Asianet Suvarna News Asianet Suvarna News

Intimate Health: ಹೆಂಗಸರು ಪರಾಕಾಷ್ಠೆ ತಲುಪಲು ತಡವಾಗೋದೇಕೆ?

ಸೆಕ್ಸ್ ಮುಚ್ಚಿಡುವ ವಿಷ್ಯವಲ್ಲ. ದಂಪತಿ ಮಧ್ಯೆ ಇದ್ರ ಬಗ್ಗೆ ಚರ್ಚೆ ಆಗ್ಬೇಕು. ಸಮಸ್ಯೆ ಬಂದಾಗ ವೈದ್ಯರ ಬಳಿ ಹೋಗ್ಬೇಕು. ಮಹಿಳೆಯರಿಗೆ ಈ ವಿಷ್ಯದಲ್ಲಿ ಅನೇಕ ಸಮಸ್ಯೆ ಕಾಡುತ್ತದೆ. ಅದ್ರಲ್ಲಿ ಪರಾಕಾಷ್ಠೆ ಕೂಡ ಒಂದು. 
 

Know What Causes Late Orgasm In Females roo
Author
First Published Mar 16, 2024, 3:03 PM IST

ಸೆಕ್ಸ್ ಬಗ್ಗೆ ಮಹಿಳೆಯರು ಬಹಿರಂಗವಾಗಿ ಮಾತನಾಡೋದಿಲ್ಲ. ಅವರ ಸಮಸ್ಯೆ ಹಾಗೂ ಪರಾಕಾಷ್ಠೆಯನ್ನು ಮುಚ್ಚಿಡುತ್ತಾರೆ. ಆದ್ರೆ ಸಂಭೋಗದಲ್ಲಿ ಇಬ್ಬರಿಗೂ ಸಂತೋಷ ಸಿಗೋದು ಮುಖ್ಯ. ಸೆಕ್ಸ್ ನಲ್ಲಿ ಪರಾಕಾಷ್ಠೆ ಸಿಕ್ಕಿದ್ರೆ ನಾನಾ ಪ್ರಯೋಜನವಿದೆ. ಇದ್ರಿಂದ ಮಹಿಳೆ ಮಾನಸಿಕ ಹಾಗೂ ದೈಹಿಕ ಲಾಭ ಪಡೆಯುತ್ತಾಳೆ. ಎಲ್ಲ ಮಹಿಳೆಯರಿಗೂ ಪರಾಕಾಷ್ಠೆ ಬೇಗ ಸಿಗೋದಿಲ್ಲ. ಕೆಲವರಿಗೆ ಪರಾಕಾಷ್ಠೆ ತಲುಪಲು ದೀರ್ಘ ಸಮಯ ಹಿಡಿಯುತ್ತದೆ. ಪರಾಕಾಷ್ಠೆ ಪಡೆಯದೇ ಲೈಂಗಿಕ ಕ್ರಿಯೆ ಮುಗಿಸುವ ಮಹಿಳೆಯರಿದ್ದಾರೆ. ಬೇಗ ಪರಾಕಾಷ್ಠೆ ತಲುಪದಿರಲು ಅನೇಕ ಕಾರಣವಿದೆ. ಮಹಿಳೆಯರು ಪರಾಕಾಷ್ಠೆಯನ್ನು ಸಾಧಿಸುವುದು ತುಂಬಾ ಕಷ್ಟಕರವಾದ ಅನೇಕ ಆರೋಗ್ಯ ಪರಿಸ್ಥಿತಿಗಳಿವೆ. ನಾವಿಂದು ಅದರ ಬಗ್ಗೆ ಮಾಹಿತಿ ನೀಡ್ತೇವೆ.  

