ಈ ಟಾಯ್ಲೆಟ್ ಒಳಗಿಂದೆಲ್ಲ ಕಾಣಿಸುತ್ತೆ, ಆದರೂ ಜನ ಇಲ್ಲಿಗೇ ಹೋಗ್ತಾರೆ! ಇದಕ್ಕೊಂದು ಟ್ವಿಸ್ಟ್ ಇದೆ

ವಿಶ್ವದಾದ್ಯಂತ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಜಪಾನ್ ನಲ್ಲಿ ವಿಭಿನ್ನ ಟಾಯ್ಲೆಟ್ ನಿರ್ಮಾಣವಾಗಿದೆ. ಗಾಜಿನಿಂದ ತಯಾರಾದ ಈ ಶೌಚಾಲಯದಲ್ಲಿ ಒಳಗಿರೋದೆಲ್ಲ ಕಾಣಿಸುತ್ತೆ. ಆದ್ರೂ ಜನ ಅದ್ರೊಳಗೆ ಹೋಗಿ ಬಂದು ಮಾಡ್ತಾರೆ. 

Transparent Toilet Unique Technology Of Japan roo

ಟಾಯ್ಲೆಟ್ ಎಂಬ ಪದ ಕೇಳಿದಾಗ ಮೊದಲು ಮನಸ್ಸಿಗೆ ಬರುವುದು ಖಾಸಗಿತನ. ಅಂದರೆ ನೀವು ಒಬ್ಬಂಟಿಯಾಗಿರುವ ಸ್ಥಳ. ಯಾರೂ ನನ್ನನ್ನು ನೋಡೋದಿಲ್ಲ ಎಂದು ನೀವು ಭಾವಿಸ್ತೀರಿ. ಮನೆಯಲ್ಲಿ ನೀವು ಆರಾಮವಾಗಿ ಶೌಚಾಲಯ ಬಳಸುತ್ತೀರಿ. ಅದೇ ಸಾರ್ವಜನಿಕ ಶೌಚಾಲಯಕ್ಕೆ ಹೋದಾಗ ಸ್ವಚ್ಛತೆ ಜೊತೆ ನಿಮ್ಮ ಖಾಸಗಿತನದ ಬಗ್ಗೆ ಸ್ವಲ್ಪ ಕಾಳಜಿವಹಿಸುತ್ತೀರಿ. ಸಾರ್ವಜನಿಕ ಶೌಚಾಲಯದ ಹೊರಗೆ ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಿರುತ್ತಾರೆ. ಅದೇ ಒಳಗೆ ಸಿಸಿಟಿವಿ ಇರೋದಿಲ್ಲ. ಆದ್ರೆ ಪಾರದರ್ಶಕವಾಗಿರುವ ಶೌಚಾಲಯಕ್ಕೆ ಹೋಗುವಂತೆ ನಿಮಗೆ ಸಲಹೆ ನೀಡಿದ್ರೆ ಏನು ಮಾಡ್ತೀರಿ. ಇಂಥ ಶೌಚಾಲಯವೊಂದು ಜಪಾನ್ ನಲ್ಲಿ ಇದೆ. ಇದು ಸಂಪೂರ್ಣ ಪಾರದರ್ಶಕವಾಗಿದೆ. 

