Asianet Suvarna News Asianet Suvarna News

KS Eshwarappa: ಈಶ್ವರಪ್ಪಗೆ ಖಡಕ್ ಸಂದೇಶ ಕೊಟ್ಟ ಬಿಜೆಪಿ ಹೈಕಮಾಂಡ್! ಮೋದಿ ಹೇಳಿದ್ರೂ ಬಗ್ಗಲ್ಲ ಅಂದಿದ್ಯಾಕೆ ಮಾಜಿ ಸಚಿವ ?

ಕೆ.ಎಸ್‌.ಈಶ್ವರಪ್ಪ ಮನವೊಲಿಕೆ ಕೈಬಿಟ್ಟ ಬಿಜೆಪಿ ಹೈಕಮಾಂಡ್
ಇತ್ತೀಚೆಗೆ ಈಶ್ವರಪ್ಪನವರನ್ನ ದೆಹಲಿಗೆ ಆಹ್ವಾನಿಸಿದ್ದ ಅಮಿತ್ ಶಾ
ದೆಹಲಿಗೆ ಕರೆಸಿಕೊಂಡು ಭೇಟಿಗೆ ಮುಂದಾಗಿರಲಿಲ್ಲ ಅಮಿತ್ ಶಾ

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಬಿಜೆಪಿ ಹೈಕಮಾಂಡ್(BJP High Command) ಮುಂದಾಗಿದೆ. ನಾಮಪತ್ರ ವಾಪಸ್ ಪಡೀದಿದ್ರೆ ಬಿಜೆಪಿಯಿಂದ ಈಶ್ವರಪ್ಪ(KS Eshwarappa) ಉಚ್ಛಾಟನೆ ಮಾಡುವ ಸಾಧ್ಯತೆ ಇದೆ. ಏಪ್ರಿಲ್ 22ರ ವರೆಗೂ ಕಾದು ನೋಡಲು ಹೈಕಮಾಂಡ್ ಮುಂದಾಗಿದೆ. ಈಶ್ವರಪ್ಪರನ್ನ ಪಕ್ಷದಿಂದ ಉಚ್ಛಾಟಿಸೋ ನಿರ್ಧಾರಕ್ಕೆ ಹೈಕಮಾಂಡ್ ಬಂದಿದ್ದು, ಶಿವಮೊಗ್ಗದಲ್ಲಿ ಬಿಜೆಪಿ(BJP) ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧೆ ಮಾಡಿದ್ದಾರೆ. ಕೆ.ಎಸ್ ಈಶ್ವರಪ್ಪ ಮನವೊಲಿಕೆಯನ್ನು ಬಿಜೆಪಿ ಹೈಕಮಾಂಡ್ ಕೈಬಿಟ್ಟಿದೆ. ನಾಮಪತ್ರ(Nomination) ವಾಪಸ್ ಪಡೀದಿದ್ರೆ ಉಚ್ಛಾಟನೆ ಎಂದು ಈಶ್ವರಪ್ಪಗೆ ಸಂದೇಶ ರವಾನಿಸಲಾಗಿದೆಯಂತೆ. ಬಿಜೆಪಿ ವರಿಷ್ಠರ ಮನವಿಗೆ ಇದುವರೆಗೂ ಕೆ.ಎಸ್ ಈಶ್ವರಪ್ಪ ಬಗ್ಗಿಲ್ಲ. ನಾಮಪತ್ರ ಸಲ್ಲಿಸಿ ಮೋದಿ ಹೆಸರಲ್ಲಿ ಈಶ್ವರಪ್ಪ ಪ್ರಚಾರ ಮಾಡ್ತಿದ್ದಾರೆ.  

ಇದನ್ನೂ ವೀಕ್ಷಿಸಿ:  ABP-CVoter Survey: ಮತದಾನಕ್ಕೂ ಮುನ್ನ ಮತ್ತೊಂದು ಮೆಗಾ ಸರ್ವೆ: ಕರುನಾಡಲ್ಲಿ 'ಕೈ' ಗ್ಯಾರಂಟಿನಾ? ಮೋದಿ ಮ್ಯಾಜಿಕ್ಕಾ?

Video Top Stories