ಚಟ್ ಪಟಾಕಿ ಛಾಯಾ ಸಿಂಗ್ಗೆ ಹ್ಯಾಪಿ ಬರ್ತ್ ಡೇ, ಈ ರಜಪೂತ ನಟಿಗೆ ದಿನದ ಸಂಭಾವನೆ ಎಷ್ಟು?
ಛಾಯಾ ಸಿಂಗ್ ಸದ್ಯಕ್ಕೀಗ ಅಮೃತಧಾರೆಯ ಭೂಮಿಕಾ ಆಗಿ ಕನ್ನಡಿಗರ ಮನೆ ಮಾತಾಗಿದ್ದಾರೆ. ಇವರ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.
ಚಟ ಪಟ ಅಂತ ಕನ್ನಡ ಮಾತಾಡೋ ಛಾಯಾ ಸಿಂಗ್ ರಜಪೂತ ಕುಟುಂಬಕ್ಕೆ ಸೇರಿದವರು. ಆದರೆ ಬೆಳೆದದ್ದೆಲ್ಲ ಬೆಂಗಳೂರಿನಲ್ಲಿ. ಬೆಂಗಳೂರಿನ ಲೌರ್ಡ್ಸ್ ಶಾಲೆಯಲ್ಲಿ ಓದದಿರು. ಹೀಗಾಗಿ ಕನ್ನಡ ಭಾಷೆ ಅಷ್ಟು ಚಂದ ಮಾತಾಡ್ತಾರೆ. ನಮ್ಮಲ್ಲಿ ಛಾಯಾ ಸಿಂಗ್ ಅಂದ್ರೆ ಈ ಮೊದಲು ಚಿಟ್ಟೆ ಅಂತನೇ ಜನ ಕರೀತಿದ್ರು. ಕಾರಣ ಅವರು ನಟಿಸಿರೋ 'ಚಿಟ್ಟೆ' ಅನ್ನೋ ಸಿನಿಮಾ. ಇದರ ಜೊತೆಗೆ ಅನಿರುದ್ಧ ಅವರ ಜೊತೆ ನಾಯಕಿಯಾಗಿ ನಟಿಸಿದ 'ತುಂಟಾಟ' ಚಿತ್ರವೂ ಸಖತ್ ಫೇಮಸ್ ಆಯ್ತು. ಈಕೆ ನಟನೆ ಶುರು ಮಾಡಿದ್ದೇ ಕನ್ನಡ ಸಿನಿಮಾರಂಗದಿಂದ. 2000ನೇ ಇಸವಿಯಲ್ಲಿ ತೆರೆಕಂಡ ಪಿ ಶೇಷಾದ್ರಿ ನಿರ್ದೇಶನದ `ಮುನ್ನುಡಿ' ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇವರು ನಟಿಸಿದ ಈ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿತ್ತು. ಇದರಲ್ಲಿ ಅಪ್ಪಟ ಮುಸ್ಲಿಂ ಹೆಣ್ಣು ಮಗಳಾಗಿ ಇವರ ಪಾತ್ರಕ್ಕೆ ಮೆಚ್ಚುಗೆಯೂ ಸಿಕ್ಕಿತು.
ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲಿ ನಟಿಸಿದ್ದಾರೆ.
ತುಂಟಾಟ ಸಿನಿಮಾ ಬಳಿಕ ಕಾಲಿವುಡ್ಗೆ ಎಂಟ್ರಿಕೊಟ್ಟ ಛಾಯಾ, ಧನುಷ್ ಜೊತೆ 'ತಿರುಡಾ ತಿರುಡಿ' ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ನಂತರ ಮಲಯಾಳಂ ಸಿನಿಮಾ ರಂಗಕ್ಕೂ ಕಾಲಿಟ್ಟರು. ಹೀಗೆ ನಟನೆಯಲ್ಲಿ ಮುಂದುವರೆದ ಛಾಯಾ ಸಿಂಗ್, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲೂ ನಟಿಸಿದ್ದಾರೆ. ಜೊತೆಗೆ ಬಂಗಾಳಿ ಭಾಷೆಯಲ್ಲಿ 'ಕಿ ಕೋರ್ ಬೋಝಭೋ ತೊಮಾಕೆ' ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಛಾಯಾ ಕೇವಲ ನಟಿಯಷ್ಟೇ ಅಲ್ಲ, ಅದ್ಭುತ ಡ್ಯಾನ್ಸರ್ ಕೂಡ ಆಗಿದ್ದಾರೆ. ಅವರ ನೃತ್ಯಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ. ಛಾಯಾ ಸಿಂಗ್ 2012ರಲ್ಲಿ ಕೃಷ್ಣ ಎಂಬುವವರನ್ನು ಮದುವೆಯಾದರು. 2010ರಲ್ಲಿ ತೆರೆಕಂಡ 'ಆನಂದಪುರತು ವೀಡು' ಎಂಬ ಸೂಪರ್ ನ್ಯಾಚುರಲ್ ಮಿಸ್ಟರಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದಲ್ಲಿ ಛಾಯಾ ನಾಯಕಿ ಪಾತ್ರ ಮಾಡಿದ್ದರೆ, ಕೃಷ್ಣ ವಿಲನ್ ಪಾತ್ರ ಮಾಡಿದ್ದರು. ನಂತರ ಇಬ್ಬರ ನಡುವೆ ಸ್ನೇಹ ಶುರುವಾಗಿ, ಆ ಸ್ನೇಹ ಪ್ರೀತಿಗೆ ತಿರುಗಿತು.
