userpic
user icon

ಹಾಡಿನ ವಿಷ್ಯಕ್ಕೆ ಶುರುವಾದ ಗಲಾಟೆ: ದುಡ್ಡು ಹಾಕಿ ಸಮಾರಂಭ ಆಯೋಜಿಸಿದ್ದವನೇ ಕೊಲೆಯಾದ ..!

Bindushree N  | Published: Jun 6, 2023, 1:41 PM IST

ಅವರೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಒಂದೇ ಗ್ರಾಮದ ಅಣ್ಣ ತಮ್ಮಂದಿರಂತೆ ಇದ್ದವರು. ಮೊನ್ನೆಯ ಎಲೆಕ್ಷನ್‌ನಲ್ಲಿ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಗೆದ್ದಾಗ ಫುಲ್ ಖುಷಿಯಾಗಿದ್ರು. ಆಖುಷಿಯನ್ನ ತಮ್ಮ ಶಾಸಕನ ಜೊತೆ ಹಂಚಿಕೊಳ್ಳಬೇಕು ಅಂತ ಆವತ್ತು ಅವರದ್ದೇ ಗ್ರಾಮಕ್ಕೆ ಶಾಸಕರನ್ನ ಕರೆದು ಅದ್ಧೂರಿಯಾಗಿ ಸಮಾರಂಭ ಮಾಡಿದ್ರು. ಆದ್ರೆ ಅದೇನಾಯ್ತೋ ಏನೋ ಅದೇ ಸಮಾರಂಭದಲ್ಲಿ ಒಂದು ಹೆಣಬಿದ್ದಿತ್ತು. ಶಾಸಕರ ಎದುರು ಒಬ್ಬನ ಪ್ರಾಣ ಹಾರಿ ಹೋಗಿತ್ತು. ಇನ್ನೂ ಕೊಂದವರು ಬೇರೆ ಯಾರೋ ಆಗಿರಲಿಲ್ಲ. ಅದೇ ಗ್ರಾಮದವರಾಗಿದ್ರು. ಅಲ್ಲಿ ಕೊಲೆ ಆಗಿದ್ದು ಮಾತ್ರ, ಕೇವಲ ಒಂದೇ ಒಂದು ಹಾಡಿಗೆ ಆಗಿತ್ತು. ಒಂದು ಹಾಡಿಗೆ ಕೊಲೆ ಆಗುತ್ತೆ ಅಂದ್ರೆ ಆ ನಾಗರೀಕ ಸಮಾಜ ಎತ್ತ ಸಾಗ್ತಿದೆ, ಆಧುನಿಕತೆಯನ್ನ ಜನ ಹೇಗೆ ಸ್ವೀಕರಿಸುತ್ತಿದ್ದಾರೆ ಅನ್ನೋದನ್ನ ಗಂಭೀರವಾಗಿ ಯೋಚಿಸಬೇಕಿದೆ.

ಇದನ್ನೂ ವೀಕ್ಷಿಸಿ: ಚಿಪ್ಪಿಕಲ್ಲಿನಲ್ಲಿ ಕಂಡು ಬಂದ ಮುತ್ತು..!: ಗೋಕರ್ಣ ಸಮೀಪ ತದಡಿಯಲ್ಲಿ ಪತ್ತೆ

Must See