Asianet Suvarna News Asianet Suvarna News

ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಉಗ್ರರು ಬೆಂಗಳೂರಿಗೆ ಶಿಫ್ಟ್: ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಸಿದ್ಧತೆ

ತಡರಾತ್ರಿ ಇಂಟ್ರಾಗೇಷನ್ ಸೆಲ್‌ಗೆ ಕರೆತಂದಿರುವ ಎನ್‌ಐಎ
ರಾತ್ರಿಯಿಂದಲೇ ಇಂಟ್ರಾಗೇಷನ್ ಸೆಲ್‌ನಲ್ಲೇ ಇರುವ ಶಂಕಿತರು
ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ(Rameshwaram Cafe Blast) ಆರೋಪಿಗಳುನ್ನು ಎನ್‌ಐಎ(NIA) ಬೆಂಗಳೂರಿಗೆ(Bengaluru) ಕರೆತಂದಿದೆ. ಇಂದು ಬೆಳಗ್ಗೆ 10.30ಕ್ಕೆ ಕೋರಮಂಗಲದ ನ್ಯಾಯಾಧೀಶರ ನಿವಾಸಕ್ಕೆ ಶಂಕಿತರನ್ನು ಹಾಜರು ಪಡಿಸಲಾಗುವುದು. ನ್ಯಾಯಾಧೀಶರ ಸಮಕ್ಷಮ ಹಾಜರುಪಡಿಸಲಿರುವ ಎನ್ಐಎ ಅಧಿಕಾರಿಗಳು. ಕೋರಮಂಗಲದ ರಾಷ್ಟ್ರೀಯ ಕ್ರೀಡಾ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಗುವುದು. ಪಶ್ಚಿಮ ಬಂಗಾಳದಿಂದ‌ (West Bengal) ಕರೆತರಲು ಟ್ರಾನ್ಸಿಟ್ ವಾರೆಂಟ್‌ನನ್ನು ಎನ್‌ಐಎ ಅಧಿಕಾರಿಗಳು ಪಡೆದಿದ್ದರು. ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಎನ್ಐಎ ಕಸ್ಟಡಿಗೆ ಪಡೆಯುವ  ಸಾಧ್ಯತೆ ಇದೆ. ಸದ್ಯ ಮಡಿವಾಳದ ಇಂಟ್ರಾಗೇಷನ್ ಸೆಲ್‌ನಲ್ಲಿ ಶಂಕಿತರು ಇದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಸೌರ ಯುಗಾದಿ ಮಹತ್ವವೇನು ? ಇದನ್ನು ಆಚರಿಸುವುದರಿಂದ ದೊರೆಯುವ ಫಲವೇನು ?

Video Top Stories