Asianet Suvarna News Asianet Suvarna News

ರಾಜ್ಯದಿಂದ ಅಯೋಧ್ಯೆಗೆ ತೆರಳುವ ಭಕ್ತರಿಗೆ ಜನವರಿ 31ರಿಂದ ವಿಶೇಷ ರೈಲು ವ್ಯವಸ್ಥೆ

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಕರ್ನಾಟಕದಿಂದ ಅಯೋಧ್ಯೆಗೆ ತೆರಳಲು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮುಂದಾಗುತ್ತಿದ್ದಾರೆ. ಈ ನಡುವೆ ಭಾರತೀಯ ರೈಲ್ವೇ ಇಲಾಖೆಯು ಕರ್ನಾಟಕದಿಂದ ಆಯೋಧ್ಯೆಗೆ ಇದೇ 31ರಿಂದ 11 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಿದೆ.

35k devotees from Karnataka to visit Ayodhya after January 31 Vin
Author
First Published Jan 22, 2024, 2:12 PM IST

ಬೆಂಗಳೂರು: ಬರೋಬ್ಬರಿ 500 ವರ್ಷಗಳ ಬಳಿಕ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ಹಿಂದೂಗಳ ಅರಾಧ್ಯ ದೈವ ರಾಮನ ಪ್ರತಿಷ್ಠಾಪನೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಮಾಡ್ತಿದ್ದು, ನಾಳೆಯಿಂದ ಭವ್ಯ ರಾಮ ಮಂದಿರ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಹಾಗೆಯೇ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗ್ತಿದ್ದಂತೆ, ಕರ್ನಾಟಕದಿಂದ ಅಯೋಧ್ಯೆಗೆ ತೆರಳಲು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮುಂದಾಗುತ್ತಿದ್ದಾರೆ. ಈ ನಡುವೆ ಭಾರತೀಯ ರೈಲ್ವೇ ಇಲಾಖೆಯು ಕರ್ನಾಟಕದಿಂದ ಆಯೋಧ್ಯೆಗೆ ಇದೇ 31ರಿಂದ 11 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಿದೆ.

ಜನವರಿ 31ರಿಂದ ಮಾರ್ಚ್ 25ರ ವರೆಗೆ ಕರ್ನಾಟಕದಿಂದ 35,000ಕ್ಕೂ ಹೆಚ್ಚು ರಾಮನ ಭಕ್ತರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಭೇಟಿಗೆ ಅನುಕೂಲವಾಗುವಂತೆ 25 ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಆರು ದಿನಗಳ ಅಯೋಧ್ಯೆ ಭೇಟಿಗೆ ಭಕ್ತರು ತಮ್ಮ ವೆಚ್ಚವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ನಾಳೆಯಿಂದ ಅಯೋಧ್ಯೆಗೆ ಪ್ರವಾಸಿಗರ ಲಗ್ಗೆ: ಪ್ರತಿನಿತ್ಯ ಲಕ್ಷಾಂತರ ಜನರಿಗೆ ಆತಿಥ್ಯ ನೀಡೋದೇ ಸವಾಲು!

ಅಯೋಧ್ಯೆಯಲ್ಲಿ ಭಕ್ತರಿಗೆ ಊಟ ಮತ್ತು ವಸತಿ ಒದಗಿಸಲು ವ್ಯವಸ್ಥೆ
ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕ, ಅಯೋಧ್ಯೆಗೆ ಪ್ರಯಾಣಿಸುವ ಭಕ್ತರಿಗೆ ಕ್ಯೂಆರ್ ಕೋಡ್‌ನೊಂದಿಗೆ ಗುರುತಿನ ಚೀಟಿ ನೀಡಲಾಗುವುದು. ವಿಶೇಷ ರೈಲುಗಳು ರಾಜ್ಯದ ವಿವಿಧ ಸ್ಥಳಗಳಿಂದ ಪ್ರಾರಂಭವಾಗುವ ಸಂದರ್ಭದಲ್ಲಿ, ಅಯೋಧ್ಯೆಯಲ್ಲಿ ಭಕ್ತರಿಗೆ ಊಟ ಮತ್ತು ವಸತಿ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಮತ್ತು ಕನ್ನಡ ಸಹಾಯವಾಣಿಯನ್ನು ಸಹ ಲಭ್ಯಗೊಳಿಸಲಾಗುವುದು ಎಂದು ಅವರು ಹೇಳಿದರು. ಪ್ರತಿ ರೈಲಿನಲ್ಲಿ 1,500 ಭಕ್ತರು ಪ್ರಯಾಣಿಸಲಿದ್ದಾರೆ ಎಂದು ತಿಳಿಸಿದರು. ಬಿಜೆಪಿ ರಾಜ್ಯ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರನ್ನು ಸಂಯೋಜಕರನ್ನಾಗಿ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

