Asianet Suvarna News Asianet Suvarna News

ಅಶ್ಲೀಲ ವಿಡಿಯೋ ಪ್ರಕರಣ, ಅತ್ಯಾಚಾರ ಎಸಗಿ ವಿದೇಶದಲ್ಲಿ ಹಾಯಾಗಿ ಕುಳಿತರಾ ಪ್ರಜ್ವಲ್ ರೇವಣ್ಣ?

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಮಾಡಿದ್ದು ಯಾರು?ದೇಶದ ಹೆಣ್ಣುಮಕ್ಕಳ ಮುಂದೆ ಮೋದಿ ಕ್ಷಮೆ ಕೇಳಬೇಕು, ರಾಹುಲ್ ಆಗ್ರಹ, ಭಾರತದಲ್ಲಿ ಕಾಂಗ್ರೆಸ್ ಸಾಯುತ್ತಿದೆ, ಪಾಕಿಸ್ತಾನ ಅಳುತ್ತಿದೆ, ಮೋದಿ ವಾಗ್ದಾಳಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸುಂಟರಗಾಳಿಯಂತೆ ಕೋಲಾಹಲ ಸೃಷ್ಟಿಸಿದೆ. ದಿನದಿಂದ ದಿನಕ್ಕೆ ಈ ಪ್ರಕರಣ ತೀವ್ರಗೊಳ್ಳುತ್ತಿದೆ. ಇದೀಗ ಪ್ರಜ್ವಲ್ ಹಾಗೂ ತಂದೆ ರೇವಣ್ಣ ವಿರುದ್ಧ ಅತ್ಯಾಚಾರ ದೂರು ದಾಖಲಾಗಿದೆ. ಹೊಳೆನರಸೀಪುರದಲ್ಲಿ ಈ ಮೊದಲು ದಾಖಲಾಗಿದ್ದ ದೂರಿನಲ್ಲಿ ಅತ್ಯಾಚಾರ ಉಲ್ಲೇಖವಾಗಿರಲಿಲ್ಲ. ಇದೀಗ ಅದೇ ಪ್ರಕರಣದಲ್ಲಿ ಅತ್ಯಾಚಾರ ಆರೋಪ ಸೇರಿಸಲಾಗಿದೆ. ಈ ಮೂಲಕ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಹೆಚ್ಚಾಗಿದೆ. ಇತ್ತ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಮಾಡಿದ್ದು ಕಾಂಗ್ರೆಸ್ ಸಚಿವ ಜಮೀರ್ ಅಹಮ್ಮದ್ ಖಾನ್ ಆಪ್ತ ನವೀನ್ ಗೌಡ ಅನ್ನೋ ಮಾಹಿತಿ ಬಹಿರಂಗವಾಗಿದೆ. ನವೀನ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ಗಳು ಈ ಸೂಚನೆ ನೀಡಿದೆ. ಈ ಕುರಿತು ನವೀನ್ ಗೌಡಾಗೆ ನೋಟಿಸ್ ನೀಡಲಾಗಿದೆ.
 

Video Top Stories