ 14577 ಅಪರಾಧಗಳು ನಡೆದಿವೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಾದ್ಯಂತ ಇರಿತದ ಘಟನೆಗಳು ಶೇಕಡಾ 7 ರಷ್ಟು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶ ಅಧಿಕಾರಿ ಹೇಳಿದ್ದಾರೆ. ಒಟ್ಟು 49,489 ಅಪರಾಧಗಳು ನಡೆದಿವೆ, ಅವುಗಳಲ್ಲಿ ಹೆಚ್ಚಿನವು ಮಹಾನಗರಗಳಲ್ಲಿ ಸಂಭವಿಸಿವೆ.

Follow Us:
Download App:
  • android
  • ios