userpic
user icon

ಸಿದ್ದು ಸರ್ಕಾರದ ಮೊದಲ ಟಾರ್ಗೆಟ್‌ ಆಕ್ಷಿಜನ್‌ ದುರಂತ: ಮರು ತನಿಖೆ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ

Sathish Kumar KH  | Published: Jun 6, 2023, 11:58 PM IST

ಚಾಮರಾಜನಗರ (ಜೂ.06): ರಾಜ್ಯದ ಚಾಮರಾಜನಗರದಲ್ಲಿ ಕೋವಿಡ್‌ ವೇಳೆ ನಡೆದ ಆಕ್ಸಿಜನ್‌ ದುರಂತದ ಬಗ್ಗೆ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ, ದುರಂತದ ಬಗ್ಗೆ ಅಧಿಕಾರಿಗಳ ಮೇಲೆ ಕಠಿಣ ಶಿಕ್ಷೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮರು ತನಿಖೆ ನಡೆಸುವ ಬಗ್ಗೆ ಕಾಂಗ್ರೆಸ್‌ ಸರ್ಕಾರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಕೆಪಿಸಿಸಿ ಸದಸ್ಯರಿಂದ ಚಾಮರಾಜನಗರದ ಕೋವಿಡ್‌ ಸೋಂಕಿತರ ಮೃತ ಕುಟುಂಬದವರನ್ನು ಭೇಟಿ ಮಾಡಿ ಮಾಹಿತಿಯನ್ನು ಪಡೆಯಲಾಗಿದೆ. ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿನ ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 36 ರೋಗಿಗಳು ಆಕ್ಸಿಜನ್‌ ಕೊರತೆಯಿಂದ ಸಾವನ್ನಪ್ಪಿದ್ದರು. ಈ ಕುರಿತಂತೆ ಮರು ತನಿಖೆ ಮಾಡಲು ಚಿಂತನೆ ನಡೆಸಿದೆ. ಆದರೆ, ಮುಗಿದು ಹೋದ ಅಧ್ಯಾಯಕ್ಕೆ ಮತ್ಯಾಕೆ ಮರುಜೀವ ಕೊಡಬೇಕು ಎಂದು ಕೇಳಿಬಂದಿದೆ. 

Must See