'ಅಯೋಧ್ಯೆಯಲ್ಲಿ ವಸತಿಗಾಗಿ ಜರ್ಮನ್‌ ಟೆಂಟ್‌ ‍ಹೌಸ್‌‍ಗಳಿದ್ದು, ಸ್ನಾನಗೃಹ, ಶೌಚಾಲಯಗಳಿವೆ. 48 ಕಡೆ ಭೋಜನ ವ್ಯವಸ್ಥೆಯಾಗಿದ್ದು, ಅದರಲ್ಲಿ2 ಕಡೆ ಕರ್ನಾಟಕದ ರಾಮಭಕ್ತರಿಗಾಗಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಒಂದು ರೈಲಿನಲ್ಲಿ1,500 ಮಂದಿ ಪ್ರಯಾಣಿಸುತ್ತಿದ್ದು, ಪ್ರತಿ ರೈಲಿಗೆ ಒಬ್ಬ ರೈಲು ಪ್ರಮುಖ್‌ ಮತ್ತು ಬೋಗಿ ಪ್ರಮುಖ್‌ ಇದ್ದು, ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ'' ಎಂದು ವಿವರ ನೀಡಿದರು.

ಮಂದಿರ್ ವಹೀ ಬನಾಯೇಂಗೆ, 33 ವರ್ಷಗಳ ಬಿಜೆಪಿ ಭರವಸೆ ಈಡೇರಿಸಿದ ಪ್ರಧಾನಿ ಮೋದಿ!

ಯಾವೆಲ್ಲಾ ಮಾರ್ಗದಲ್ಲಿ ರೈಲು ಸಂಚಾರ
ಬೆಂಗಳೂರು ನೈರುತ್ಯ ರೈಲ್ವೇ ವಿಭಾಗದಿಂದ ಮೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು ವಿಭಾಗದಿಂದ ತಲಾ ಎರಡು ಹಾಗೂ ಶಿವಮೊಗ್ಗ, ಬೆಳಗಾವಿ ವಿಭಾಗದಿಂದ ಒಂದು ವಿಶೇಷ ಆಸ್ತಾ ರೈಲು ಸಂಚಾರವನ್ನು ಜ.31ರಿಂದ ಹಂತವಾಗಿ ಪ್ರಾರಂಭಿಸಿ ಮಾ.31ಕ್ಕೆ ಮುಕ್ತಾಯಗೊಳಿಸಲಿದೆ. ಬೆಂಗಳೂರಿನಿಂದ ತೆರಳುವ ಪ್ರಯಾಣಿಕರು ಲಕ್ನೋ ಹಾಗೂ ಬಾದಶಾ ರೈಲುಗಳ ಮೂಲಕ ತೆರಳಿದರೆ ಅಯೋಧ್ಯಗಢಕ್ಕೆ ಸಂಪರ್ಕ ಸಾಧಿಸಬಹುದಾಗಿದೆ. ಈ ಮಾರ್ಗವಾಗಿ ಪ್ರತಿ ಸೋಮವಾರ ಹಾಗೂ ಬುಧವಾರ ತಲಾ ಎರಡು ರೈಲುಗಳು ಸಂಚರಿಸುತ್ತದೆ. ಪ್ರಯಾಣಿಕರು ಲಕ್ನೋ ಹಾಗೂ ಬಾದಶಾ ರೈಲು ನಿಲ್ದಾಣದಲ್ಲಿ ಇಳಿದು 130 ರಿಂದ 150 ಕಿ.ಮೀ. ದೂರದಲ್ಲಿರುವ ಅಯೋಧ್ಯೆಗಢಕ್ಕೆ ರೈಲು, ಬಸ್‌ ಅಥವಾ ಇತರೆ ಸಾರಿಗೆ ಮೂಲಕ ಅಯೋಧ್ಯೆ ತಲುಪಬಹುದಾಗಿದೆ.

ಸದ್ಯ ರಾಜ್ಯದಿಂದ ಅಯೋಧ್ಯೆಗೆ ನೈಋತ್ಯ ರೈಲ್ವೇಯ ಬೆಂಗಳೂರಿನ ಯಶವಂತಪುರದಿಂದ ನೇರವಾಗಿ ಒಂದು ರೈಲು ಸಂಚರಿಸುತ್ತಿದೆ. ಯಶವಂತಪುರ ನಿಲ್ದಾಣದಿಂದ ಪ್ರತಿ ಗುರುವಾರ ರಾತ್ರಿ 11.40ಕ್ಕೆ ಹೊರಟ ರೈಲು ಶನಿವಾರ ಮಧ್ಯಾಹ್ನ 4.24ಕ್ಕೆ ಅಯೋಧ್ಯೆಗಢ ನಿಲ್ದಾಣಕ್ಕೆ ತಲುಪಲಿದೆ. ನಂತರ ರೈಲು ಗೋರಖ್‌ಪುರದಲ್ಲಿ ನಿಲುಗಡೆ ಮಾಡಲಿದೆ. ಇದರ ಹೊರತಾಗಿ ಯಾವುದೇ ರೈಲು ಅಯೋಧ್ಯಗಢ ಮೂಲಕ ಹಾದು ಹೋಗುವುದಿಲ್ಲ.

Follow Us:
Download App:
  • android
  • ios