ಬಿಗ್ ಬಾಸ್ ಸೀಸನ್ 1 ನನ್ನ ಜೀವನದಲ್ಲಿ ಅವಕಾಶಗಳಿಗೆ ತೆರೆದ ಬಾಗಿಲು: ಅನುಶ್ರೀ ಸಂತಸ
ನಂದಿನಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಮರಳಿದ್ದ ಛಾಯಾ, ಸದ್ಯ ಅಮೃತಧಾರೆ ಧಾರಾವಾಹಿಯ ನಟನೆ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅಂದಹಾಗೆ ಅಮೃತಧಾರೆಯ ಭೂಮಿಕಾಗೆ 36 ವರ್ಷ ವಯಸ್ಸಾಗಿದ್ದಾಗಿದ್ದು, ಈ ಪಾತ್ರದಲ್ಲಿ ಸಖತ್ತಾಗಿ ನಟಿಸುತ್ತಿರುವ ಛಾಯಾಸಿಂಗ್ ಅವರಿಗೆ 42 ವರ್ಷ ವಯಸ್ಸು.
ಅದೆಲ್ಲ ಸರಿ, ಈ ಸೀರಿಯಲ್ನಲ್ಲಿ ಭೂಮಿಕಾ ಪಾತ್ರವನ್ನು ಅಷ್ಟು ಸೊಗಸಾಗಿ ಅಭಿನಯಿಸೋ ಇವರಿಗೆ ಎಷ್ಟು ಸಂಭಾವನೆ ಸಿಗುತ್ತಿರಬಹುದು ಅನ್ನುವ ಪ್ರಶ್ನೆ ನಿಮಗೆ ಬರಬಹುದು. ಮೂಲಗಳ ಪ್ರಕಾರ ಈಕೆ ಒಂದು ಎಪಿಸೋಡ್ಗೆ 23,000 ರು. ಸಂಭಾವನೆ ಪಡೆಯುತ್ತಿದ್ದಾರೆ. ಒಂದು ಎಪಿಸೋಡಿಗೆ ಇಷ್ಟಾದರೆ ತಿಂಗಳಿಗೆ ಎಷ್ಟಾಯ್ತು ಅಂತ ನೀವೇ ಲೆಕ್ಕ ಹಾಕ್ಕೊಳ್ಳಿ. ಕನ್ನಡ ಸೀರಿಯಲ್ ಮಾತ್ರವಲ್ಲ, ತಮಿಳು ಸೀರಿಯಲ್ನಲ್ಲೂ ಛಾಯಾ ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ.
ಕೆಂಡ ಸಂಪಿಗೆ ಸೀರಿಯಲ್ ಬಿಡಲು ಕಾರಣವೇನು? ಸುಮನಾ ಪಾತ್ರಧಾರಿ ನಟಿ ಕಾವ್ಯ ಹೇಳಿದ್ದೇನು?
ಈ ನಟಿಯ ಮನೆಯಲ್ಲಿ ಕಳ್ಳತನವಾದದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಮನೆ ಕೆಲಸದಾಕೆಯ ಮೇಲೆ ಕಳ್ಳತನದ ಆರೋಪವಿತ್ತು. ವಿಚಾರಣೆಯಲ್ಲಿ ಆಕೆಯಿಂದ ಸಾಕಷ್ಟು ಬಂಗಾರ, ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.
ಸದ್ಯ ಸೀರಿಯಲ್ನಲ್ಲಿ ಭೂಮಿಕಾ ಹಾಗೂ ಗೌತಮ್ ಹನಿಮೂನ್ ಮೂಡ್ನಲ್ಲಿ ಚಿಕ್ಕಮಗಳೂರಿಗೆ ತೆರಳಿದ್ದಾರೆ.