ಪರಾಕಾಷ್ಠೆ (Climax) ಸಾಧಿಸಲು ಸಾಧ್ಯವಾಗದ ಕಾರಣ : 

ಯೋನಿ (Vagina) ಶುಷ್ಕತೆ : ಅನೇಕ ಮಹಿಳೆಯರ ಯೋನಿ ಶುಷ್ಕವಾಗಿರುತ್ತದೆ. ಅದು ಒಣಗಿದಾಗ ಮತ್ತು ತಾನಾಗಿಯೇ ನಯಗೊಳಿಸಲು ಸಾಧ್ಯವಾಗದೆ ಹೋದಾಗ ಸೆಕ್ಸ್ (Sex) ವೇಳೆ ನೋವು ಮತ್ತು ಕಿರಿಕಿರಿಯಾಗುತ್ತದೆ. ಯೋನಿ ಶುಷ್ಕವಾಗಿದ್ದಾಗ ಪರಾಕಾಷ್ಠೆ ತಲುಪಲು ಕಷ್ಟವಾಗುತ್ತದೆ. ಈ ಸತ್ಯ ಅರಿತು ಮಹಿಳೆಯರು ಯೋನಿ ಶುಷ್ಕತೆಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯಬೇಕು. ನೀರು ಆಧಾರಿತ ಲೂಬ್ರಿಕಂಟ್ ಬಳಸಬೇಕು. ಆದ್ರೆ ಯೋನಿ ಶುಷ್ಕತೆಯನ್ನು ತಪ್ಪಿಸಲು ಪರಿಮಳಯುಕ್ತ ಉತ್ಪನ್ನಗಳನ್ನು ಬಳಸಬೇಡಿ. 

ಈ ಪುರುಷರು ತುಂಬಾ ರೋಮ್ಯಾಂಟಿಕ್ ಅಂತೆ, ನಿಮ್ಮ ಗಂಡ ಈ ಪಟ್ಟಿಯಲ್ಲಿದ್ದಾರಾ?

ಯೋನಿಸಂ :  ಮಹಿಳೆಯರ ಯೋನಿಯ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ.  ಇದರಿಂದಾಗಿ ಅಸಹನೀಯ ನೋವು ಉಂಟಾಗುತ್ತದೆ. ಇಂಥ ಸಮಯದಲ್ಲಿ ಮಹಿಳೆಯರಿಗೆ ಲೈಂಗಿಕ ಸುಖ ಸಿಗೋದಿಲ್ಲ. ಸೆಕ್ಸ್ ವೇಳೆ ನೋವು ಕಾಡುತ್ತದೆ. ಪರಾಕಾಷ್ಠೆ ತಲುಪಲು ಸಾಧ್ಯವಾಗುವುದಿಲ್ಲ.  ಇದಕ್ಕೂ ಚಿಕಿತ್ಸೆ ಇದ್ದು, ಸಂಕೋಚ ಬಿಟ್ಟು ಮಹಿಳೆಯರು ವೈದ್ಯರನ್ನು ಭೇಟಿಯಾಗಬೇಕು. 

ಪರಾಕಾಷ್ಠೆ ಸ್ಥಳದ ಬಗ್ಗೆ ಅಜ್ಞಾನ : ಪ್ರತಿಯೊಬ್ಬ ಮಹಿಳೆಯ ದೇಹ ಭಿನ್ನವಾಗಿರುತ್ತದೆ. ಅದ್ರ ಸ್ಪಂದನೆ ಕೂಡ ಭಿನ್ನವಾಗಿರುತ್ತದೆ. ಮಹಿಳೆಯರು ತಮ್ಮ ದೇಹವನ್ನು ಸಂಪೂರ್ಣವಾಗಿ ಅರಿಯಬೇಕು. ಯಾವ ಸ್ಥಳದಲ್ಲಿ ಸ್ಪರ್ಶಿಸಿದ್ರೆ ಉತ್ತೇಜನ ಹೆಚ್ಚಾಗುತ್ತದೆ, ಪರಾಕಾಷ್ಠೆ ತಲುಪಬಹುದು ಎಂಬುದನ್ನು ತಿಳಿಯಬೇಕು. ಇದು ತಿಳಿಯದೆ ಹೋದ್ರೆ ಮಹಿಳೆಯರಿಗೆ ಪರಾಕಾಷ್ಠೆ ತಲುಪುವುದು ಕಷ್ಟವಾಗುತ್ತದೆ. ಹಾಗಾಗಿ ಇದನ್ನು ಅರಿತು, ಸಂಕಾತಿ ಜೊತೆ ಚರ್ಚಿಸಿ, ಪರಾಕಾಷ್ಠೆ ಪಡೆಯಲು ಪ್ರಯತ್ನಿಸಬೇಕು.   

