Asianet Suvarna News Asianet Suvarna News

ಜ್ವಾಲಾಮುಖಿ ಮುಂದೆ ನಿಂತು ಫೋಟೋಗೆ ಫೋಸ್, ಕಾಲು ಜಾರಿ 250ಗೆ ಅಡಿಗೆ ಬಿದ್ದ ಮಹಿಳೆ ಸಾವು!

ಎಲ್ಲಿಗೆ ಹೋದರೂ, ಆಹಾರ ತಿಂದರೂ, ಏನೇ ಮಾಡಿದರೂ ಫೋಟೋಗೆ ಫೋಸ್ ನೀಡುವುದು ಸಾಮಾನ್ಯವಾಗಿದೆ. ಆದರೆ ಈ ನಡೆ ದುರಂತಕ್ಕೂ ಕಾರಣವಾಗಿದೆ. ಇದೀಗ ಮಹಿಳೆ ಜ್ವಾಲಾಮುಖಿ ಮುಂದೆ ನಿಂತು ಫೋಸ್ ನೀಡಿದ್ದಾಳೆ. ಇತ್ತ ಪತಿ ಫೋಟೋ ಕ್ಲಿಕ್ಕಿಸುತ್ತಿದ್ದಂತೆ ಕಾಲು ಜಾರಿದ ಪತ್ನಿ ನೇರವಾಗಿ ಜ್ವಾಲಾಮುಖಿ ಗುಂಡಿಗೆ ಬಿದ್ದು ಭಸ್ಮವಾಗಿದ್ದಾಳೆ.
 

China Women Tourist dies after falls 250 feet deep volcano hills during posing photos Indonesia ckm
Author
First Published Apr 23, 2024, 5:14 PM IST

ಇಂಡೋನೇಷಿಯಾ(ಏ.23) ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಫೋಟೋ ಕ್ಲಿಕ್ಕಿಸುವುದು ಸಾಮಾನ್ಯ. ಆದರೆ ಇದೀಗ ಟ್ರೆಂಡ್ ಫೋಟೋಗಾಗಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವಷ್ಟು ಬದಲಾಗಿದೆ. ಈ ಫೋಟೋ ಹಾಗೂ ಸೆಲ್ಫಿ ಕ್ರೇಜ್ ಹಲವು ಅಪಾಯಗಳನ್ನು ತಂದೊಡ್ಡಿದೆ. ಇದೀಗ ಚೀನಾದ ದಂಪತಿ ಇಂಡೋನೇಷಿಯಾಗೆ ಪ್ರವಾಸ ತೆರಳಿದ್ದಾರೆ. ಈ ವೇಳೆ ಖ್ಯಾತ ಬ್ಲೂ ಫೈರ್ ಜ್ವಾಲಾಮುಖಿ ನೋಡಲು ತೆರಳಿದ್ದಾರೆ. ಜ್ವಾಲಾಮುಖಿ ವೀಕ್ಷಿಸಿ ಅದರ ಮುಂದೆ ಫೋಟೋಗೆ ಫೋಸ್ ಕೊಡುತ್ತಿದ್ದ ಮಹಿಳೆ ಏಕಾಏಕಿ ಜಾರಿ ಬಿದ್ದಿದ್ದಾಳೆ. ನೇರವಾಗಿ 250 ಅಡಿ ಆಳಕ್ಕೆ ಬಿದ್ದ ಮಹಿಳೆ ಸುಟ್ಟು ಭಸ್ಮವಾಗಿದ್ದಾಳೆ. ದುರಂತ ಅಂದರೆ ಫೋಟೋ ತೆಗೆಯುತ್ತಿದ್ದ ಪತಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ.

ಚೀನಾದ 31 ವರ್ಷದ ಮಹಿಳೆ ಹುವಾಂಗ್ ಲಿಹೊಂಗ್ ಮೃತ ದುರ್ದೈವಿ. ಇಂಡೋನೇಷಿಯಾದ ಬ್ಲೂ ಫೈರ್ ಜ್ವಾಲಾಮುಖಿ ವಿಕ್ಷೀಸಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಸ್ಥಳೀಯ ಮಾರ್ಗದರ್ಶಿಯ ನೆರವಿನಿಂದ ಜ್ವಾಲಾಮುಖಿ ಹಾಗೂ ಸೂರ್ಯೋದಯ ವೀಕ್ಷಿಸಲು ಚೀನಾ ದಂಪತಿಗಳು ಬೆಟ್ಟ ಹತ್ತಿದ್ದಾರೆ. ಏಪ್ರಿಲ್ 20 ರಂದು ಬೆಟ್ಟ ಹತ್ತಿದ್ದಾರೆ.

