userpic
user icon

ಕನಸಲ್ಲೂ ಕಾಡೋ ಅಂದ..ಮನಸ್ಸಲ್ಲಿ ಉಳಿಯೋ ಚೆಂದ: ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಂಡ ಆರಾಧನಾ..!

Bindushree N  | Published: Oct 2, 2023, 9:46 AM IST

ಅಮ್ಮ ಮಾಲಾಶ್ರೀಯಂತೆ ಆರಾಧನಾ ಸೌಂದರ್ಯ ದೇವತೆನೆ. ಲಂಗ ದಾವಣಿ ಹಾಕಿ ಹಳ್ಳಿ ಹುಡುಗಿ ಆಗೋಕು ಒಕೆ. ಮಿನಿ ಸ್ಕರ್ಟ್ ಆಗಿ ಮಾಡ್ರನ್ ಹುಡ್ಗಿ ಆಗೋಕೂ ಸೈ ಎಂಥಾ ಪಾತ್ರಕ್ಕೂ ಈಕೆ ಸೂಪರೇ. ಅದಕ್ಕೆ ಎಕ್ಸಾಂಪ್ ಕಾಟೇರ ಸಿನಿಮಾದ ಈ ಲುಕ್. ಮಾಲಾಶ್ರೀ(Malashree ) ಮಗಳು ತರುಣ್ ಸುದೀರ್ ನಿರ್ದೇಶನ ಕಾಟೇರ ಸಿನಿಮಾದ(Katera movie) ಹೀರೋಯಿನ್ ಆಗಿ ನೆಲೆ ಕಂಡುಕೊಂಡಿದ್ದಾರೆ. ಅಮ್ಮ ಮಾಲಾಶ್ರೀ 15ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದ್ರೆ ಮಗಳು ಆರಾಧನಾ (Aradhana) 21ನೇ ವಯಸ್ಸಿಗೆ ಚಿತ್ರರಂಗ ಪ್ರವೇಶಿಸಿದ್ದಾರೆ. ಅಮ್ಮ ಮಾಲಾಶ್ರೀ ಸೂಪರ್ ಸ್ಟಾರ್ ನಟಿ ಆದ್ರೇನಂತೆ. ಅಭಿನಯದ ಭಂಡಾರ ಮಾಲಾಶ್ರೀ ಬಳಿ ಇದ್ದರೇನಂತೆ. ಸಿನಿ ರಂಗದ ಎಂಟ್ರಿಗೆ ಮಾಲಾಶ್ರೀ ಮಗಳನ್ನೂ ಬಿಡಲಿಲ್ಲ ಸ್ಟ್ರಗಲ್. ಪಧವಿ ಮುಗಿಸಿರೋ ಆರಾಧನಾ ಮುಂಬೈನ ಅನುಪಮ್ ಖೇರ್ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದೇ ಚಿತ್ರರಂಗಕ್ಕೆ ಬಂದಿದ್ದಾರೆ. ಈಗ ಕಾಟೇರ ಸಿನಿಮಾದಲ್ಲಿ ಪ್ರಭಾವತಿ ಅನ್ನೋ ರೋಲ್ ಮಾಡ್ತಿರೋ ಆರಾಧನಾ ಲುಕ್ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ.

ಇದನ್ನೂ ವೀಕ್ಷಿಸಿ:  ಟಗರು ಪಲ್ಯ ಮೂಲಕ ಅಮೃತಾ ಪ್ರೇಮ್ ಸಿನಿಮಾ ಎಂಟ್ರಿ: ಹಿಟ್ಟಾಗೋಯ್ತು ಸೂರ್ಯಕಾಂತಿ ಹಾಡು !

Must See