ಸಾರ್ವಜನಿಕ (Public) ಶೌಚಾಲಯಕ್ಕೆ ನೀವು ಹೋದಾಗ, ಒಳಗೆ ಏನು ಮಾಡ್ತಿದ್ದೀರಿ ಎಂಬುದು ಬೇರೆಯವರಿಗೆ ಕಾಣಿಸುತ್ತಿದ್ದರೆ ನೀವು ಶೌಚಾಲಯ (Toilet) ದೊಳಗೆ ಹೋಗಿ ಏನು ಪ್ರಯೋಜನ. ನೀವು ಆರಾಮವಾಗಿ ಬಯಲು ಶೌಚಾಲಯದಲ್ಲೇ ನಿಮ್ಮ ಕೆಲಸ ಮುಗಿಸಬಹುದು. ಆದ್ರೆ ಜಪಾನ್ ಜನ ಹಾಗಲ್ಲ. ಪಾರದರ್ಶಕ (Transparent) ಶೌಚಾಲಯವನ್ನು ಬಳಸ್ತಾರೆ. ಈ ಶೌಚಾಲಯದ ಕಮೋಡ್ ಸೇರಿದಂತೆ ಒಳಗೆ ಯಾರಿದ್ದಾರೆ ಎಂಬುದೆಲ್ಲ ಕಾಣಿಸುತ್ತದೆ. ಸಾರ್ವಜನಿಕರು ಹೊರಗೆ ನಿಂತು ನೀವು ಒಳಗೆ ಏನು ಮಾಡ್ತಿದ್ದೀರಿ ಎಂಬುದನ್ನು ನೋಡ್ಬಹುದು.   

ಹಾವನ್ನು ನೂಡಲ್ಸ್‌ನಂತೆ ಎಳೆದು ನುಂಗಿದ ಗೂಬೆ! ವೈರಲ್ ವಿಡಿಯೋ ನೋಡಿ ನೆಟಿಜನ್ಸ್ ಶಾಕ್

ಗಾಜಿನಿಂದ ನಿರ್ಮಿಸಲಾದ ಶೌಚಾಲಯ : ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನ yefactsofficial ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಜನರು ಶಾಚಾಲಯದೊಳಗೆ ಹೋಗೋದನ್ನು ನೀವು ನೋಡ್ಬಹುದು. ಇದನ್ನು ಸಂಪೂರ್ಣ ಗಾಜಿನಿಂದ ನಿರ್ಮಿಸಲಾಗಿದೆ. ತಿಳಿ ಬಣ್ಣದ ಗಾಜಾಗಿದ್ದರೂ ನೀವು ಒಳಗಿನ ದೃಶ್ಯವನ್ನು ಸರಿಯಾಗಿ ನೋಡ್ಬಹುದು. ವಿಶೇಷ ತಂತ್ರಜ್ಞಾನದಿಂದ ಈ ಶೌಚಾಲಯವನ್ನು ನಿರ್ಮಿಸಲಾಗಿದೆ.

ಶೌಚಾಲಯದೊಳಗೆ ಕಮೋಡ್, ವಾಸ್ ಬೇಸಿನ್, ಪುರುಷರ ಶೌಚಾಲಯವಿದೆ. ಜನರು ಅದರ ಒಳಗೆ ಹೋಗ್ತಿರೋದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು.  ಶೌಚಾಲಯದೊಳಗೆ ನೀವು ಏನ್ಮಾಡ್ತೀರಿ ಎಂಬುದು ಗೊತ್ತಾಗ್ತಿದ್ದರೂ ಜನ ಯಾಕೆ ಶೌಚಾಲಯಕ್ಕೆ ಹೋಗ್ತಾರೆ ಅಂತಾ ನೀವು ಪ್ರಶ್ನೆ ಮಾಡಬಹುದು. ಅದೊಂದು ವಿಶೇಷತೆ ಹೊಂದಿದೆ. ನೀವು ಶೌಚಾಲಯಕ್ಕೆ ಹೋಗಿ ಸರಿಯಾಗಿ ಲಾಕ್ ಮಾಡದೆ ಹೋದ್ರೆ ನೀವು ಒಳಗೆ ಮಾಡಿದ್ದೆಲ್ಲ ಕಾಣಿಸುತ್ತದೆ. ಅದೇ ನೀವು ಲಾಕ್ ಮಾಡಿದ್ರೆ ಗ್ಲಾಸ್ ಮಸುಬಾಗಿ ಒಳಗಿನದ್ದು ಏನೂ ಕಾಣಿಸೋದಿಲ್ಲ. 

ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಜನರು ಒಳಗೆ ಹೋಗಿದ್ದು ಕಾಣಿಸುತ್ತದೆ. ಅವರು ಲಾಕ್ ಮಾಡ್ತಿದ್ದಂತೆ ಗ್ಲಾಸ್ ಮಸುಬಾಗುತ್ತದೆ. ನೀವು ಲಾಕ್ ತೆಗೆದ ನಂತ್ರ ಮತ್ತೆ ಅದು ಪಾರದರ್ಶಕವಾಗುತ್ತದೆ. ಈ ವಿಡಿಯೋವನ್ನು ಈಗಾಗಲೇ ಅನೇಕರು ವೀಕ್ಷಿಸಿದ್ದಾರೆ. ಜಪಾನ್‌ನ ವಿಶಿಷ್ಟ ತಂತ್ರಜ್ಞಾನ ಎಂದು ಈ ವಿಡಿಯೋಗೆ ಶೀರ್ಷಿಕೆ ಹಾಕಲಾಗಿದೆ. ನಾಲ್ಕು ಸಾವಿರಕ್ಕೂ ಹೆಚ್ಚಿ ಮಂದಿ ಈ ವಿಡಿಯೋ ಲೈಕ್ ಮಾಡಿದ್ದಾರೆ. 

ಇನ್ಸ್ಟಾಗ್ರಾಮ್ ಬಳಕೆದಾರರು ಈ ತಂತ್ರಜ್ಞಾನದ ಕುರಿತೂ ಕಮೆಂಟ್ ಮಾಡಿದ್ದಾರೆ. ಇಂಥ ಟಾಯ್ಲೆಟ್ ಯಾಕೆ ಕಟ್ಟಬೇಕಿತ್ತು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಸ್ವಲ್ಪ ಎಚ್ಚರಿಕೆಯಿಂದ ಇದನ್ನು ಬಳಸಿ. ಬಾಗಿಲು ಲಾಕ್ ಆಗದೆ ಹೋದ್ರೆ ಕಷ್ಟ ಗ್ಯಾರಂಟಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 

ಪ್ರವಾಸಿಗರು ಹೆಚ್ಚಾಗಿಯೇ ಅವನತಿಯತ್ತ ಸಾಗುತ್ತಿವೆ ಈ ಸುಂದರ ಪ್ರವಾಸಿ ತಾಣಗಳು

ಕೊಳಕು, ಕತ್ತಲೆ ಮತ್ತು ದುರ್ವಾಸನೆಯಿಂದ ಟಾಯ್ಲೆಟ್ ರಕ್ಷಿಸಿ, ಸ್ವಚ್ಛ, ಸುಂದರ ಮತ್ತು ಸುರಕ್ಷಿತವಾಗಿಡೋದು ಈ ಟಾಯ್ಲೆಟ್ ನಿರ್ಮಾಣದ ಗುರಿಯಾಗಿದೆ. ಟೋಕಿಯೊದ ಉದ್ಯಾನವನಗಳಲ್ಲಿ ಈ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದನ್ನು ಯಯೋಗಿ ಫುಕಾಮಾಚಿ ಮಿನಿ ಪಾರ್ಕ್ ಮತ್ತು ಹರು-ನೋ-ಒಗಾವಾ ಸಮುದಾಯ ಉದ್ಯಾನದಲ್ಲಿ ಕಾಣಬಹುದು. ನಿಪ್ಪಾನ್ ಫೌಂಡೇಶನ್‌ ಇದನ್ನು  ಸ್ಥಾಪಿಸಿದೆ.  ಪುರುಷರು ಮತ್ತು ಮಹಿಳೆಯರಿಗೆ ಅನುಕೂಲವಾಗುವ ಎರಡೂ ಸೌಲಭ್ಯ ಒಂದೆ ಶೌಚಾಲಯದಲ್ಲಿದೆ. 

 
 
 
 
 
 
 
 
 
 
 
 
 
 
 

A post shared by YeFacts (@yefactsofficial)

Latest Videos
Follow Us:
Download App:
  • android
  • ios