ಬೆಂಕಿ ಉಗುಳೋ ಜಲಪಾತವಿದು, ವಿಶ್ವದ ಅತ್ಯಂತ ವಿಶಿಷ್ಟ ಫಾಲ್ಸ್!

ಶನಿವಾರ ರಾತ್ರಿ ಬ್ಲೂ ಫೈರ್ ಜ್ವಾಲಾಮುಖಿ ವೀಕ್ಷಿಸಿ, ಭಾನುವಾರ ಬೆಳಗ್ಗೆ ಸೂರ್ಯೋದಯ ವೀಕ್ಷಿಸಿ ಮರಳಲು ದಂಪತಿಗಳು ಪ್ಲಾನ್ ಮಾಡಿದ್ದರು. ಆದರೆ ಶನಿವಾರ ಇಳಿ ಸಂಜೆ ಬೆಟ್ಟದ ಮೇಲೆ ನಿಂತು ಜ್ವಾಲಾಮುಖಿ, ಬೆಟ್ಟದ ಸೌಂದರ್ಯ ವೀಕ್ಷಿಸಿದ ದಂಪತಿ ಹಲವು ಫೋಟೋಗಳನ್ನು ತೆಗೆದಿದ್ದಾರೆ. ಹುವಾಂಗ್ ಲಿಹೊಂಗ್ ಅಪಾಯದ ಗೆರೆ ದಾಟಿ ಫೋಟೋ ಕ್ಲಿಕ್ಕಿಸಲು ತೆರಳಿದ್ದಾರೆ.

ಈ ವೇಳೆ ಮಾರ್ಗದರ್ಶಿಗಳು ಅಪಾಯದ ಸೂಚನೆ ನೀಡಿದ್ದಾರೆ. ಆದರೆ ಎಚ್ಚರಿಕೆ ಲೆಕ್ಕಿಸಿದ ಪತಿಯನ್ನು ಕರೆದುಕೊಂಡು ಜ್ವಾಲಾಮುಖಿ ಬೆಟ್ಟದ ಅಂಚಿಗೆ ತೆರಳಿ ಫೋಟೋ ಕ್ಲಿಕ್ಕಿಸಿದ್ದಾರೆ. ಪತ್ನಿಯ ಫೋಟೋ ಕ್ಲಕ್ಕಿಸಿದ ಪತಿಗೆ ಏಕಾಏಕಿ ಆಘಾತವಾಗಿದೆ. ಕಾರಣ ಇದಕ್ಕಿದ್ದಂತೆ ಪತ್ನಿ ಕಾಲು ಜಾರಿ ಬಿದಿದ್ದಾಳೆ. ನೋಡ ನೋಡುತ್ತಿದ್ದಂತೆ ಪತ್ನಿ ಬರೋಬ್ಬರಿ 250 ಅಡಿ ಆಳಕ್ಕೆ ಉರುಳಿದ್ದಾಳೆ.

ಚಾರ್ಮಾಡಿ ಘಾಟಿಯ 2000 ಅಡಿ ಪ್ರಪಾತಕ್ಕೆ ಬಿದ್ದು ಟಿಪ್ಪರ್ ಲಾರಿ ಅಪ್ಪಚ್ಚಿ, ಪವಾಡ ಸದೃಶವಾಗಿ ಬದುಕಿದ ಚಾಲಕ

ಪ್ರಪಾತಕ್ಕೆ ಉರುಳಿದ ಬಿದ್ದ ಮಹಿಳೆ ಮೃತಪಟ್ಟಿದ್ದಾಳೆ. ರಕ್ಷಣಾ ತಂಡಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಕಳೇಬರ ಹೊರತೆಗೆದಿದ್ದಾರೆ. ಪ್ರಕರಣ ದಾಖಲಾಗಿದ್ದು,ಪೊಲೀಸರು ಇದೀಗ ಬ್ಲೂ ಫೈರ್‌ಗೆ ಆಗಮಿಸುವ ಪ್ರವಾಸಿಗರ ನಿಯಮವನ್ನು ಮತ್ತಷ್ಟು ಕಠಿಣಗೊಳಿಸಲು ನಿರ್ಧರಿಸಿದೆ.

Follow Us:
Download App:
  • android
  • ios