 ಒತ್ತಡ ಮತ್ತು ಖಿನ್ನತೆ :  ಒತ್ತಡ ಮತ್ತು ಖಿನ್ನತೆ ಮಾನಸಿಕ ಹಾಗೂ ದೈಹಿಕ ರೋಗಕ್ಕೆ ಕಾರಣವಾಗುತ್ತದೆ. ಒತ್ತಡದಿಂದ ನಾನಾ ಸಮಸ್ಯೆ ಕಾಡುತ್ತದೆ. ಅದ್ರಲ್ಲಿ ಸೆಕ್ಸ್ ಸಂತೃಪ್ತಿ ಕೂಡ ಸೇರಿದೆ. ಮಹಿಳೆ ಹೆಚ್ಚಿನ ಉದ್ವೇಗದಲ್ಲಿದ್ದರೆ ಆಕೆ ಪರಾಕಾಷ್ಠೆ ತಲುಪಲು ಕಷ್ಟವಾಗುತ್ತದೆ. ಆತಂಕ, ಒತ್ತಡ ದೀರ್ಘಕಾಲದವರೆಗೆ ಮುಂದುವರಿದರೆ ಅವು ಆರೋಗ್ಯಕ್ಕೆ ಮಾರಕ. ಪರಾಕಾಷ್ಠೆ  ಮೆದುಳಿಗೆ ಸಂಬಂಧಿಸಿದ್ದು, ಮಾನಸಿಕ ಶಾಂತಿ ಇಲ್ಲಿ ಮುಖ್ಯ.    

ಹೆಂಡತಿ ತನ್ನ ಗಂಡನ ಈ ಭಾಗವನ್ನು ಮುಟ್ಟಿದರೆ, ಅವನು ಅವಳಿಗೆ ದಾಸನಾಗಬೇಕಂತೆ ಗೊತ್ತಾ?

ದೀರ್ಘ ಅನಾರೋಗ್ಯ : ಸಂಭೋಗದ ವೇಳೆ ಮಹಿಳೆ ಪರಾಕಾಷ್ಠೆ ತಲುಪದೆ ಇರಲು ದೀರ್ಘ ಅನಾರೋಗ್ಯ ಕೂಡ ಕಾರಣ. ಅನೇಕ ದಿನಗಳಿಂದ ಮಹಿಳೆ ಅನಾರೋಗ್ಯಕ್ಕೆ ಒಳಗಾಗಿದ್ದು,  ಔಷಧಿ (Medicine), ಮಾತ್ರೆಗಳನ್ನು ಸೇವನೆ ಮಾಡುತ್ತಿದ್ದರೆ  ಅಂಥ ಮಹಿಳೆಯರು ಪರಾಕಾಷ್ಠೆಯನ್ನು ತಲುಪುವುದು ಕಷ್ಟವಾಗುತ್ತದೆ.  ಮಧುಮೇಹ, ಸಂಧಿವಾತ, ಸಂತಾನೋತ್ಪತ್ತಿ ಸಮಸ್ಯೆ ಇವೆಲ್ಲವೂ ಇದಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆ ಇರುವ ಮಹಿಳೆಯರು ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಹೆಚ್ಚು ನೋವು ಅನುಭವಿಸುತ್ತಾರೆ. ಪರಾಕಾಷ್ಠೆ ತಲುಪಲು ತುಂಬಾ ಕಷ್ಟವಾಗುತ್ತದೆ.  

ಯಾವುದೇ ಲೈಂಗಿಕ ಸಮಸ್ಯೆ (Sexual health) ಇದ್ದರೂ ಮಹಿಳೆಯರು ವೈದ್ಯರನ್ನು ಭೇಟಿಯಾಗಬೇಕು. ಸೂಕ್ತ ಚಿಕಿತ್ಸೆ (Treatment) ಪಡೆಯಬೇಕು. ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯರು ಪರಾಕಾಷ್ಠೆಗೆ (Women Organism) ಏನು ಮಾಡ್ಬೇಕು ಎಂಬುದನ್ನು ಅರಿಯಬೇಕು. ಲೈಮಗಿಕ ಜೀವನ (Sexual Health) ದಂಪತಿ (Couple) ಮಧ್ಯೆ ಪ್ರೀತಿ (Love) ಹೆಚ್ಚಿಸುತ್ತೆ ಎಂಬುದು ನೆನಪಿರಲಿ.  

Follow Us:
Download App:
  • android
  • ios